Mahindra XUV 700 : 1.10 ಲಕ್ಷ ಎಸ್​ಯುವಿ ಕಾರುಗಳನ್ನು ವಾಪಸ್​ ಪಡೆದ ಮಹೀಂದ್ರಾ - Vistara News

ಆಟೋಮೊಬೈಲ್

Mahindra XUV 700 : 1.10 ಲಕ್ಷ ಎಸ್​ಯುವಿ ಕಾರುಗಳನ್ನು ವಾಪಸ್​ ಪಡೆದ ಮಹೀಂದ್ರಾ

ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಎಸ್​ಯುವಿ 700 ಹಾಗೂ 400 ಕಾರುಗಳನ್ನು ವಾಪಸ್​ ಪಡೆದು ದುರಸ್ತಿ ಮಾಡಲು ಕಂಪನಿ ನಿರ್ಧರಿಸಿದೆ.

VISTARANEWS.COM


on

XUV 400
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಹೀಂದ್ರಾ ಕಂಪನಿಯು ಎಕ್ಸ್ ಯುವಿ 700 (1,08,306 ಯುನಿಟ್ ಗಳು) ಮತ್ತು ಎಕ್ಸ್ ಯುವಿ 400 (3,560 ಯುನಿಟ್ ಗಳು) ಒಟ್ಟು 1.10 ಲಕ್ಷ ಯುನಿಟ್ ಗಳನ್ನು ಹಿಂಪಡೆಯಲು ನಿರ್ಧರಿಸಿದೆ/ ಎಕ್ಸ್ ಯುವಿ 700 ಈಗಾಗಲೇ ಕೆಲವು ಹಿಂಪಡೆಯುವಿಕೆಗಳನ್ನು ಕಂಡಿದ್ದರೂ, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ನಂತರ ಎಕ್ಸ್ ಯುವಿ 400 ಇದೇ ಮೊದಲ ಬಾರಿಗೆ ವಾಪಸ್​ ಪಡೆಯಲಾಗುತ್ತಿದೆ. ವೈರಿಂಗ್ ಸವೆತದ ಸಂಭಾವ್ಯ ಅಪಾಯದಿಂದಾಗಿ ಎಕ್ಸ್ ಯುವಿ 700 ಅನ್ನು ಹಿಂಪಡೆಯಲಾಗಿದೆ ಬ್ರೇಕ್ ಪೊಟೆಂಟಿಯೋಮೀಟರ್ ನ ಸ್ಪ್ರಿಂಗ್ ಸಮಸ್ಯೆಗಾಗಿ ಎಕ್ಸ್ ಯುವಿ 400 ಕಾರನ್ನು ವಾಪಸ್ ಪಡೆಯಲಾಗಿದೆ.

ವೈರಿಂಗ್ ಹಾರ್ನೆಸ್ ಸವೆತಕ್ಕೆ ಒಳಗಾಗಿರುವ ಕಾರುಗಳನ್ನು ಜೂನ್ 8, 2021 ಮತ್ತು ಜೂನ್ 28, 2023 ರ ನಡುವೆ ತಯಾರಿಸಲಾಗಿದೆ. ಎಕ್ಸ್ ಯುವಿ 700 ಅನ್ನು ಆಗಸ್ಟ್ 2021ರಲ್ಲಿ ಮಾತ್ರ ಬಿಡುಗಡೆ ಮಾಡಿರುವುದರಿಂದ, ಇಲ್ಲಿಯವರೆಗೆ ಮಾರಾಟವಾದ ಎಕ್ಸ್ ಯುವಿ 700 ನ ಬಹುತೇಕ ಎಲ್ಲಾ ಯುನಿಟ್ ಗಳು ಈ ವಾಪಸ್​ಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Mahindra : ಮಹೀಂದ್ರಾ ಮಾಲೀಕತ್ವದ ಕಂಪನಿಯಿಂದ 40 ಕೋಟಿ ರೂಪಾಯಿಯ ಕಾರು ಬಿಡುಗಡೆ

