ನವ ದೆಹಲಿ: ಸುಜುಕಿ ಮೋಟಾರ್ಸೈಕಲ್ ಇಂಡಿಯಾ ತನ್ನ ಹೊಸ ಬೈಕ್ ಕಟಾನಾ ಅನ್ನು ಭಾರತದಲ್ಲಿ ಇಂದು ಬಿಡುಗಡೆಗೊಳಿಸಿದೆ. ಇದರ ದರ ೧೩.೬ ಲಕ್ಷ ರೂ.ಗಳಾಗಿದೆ.
” ಭಾರತದಲ್ಲಿ ಕಟಾನಾ ಬೈಕ್ ಅನ್ನು ಬಿಡುಗಡೆಗೊಳಿಸಲು ನಮಗೆ ಸಂತಸವಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಮೇಲೆ ಕಂಪನಿಗೆ ಇರುವ ಬದ್ಧತೆಯನ್ನು ಇದು ಬಿಂಬಿಸಿದೆ ʼʼ ಎಂದು ವ್ಯವಸ್ಥಾಪಕ ನಿರ್ದೇಶಕ ಸಟೋಷಿ ಉಚಿಡಾ ತಿಳಿಸಿದ್ದಾರೆ.
ಕಟಾನಾ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಮತ್ತು ಮೆಟಾಲಿಕ್ ಮಿಸ್ಟಿಕ್ ಸಿಲ್ವರ್ ಎಂಬ ಬಣ್ಣಗಳಲ್ಲಿ ದೊರೆಯಲಿದೆ. ಜಪಾನಿನ ಐತಿಹಾಸಿಕ ಕಟಾನಾ ಖಡ್ಗದ ಹೆಸರನ್ನು ಈ ಬೈಕ್ಗೆ ಇಡಲಾಗಿದೆ. ಬೈಕ್ ೯೯೯-cc liquid-cooled DOHC inline cylinder ಎಂಜಿನ್ ಅನ್ನು ಹೊಂದಿದೆ. ಸುಜುಕಿಯ Intelligent Ride System ತಂತ್ರಜ್ಞಾನವನ್ನು ಒಳಗೊಂಡಿದೆ.