ಬೆಂಗಳೂರು: ಹೋಂಡಾ ಮೋಟಾರ್ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಭಾರತದಲ್ಲಿ ಮೊಟ್ಟ ಮೊದಲ 100 ಸಿಸಿ ಸಾಮರ್ಥ್ಯದ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ಗೆ ಹೋಂಡಾ ಶೈನ್ 100 (Honda Shine) ಎಂದು ಕರೆಯಲಾಗಿದೆ. ಅನಾವರಣದ ಬೆಲೆಯಾಗಿ 64,900 ರೂಪಾಯಿ ನಿಗದಿ ಮಾಡಲಾಗಿದೆ. ನಗರದ ಟ್ರಾಫಿಕ್ ನಡುವಿನ ಪ್ರಯಾಣ ಹಾಗೂ ಗ್ರಾಮಾಂತರ ಪ್ರದೇಶದ ಬಳಕೆದಾರರನ್ನು ಉದ್ದೇಶಿಸಿ ಈ ಬೈಕ್ ಬಿಡುಗಡೆ ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪ್ಲಾಟಿನಾ ಹಾಗೂ ಟಿವಿಎಸ್ ಸ್ಟಾರ್ ಸಿಟಿಗೆ ಸ್ಪರ್ಧೆಯೊಡ್ಡುವ ಉದ್ದೇಶದಿಂದ ಈ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಗೊಂಡಿದೆ.
ಎಂಜಿನ್ ಯಾವುದು?
ಬೈಕ್ನಲ್ಲಿ 100 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಇದೆ. ಇದರಲ್ಲಿ ಫ್ಯುಯಲ್ ಇಂಜೆಕ್ಟರ್ ವ್ಯವಸ್ಥೆಯ ಜತೆಗೆ ಇಎಸ್ಪಿ ತಾಂತ್ರಿಕತೆಯನ್ನೂ ಅಳವಡಿಸಲಾಗಿದೆ. ಈ ಎಂಜಿನ್ ಹೊಸ ಬಿಎಸ್6 ಆರ್ಡಿಇ ಮಾನದಂಡಗಳಿಗೆ ಪೂರಕವಾಗಿದೆ. ಇದರ ಫ್ಯುಯಲ್ ಪಂಪ್ ಅನ್ನು ಟ್ಯಾಂಕ್ಗಿಂತ ಹೊರಗಿಡಲಾಗಿದ್ದು ಆಟೋಮ್ಯಾಟಿಕ್ ಚೋಕ್ನೊಂದಿಗೆ ರಸ್ತೆಗೆ ಇಳಿದಿದೆ. ಈ ಬೈಕ್ 7500 ಆರ್ಪಿಎಮ್ನಲ್ಲಿ 7.5 ಬಿಎಚ್ಪಿ ಪವರ್ ಹಾಗೂ 6000 ಆರ್ಪಿಎಮ್ನಲ್ಲಿ 8.05 ಟಾರ್ಕ್ ಬಿಡುಗಡೆ ಮಾಡುತ್ತದೆ.
ವಿಶೇಷತೆ ಏನು?
ಶೈನ್ 100 ಬೈಕ್ ಶೈನ್ 125ನ ಸಣ್ಣ ವೇರಿಯೆಂಟ್ನಂತೆ ಕಾಣುತ್ತದೆ. ಇದು 168 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಕೂಡ ಹೊಂದಿದೆ. ಇದರಲ್ಲಿ ಐದು ಬಣ್ಣಗಳ ಆಯ್ಕೆಯೂ ಇದೆ. ಅಲಾಯ್ ವಿಲ್, ಅಲ್ಯುಮಿನಿಯಮ್ ಗ್ರಾಬ್ ರೈಲ್ ಹಾಗೂ ಸ್ಲೀಕ್ ಮಪ್ಲರ್ ಹೊಂದಿದೆ. ಬಣ್ಣಗಳ ಆಯ್ಕೆ ಇಂತಿದೆ: ಬ್ಲ್ಯಾಕ್ ಆ್ಯಂಡ್ ರೆಡ್ ಸ್ಟ್ರಿಪ್, ಬ್ಲ್ಯಾಕ್ ವಿತ್ ಬ್ಲ್ಯೂ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗ್ರೀನ್ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗೋಲ್ಡ್ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗ್ರೇ ಸ್ಟ್ರಿಪ್ಟ್.
ಇದನ್ನೂ ಓದಿ : Honda SP 125 | ಮೇಡ್ ಇನ್ ಇಂಡಿಯಾ ಬೈಕ್‌ಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾಗೆ ಯಾನ!
ಹೋಂಡಾ ಮೋಟಾರ್ ಸೈಕಲ್ ಈ ಬೈಕ್ಗೆ ಆರು ವರ್ಷಗಳ ವಾರಂಟಿ ನೀಡುತ್ತದೆ. ಮೂರು ವರ್ಷಗಳ ಕಡ್ಡಾಯ ವಾರಂಟಿ ಹಾಗೂ 3 ವರ್ಷಗಳ ಎಕ್ಸ್ಟೆಂಡೆಡ್ ವಾರಂಟಿ ಇದರಲ್ಲಿ ಸೇರಿಕೊಂಡಿದೆ. ಬೈಕ್ 1.9 ಮೀಟರ್ ಉದ್ದವಿದ್ದು, 786 ಎಮ್ಎಮ್ ಸೀಟ್ ಎತ್ತರ ಹೊಂದಿದೆ. ಕಾಂಬಿ ಬ್ರೇಕ್ ಸಿಸ್ಟಮ್ ಹಾಗೂ ಈಕ್ವಲೈಸರ್ ವ್ಯವಸ್ಥೆಯೂ ಇದೆ.