ಎಕ್ಸ್ ಯುವಿ 400 ಇವಿಗೆ ಸಂಬಂಧಿಸಿದಂತೆ, ಬ್ರೇಕ್ ಪೊಟೆಂಟಿಯೋಮೀಟರ್ ನ ಸ್ಪ್ರಿಂಗ್ ರಿಟರ್ನ್ ಸಮಸ್ಯೆ ಇರುವ ಕಾರಣಕ್ಕೆ ಪರಿಶೀಲಿಸಲು ವಾಪಸ್​ ಕರೆಸಿಕೊಳ್ಳಲಾಗಿದೆ. ಇದರರ್ಥ ಚಾಲಕ ಬ್ರೇಕ್ ಪೆಡಲ್ ಅನ್ನು ಬಿಡುಗಡೆ ಮಾಡಿದರೂ ಬ್ರೇಕ್ ಪ್ಯಾಡ್ ಗಳು ಡಿಸ್ಕ್ ಬಿಡುತ್ತಿರಲಿಲ್ಲ. ಎಕ್ಸ್ ಯುವಿ 400 ಇವಿಯ ಬಾಧಿತ ಘಟಕಗಳನ್ನು ಫೆಬ್ರವರಿ 16-ಜೂನ್ 5, 2023 ರ ನಡುವೆ ತಯಾರಿಸಲಾಗಿದೆ.

ಈ ಕುರಿತು ಮಹೀಂದ್ರಾ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ತನ್ನ ಗ್ರಾಹಕರಿಗೆ ತೊಂದರೆಯಿಲ್ಲದ ಅನುಭವವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಕಂಪನಿಯು ಸಮಸ್ಯೆ ಇರುವ ವಾಹನಗಳನ್ನು ದುರಸ್ತಿ ಮಾಡಿಕೊಡುವ ಕಾರ್ಯಕ್ಕೆ ಮುಂದಾಗಿದೆ. ಈ ಕ್ರಮವು ವಾಹನ ಹಿಂಪಡೆಯುವಿಕೆಯ ಸ್ವಯಂಪ್ರೇರಿತ ನಿಯಮಕ್ಕೆ ಪೂರಕವಾಗಿದೆ. ತಪಾಸಣೆ ಮತ್ತು ನಂತರದ ಸರಿಪಡಿಸುವಿಕೆಯನ್ನು ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನಡೆಸಲಾಗುವುದು. ಅವರನ್ನು ಕಂಪನಿಯು ವೈಯಕ್ತಿಕವಾಗಿ ಸಂಪರ್ಕಿಸಲಿದೆ ಎಂದು ಹೇಳಿದೆ.

ಮೂರು ತಿಂಗಳಲ್ಲಿ ಮೂರು ಬಾರಿ ಕೆಟ್ಟು ನಿಂತ ಇವಿ ಕಾರು, ಧರಣಿ ಕುಳಿತ ಮಾಲೀಕ!

ಚೆನ್ನೈನ ಕ್ರೋಮ್​​ಪೇಟ್ ಮೂಲದ ಮಹೀಂದ್ರಾ ಎಕ್ಸ್ ಯುವಿ 400 ಇವಿ ಕಾರಿನ ಮಾಲೀಕರೊಬ್ಬರು ಕಾರು ಪದೇಪದೆ ಕೆಟ್ಟು ನಿಲ್ಲುತ್ತದೆ ಎಂದು ಕೋಪಗೊಂಡು ಶೋರೂಮ್ (Mahindra Car) ಮುಂದೆ ಧರಣಿ ಕುಳಿತ ಪ್ರಸಂಗ ನಡೆದಿದೆ. ತಮ್ಮ ಮೂರು ತಿಂಗಳಷ್ಟು ಹೊಸ ವಾಹನವು ಮೂರು ಬಾರಿ ಅರ್ಧ ದಾರಿಯಲ್ಲಿ ಕೆಟ್ಟು ನಿಂತಿದೆ. ಆದರೆ, ಅದಕ್ಕೆ ಪೂರಕವಾಗಿರುವ ಮಾರ್ಗದರ್ಶನ ಕಂಪನಿ ಕಡೆಯಿಂದ ಸಿಗುತ್ತಿಲ್ಲ. ಹೀಗಾಗಿ ಧರಣಿ ಕುಳಿತಿದ್ದೇನೆ ಎಂಬುದಾಗಿ ಕಾರಿನ ಮಾಲೀಕರು ಹೇಳಿಕೊಂಡಿದ್ದಾರೆ.

