ಆಟೋಮೊಬೈಲ್
Honda Shine : ಸ್ಪ್ಲೆಂಡರ್ಗೆ ಪೈಪೋಟಿ ಕೊಡಲು ಬಂದಿದೆ 100 ಸಿಸಿಯ ಹೋಂಡಾ ಶೈನ್
100 ಸಿಸಿ ಸಾಮರ್ಥ್ಯದ ಹೋಂಡಾ ಶೈನ್ ಬೈಕ್ನ ಆರಂಭಿಕ ಬೆಲೆ 64,900 ರೂಪಾಯಿ. (ಎಕ್ಸ್ಶೂರೂಮ್ ಬೆಲೆ)
ಬೆಂಗಳೂರು: ಹೋಂಡಾ ಮೋಟಾರ್ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಭಾರತದಲ್ಲಿ ಮೊಟ್ಟ ಮೊದಲ 100 ಸಿಸಿ ಸಾಮರ್ಥ್ಯದ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ಗೆ ಹೋಂಡಾ ಶೈನ್ 100 (Honda Shine) ಎಂದು ಕರೆಯಲಾಗಿದೆ. ಅನಾವರಣದ ಬೆಲೆಯಾಗಿ 64,900 ರೂಪಾಯಿ ನಿಗದಿ ಮಾಡಲಾಗಿದೆ. ನಗರದ ಟ್ರಾಫಿಕ್ ನಡುವಿನ ಪ್ರಯಾಣ ಹಾಗೂ ಗ್ರಾಮಾಂತರ ಪ್ರದೇಶದ ಬಳಕೆದಾರರನ್ನು ಉದ್ದೇಶಿಸಿ ಈ ಬೈಕ್ ಬಿಡುಗಡೆ ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪ್ಲಾಟಿನಾ ಹಾಗೂ ಟಿವಿಎಸ್ ಸ್ಟಾರ್ ಸಿಟಿಗೆ ಸ್ಪರ್ಧೆಯೊಡ್ಡುವ ಉದ್ದೇಶದಿಂದ ಈ ಮೋಟಾರ್ ಸೈಕಲ್ ಭಾರತದಲ್ಲಿ ಬಿಡುಗಡೆಗೊಂಡಿದೆ.
ಎಂಜಿನ್ ಯಾವುದು?
ಬೈಕ್ನಲ್ಲಿ 100 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಇದೆ. ಇದರಲ್ಲಿ ಫ್ಯುಯಲ್ ಇಂಜೆಕ್ಟರ್ ವ್ಯವಸ್ಥೆಯ ಜತೆಗೆ ಇಎಸ್ಪಿ ತಾಂತ್ರಿಕತೆಯನ್ನೂ ಅಳವಡಿಸಲಾಗಿದೆ. ಈ ಎಂಜಿನ್ ಹೊಸ ಬಿಎಸ್6 ಆರ್ಡಿಇ ಮಾನದಂಡಗಳಿಗೆ ಪೂರಕವಾಗಿದೆ. ಇದರ ಫ್ಯುಯಲ್ ಪಂಪ್ ಅನ್ನು ಟ್ಯಾಂಕ್ಗಿಂತ ಹೊರಗಿಡಲಾಗಿದ್ದು ಆಟೋಮ್ಯಾಟಿಕ್ ಚೋಕ್ನೊಂದಿಗೆ ರಸ್ತೆಗೆ ಇಳಿದಿದೆ. ಈ ಬೈಕ್ 7500 ಆರ್ಪಿಎಮ್ನಲ್ಲಿ 7.5 ಬಿಎಚ್ಪಿ ಪವರ್ ಹಾಗೂ 6000 ಆರ್ಪಿಎಮ್ನಲ್ಲಿ 8.05 ಟಾರ್ಕ್ ಬಿಡುಗಡೆ ಮಾಡುತ್ತದೆ.
ವಿಶೇಷತೆ ಏನು?
