Site icon Vistara News

Magnite GEZA CVT : ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್

Nissan Magnite GEZA CVT

ಬೆಂಗಳೂರು : 2023ರ ಮ್ಯಾಗ್ನೈಟ್ ಗೆಝಾದ ಸ್ಪೆಷಲ್ ಎಡಿಷನ್ ನ ಯಶಸ್ಸಿನಿಂದ ಪ್ರೇರಣೆಗೊಂಡಿರುವ ನಿಸ್ಸಾನ್ ಮೋಟಾರ್ ಇಂಡಿಯಾ 9.84 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಹೆಚ್ಚು ಫೀಚರ್​ಗಳನ್ನು ಒಳಗೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್​ ಎಡಿಷನ್ (Magnite GEZA CVT) ಕಾರನ್ನು ಗುರುವಾರ ಬಿಡುಗಡೆ ಮಾಡಿದೆ. 2023ರ ಗೆಝಾ ಸ್ಷೆಷಲ್ ಎಡಿಷನ್ ಗೆ ಸಿಕ್ಕ ಪ್ರತಿಕ್ರಿಯೆ ಮತ್ತು ವ್ಯಾಪಕವಾದ ಗ್ರಾಹಕರ ಪ್ರತಿಕ್ರಿಯೆಯಿಂದ ಹರ್ಷಗೊಂಡು ಮ್ಯಾಗ್ನೈಟ್ ಗೆಝಾ ಸ್ಪೆಷಲ್ ಎಡಿಷನ್ ನ ಮೊದಲ ವಾರ್ಷಿಕೋತ್ಸವದಂದೇ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ.

ಜಪಾನೀಸ್ ಥಿಯೇಟರ್ ಮತ್ತು ಅದರ ಸಂಗೀತದ ಥೀಮ್‌ಗಳಿಂದ ಸ್ಫೂರ್ತಿ ಪಡೆದಿರುವ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಸಂಗೀತ ಪ್ರೇಮಿಗಳಿಗೆಂದೇ ವಿಶೇಷ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಪ್ರೀಮಿಯಂ ಸ್ಪೀಕರ್ ಗಳನ್ನು ಹೊಂದಿರುವ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸಿಸ್ಟಮ್​ ಮೂಲಕ ಅದ್ಭುತ ಸಂಗೀತ ಅನುಭವ ಪಡೆಯಬಹುದು.

ಇದೇ ಮೊದಲ ಬಾರಿಗೆ ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ನಲ್ಲಿ ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ಫೀಚರ್​​ ನೀಡಲಾಗುತ್ತಿದೆ. ಈ ಕಾರಣಕ್ಕೆ ಗ್ರಾಹಕರು ಮತ್ತಷ್ಟು ಖುಷಿ ಪಡಬಹುದಾಗಿದೆ. ವಿಶೇಷವಾಗಿ ಇದು ನಿಸ್ಸಾನ್‌ನ ಅತ್ಯಂತ ಸುಲಭವಾಗಿ ಕೈಗೆಟಕುವ ಬಿ ಎಸ್​ಯುವಿ (ಸಬ್​ ಕಾಂಪ್ಯಾಕ್ಟ್​​​) ವಿಭಾಗದ ಪ್ರೀಮಿಯಂ ಸಿವಿಟಿ ಟರ್ಬೊ ಎಂಜಿನ್ ಹೊದಿರುವ ಕಾರು ಎನಿಸಿಕೊಂಡಿದೆ. ಹೀಗಾಗಿ ಕೊಟ್ಟ ಹಣಕ್ಕೆ ತಕ್ಕ ಕಾರು ಎಂಬ ಖ್ಯಾತಿ ಪಡೆದುಕೊಂಡಿದೆ.

ಇದನ್ನೂ ಓದಿ: 2024 Maruti Swift : ಹಲವಾರು ಆ್ಯಕ್ಸೆಸರಿ ಪ್ಯಾಕ್​ನೊಂದಿಗೆ ಬಂದಿದೆ ಮಾರುತಿ ಸ್ವಿಫ್ಟ್​​ ಎಪಿಕ್​

ರೂ.9.84 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿರುವ ಈ ವೇರಿಯಂಟ್ ಈಗ ರೂ.10 ಲಕ್ಷದ ಕೆಳಗಿನ ಬೆಲೆಯಲ್ಲಿ ಲಭ್ಯವಾಗುವ ಬಿ-ಎಸ್ ಯು ವಿ ವಿಭಾಗದ ಕೈಗೆಟುವ ದರದ ಪ್ರೀಮಿಯಂ ಸಿವಿಟಿ ಟರ್ಬೋ ಕಾರು ಆಗಿದೆ. ಗೆಝಾ ಜಪಾನೀಸ್ ಥಿಯೇಟರ್‌ ಮತ್ತು ಅದರ ಸಂಗೀತದ ಥೀಮ್ ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಸಿವಿಟಿ ಟರ್ಬೋಗೆ ತಕ್ಕಂತೆ ಸುಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. 22.86 ಸೆಂಮೀನ ಹೈ ರೆಸೆಲ್ಯೂಶನ್ ಟಚ್‌ಸ್ಕ್ರೀನ್, ಜೆಬಿಎಲ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಆಂಡ್ರಾಯ್ಡ್ ಕಾರ್ ಪ್ಲೇ ಜೊತೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಗೆಝಾ ಆಪ್ ಆಧಾರಿತ ಆಂಬಿಯೆಂಟ್ ಲೈಟ್ ವ್ಯವಸ್ಥೆಯನ್ನು ಹೊಂದಿದ್ದು, ಹಲವಾರು ಬಣ್ಣಗಳು ಲಭ್ಯವಿದೆ.

ಮ್ಯಾಗ್ನೈಟ್ ಗೆಝಾ ಸಿವಿಟಿ ಸ್ಪೆಷಲ್ ಎಡಿಷನ್ ವೈಶಿಷ್ಟ್ಯಗಳು

ಇದು ನಿಸ್ಸಾನ್ ಮ್ಯಾಗ್ನೈಟ್ ಸಿವಿಟಿ ವೇರಿಯಂಟ್ ಗಳಲ್ಲಿಯೇ ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಅತ್ಯಾಧುನಿಕ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನು ಬಯಸುವವರಿಗೆ ಎಚ್ ಆರ್ 10 ಟರ್ಬೋ ಸಿವಿಟಿ ವೇರಿಯಂಟ್ ಲಭ್ಯವಿದೆ. ಈ ಕಾರು ಬಿಡುಗಡೆ ಸಂದರ್ಭದಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೌರಭ್ ವತ್ಸ ಹರ್ಷ ವ್ಯಕ್ತಪಡಿಸಿದ್ದಾರೆ .

Exit mobile version