ಮಹೀಂದ್ರಾ ಎಕ್ಸ್ ಯುವಿ 400 ಇವಿ ಮಾಲೀಕ ತಮ್ಮ ಕೋಪ ಮತ್ತು ಬ್ರಾಂಡ್ ಮತ್ತು ಅದರ ಉತ್ಪನ್ನ ಎರಡರಲ್ಲೂ ನಂಬಿಕೆ ಕಳೆದುಕೊಂಡಿರುವ ಬಗ್ಗೆ ಬ್ಯಾನರ್ ಬರೆದುಕೊಂಡು ಅದರ ಕೆಳಗೆ ಧರಣಿ ಕುಳಿತಿದ್ದಾರೆ. ಅದೇ ರೀತಿ ತಮಗೆ ಆಗಿರುವ ಮಾನಸಿಕ ತೊಂದರೆ ಮತ್ತು ಪರಿಹರಿಸಲಾಗದ ಸಮಸ್ಯೆಗಳನ್ನು ಉಲ್ಲೇಖಿಸಿ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಇವಿ ಕಾರನ್ನು ಖರೀದಿಸಲು ನಾನು 21 ಲಕ್ಷ ರೂ.ಗಳನ್ನು ವ್ಯಯಿಸಿದ್ದೇನೆ. ಮಾಸಿಕ 32,000 ರೂ.ಗಳ ಇಎಂಐ ಪಾವತಿಸುತ್ತಿದ್ದೇನೆ. ವಿದೇಶಿ ಬ್ರಾಂಡ್ ಗಳಿಗಿಂತ ಮಹೀಂದ್ರಾವನ್ನು ಆಯ್ಕೆ ಮಾಡಿಕೊಂಡಿರುವುದು ಅಭಿಮಾನದಿಂದ. ಆದರೆ ಕಂಪನಿಯ ಸೂಕ್ತ ನೆರವು ನೀಡದ ಕಾರಣ ಭ್ರಮ ನಿರಸನಗೊಂಡಿದ್ದೇನೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಈ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಯ ನಿಖರ ಸ್ವರೂಪವು ಗೊತ್ತಿಲ್ಲ. ಮಾಲೀಕರಿಗೂ ಆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ದಾರಿ ಮಧ್ಯದಲ್ಲಿ ಕೆಟ್ಟು ನಿಂತಿದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮಾಡೆಲ್​ನ ಕಾರು ಹಲವಾರು ಬಾರಿ ಕೆಟ್ಟು ನಿಂತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ ಎನ್ನಲಾಗಿದೆ. ಶೋ ರೂಮ್​ಗೆ ಟೋಯಿಂಗ್ ಮಾಡುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Maruti Swift : ಹೊಸ ಮಾರುತಿ ಸ್ವಿಫ್ಟ್​ ಕಾರಿನಲ್ಲಿದೆ 50ಕ್ಕೂ ಹೆಚ್ಚು ಫೀಚರ್​ಗಳು

