Site icon Vistara News

Toyota Rumion : ಆಗಸ್ಟ್ ಅಂತ್ಯದ ವೇಳೆಗೆ ಟೊಯೊಟಾದಿಂದ ಮತ್ತೊಂದು ಕಾರು ಬಿಡುಗಡೆ

Rumion Car

ಬೆಂಗಳೂರು: ಟೊಯೊಟಾ ಕಂಪನಿಯ ಹೊಸ ಕಾರು ರುಮಿಯಾನ್ (Toyota Rumion)​ ಎಂಪಿವಿಯನ್ನು ಆಗಸ್ಟ್ 2023 ರ ಅಂತ್ಯದ ವೇಳೆಗೆ ಕಂಪನಿ ಬಿಡುಗಡೆ ಮಾಡಲಿದೆ. ಅದಕ್ಕೂ ಮೊದಲು ಬುಕಿಂಗ್ ಓಪನ್​ ಮಾಡಲಿದೆ. ರುಮಿಯಾನ್ ನ ವಿತರಣೆಗಳು ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗುತ್ತವೆ ಎಂದು ಡೀಲರ್ ಮೂಲಗಳು ತಿಳಿಸಿವೆ. ಈ ಎಂಪಿವಿಯನ್ನು ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿಯೂ ಇದೇ ಮಾಡೆಲ್​ನಲ್ಲಿ ಮಾರಾಟ ಮಾಡಲಾಗುತ್ತಿದೆ.

ರುಮಿಯಾನ್​ ಎರ್ಟಿಗಾಗಿಂತ ಸಣ್ಣ ಕಾಸ್ಮೆಟಿಕ್ ಅಪ್​ಡೇಟ್​ ಮಾಡಿಕೊಂಡಿದೆ. ಮಾರುತಿಗಿಂತ 25,000-50,000 ರೂಪಾಯಿ ಬೆಲೆ ಹೆಚ್ಚಿರಬಹುದು. ಇದು ಎರ್ಟಿಗಾ, ಎಕ್ಸ್ ಎಲ್ 6 ಮತ್ತು ಕಿಯಾ ಕರೆನ್ಸ್​ಗೆ ಸ್ಪರ್ಧೆ ಒಡ್ಡಲಿದೆ. ಮಾರುತಿ ಸುಜುಕಿ ಎರ್ಟಿಗಾವನ್ನು ಆಧರಿಸಿದ ರುಮಿಯಾನ್, ಟೊಯೊಟಾ ಮತ್ತು ಸುಜುಕಿ ನಡುವಿನ ನಾಲ್ಕನೇ ಬ್ಯಾಡ್ಜ್-ಎಂಜಿನಿಯರಿಂಗ್ ಮಾದರಿಯಾಗಿದೆ. ಈ ಕಾರನ್ನು ಮಾರುತಿ ಸುಜುಕಿ ನಿರ್ಮಿಸಿ ಪೂರೈಸಲಿದೆ. ರುಮಿಯಾನ್ ನೊಂದಿಗೆ ಟೊಯೊಟಾ ದೇಶದಲ್ಲಿ ವಿಶಾಲವಾದ ಎಂಪಿವಿ ಪೋರ್ಟ್ ಫೋಲಿಯೊ ಹೊಂದಿರುವ ಕಂಪನಿ ಎನಿಸಿಕೊಳ್ಳಲಿದೆ. ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್ ಮತ್ತು ವೆಲ್ ಫೈರ್ ಟೊಯೊಟಾದ ಪಟ್ಟಿಯಲ್ಲಿದೆ.

ಇಂಟೀರಿಯರ್​, ಎಕ್ಸ್​ಟೀರಿಯರ್​ ಹೇಗಿದೆ?

ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾಂಜಾದ ಶೇರಿಂಗ್ ಮಾದರಿಯಲ್ಲಿ ರುಮಿಯಾನ್ ಸಹ ಎರ್ಟಿಗಾಕ್ಕಿಂತ ಸ್ವಲ್ಪ ವಿಭಿನ್ನ ಸ್ಟೈಲಿಂಗ್ ಹೊಂದಿರುತ್ತದೆ. ರುಮಿಯಾನ್ ಪರಿಷ್ಕೃತ ಫಾಗ್ ಲ್ಯಾಂಪ್ ಹೌಸಿಂಗ್, ಇನ್ನೋವಾ ಕ್ರಿಸ್ಟಾ ತರಹದ ಗ್ರಿಲ್ ಮತ್ತು ಹೊಸ ಡ್ಯುಯಲ್-ಟೋನ್ ಅಲಾಯ್ ಚಕ್ರಗಳೊಂದಿಗೆ ಹೊಸ ಮಾದರಿಯ ಬಂಪರ್ ಅನ್ನು ಪಡೆಯುತ್ತದೆ.