ಶೈನ್ 100 ಬೈಕ್ ಶೈನ್ 125ನ ಸಣ್ಣ ವೇರಿಯೆಂಟ್ನಂತೆ ಕಾಣುತ್ತದೆ. ಇದು 168 ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಕೂಡ ಹೊಂದಿದೆ. ಇದರಲ್ಲಿ ಐದು ಬಣ್ಣಗಳ ಆಯ್ಕೆಯೂ ಇದೆ. ಅಲಾಯ್ ವಿಲ್, ಅಲ್ಯುಮಿನಿಯಮ್ ಗ್ರಾಬ್ ರೈಲ್ ಹಾಗೂ ಸ್ಲೀಕ್ ಮಪ್ಲರ್ ಹೊಂದಿದೆ. ಬಣ್ಣಗಳ ಆಯ್ಕೆ ಇಂತಿದೆ: ಬ್ಲ್ಯಾಕ್ ಆ್ಯಂಡ್ ರೆಡ್ ಸ್ಟ್ರಿಪ್, ಬ್ಲ್ಯಾಕ್ ವಿತ್ ಬ್ಲ್ಯೂ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗ್ರೀನ್ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗೋಲ್ಡ್ ಸ್ಟ್ರಿಪ್ಸ್, ಬ್ಲ್ಯಾಕ್ ವಿತ್ ಗ್ರೇ ಸ್ಟ್ರಿಪ್ಟ್.
ಇದನ್ನೂ ಓದಿ : Honda SP 125 | ಮೇಡ್ ಇನ್ ಇಂಡಿಯಾ ಬೈಕ್‌ಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾಗೆ ಯಾನ!
ಹೋಂಡಾ ಮೋಟಾರ್ ಸೈಕಲ್ ಈ ಬೈಕ್ಗೆ ಆರು ವರ್ಷಗಳ ವಾರಂಟಿ ನೀಡುತ್ತದೆ. ಮೂರು ವರ್ಷಗಳ ಕಡ್ಡಾಯ ವಾರಂಟಿ ಹಾಗೂ 3 ವರ್ಷಗಳ ಎಕ್ಸ್ಟೆಂಡೆಡ್ ವಾರಂಟಿ ಇದರಲ್ಲಿ ಸೇರಿಕೊಂಡಿದೆ. ಬೈಕ್ 1.9 ಮೀಟರ್ ಉದ್ದವಿದ್ದು, 786 ಎಮ್ಎಮ್ ಸೀಟ್ ಎತ್ತರ ಹೊಂದಿದೆ. ಕಾಂಬಿ ಬ್ರೇಕ್ ಸಿಸ್ಟಮ್ ಹಾಗೂ ಈಕ್ವಲೈಸರ್ ವ್ಯವಸ್ಥೆಯೂ ಇದೆ.
ಆಟೋಮೊಬೈಲ್
Honda Activa : ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಸ್ಟಾರ್ಟ್ ಮಾಡಲು ಕಿ ಬೇಕಾಗಿಲ್ಲ! ಏನಿದು ಹೊಸ ಫೀಚರ್?
ಸ್ಮಾರ್ಟ್ ಕಿ ಈ ವಿಭಾಗದಲ್ಲಿ ಹೊಸ ಸೇರ್ಪಡೆಯಾಗಿದ್ದು, ಕಾರಿನ ರೀತಿಯಲ್ಲೇ ಕಿ ಒತ್ತುವ ಮೂಲಕ ಪಾರ್ಕಿಂಗ್ ಜಾಗದಲ್ಲಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ.
ಮುಂಬಯಿ: ಸಾಮಾನ್ಯ ರೀತಿಯ ಕಿ ಇಲ್ಲದ, ಕಾರಿನಂತೆಯೇ ಸ್ಮಾರ್ಟ್ ಕಿ ಮೂಲಕ ಸ್ಟಾರ್ಟ್ ಮಾಡಬಹುದಾದ ಹೋಂಡಾ ಆಕ್ಟಿವಾ 125 ಸ್ಕೂಟರ್ (Honda Activa) ಭಾರತದ ಮಾರುಕಟ್ಟೆಯಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಇದು ಈ ಹಿಂದಿನ 125 ಸಿಸಿ ಸ್ಕೂಟರ್ನ ಅಪ್ಗ್ರೇಡ್ ಆಗಿದ್ದರೂ, ಸ್ಮಾರ್ಟ್ ಕಿ ಆಯ್ಕೆ ಇದರ ವೇರಿಯೆಂಟ್ಗಳಲ್ಲಿ ಹೊಸ ಸೇರ್ಪಡೆ. ಈ ಸ್ಮಾರ್ಟ್ ಕಿ ಮೂಲಕ ಸವಾರರ ಹಲವು ಕೆಲಸಗಳು ಸರಳಗೊಂಡಿವೆ. ಜತೆಗೆ ರಾಶಿ ರಾಶಿ ಸ್ಕೂಟರ್ಗಳ ನಡುವೆ ನಮ್ಮ ಸ್ಕೂಟರ್ ಪತ್ತೆ ಮಾಡುವುದಕ್ಕೂ ಸಾಧ್ಯವಿದೆ. ಡ್ರಮ್, ಡ್ರಮ್ ಅಲಾಯ್, ಡಿಸ್ಕ್ ಈ ಹಿಂದೆ ಇದ್ದ ವೇರಿಯೆಂಟ್ ಆಗಿದ್ದು, ಎಚ್ ಸ್ಮಾರ್ಟ್ ಹೊಸ ಆಕರ್ಷಣೆಯಾಗಿದೆ.