Maruti Swift: ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

VISTARANEWS.COM


on

Maruti Swift
Koo

ಬೆಂಗಳೂರು: ಐಷಾರಾಮಿ, ಆರಾಮದಾಯಕ ಮತ್ತು ಇಂಧನ ದಕ್ಷತೆಯ ಕಾರುಗಳ ವಿಭಾಗದಲ್ಲಿ (ಪ್ರೀಮಿಯಂ ಹ್ಯಾಚ್‌ಬ್ಯಾಕ್​ ) ಮಾರುತಿ ಸುಜುಕಿ ಕಂಪನಿಯು ದೇಶಿ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಲಿರುವ ʼಎಪಿಕ್‌ ನ್ಯೂ ಸ್ವಿಫ್ಟ್‌ʼ ಕಾರ್‌ (Maruti Swift) 50ಕ್ಕೂ ಹೆಚ್ಚು ವೈಶಿಷ್ಟತೆಗಳನ್ನು ಒಳಗೊಂಡಿದೆ. ಇದು ನಾಲ್ಕನೇ ಪೀಳಿಗೆಯ ಸ್ವಿಫ್ಟ್ ಕಾರಾಗಿದ್ದು ಇದು 26 ಕಿಲೋಮೀಟರ್​ ಮೈಲೇಜ್ ಕೊಡುವುದಾಗಿ ಕಂಪನಿ ಹೇಳಿಕೊಂಡಿದೆ.

ಕಾರಿನಲ್ಲಿ ವೈ-ಫೈ ಮೊಬೈಲ್‌ ಚಾರ್ಜರ್‌, ಹಿಂಭಾಗದಲ್ಲಿ ಏಸಿ ವೆಂಟ್‌, ಟೆಲಿಮ್ಯಾಟಿಕ್ಸ್‌ ಮತ್ತಿತರ ಹೊಸ ಫೀಚರ್​ಗಳನ್ನು ನೀಡಲಾಗಿದೆ. ಈ ನಾಲ್ಕನೆ ತಲೆಮಾರಿನ ಸ್ವಿಫ್ಟ್‌, ʼಬಿʼ ವಿಭಾಗದ ವಾಹನಗಳಲ್ಲಿ ಸಾಮಾನ್ಯವಾಗಿರುವ ಎಲ್‌ಇಡಿ ಪ್ರೊಜೆಕ್ಟರ್​, ಹೆಡ್‌ಲೈಟ್ಸ್‌ ಮತ್ತು ಟೇಲ್‌ಲೈಟ್ಸ್‌ಗಳನ್ನು ಸಹ ಒಳಗೊಂಡಿದೆ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼಎಪಿಕ್ ನ್ಯೂ ಸ್ವಿಫ್ಟ್ʼ ನ ಇತರ ವೈಶಿಷ್ಟತೆಗಳು

ʼಎಪಿಕ್ ನ್ಯೂ ಸ್ವಿಫ್ಟ್ʼ ಉತ್ತಮ ಇಂಧನ ದಕ್ಷತೆ ಹೊಂದಿದೆ. ಸ್ವಯಂಚಾಲಿತ ಮಾದರಿಯಲ್ಲಿ ಇಂಧನ ದಕ್ಷತೆಯು ಶೇ 14ರಷ್ಟು ಸುಧಾರಿಸಿದೆ. ಮ್ಯಾನ್ಯುವಲ್‌ನಲ್ಲಿ ಇಂಧನ ದಕ್ಷತೆಯು ಶೇ 10 ರಷ್ಟು ಸುಧಾರಿಸಿದೆ. ಮೈಲೇಜ್‌ಗೆ ಸಂಬಂಧಿಸಿದಂತೆ, ಸ್ವಯಂಚಾಲಿತ ಮಾದರಿಯಲ್ಲಿ ಮೈಲೇಜ್ 25.7 ಕಿಮೀ/ಲೀಟರ್‌ ಮತ್ತು ಮ್ಯಾನ್ಯುವಲ್‌ನಲ್ಲಿ ಇದು 24.85 ಕಿಮೀ/ಲೀಟರ್‌ ನೀಡುತ್ತದೆ.. ಇವೆರಡೂ ಈ ವಿಭಾಗದಲ್ಲಿ ಗರಿಷ್ಠ ಮೈಲೇಜ್ ಅಗಿದೆ.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ಸ್ವಿಫ್ಟ್‌ನಲ್ಲಿ ಬಳಸಲಾದ ಹೊಸ ಎಂಜಿನ್ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವಿಕೆಯನ್ನು ಶೇ 12ವರೆಗೆ ಕಡಿಮೆ ಮಾಡುತ್ತದೆ. ಕಾರಿನ ಎಲ್ಲ ಮಾದರಿಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಲಿವೆ. ಇದು ಸ್ಟ್ಯಾಂಡರ್ಡ್ ಫೀಚರ್ ಆಗಿದೆ.

