Site icon Vistara News

ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಚಾಲಕನಿಗೆ ಸೀಟ್‌ ಬೆಲ್ಟ್‌ ಧರಿಸದ ತಪ್ಪಿಗೆ ಶಿಕ್ಷೆ! ಸುರಕ್ಷತೆಯ ನಿರ್ಲಕ್ಷ್ಯ ಎಂದ ಪೊಲೀಸರು

ಸೀಟ್‌ ಬೆಲ್ಟ್‌

ಕ್ಯಾನ್‌ಬೆರಾ: ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಆಸ್ಟ್ರೇಲಿಯಾದಲ್ಲಿ ಒಂದು ಫ್ಯಾಶನ್ ಆಗಿದೆ. ತಂತ್ರಜ್ಞಾನ ನೆರವು ಈ ‘ಹವ್ಯಾಸ’ ಹೆಚ್ಚಲು ಕಾರಣ. ಹೇಗೆಂದರೆ, ಸ್ವಯಂ ಚಾಲನಾ ಸಾಮರ್ಥ್ಯದ ಕಾರುಗಳು ಅದರ ಪಾಡಿಗೆ ಡ್ರೈವ್ ಮಾಡಿಕೊಂಡು ಹೋಗುತ್ತಿರುವುದರಿಂದ ಜೋಡಿಗಳಿಗೆ ತಮ್ಮ “ಕೆಲಸಗಳನ್ನು’ ಕಾರಿನಲ್ಲೇ ಮುಗಿಸಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನದ್ದೇನೋ ನೆರವು ಸಿಕ್ಕಿದೆ. ಆದರೆ, ಪೊಲಿಸರಿಗೆ ಸುರಕ್ಷತೆಯದ್ದೇ ಮಂಡೆ ಬಿಸಿ. ಅವರ ಲೈಂಗಿಕ ಸುರಕ್ಷತೆಯದ್ದಲ್ಲ. ಬದಲಾಗಿ ಸೀಟ್‌ ಬೆಲ್ಟ್‌ ಧರಿಸದೇ ಕಾರಿನಲ್ಲಿ ಪ್ರಯಾಣಿಸುವುದರ ಬಗ್ಗೆ.

ಇದೇ ಮಾದರಿಯ ಪ್ರಕರಣವೊಂದರಲ್ಲಿ ಕಾರಿನ ಚಾಲಕನೊಬ್ಬನಿಗೆ ದೊಡ್ಡ ಮಟ್ಟದ ದಂಡ ವಿಧಿಸಿದ್ದಾರೆ ಆಸ್ಟ್ರೇಲಿಯಾದ ಪೊಲೀಸರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯ ಕೆಲಸ ರೋಡ್‌ ಸೇಫ್ಟಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಪ್ರಕಾರ ಚಾಲಕನಿಗೆ ಸೀಟ್‌ ಬೆಲ್ಟ್‌ ಧರಿಸಿಲ್ಲ ಎಂದು ೫೬ ಸಾವಿರ ರೂಪಾಯಿ ಫೈನ್‌ ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಾಹನ ಸವಾರರ ಸುರಕ್ಷತೆಯ ಮೇಲೆ ಕಣ್ಗಾವಲಿಗಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂತೆಯೇ ಕಾರೊಂದರದಲ್ಲಿ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಗಳು ಆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಚಾಲಕ ಹಾಗೂ ಜತೆಗಿದ್ದ ಯುವತಿ ಕೂಡ ಸೀಟ್‌ ಬೆಲ್ಟ್‌ ಧರಿಸದಿರುವುದು ಕಂಡು ಬಂದಿದೆ. ಹೀಗಾಗಿ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಿದ್ದಾರೆ.

ಪೊಲೀಸರ ಕ್ರಮದ ಬಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‌ ಲ್ಯಾಂಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿವೆ. ಯಾಕೆಂದರೆ ದಂಡ ವಿಧಿಸಿದ ಪೊಲೀಸರು ಜೋಡಿ ಲೈಂಗಿಕ ಕ್ರಿಯೆ ನಡೆಸಿದ್ದು ಚಲಿಸುತ್ತಿರುವ ಕಾರು ಅಥವಾ ನಿಂತಿರುವ ಕಾರೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೆಲವರು ನಿಂತಿರುವ ಕಾರಿನಲ್ಲಿ ಆಗಿದ್ದರೆ ಸೀಟ್‌ ಬೆಲ್ಟ್‌ ಯಾಕೆ ಧರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಇನ್ನು ಹಲವರು ಕ್ಯಾಮೆರಾ ಮುಂದೆಯೇ ಕಾರು ನಿಲ್ಲಿಸಿ ಇಂಥ ಕೆಲಸ ಮಾಡುವ ಮೊದಲು ಜೋಡಿ ಯೋಚನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ | Bhavish Aggarwal | ಭವೀಶ್‌ ಅಗ್ರವಾಲ್‌ರ ಓಲಾದಿಂದ ಅಗ್ಗದ ಎಲೆಕ್ಟ್ರಿಕ್‌ ಕಾರು ಉತ್ಪಾದನೆ? ಟೆಸ್ಲಾಗೆ ಸವಾಲು?

Exit mobile version