ಒಳಭಾಗದಲ್ಲಿ, ರುಮಿಯಾನ್ ಎರ್ಟಿಗಾದೊಂದಿಗೆ ತನ್ನ ಫೀಚರ್​ಗಳನ್ನು ಹಂಚಿಕೊಳ್ಳುತ್ತದೆ. 7-ಸೀಟ್ ಕಾನ್ಫಿಗರೇಶನ್, ವೈರ್​ಲೆಸ್​ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 7-ಇಂಚಿನ ಟಚ್ ಸ್ಕ್ರೀನ್, ಅರ್ಕಾಮಿಸ್ ಸೌಂಡ್ ಸಿಸ್ಟಮ್ ಮತ್ತು ಸ್ವಯಂಚಾಲಿತ ಹವಾಮಾನ ನಿಯಂತ್ರಣ. ಸುರಕ್ಷತೆಗೆ ಸಂಬಂಧಿಸಿದಂತೆ, ಇದು ನಾಲ್ಕು ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಎಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಎಲ್ಲಾ ಸೀಟುಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಗಳನ್ನು ಪಡೆದುಕೊಂಡಿದೆ.

ಟೊಯೊಟಾ ರುಮಿಯಾನ್ ಪವರ್ ಟ್ರೇನ್

ರುಮಿಯಾನ್ ಎರ್ಟಿಗಾದಂತೆಯೇ ಅದೇ 103 ಬಿಎಚ್​​ಪಿ, 137 ಎನ್ಎಂ ಟಾರ್ಕ್​ ಬಿಡುಗಡೆ ಮಾಡುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಎಂಜಿನ್ ಸಿಎನ್ ಜಿ ಮೋಡ್ ನಲ್ಲಿ 88 ಬಿಹೆಚ್ ಪಿ ಮತ್ತು 121.5 ಎನ್ಎಂ 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೊಯೊಟಾ ರುಮಿಯಾನ್​ ಪೆಟ್ರೋಲ್ 20.51 ಕಿ.ಮೀ ವರೆಗೆ ಇಂಧನ ದಕ್ಷತೆ ಹೊಂದಿದ್ದರೆ, ಸಿಎನ್ ಜಿ ಪ್ರತಿ ಕೆಜಿಗೆ 26.11 ಕಿ.ಮೀ ನೀಡುತ್ತದೆ.

ಇದನ್ನೂ ಓದಿ : Mahindra XUV 700 : 1.10 ಲಕ್ಷ ಎಸ್​ಯುವಿ ಕಾರುಗಳನ್ನು ವಾಪಸ್​ ಪಡೆದ ಮಹೀಂದ್ರಾ

ಟೊಯೊಟಾ ರುಮಿಯನ್ ಪ್ರತಿಸ್ಪರ್ಧಿಗಳು

ಬಿಡುಗಡೆಯಾದ ನಂತರ ಮಾರುತಿ ಸುಜುಕಿ ಎರ್ಟಿಗಾ (ರೂ.8.64 ಲಕ್ಷ-ರೂ.13.08 ಲಕ್ಷ), ಮಾರುತಿ ಸುಜುಕಿ ಎಕ್ಸ್ ಎಲ್ 6 (ರೂ.11.56 ಲಕ್ಷ-ರೂ.14.66 ಲಕ್ಷ) ಮತ್ತು ಕಿಯಾ ಕರೆನ್ಸ್ (ರೂ.10.45-ರೂ.18.90 ಲಕ್ಷ) ಕಾರುಗಳಿಗೆ ಪೈಪೋಟಿ ನೀಡಲಿದೆ. ರುಮಿಯಾನ್ ಕಾರಿನ ಬೆಲೆಯು ಎರ್ಟಿಗಾಗತಿಂ .25,000-50,000 ಹೆಚ್ಚಿರಬಹುದು ಎನ್ನಲಾಗಿದೆ.

Exit mobile version