ಪ್ರೀಮಿಯಂ ಹ್ಯಾಚ್ ವಿಭಾಗವು ಮುಂಬರುವ ದಿನಗಳಲ್ಲಿ ಗಮನಾರ್ಹವಾಗಿ ಬೆಳೆಯುವುದನ್ನು ನಾವು ಎದುರು ನೋಡುತ್ತಿದ್ದೇವೆ. ಸದ್ಯಕ್ಕೆ ವಾರ್ಷಿಕ 7 ಲಕ್ಷದಂತೆ ಮಾರಾಟವಾಗುತ್ತಿರುವ ಈ ವಿಭಾಗದ ಕಾರುಗಳ ಮಾರಾಟವು 2030ರ ವೇಳೆಗೆ, 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಇದು ಗಮನಾರ್ಹವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. ಪ್ರೀಮಿಯಂ ಹ್ಯಾಚ್ ವಿಭಾಗಕ್ಕೆ ಸ್ವಿಫ್ಟ್ ಪುನಶ್ಚೇತನ ನೀಡಲಿದೆ ಎಂಬುದು ನಮ್ಮ ದೃಢ ನಂಬಿಕೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಣ್ಣಗಳ ಆಯ್ಕೆ

ಎರಡು ಆ್ಯಕ್ಸೆಸರಿ ಪ್ಯಾಕೇಜ್‌ಗಳಾದ ರೇಸಿಂಗ್ ರೋಡ್‌ಸ್ಟಾರ್ ಮತ್ತು ಥ್ರಿಲ್ ಚೇಸರ್ ನೀಡುತ್ತದೆ. ಎಪಿಕ್ ನ್ಯೂ ಸ್ವಿಫ್ಟ್ – ಎರಡು ಹೊಸ ಬಣ್ಣಗಳಾದ ಲಸ್ಟರ್ ಬ್ಲೂ ಮತ್ತು ನೋವೆಲ್ ಆರೆಂಜ್‌ನಲ್ಲಿ ಲಭ್ಯ ಇರಲಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವ್ಹೈಟ್, ಮ್ಯಾಗ್ಮಾ ಗ್ರೇ ಒಳಗೊಂಡಿರುವ ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿಯೂ ದೊರೆಯಲಿದೆ. ಮೂರು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಾದ – ಲಸ್ಟರ್ ಬ್ಲೂ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಸಿಜ್ಲಿಂಗ್ ರೆಡ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌, ಪರ್ಲ್ ಆರ್ಕ್ಟಿಕ್ ವೈಟ್ ಜೊತೆಗೆ ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ ನಲ್ಲಿಯೂ ಸಹ ಲಭ್ಯ ಇವೆ