ಹೊಸ ಸ್ಕೂಟರ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಇದೆ. ಜತೆಗೆ ಅದೇ ಪರ್ಲ್ ನೈಟ್ ಸ್ಟಾರ್ಟ್ ಬ್ಲ್ಯಾಕ್, ಹೆವಿ ಗ್ರೇ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಪರ್ಲ್ ಪ್ರೀಶಿಯಸ್, ಮಿಡ್ನೈಟ್ ಬ್ಲ್ಯೂ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಅಪ್ಗ್ರೇಡ್ ಮಾಡಿರುವ ಸ್ಕೂಟರ್ನ ಬೆಲೆ 78,920 ರೂಪಾಯಿಗಳಿಂದ ಆರಂಭಗೊಂಡು 88,093 ರೂಪಾಯಿಗಳ ತನಕ ಇದೆ. (ಎಕ್ಸ್ ಶೋರೂಮ್ ಬೆಲೆ).
ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ 125 ಸಿಸಿಯಲ್ಲಿ ಫ್ಯುಯಲ್ ಇಂಜೆಕ್ಟರ್ ಸಮೇತ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಇದು ಬಿಎಸ್6ನ ಎರಡನೇ ಹಂತದ ಮಾನದಂಡವಾಗಿದ್ದು, ಏಪ್ರಿಲ್ 1ರ ಒಳಗೆ ಕಡ್ಡಾಯವಾಗಿ ಅಳವಡಿಸುವಂತೆ ಕೇಂದ್ರ ಸರಕಾರ ಸೂಚನೆ ಕೊಟ್ಟಿದೆ. ಈ ಎಂಜಿನ್ 6250 ಆರ್ಪಿಎಮ್ನಲ್ಲಿ 8.19 ಬಿಎಚ್ಪಿ ಪವರ್ ಹಾಗೂ 5000 ಆರ್ಪಿಎಮ್ನಲ್ಲಿ 10.4 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ಕೂಡ ಇದೆ. ಇದರಿಂದ ಸಿಟಿ ಸವಾರಿಯ ವೇಳೆ ಮೈಲೇಜ್ ಕೂಡ ಜಾಸ್ತಿಯಾಗುತ್ತದೆ. ಹೋಂಡಾ ಕಂಪನಿಯ ಈ ಸ್ಕೂಟರ್ ಹೆಚ್ಚು ಮೈಲೇಜ್ ನೀಡುವ ಟಯರ್ಗಳನ್ನು ಬಳಸಿಕೊಂಡಿದೆ ಎಂಬುದು ಕಂಪನಿಯ ಹೇಳಿಕೆ. ಅದೇ ರೀತಿ ಎಸ್ಪಿ ತಾಂತ್ರಿಕತೆಯನ್ನು ಹೊಂದಿದ್ದು ಸ್ಮೂತ್ ಸ್ಟಾರ್ಟ್ ಸೇರಿದಂತೆ ಹಲವು ಫೀಚರ್ಗಳನ್ನು ಹೊಂದಿದೆ.
ಏನೇನು ಫೀಚರ್ಗಳಿವೆ?
