Site icon Vistara News

Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Royal Enfield Guerrilla 450

ಬೆಂಗಳೂರು: ಹಲವಾರು ದಿನಗಳ ಊಹಾಪೋಹಗಳು, ಸೋಶಿಯಲ್​ ಮೀಡಿಯಾಗಳಲ್ಲಿ ಹರಿ ಬಿಡಲಾಗಿದ್ದ ರೀಲ್ಸ್​ಗಳ ಬಳಿಕ ಅಂತಿಮವಾಗಿ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಬೈಕ್​ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಈ ಬೈಕ್​ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಹೊಸ ಮಾದರಿಯು (new model Royal Enfield) ರೋಮಾಂಚಕ ಪ್ರಯಾಣದ ಭರವಸೆಯನ್ನು ನೀಡುವ ಜತೆಗೆ ಹಲವಾರು ವಿಶೇಷ ಫೀಚರ್​ಗಳನ್ನು ನೀಡಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ವಿನ್ಯಾಸ ಮತ್ತು ನೋಟದಲ್ಲಿ ಸಂಪೂರ್ಣ ಹೊಸತನವನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ಸಬ್-500ಸಿಸಿ ರೋಡ್‌ಸ್ಟರ್ ಆಗಿ ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಸೂಕ್ತವಾದ ಆಯ್ಕೆ ಎಂಬಂತೆ ರಸ್ತೆಗೆ ಇಳಿದಿದೆ.


ವಿನ್ಯಾಸ ಹೇಗಿದೆ?

ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಮಾದರಿಯ ಬದಲಿಗೆ ಗೆರಿಲ್ಲಾ 450 ಸಂಪೂರ್ಣವಾಗಿ ಹೊಸ ವಿನ್ಯಾಸದೊದಿಗೆ ಬಂದಿದೆ. ಆಕ್ರಮಣಕಾರಿ ಸ್ಟೈಲಿಂಗ್​ನೊಂದಿಗೆ ನಯವಾದ, ಆಧುನಿಕ ನೋಟವನ್ನು ಹೊಂದಿತ್ತು. ವಿಶಿಷ್ಟವಾದ ರೌಂಡ್ ಹೆಡ್‌ಲ್ಯಾಂಪ್, ಅತ್ಯಾಕರ್ಷಕ ಪೆಟ್ರೋಲ್​ ಟ್ಯಾಂಕ್ ಮತ್ತು ಮಿನಿಮಮ್​ ಬಾಡಿವರ್ಕ್ ಒಳಗೊಂಡಿದೆ. ಈ ವಿನ್ಯಾಸವು ಯುವ ಪೀಳಿಗೆಯನ್ನು ಆಕರ್ಷಿಸುವ ಗುರಿ ಹೊಂದಿದೆ.

ಬೆಲೆ ಮತ್ತು ಬಣ್ಣ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಅನಲಾಗ್ 2.39 ಲಕ್ಷ ರೂ., ಡ್ಯಾಶ್ 2.49 ಲಕ್ಷ ರೂ. ಮತ್ತು ಫ್ಲ್ಯಾಶ್ 2.54 ಲಕ್ಷ ರೂ. ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಅದರ ಮೂರು ರೂಪಾಂತರಗಳಲ್ಲಿ ಐದು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಅನಲಾಗ್​ ವೇರಿಯೆಂಟ್​ ಸ್ಮೋಕ್ ಮತ್ತು ಪ್ಲಾಯಾ ಬ್ಲ್ಯಾಕ್‌ನಲ್ಲಿ, ಡ್ಯಾಶ್ ರೂಪಾಂತರವು ಪ್ಲಾಯಾ ಬ್ಲಾಕ್ ಮತ್ತು ಗೋಲ್ಡ್ ಡಿಪ್ ಅನ್ನು ನೀಡುತ್ತದೆ ಮತ್ತು ಫ್ಲ್ಯಾಶ್ ರೂಪಾಂತರವು ಹಳದಿ ರಿಬ್ಬನ್ ಮತ್ತು ಬ್ರಾವಾ ಬ್ಲೂನಲ್ಲಿ ಲಭ್ಯವಿದೆ.


ಎಂಜಿನ್ ಮತ್ತು ಯಂತ್ರ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಹಿಮಾಲಯದಲ್ಲಿ ಇರುವ 452ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಶೆರ್ಪಾ ಎಂಜಿನ್‌ ಹೊಂದಿದೆ. ಈ ಎಂಜಿನ್ 39.5 ಬಿಹೆಚ್ ಪಿ ಮತ್ತು 40ಎನ್ ಪಿ ಟಾರ್ಕ್ ಬಿಡುಗಡೆ ಮಾಡುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್, ನಗರ ಪ್ರಯಾಣ ಮತ್ತು ದೂರದ ಸವಾರಿಗಳಿಗೆ ಸೂಕ್ತವಾಗಿದೆ.

ಬೈಕು ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ನೀಡಲಾಗಿದೆ. 2,090 ಮಿಮೀ ಉದ್ದ, 833 ಎಂಎಂ ಅಗಲ ಮತ್ತು 1,125 ಎಂಎಂ ಎತ್ತರದ ಬೈಕ್ ಇದು. 1,440 ಎಂಎಂ ವ್ಹೀಲ್‌ಬೇಸ್, 780 ಎಂಎಂ ಸೀಟ್ ಎತ್ತರ, ಹಿಮಾಲಯಕ್ಕಿಂತ 45 ಎಂಎಂ ಕಡಿಮೆ ಮತ್ತು ಗ್ರೌಂಡ್ ಕ್ಲಿಯರೆನ್ಸ್ 169 ಎಂಎಂ ಇದೆ.

ಇದನ್ನೂ ಓದಿ: Bajaj Freedom 125 CNG Bike: ಬಜಾಜ್ ಸಿಎನ್‌ಜಿ ಬೈಕ್ ಬುಕ್‌ ಮಾಡಿದರೆ 3 ತಿಂಗಳು ಕಾಯಬೇಕು!


ವೈಶಿಷ್ಟ್ಯಗಳು

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ರೈಡ್-ಬೈ-ವೈರ್ ಥ್ರೊಟಲ್ ಮತ್ತು ಎರಡು ಆಯ್ಕೆ ಮಾಡಬಹುದಾದ ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ಬಂದಿರುವ ಇದು ಜಾರುವಿಕೆಯನ್ನು ತಡೆಯುತ್ತದೆ.

ಟಾಪ್​ ವೇರಿಯೆಂಟ್​ಗಳ ಗೂಗಲ್ ಮ್ಯಾಪ್​, ಮೀಡಿಯಾ ಕಂಟ್ರೋಲ್​, ಮತ್ತು ಬೈಕ್ ಸೆಟ್ಟಿಂಗ್ ವ್ಯವಸ್ಥೇ ಹೊಂದಿದೆ, ನ್ಯಾವಿಗೇಷನ್‌ಗಾಗಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್​ ಮಾಡಬಹುದಾದ ನಾಲ್ಕು-ಇಂಚಿನ ರೌಂಡ್ ಸ್ಕ್ರೀನ್​ ಇದರಲ್ಲದಿಎ. ಬೇಸ್​ ವೇರಿಯೆಂಟ್​ ಡಿಜಿಟಲ್-ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Exit mobile version