Site icon Vistara News

Oscar 2023 : ನಾಟು ನಾಟು ಹಾಡಿಗೆ ಡಾನ್ಸ್​ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ

Tesla car gave a light show to the song

#image_title

ನ್ಯೂಜೆರ್ಸಿ: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ಹಾಡು ನಾಟು ನಾಟು ಹಾಡು, 2023ನೇ ಅವೃತ್ತಿಯ ಆಸ್ಕರ್​ನ (Oscar 2023) ಬೆಸ್ಟ್​ ಒರಿಜಿನಲ್​ ಸಾಂಗ್ ವಿಭಾಗದ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ ಆರ್​ಆರ್​ಆರ್​ ಸಿನಿಮಾದ ಹಾಗೂ ನಾಟುನಾಟು ಹಾಡಿನ ಖ್ಯಾತಿ ಜಗದಗಲಕ್ಕೆ ಹರಡಿದೆ. ಆ ಹಾಡಿನ ಎನರ್ಜಿ ಹಾಗೂ ಟೆಂಪೊಗೆ ಮೆಚ್ಚಿದ ಮಂದಿ ಮ್ಯೂಸಿಕ್​ ಕೇಳಿದ ತಕ್ಷಣ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್​ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್​ ಡ್ರೈವ್​) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿದೆ

ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್​ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.

ಇದನ್ನೂ ಓದಿ : Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ

ಆರ್​ಆರ್​ಆರ್​ ಮೂವಿ ತಂಡ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್​ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್​ ಬರೆದಿದ್ದಾರೆ.

ಟೆಸ್ಲಾ ಟಾಯ್​ಬಾಕ್ಸ್​ ಫೀಚರ್​ (Tesla Toybox)

ಟೆಸ್ಲಾ ಕಾರಿನಲ್ಲಿ ಟಾಯ್​ ಬಾಕ್ಸ್​ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್​ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್​ ಮಾಡಿದರೆ ಕಾರಿನ ಹೆಡ್​ಲೈಟ್​, ಟೈಲ್ ಲೈಟ್​, ಇಂಡಿಕೇಟರ್​ಗಳು ಹಾಗೂ ಇಂಟೀರಿಯರ್ ಲೈಟ್​ಗಳು ಮ್ಯೂಸಿಕ್​​ಗೆ ತಕ್ಕ ಹಾಗೆ ಫ್ಲ್ಯಾಶ್​ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.

ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್​ ಪ್ರೋಗ್ರಾಮ್​ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್​ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್​ ಎಕ್ಸ್​, ಮಾಡೆಲ್​ ಎಸ್​ ಹಾಗೂ ಮಾಡೆಲ್​ 3ಯಲ್ಲಿ ಈ ಫಿಚರ್​ ಇದೆ.

Exit mobile version