ಸೈಡ್ ಸ್ಟಾಂಡ್ ಕಟ್ಆಫ್ ಸ್ವಿಚ್, ಹೊರಗಡೆಯೇ ಇರುವ ಫ್ಯುಯಲ್ ಕ್ಯಾಪ್, ಓಪನ್ ಗ್ಲವ್ ಬಾಕ್ಸ್, ಎಲ್ಇಡಿ ಹೆಡ್ಲ್ಯಾಂಪ್ ಹೊಂದಿದೆ. ಇದರಲ್ಲಿರುವ ಸಣ್ಣ ಡಿಜಿಟಲ್ ಸ್ಕ್ರೀನ್ ಮೂಲಕ ರಿಯಲ್ ಟೈಮ್ ಮೈಲೇಜ್ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ರೀತಿ ಡಿಸ್ಟನ್ಸ್ ಎಮ್ಟಿ, ಫ್ಯುಯಲ್ ಗೇಜ್, ಸರಾಸರಿ ಮೈಲೇಜ್ ಮತ್ತಿತರ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.
ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್ ಮೈಲೇಜ್ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ
ಈ ಸ್ಕೂಟರ್ನ ಟಾಪ್ ಎಂಡ್ ವೇರಿಯೆಂಟ್ ಸ್ಕೂಟರ್ನಲ್ಲಿ ಸ್ಮಾರ್ಟ್ ಕಿ ಆಯ್ಕೆಯೂ ಬಂದಿದೆ. ಇದು ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಸೇಫ್, ಸ್ಮಾರ್ಟ್ಸ್ ಅನ್ಲಾಕ್, ಸ್ಮಾರ್ಟ್ ಸ್ಟಾರ್ಟ್ ಎಂಬ ಆಯ್ಕೆ ನೀಡಲಾಗಿದೆ. ಸ್ಮಾರ್ಟ್ ಕಿ ಮೂಲಕ 10 ಮೀಟರ್ ದೂರದಲ್ಲಿ ಸ್ಕೂಟರ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಬಟನ್ ಒತ್ತಿದರೆ ಅದರ ಇಂಟಿಕೇಟರ್ ಉರಿಯಲು ಆರಂಭವಾಗುತ್ತದೆ.
ಅದೇ ರೀತಿ ಇಮ್ಮೊಬಿಲೈಸರ್ ಫೀಚರ್ ಕೂಡ ಇದ್ದು, ಕಿ 2 ಮೀಟರ್ಗಿಂತ ದೂರ ಹೋದ ತಕ್ಷಣ ಇಮ್ಮೊಬಿಲೈಸರ್ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕಿಹೋಲ್ ಇರುವುದಿಲ್ಲ. ಬದಲಾಗಿ. ಇಗ್ನಿಶನ್ ಆನ್ ಮಾಡುವ ಬಟನ್ ಇರುವ ನಾಬ್ ತಿರುಗಿಬೇಕಾಗುತ್ತದೆ. ಈ ನಾಬ್ ಮೂಲಕ ಸೀಟ್, ಫ್ಯುಯಲ್ ಕ್ಯಾಪ್ ಹಾಗೂ ಹ್ಯಾಂಡಲ್ ಲಾಕ್ ತೆಗೆಯಬಹುದಾಗಿದೆ.
ಆಟೋಮೊಬೈಲ್
Shah Rukh Khan : ಶಾರುಖ್ ಖಾನ್ ಮನೆ ಸೇರಿತು 10 ಕೋಟಿ ರೂಪಾಯಿಯ ಕಾರು; ಯಾವ ಬ್ರಾಂಡ್ ಗೊತ್ತೇ?
ಶಾರುಖ್ ಖಾನ್ ಅವರ ಮನೆ ಮನ್ನತ್ ಒಳಗೆ ಕಾರು ಹೋಗುತ್ತಿರುವ ವಿಡಿಯೊವನ್ನು ತೆಗೆದ ಅಭಿಮಾನಿಗಳು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ.
