Site icon Vistara News

Viral News : ರೀಲ್ಸ್ ಮಾಡಲು ರಸ್ತೆಯನ್ನೇ ಬ್ಲಾಕ್​ ಮಾಡಿದ ಹುಡುಗರಿಗೆ ಬಿತ್ತು 12,500 ರೂಪಾಯಿ ಫೈನ್​​

Reel making in delhi

ನವ ದೆಹಲಿ: ಸೋಶಿಯಲ್​ ಮೀಡಿಯಾಗಳ ಗೀಳು ಅಪಾಯಕ್ಕೆ ಕಾರಣ. ಕೆಲವೊಮ್ಮೆ ಇದು ತಮಗೆ ಅಪಾಯ ತಂದೊಡ್ಡುವ ಜತೆಗೆ ಸುತ್ತಮುತ್ತಲಿನ ಮಂದಿಗೂ ಸಮಸ್ಯೆ ಮಾಡುತ್ತದೆ. ಇಂಥದ್ದೇ ಒಂದು ಘಟನೆ ನೋಯ್ಡಾದಲ್ಲಿ ದಾಖಲಾಗಿದೆ. ಅಲ್ಲಿ ಯುವಕರ ಗುಂಪೊಂದು ಸೆಕ್ಟರ್ 52 ರ ಅಂಡರ್ ಪಾಸ್​​ನಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ರೀಲ್ಸ್​ (Viral News) ಚಿತ್ರಿಕರಿಸಿದೆ. ಟೊಯೋಟಾ ಫಾರ್ಚೂನರ್, ಮಾರುತಿ ಸುಜುಕಿ ಸ್ವಿಫ್ಟ್, ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಕ್ರೆಟಾದಂತಹ ವಾಹನಗಳನ್ನು ಬಳಸಿ ಅವರೆಲ್ಲರೂ ಇನ್​ಸ್ಟಾಗ್ರಾಮ್​ ರೀಲ್ಸ್​ ಮಾಡಿದ್ದಾರೆ. ನಿರೀಕ್ಷೆಯಂತೆ ಅವರ ವಿಡಿಯೊ ವೈರಲ್ ಆಗಿದೆ. ಜತೆಗೆ ಪೊಲೀಸರ ಕಣ್ಣಿಗೂ ಬಿದ್ದಿದೆ. ತಡ ಮಾಡದೇ ರೂಲ್ಸ್​ ಬ್ರೇಕ್​ ಮಾಡಿದ ಅವರಿಗೆ 12.500 ರೂಪಾಯಿ ದಂಡ ಜಡಿದಿದ್ದಾರೆ.

ವೈರಲ್​ ವಿಡಿಯೊವನ್ನು ನೋಯ್ಡಾ ಪೊಲೀಸರ ಟ್ವೀಟ್​ಗೆ ಯಾರೂ ಟ್ಯಾಗ್ ಮಾಡಿದ್ದರು. ತಕ್ಷಣ ಪೊಲೀಸರು ಅಂಡರ್ ಪಾಸ್ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಉಂಟುಮಾಡಿದ ಯುವಕರಿಗೆ ಭಾರಿ ದಂಡವನ್ನು ವಿಧಿಸಿದ್ದಾರೆ ನೋಯ್ಡಾ ಸಂಚಾರ ಪೊಲೀಸರು ತಮ್ಮ ಟ್ವೀಟ್ನಲ್ಲಿ, “ಮೇಲಿನ ದೂರನ್ನು ಗಮನದಲ್ಲಿಟ್ಟುಕೊಂಡು, ನಿಯಮಗಳ ಪ್ರಕಾರ ಇ-ಚಲನ್ (ರೂ. 12,500 / – ದಂಡ) ಗಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಿತ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ. ಇದೇ ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಸಹಾಯವಾಣಿ ಸಂಖ್ಯೆಯನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ಬಗೆಬಗೆಯ ವೈರಲ್ ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ

