ನವ ದೆಹಲಿ: 2023-24ರ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೀಥಿಯಮ್ ಬ್ಯಾಟರಿಗಳ ತಯಾರಿಗೆ ಉತ್ತೇಜನ ನೀಡಿದ್ದಾರೆ. ಭಾರತದಲ್ಲೇ ಲೀಥಿಯಮ್ ಬ್ಯಾಟರಿ ಉತ್ಪಾದಿಸುವುದಾದರೆ ಅಬಕಾರಿ ಸುಂಕವನ್ನು ತೆಗೆದು ಹಾಕುವ ಭರವಸೆ ನೀಡಿದ್ದಾರೆ. ಈ ಯೋಜನೆಯ ನೇರ ಲಾಭ ಭಾರತದ ಇವಿ ವಾಹನಗಳ ಉತ್ಪಾದನೆಗೆ ದೊರೆಯಲಿದೆ. ಹೀಗಾಗಿ ಭವಿಷ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ದರ ಇಳಿಕೆಯಾಗಲಿದೆ.
ಬಜೆಟ್ ಮಂಡನೆ ಮಾಡಿದ ನಿರ್ಮಲಾ ಅವರು, ಇವಿ ವಾಹನಗಳ ತಯಾರಿಕೆಯಲ್ಲಿ ಬಳಸುವ ಲೀಥಿಯಮ್ ಅಯಾನ್ ಬ್ಯಾಟರಿ ಶೆಲ್ಗಳ ಉತ್ಪಾನೆಗೆ ಬೇಕಾಗುವ ಯಂತ್ರಗಳನ್ನು ವಿದೇಶದಿಂದ ಆಮದು ಮಾಡುವಾಗ ವಿಧಿಸಲಾಗುವ ಅಬಕಾರಿ ಸುಂಕವನ್ನು ಕಡಿತ ಮಾಡಲಾಗುತ್ತದೆ, ಎಂದು ಹೇಳಿದ್ದಾರೆ.
ಭಾರತದಲ್ಲಿ ತಯಾರಾಗುವ ಇವಿ ಕಾರುಗಳಿಗೆ ಲೀಥಿಯಮ್ ಬ್ಯಾಟರಿ ದೊಡ್ಡ ಹೊರೆ ಎನಿಸಿತ್ತು. ಬ್ಯಾಟರಿಗಳು ಹೆಚ್ಚು ದುಬಾರಿಯಾಗುತ್ತಿದ್ದ ಕಾರಣ ವಾಹನಗಳ ದರವನ್ನೂ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿತ್ತು. ಒಂದು ವೇಳೆ ಸುಂಕ ನಿವಾರಣೆಯಾದರೆ ಭಾರತದ ಇವಿ ವಾಹನಗಳ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ.
ಇದನ್ನೂ ಓದಿ : Union Budget 2023 : ಗುಜರಿ ನೀತಿಗೆ ಮತ್ತಷ್ಟು ಪ್ರೋತ್ಸಾಹ, ವಿತ್ತ ಸಚಿವೆ ಘೋಷಣೆ
ಇದೇ ವೇಳೆ ನ್ಯಾಷನಲ್ ಹೈಡ್ರೋಜನ್ ಮಿಷನ್ಗಾಗಿ 19,700 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಈ ಯೋಜನೆ ಮೂಲಕ 2030ರ ವೇಳೆಗೆ 50 ಲಕ್ಷ ಟನ್ ಹೈಡ್ರೋಜನ್ ಇಂಧನ ಉತ್ಪಾದನಾ ಗುರಿಯನ್ನು ಹೊಂದಲಾಗಿದೆ. ಇದು ಕೂಡ ಸಾರಿಗೆ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆಟೊಮೊಬೈಲ್ ಕ್ಷೇತ್ರದ ಪಾಲುದಾರರಿಗೂ ನೆಮ್ಮದಿಯ ಸಂಗತಿಯಾಗಿದೆ.