ಮುಂಬಯಿ: ಭಾರತದ ಸಿನಿಮಾ ರಂಗದ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan)ಪಠಾಣ್ ಸಿನಿಮಾದ ಯಶಸ್ಸಿನ ಬಳಿಕ ಹೊಸ ಕಾರನ್ನು ಖರೀದಿಸಿದ್ದಾರೆ. ಭಾನುವಾರ ರಾತ್ರಿ ಆ ಕಾರಿನಲ್ಲೇ ಅವರು ಪ್ರಯಾಣ ಮಾಡುತ್ತಿದ್ದ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಅಂದ ಹಾಗೆ ಆ ಕಾರಿನ ಬೆಲೆ ಎಷ್ಟು ಗೊತ್ತೇ? ಬರೊಬ್ಬರಿ 10 ಕೋಟಿ ರೂಪಾಯಿ. ಅದು ವಿಶ್ವದ ಅತ್ಯಂತ ದುಬಾರಿ ಹಾಗೂ ಪ್ರತಿಷ್ಠಿತರಿಗೆ ಮಾತ್ರ ಮಾರಾಟ ಮಾಡಲಾಗುವ ರೋಲ್ಸ್ ರಾಯ್ಸ್ ಕಾರು. ಬಿಳಿ ಬಣ್ಣದ ಈ ದುಬಾರಿ ವಾಹನದ ಬಗ್ಗೆ ಶಾರುಖ್ ಖಾನ್ ಅಭಿಮಾನಿಗಳು ಸಿಕ್ಕಾಪಟ್ಟೆ ಕುತೂಹಲ ವ್ಯಕ್ತಪಡಿಸಿದ್ದಾರೆ.
ಫ್ಯಾನ್ ಪೇಜ್ನಲ್ಲಿ ಹಾಕಿದ ವಿಡಿಯೊ
ಶಾರುಖ್ ಖಾನ್ ಅವರ ಬಳಿ ದುಬಾರಿ ಬೆಲೆಯ ಹಲವಾರು ಕಾರುಗಳಿವೆ ಎಂದು ಹೇಳಲಾಗುತ್ತಿದೆ. ಆ ಸಾಲಿಗೆ ಇದೀಗ ರೋಲ್ಸ್ ರಾಯ್ಸ್ನ ಕಲಿನನ್ ಬ್ಲ್ಯಾಕ್ ಬ್ಯಾಜ್ ಕಾರು ಕೂಡ ಸೇರಿಕೊಂಡಿದೆ. ಶಾರುಖ್ ಖಾನ್ ಫ್ಯಾನ್ ಪೇಜ್ ಎಂಬ ಟ್ವಿಟರ್ ಖಾತೆಯಲ್ಲಿ ಕಾರಿನ ವಿಡಿಯೊವನ್ನು ಪ್ರಕಟಿಸಲಾಗಿದೆ. ಕಾರಿಗೆ ಶಾರುಖ್ ಅವರ ಸಿಗ್ನೇಚರ್ ಸಂಖ್ಯೆ 555 ಕೂಡ ಇದೆ. ಅದು ಶಾರುಖ್ ಅವರ ನಿವಾಸವಾದ ಮನ್ನತ್ ಒಳಗೆ ಪ್ರವೇಶ ಮಾಡುವುದನ್ನು ಅಭಿಮಾನಿಗಳು ವಿಡಿಯೊ ಮಾಡಿದ್ದಾರೆ.
ಶಾರುಖ್ ಖಾನ್ ಬಳಿಕ ಏಳು ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯಲ್ಸ್ ಕೋಪ್ ಕಾರು ಕೂಡ ಎಂದು ಹೇಳಲಾಗುತ್ತಿದೆ. ಅದೇ ರೀತಿ ತಾವು ಆರಂಭದಿಂದ ಬಳಸುತ್ತಿದ್ದ ಅಷ್ಟೂ ಕಾರನ್ನು ಬಳಸುತ್ತಾರೆ ಎಂದೂ ಹೇಳಲಾಗಿದೆ. ಅವರ ಕಾರು ಗ್ಯಾರೇಜ್ನಲ್ಲಿ ಹಳೆಯ ಸ್ಯಾಂಟ್ರೊ ಕೂಡ ನಿಂತಿದೆ ಎಂದು ಹೇಳಲಾಗುತ್ತಿದೆ.
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಒಟಿಟಿಯಲ್ಲಿ ಇದೀಗ ಲಭ್ಯವಿದೆ. ಈ ಸಿನಿಮಾವು 1000 ಕೋಟಿ ರೂಪಾಯಿಗಿಂತಲೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಅಟ್ಲೀ ಅವರ ಜವಾನ್ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆಗೆ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ.