ಬುದ್ಧಿಗೇಡಿ ರೀಲ್ಸ್​​ಗಳು ಯಾವ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದಕ್ಕೆ ಈ ದಂಡವೇ ಉದಾಹರಣೆ. ಇಂಥ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತ ಜನಪ್ರಿಯತೆಯನ್ನು ಪಡೆಯುತ್ತವೆ. ಆದರೆ, ಈ ವ್ಯಕ್ತಿಗಳು ಯೋಚಿಸದೆ ಸಂಚಾರವನ್ನು ಅಡ್ಡಿಪಡಿಸಿ ಅನೇಕರಿಗೆ ಅನಾನುಕೂಲತೆಯನ್ನುಂಟು ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿ ಬಳಸುವ ಬಗ್ಗೆ ಒಂದು ಪಾಠವೂ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಕಾರುಗಳೊಂದಿಗೆ ಅಪಾಯಕಾರಿ ಸ್ಟಂಟ್​​ಗಳ​ನ್ನು ಮಾಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕೃತ್ಯಗಳು ಕೆಲವರಿಗೆ ರೋಮಾಂಚನಕಾರಿಯಾಗಿ ಕಂಡರೂ, ಅವು ಸಾರ್ವಜನಿಕ ಸುರಕ್ಷತೆಗೆ ತೀವ್ರ ಆಘಾತ ತಂದೊಡ್ಡಬಲ್ಲದು.

ಇದನ್ನೂ ಓದಿ : Viral Video: ಶಿಕ್ಷಕಿಯ ನಿವೃತ್ತಿ, ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೊಟ್ಟ ಮಕ್ಕಳು; ಶಾಲಾ ದಿನಗಳ ನೆನಪಿಸುವ ವಿಡಿಯೊ ಇದು

ಸಾರ್ವಜನಿಕ ರಸ್ತೆಗಳಲ್ಲಿ ಕಾರ್ ಸ್ಟಂಟ್ ಗಳಲ್ಲಿ ತೊಡಗುವುದರಿಂದ ಸ್ಟಂಟ್ ಗಳನ್ನು ಮಾಡುವ ವ್ಯಕ್ತಿಗಳು ಮಾತ್ರವಲ್ಲದೆ ಮುಗ್ಧ ನಾಗರಿಕರೂ ಅಪಾಯಗಳಿಗೆ ಒಳಗಾಗುತ್ತಾರೆ. ಅತಿ ವೇಗದ ಡ್ರಿಫ್ಟಿಂಗ್ ಅಥವಾ ಹಠಾತ್ ಬ್ರೇಕ್ ನಂತಹ ಅಜಾಗರೂಕ ತಂತ್ರಗಳು ಅಪಘಾತಗಳಿಗೆ ಕಾರಣವಾಗಬಹುದು. ಪಾದಚಾರಿಗಳು, ಸೈಕ್ಲಿಸ್ಟ್ ಗಳು ಮತ್ತು ಇತರ ವಾಹನ ಚಾಲಕರು ಇಂಥ ಕೃತ್ಯಗಳ ಬಲಿಪಶುಗಳಾಗುತ್ತಾರೆ.

ಕಾರ್ ಸ್ಟಂಟ್ ಗಳು ಸಾಮಾನ್ಯವಾಗಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಇದು ಅಸಂಖ್ಯಾತ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ಸ್ಟಂಟ್​ಗಳು ರಸ್ತೆ ಮುಚ್ಚುವಿಕೆ, ಟ್ರಾಫಿಕ್ ಜಾಮ್ ಮತ್ತು ತುರ್ತು ಸೇವೆಗಳ ವಿಳಂಬಕ್ಕೆ ಕಾರಣವಾಗಬಹುದು. ಪರಿಣಾಮವಾಗಿ ಉಂಟಾಗುವ ಅವ್ಯವಸ್ಥೆಯು ನಗರಗಳ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದೈನಂದಿನ ಜೀವನದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ.

Exit mobile version