ಸ್ವಿಫ್ಟ್​ ಭಾರತದಲ್ಲಿ ಸುಮಾರು 3 ದಶಲಕ್ಷ ಗ್ರಾಹಕರನ್ನು ಹೊಂದಿದೆ

ಸ್ವಿಫ್ಟ್ ಕಾರನ್ನು ಭಾರತದಿಂದ 39 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹಣಕಾಸು ವರ್ಷ 2023-24 ರಲ್ಲಿ, 33,000 ಕ್ಕೂ ಹೆಚ್ಚು ಸ್ವಿಫ್ಟ್‌ಗಳನ್ನು ರಫ್ತು ಮಾಡಲಾಗಿದೆ. ಮಾರುತಿ ಸುಜುಕಿಯ ಮುಂಚೂಣಿ 3 ರಫ್ತು ಮಾದರಿಗಳಲ್ಲಿ ಸ್ವಿಫ್ಟ್ ಕೂಡ ಸೇರಿದೆ.

ಕರ್ನಾಟಕದ ಮಾರುಕಟ್ಟೆ ಹೇಗಿದೆ?

ಕರ್ನಾಟಕ ಮಾರುಕಟ್ಟೆಯಲ್ಲಿ, ಮಾರುತಿ ಸುಜುಕಿ 1,15,000 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಶೇ 19ರಷ್ಟು ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ 70,000 ಕಾರ್‌ಗಳನ್ನು ಮಾರಾಟ ಮಾಡಲಾಗಿದ್ದು, ರಾಜ್ಯದಲ್ಲಿನ ಒಟ್ಟಾರೆ ಮಾರಾಟದ ಶೇ 60ರಷ್ಟು ಪಾಲು ಹೊಂದಿದೆ. ಬೆಂಗಳೂರಿನಲ್ಲಿನ ಮಾರಾಟವು ಶೇ 15ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾರುತಿ ಸುಜುಕಿಯು 186 ಮಾರಾಟ ಕೇಂದ್ರಗಳು ಮತ್ತು 244 ಸರ್ವೀಸ್‌ ಕೇಂದ್ರಗಳನ್ನು ಹೊಂದಿದೆ.

Continue Reading

ಪ್ರಮುಖ ಸುದ್ದಿ

Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

Powerful Bikes: 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ.

VISTARANEWS.COM


on

Powerful Bike
Koo

ಬೆಂಗಳೂರು: ಪರ್ಫಾಮೆನ್ಸ್​ ಬೈಕ್​ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್​ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್​ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್​ಫುಲ್​ ಬೈಕ್​​ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್​ಶೋರೂಮ್​) ಬೆಲೆಹೊಂದಿರುವ ಕೆಲವು ಬೈಕ್​ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.

ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)

ಕೆಟಿಎಂ ಡ್ಯೂಕ್ ಪವರ್​ಫುಲ್​ ಬೈಕ್​ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್​ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.

ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)

ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್​ನಂಥ ಸುರಕ್ಷತಾ ಫೀಚರ್​ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್​ಗಳು ದೊರೆಯುತ್ತವೆ.

ಬಜಾಜ್ ಡೊಮಿನಾರ್ 400 (40 ಎಚ್​ಪಿ)


ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್​​ನ ಪ್ಲಸ್​ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.

ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್​ಪಿ)

ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್​ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.

ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

ಟ್ರಯಂಫ್ ಸ್ಪೀಡ್ 400 (40hp)

ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.

Continue Reading

ಪ್ರಮುಖ ಸುದ್ದಿ

Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್​ಪೈರಿ ಡೇಟ್​​; ಅವುಗಳು ಯಾವವು ಎಂಬುದು ತಿಳಿದಿರಲಿ

Car Care Tips: ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು.