ಯಾವುದು ರೋಲ್ಸ್ ರಾಯಲ್ಸ್ ಕಲಿನನ್ ಕಾರು:
ರೋಲ್ಸ್ ರಾಯ್ಸ್ ಕಂಪನಿಯ ಕಲಿನನ್ ಬ್ಲ್ಯಾಕ್ ಬ್ಯಾಜ್ ಕಾರು 6750 ಸಿಸಿಯ 12 ಸಿಲಿಂಡರ್ನ ಎಂಜಿನ್ ಹೊಂದಿದೆ. ಇದು 5341 ಉದ್ದವಿದ್ದು, 2000 ಅಗಲವಾಗಿದೆ. ಇದು ಜಗತ್ತಿನ ಅತ್ಯಾಧುನಿಕ ಫೀಚರ್ ಹಾಗೂ ತಾಂತ್ರಿಕತೆಯನ್ನು ಹೊಂದಿದೆ.
ಆಟೋಮೊಬೈಲ್
Mahindra Thar : ವಿಶ್ವ ಚಾಂಪಿಯನ್ನಿಖತ್ಗೆ ಥಾರ್ ಕಾರು ಗಿಫ್ಟ್ ಕೊಟ್ಟ ಮಹೀಂದ್ರಾ
ಥಾರ್ ಕಾರು ಸಿಗುತ್ತಿದ್ದಂತೆ ನಿಖತ್ ಜರೀನ್ ಮರ್ಸಿಡಿಸ್ ಕಾರು ಕೊಳ್ಳುವ ತಮ್ಮ ಯೋಜನೆಯನ್ನು ಕೈಬಿಟ್ಟಿದ್ದಾರೆ.
ನವ ದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಭಾರತದ ನಿಖತ್ ಜರೀನ್(Nikhat Zareen) ಅವರು ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅವರು ಕಳೆದ ಆವೃತ್ತಿಯಲ್ಲೂ ಬಂಗಾರ ಗೆದ್ದಿದ್ದರು. ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ. ಅವರಿಗೆ ಮಹೀಂದ್ರಾ&ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರ ಜನಪ್ರಿಯ ಎಸ್ಯುವಿ ಥಾರ್ (Mahindra Thar) ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದರ ಜತೆ ಜರೀನ್ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟಿದ್ದಾರೆ.
ಚಾಂಪಿಯನ್ಷಿಪ್ ಗೆದ್ದಿರುವ ನಿಖತ್ ಅವರು 82,27,985 ರೂಪಾಯಿ ಬಹುಮಾನ ಕೂಡ ಗೆದ್ದಿದ್ದಾರೆ. ಬಹುಮಾನ ಸಿಕ್ಕ ತಕ್ಷಣ ಅವರು ಆ ಹಣದಲ್ಲಿ ಮರ್ಸಿಡಿಸ್ ಬೆಂಜ್ ಕಾರೊಂದನ್ನು ಖರೀದಿ ಮಾಡುವ ಯೋಜನೆ ರೂಪಿಸಿಕೊಂಡಿದ್ದರಂತೆ. ಆದರೆ, ಮಹೀಂದ್ರಾ ಥಾರ್ ಸಿಕ್ಕಿದ ತಕ್ಷಣ ಅವರು ಮರ್ಸಿಡಿಸ್ ಖರೀದಿ ಮಾಡುವ ತಮ್ಮ ಯೋಜನೆಯನ್ನು ಬದಲಿಸಿದ್ದಾರೆ. ಸಿಕ್ಕಿರುವ ಹಣದಲ್ಲಿ ತಮ್ಮ ಪೋಷಕರನ್ನು ಉಮ್ರಾ ಧಾರ್ಮಿಕ ಯಾತ್ರೆಗೆ ಕಳುಹಿಸಲು ಮುಂದಾಗಿದ್ದಾರೆ.
ಮಹೀಂದ್ರಾ ಕಂಪನಿಯು ಕ್ರೀಡಾ ಸಾಧಕರಿಗೆ ತನ್ನ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಇದೇ ಮೊದಲಲ್ಲ. ಈ ಹಿಂದೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೂ ಥಾರ್ ನೀಡಿದ್ದರು. ಎಕ್ಸ್ಯುವಿ 700 ಕಾರನ್ನು ಕೂಡ ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ಗೆ ಕೊಟ್ಟಿದ್ದರು.
