Site icon Vistara News

NITIN GADKARI: ಭಾರತದಲ್ಲಿ ಇನ್ನು ಕೆಲವೇ ವರ್ಷಗಳೊಳಗೆ ಪೆಟ್ರೋಲ್‌, ಡೀಸೆಲ್‌ ಕಾರುಗಳೇ ಇರುವುದಿಲ್ಲ!

ಹೊಸದಿಲ್ಲಿ: ದೇಶದಲ್ಲಿರುವ 36 ಕೋಟಿಗೂ ಹೆಚ್ಚು ಪೆಟ್ರೋಲ್ (petrol) ಮತ್ತು ಡೀಸೆಲ್ (diesel) ವಾಹನಗಳನ್ನು ತೆರೆಮರೆಗೆ ಸರಿಸಲು ಹೈಬ್ರಿಡ್ ವಾಹನಗಳ (hybrid vehicles) ಮೇಲೆ ಜಿಎಸ್‌ಟಿ (GST) ಕಡಿತಗೊಳಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ (Road Transport and Highways Union Minister) ನಿತಿನ್ ಗಡ್ಕರಿ (Nitin Gadkari) ಘೋಷಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತವನ್ನು (india) ಹಸಿರು ಆರ್ಥಿಕತೆಯನ್ನಾಗಿ ಮಾಡಲು ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದ ಅವರು, ಶೇಕಡಾ ನೂರರಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ದೇಶದ ರಸ್ತೆಯಿಂದ ಆದಷ್ಟು ಬೇಗ ಮಾಯ ಮಾಡಲಾಗುವುದು ಎಂದರು.

ಕಷ್ಟ, ಆದರೆ ಅಸಾಧ್ಯವಲ್ಲ

ಹಸಿರು ಶಕ್ತಿಯ ಪ್ರತಿಪಾದಕರೂ ಇದನ್ನು ಕಷ್ಟವೆಂದು ನಂಬಿದ್ದಾರೆ. ಇದು ಕಷ್ಟ ಆದರೆ ಅಸಾಧ್ಯವಲ್ಲ. ಈ ಮಹತ್ವಾಕಾಂಕ್ಷೆಯ ಗುರಿ ತಲುಪಲು ಯಾವುದೇ ಸಮಯ ಎಂಬುದಿಲ್ಲ ಎಂದು ಗಡ್ಕರಿ ಹೇಳಿದರು.

ಇದನ್ನು ಓದಿ: Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ವರೆಗೆ; ನಾಳೆಯಿಂದಲೇ ಬದಲಾಗುತ್ತವೆ ಈ ಎಲ್ಲ ನಿಯಮಗಳು

16 ಲಕ್ಷ ಕೋಟಿ ರೂ. ಉಳಿತಾಯ

ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ದೇಶವು ಇಂಧನ ಆಮದನ್ನು ಕೊನೆಗೊಳಿಸಬಹುದು ಎನ್ನುವ ವಿಶ್ವಾಸವಿದೆ. ಇಂಧನ ಆಮದು ಮಾಡಿಕೊಳ್ಳಲು ಭಾರತ ಖರ್ಚು ಮಾಡುತ್ತಿರುವ 16 ಲಕ್ಷ ಕೋಟಿ ರೂ. ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಲಾಗುವುದು. ಇದರಿಂದ ಹಳ್ಳಿಗಳು ಸಮೃದ್ಧವಾಗುತ್ತವೆ ಮತ್ತು ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದು ತಿಳಿಸಿದರು.


ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ. 5 ಮತ್ತು ಫ್ಲೆಕ್ಸ್ ಎಂಜಿನ್‌ಗಳಿಗೆ ಶೇ. 12ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಅದನ್ನು ಪರಿಗಣಿಸಲಾಗುತ್ತಿದೆ ಎಂದರು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಶಕ್ತಿ ತುಂಬಲು ನಾವು ಇನ್ನೂ ಹಳೆಯ ಇಂಧನ ಆಧಾರಿತ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಇದನ್ನು ಬದಲಾಯಿಸಬೇಕಾಗಿದೆ. ಮುಂಬರುವ ವರ್ಷಗಳಲ್ಲಿ ಎಲ್ಲವೂ ಬದಲಾಗಲಿದೆ ಎಂದು ಗಡ್ಕರಿ ಹೇಳಿದರು.

ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬರುತ್ತಿರುವ ವೇಗವನ್ನು ಗಮನಿಸಿದರೆ ಮುಂಬರುವ ಯುಗವು ಪರ್ಯಾಯ ಮತ್ತು ಜೈವಿಕ ಇಂಧನವೇ ಆಗಿರುತ್ತದೆ. ಬಹು ಶೀಘ್ರದಲ್ಲಿ ಈ ಕನಸು ನನಸಾಗುತ್ತದೆ ಎಂದು ಹೇಳಿದರು.

ಬಜಾಜ್, ಟಿವಿಎಸ್ ಮತ್ತು ಹೀರೋದಂತಹ ಆಟೋ ಕಂಪನಿಗಳು ಫ್ಲೆಕ್ಸ್ ಎಂಜಿನ್‌ಗಳನ್ನು ಬಳಸಿಕೊಂಡು ಮೋಟಾರ್‌ಸೈಕಲ್‌ಗಳನ್ನು ತಯಾರಿಸಲು ಯೋಜಿಸುತ್ತಿವೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಆಟೋ ರಿಕ್ಷಾಗಳನ್ನೂ ತಯಾರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.


ಹೈಡ್ರೋಜನ್‌ ಟ್ರಕ್

ಟಾಟಾ ಮತ್ತು ಅಶೋಕ್ ಲೈಲ್ಯಾಂಡ್ ಹೈಡ್ರೋಜನ್‌ನಿಂದ ಚಲಿಸುವ ಟ್ರಕ್‌ಗಳನ್ನು ಪರಿಚಯಿಸಿದೆ. ಎಲ್‌ಎನ್‌ಜಿ/ಸಿಎನ್‌ಜಿಯಲ್ಲಿ ಚಲಿಸುವ ಟ್ರಕ್‌ಗಳಿವೆ. ದೇಶಾದ್ಯಂತ ಜೈವಿಕ-ಸಿಎನ್‌ಜಿ 350 ಕಾರ್ಖಾನೆಗಳಿವೆ. ಖಂಡಿತವಾಗಿಯೂ ಈ ಉದ್ಯಮದಲ್ಲಿ ಕ್ರಾಂತಿ ನಡೆಯುತ್ತಿದೆ. ಇಂಧನ ಆಮದು ಕೊನೆಗೊಳ್ಳುತ್ತದೆ ಮತ್ತು ನಮ್ಮ ದೇಶವು ಸ್ವಾವಲಂಬಿಯಾಗಲಿದೆ. ಆತ್ಮನಿರ್ಭರ್ ಭಾರತ್. ನಾನು ಇದನ್ನು ಬಲವಾಗಿ ನಂಬುತ್ತೇನೆ ಎಂದು ಗಡ್ಕರಿ ಹೇಳಿದರು.

Exit mobile version