VISTARANEWS.COM


on

Car Care tips
Koo

ಬೆಂಗಳೂರು: ಕೆಲವರಿಗೆ ಈ ಅಭ್ಯಾಸ ಇಲ್ಲ ಹಾಗೂ ಇನ್ನೂ ಕೆಲವರು ಈ ವಿಷಯದ ಬಗ್ಗೆ ನಿಧಾನವಾಗಿ ಜಾಗೃತರಾಗುತ್ತಿದ್ದಾರೆ. ಅದೇನೆಂದರೆ ವಸ್ತುಗಳ ಎಕ್ಸ್​ಪೈರಿ ಡೇಟ್​ (Expiry Date) ಪರಿಶೀಲನೆ ಮಾಡುವುದು. ಅಂದರೆ ತಾವು ಖರೀದಿಸುವ ಯಾವುದೇ ವಸ್ತುವಿನ ಉತ್ಪಾದನಾ ಮತ್ತು ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು. ಸಾಕಷ್ಟು ಮಂದಿ ಮನೆಗೆ ತರುವ ದೀನಸಿ ವಸ್ತುಗಳಿಗೆ ಮಾತ್ರ ಇದು ಸೀಮಿತ ಎಂದು ನಂಬಿ ದ್ದಾರೆ. ಆದರೆ, ಉತ್ಪಾದನಾ ಘಟಕವೊಂದರಲ್ಲಿ ತಯಾರಾಗುವ ಎಲ್ಲ ವಸ್ತುಗಳಿಗೂ ಎಕ್ಸ್​ಪೈರಿ ಡೇಟ್​ ಇರುತ್ತದೆ. ಹೀಗಾಗಿ ಈ ಸಲಹೆಯು ಕಾರಿನ ಬಿಡಿ ಭಾಗಗಳು ಮತ್ತು ಪರಿಕರಗಳಿಗೂ ಅನ್ವಯಿಸುತ್ತದೆ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ, ಬಹುತೇಕ ಕಾರು ಮಾಲೀಕರು ಈ ಬಗ್ಗೆ ಜಾಗೃತವಾಗಿಲ್ಲ. ಕೆಟ್ಟು ಕಳಚಿ ಬಿದ್ದ ಮೇಲೆ ಮಾತ್ರ ಸರಿಪಡಿಸುತ್ತಾರೆ. (Car Care Tips) ಇದು ಸರಿಯಾದ ಅಭ್ಯಾಸವಲ್ಲ ಎಂಬುದು ಸತ್ಯ.

ಕಾರು ಅಥವಾ ಇನ್ಯಾವುದೇ ವಾಹನವನ್ನು ಸರಿಯಾಗಿ ಮೆಂಟೇನ್​ ಆದರೆ ಅದು ಕೆಲಸ ಮಾಡುತ್ತಲೇ ಇರುತ್ತದೆ ಎಂಬುದು ಒಂದು ನಂಬಿಕೆ. ಆದರೆ ಅವಧಿ ಮುಗಿದ ಬಿಡಿಭಾಗಗಳನ್ನು ಹೊಂದಿರುವ ಕಾರನ್ನು ಓಡಿಸುವುದು ಖಂಡಿತವಾಗಿಯೂ ಅಪಾಯಕಾರಿ. ಹೀಗಾಗಿ ‘ಬಿಡಿಭಾಗಗಳು ಏನೂ ಆಗಿಲ್ಲ. ಸರಿಪಡಿಸಬೇಡ’ ಎಂಬ ಮನಸ್ಥಿತಿಯಿಂದ ಹೊರಕ್ಕೆ ಬರಲೇಬೇಕು. ಯಾಕೆಂದರೆ ಒಂದು ಭಾಗಕ್ಕೆ ಆಗಿರುವ ಹಾನಿಯು ವಾಹನದ ಸಂಪೂರ್ಣ ದಕ್ಷತೆಯನ್ನು ಹಾಳು ಮಾಡುವ ಜತೆಗೆ ಪ್ರಯಾಣವನ್ನು ಅಪಾಯಕ್ಕೆ ತಳ್ಳಬಹುದು. ಹೀಗಾಗಿ ನಿಮ್ಮ ಕಾರಿನಲ್ಲಿ ಯಾವೆಲ್ಲ ವಸ್ತುಗಳನ್ನು ಅವಧಿ ಮುಗಿದ ತಕ್ಷಣ ಬದಲಾಯಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ.