ಮಿಂಚಿದ ಜರೀನ್
ಭಾನುವಾರ ಇಲ್ಲಿ ನಡೆದ 50 ಕೆಜಿ ವಿಭಾಗದ ಫೈನಲ್ ಕಾದಾಟದಲ್ಲಿ ನಿಖತ್ ಜರೀನ್ ಅವರು ವಿಯೆಟ್ನಾಂನ ಗುಯೆನ್ ಥಿ ಟಾಮ್(Nguyen Thi Tam) ಸವಾಲನ್ನು ಮಟ್ಟಿನಿಲ್ಲುವಲ್ಲಿ ಯಶಸ್ಸು ಸಾಧಿಸಿದರು. ಬಲಿಷ್ಠ ಪಂಚ್ಗಳ ಮೂಲಕ ಮೆರೆದಾಡಿದ ನಿಖತ್ ಜರೀನ್ 5-0 ಅಂತರದ ಗೆಲುವು ಸಾಧಿಸಿದರು. ಅವರ ಸತತ ಪಂಚ್ಗಳಿಗೆ ಬೆದರಿದ ಎದುರಾಳಿ ಗುಯೆನ್ ಥಿ ಟಾಮ್ ಒಂದೂ ಬೌಟ್ನಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ಒಟ್ಟಾರೆ ಭಾರತಕ್ಕೆ ಈ ಟೂರ್ನಿಯಲ್ಲಿ ಸಿಕ್ಕ ಮೂರನೇ ಚಿನ್ನದ ಪದಕ ಇದಾಗಿದೆ. ಶನಿವಾರ ನಡೆದ 48 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್ ಅವರು ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ ಚಿನ್ನ ಗೆದ್ದು ಭಾರತಕ್ಕೆ ಮೊದಲ ಪದಕದ ಖಾತೆ ತೆರೆದಿದ್ದರು. ಇದರ ಬೆನ್ನಲ್ಲೇ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚೀನಾದ ವಾಂಗ್ ಲೀನಾ ಅವರನ್ನು ಮಣಿಸಿದ್ದರು.
ಆಟೋಮೊಬೈಲ್
Renault Kwid : ಈ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಲ್ಲಿ ಇರುವುದಿಲ್ಲ
ಬಿಎಸ್6 ಮಾನದಂಡಗಳು ಕಠಿಣಗೊಂಡಿರುವ ಕಾರಣ ಕೆಲವೊಂದು ಕಾರುಗಳ ಉತ್ಪಾದನೆ ನಿಲ್ಲಲಿದೆ.
ಮುಂಬಯಿ: ಭಾರತ ಸರಕಾರ ವಾಹನಗಳು ಪಾಲಿಸಬೇಕಾದ ಪರಿಸರ ಮಾಲಿನ್ಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ. ಬಿಎಸ್6 ಎರಡನೇಹಂತದ ಮಾನದಂಡದ ಮೂಲಕ ವಾಹನಗಳು ಉಗುಳುವ ಹೊಗೆಯ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಭಾರತದ ಕಾರುಗಳ ಉತ್ಪಾದಕರು ಎಂಜಿನ್ನಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವೊಂದು ಮಾಡೆಲ್ಗಳನ್ನು ಹೊಸ ಮಾನದಂಡಕ್ಕೆ ಪೂರಕವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಇಂಥ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಿಂದ ಕಣ್ಮರೆಯಾಗಲಿವೆ. ಅಂಥ ಕೆಲವು ಕಾರುಗಳ ವಿವರ ಇಲ್ಲಿದೆ.
ಟಾಟಾ ಆಲ್ಟ್ರೊಜ್ (ಡೀಸೆಲ್) – Tata Alatroz
ಟಾಟಾ ಮೋಟಾರ್ಸ್ನ ಆಲ್ಟ್ರೊಜ್ ಪ್ರೀಮಿಯಮ್ ಹ್ಯಾಚ್ಬ್ಯಾಕ್. ಆದರೆ, ಇದರ 1497 ಸಿಸಿಯ ಡೀಸೆಲ್ ಎಂಜಿನ್ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಏಪ್ರಿಲ್ ಒಂದರಿಂದ ಮಾರುಕಟ್ಟೆಗೆ ಇಳಿಯುವ ಸಾಧ್ಯತೆಗಳು ಇಲ್ಲ. ಈ ಕಾರಿನ ಎಂಜಿನ್ 88.77 ಬಿಎಚ್ಪಿ ಪವರ್ ಹಾಗೂ 200 ಎನ್ಎಮ್ ಟಾರ್ಕ್ ಬಿಡಗಡೆ ಮಾಡುತ್ತಿತ್ತು.
ರಿನೋ ಕ್ವಿಡ್ – Renault Kwid
ರಿನೋ ಕಂಪನಿ ತನ್ನೆಲ್ಲ ಕಾರುಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ಮೊದಲಾಗಿ ಅಪ್ಗ್ರೇಡ್ ಮಾಡಿದೆ. ಆದರೆ, ರಿನೋ ಕ್ವಿಡ್ ಕುರಿತು ಮಾಹಿತಿ ಇಲ್ಲ. ಕ್ವಿಡ್ನಲ್ಲಿ 1 ಲೀಟರ್ನ 3 ಸಿಲಿಂಡರ್ ಎಂಜಿನ್ ಇದ್ದು, ಇದು 68 ಬಿಎಚ್ಪಿ ಪವರ್ ಹಾಗೂ 91 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರು ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.
ಹೋಂಡಾ ಅಮೇಜ್ (ಡೀಸೆಲ್)- Honda Amaze
ಹೋಂಡಾ ಕಂಪನಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಮೇಜ್ ಕಾರಿನ ಡೀಸೆಲ್ ಮಾಡೆಲ್ ತೆಗೆದು ಹಾಕಿದೆ. ಕಂಪನಿ ಪ್ರಕಾರ ಅದರ 1.5 ಲೀಟರ್ ಡೀಸೆಲ್ ಎಂಜಿನ್ ಬಿಎಸ್6 ಮಾನದಂಡಗಳನ್ನು ಪೂರೈಸಲು ಪೂರಕವಾಗಿಲ್ಲ. ಅದೇ ರೀತಿ ಡೀಸೆಲ್ ವೇರಿಯೆಂಟ್ಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದೆ ಎಂದು ಹೇಳಿದೆ. ಹೀಗಾಗಿ ಈ ಮಾಡೆಲ್ ಏಪ್ರಿಲ್ 1ರಿಂದ ಇರುವುದಿಲ್ಲ.
ಹೋಂಡಾ ಡಬ್ಲ್ಯುಆರ್ವಿ- Honda WRV
ಹೋಂಡಾ ಕಂಪನಿಯು ತನ್ನ ಕ್ರಾಸ್ ಓವರ್ ಹ್ಯಾಚ್ಬ್ಯಾಕ್ ಡಬ್ಲ್ಯುಆರ್ವಿ ಉತ್ಪಾದನೆ ಕೂಡ ನಿಲ್ಲಿಸಲಿದೆ. ಇದು 1.2 ಲೀಟರ್ನ ಪೆಟ್ರೋಲ್ ಹಾಗೂ 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿತ್ತು. ಈ ಕಾರು ಇನ್ನು ಮುಂದೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.
ಹೋಂಡಾ ಜಾಜ್- Honda Jazz
ಹೋಂಡಾ ಜಾಜ್ ಕಾರು ಕೂಡ ಏಪ್ರಿಲ್ 2023ರಿಂದ ಸಿಗುವುದಿಲ್ಲ. ಇದು 1.2 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು 88.7 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ.
ಮಹೀಂದ್ರಾ ಮೊರಾಜೊ- Mahindra Marazzo
ಮಹೀಂದ್ರಾ ಕಂಪನಿಯು ತನ್ನ ಮೊರೊಜಾ ಎಮ್ಪಿವಿ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಏಪ್ರಿಲ್ 2023ರಿಂದ ಮಾರುವ ಸಾಧ್ಯತೆಗಳಿಲ್ಲ. ಈ ಕಾರು 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿದ್ದು 121 ಬಿಎಚ್ಪಿ ಪವರ್ ಹಾಗೂ 300 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?