ಎಂಜಿನ್ ಆಯಿಲ್​

ಎಂಜಿನ್ ಆಯಿಲ್ ಎಂಜಿನ್​ ಒಳಗಿನ ಘರ್ಷಣೆಯನ್ನು ನಿಯಂತ್ರಿಸುವ ಬಹುಮುಖ್ಯ ದ್ರಾವಣ. 12ರಿಂದ 18 ತಿಂಗಳ ಒಳಗೆ ಎಂಜಿನ್ ಆಯಿಲ್ ಬದಲಾಯಿಸಬೇಕು ಹಾಗೂ ಬಳಸಲು ಶುರು ಮಾಡಿದ ಮೇಲೆ ಅದರ ಅವಧಿ ಮುಕ್ತಾಯಗೊಳ್ಳುತ್ತದೆ. ಅಥವಾ 10,000 ಕಿ.ಮೀ.ಗೆ ಬದಲಾವಣೆ ಮಾಡಲೇಬೇಕು. ಕೆಲವರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಸರ್ವಿಸ್​ ಮಾಡಿದಾಗ ಮಾಡಿದರಾಯ್ತು ಎಂದು ಅಂದುಕೊಳ್ಳುತ್ತಾರೆ. ಇದು ಎಂಜಿನ್​ ಒಳಗಿನ ಭಾಗಗಳ ಸವೆತ ಹಾಗೂ ಮುರಿತಕ್ಕೆ ಕಾರಣವಾಗುತ್ತದೆ.

ಬ್ರೇಕ್ ಆಯಿಲ್

ಕಾರಿನಲ್ಲಿ ಸುರಕ್ಷತೆ ಎಂದರೆ ಮೊದಲು ಬರುವುದು ಸೂಕ್ತವಾಗಿ ಕಾರ್ಯನಿರ್ವಹಿಸುವ ಬ್ರೇಕಿಂಗ್ ಸಿಸ್ಟಮ್​. ಬ್ರೇಕ್​ ವ್ಯವಸ್ಥೆಯಲ್ಲಿ ಬ್ರೇಕ್​ ಆಯಿಲ್​ ಕೆಲಸ ದೊಡ್ಡದು.. ಪ್ರತಿ 10,000 ಕಿ.ಮೀಗೆ ಬ್ರೇಕ್ ಆಯಿಲ್ ಬಾಳಿಕೆ ಮುಗಿಯುತ್ತದೆ. ಹೀಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬ್ರೇಕ್ ಆಯಿಲ್ ಅನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಆಯಿಲ್ ದಪ್ಪವಾದರೆ ಬ್ರೇಕಿಂಗ್ ದಕ್ಷತೆ ಇಳಿಯುತ್ತದೆ.

ಎಸಿ ರೆಫ್ರಿಜರೇಟರ್ ರೀಫಿಲ್​

ಎಸಿ ರೆಫ್ರಿಜರೇಟರ್ ಗ್ಯಾಸ್​ ರಿಫಿಲ್ ಮಾಡುವ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು. ಎಸಿ ವೆಂಟ್ ಗಳಿಂದ ಹೊರಬರುವ ಗಾಳಿಯು ಸಾಕಷ್ಟು ತಂಪಾಗಿಲ್ಲದಿದ್ದರೆ ವಾಹನದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಸರಿಯಿಲ್ಲ ಎಂದು ಅರ್ಥ. ಫಿಲ್ಟರ್ ಜತೆಗೆ ಎಸಿ ಗ್ಯಾಸ್​ ನ ಬಾಳಿಕೆಯೂ ಮುಗಿದಿದೆ ಎಂದರ್ಥ. ಹೀಗಾಗಿ ಅದನ್ನು ಅವಧಿ ಮುಗಿದಾಗ ಬದಲಾಯಿಸಬೇಕು.

ಟೈರ್ ಗಳು

ಕಾರನ್ನು ಓಡಿಸಿಲ್ಲ ಮತ್ತು ಸವೆದಿಲ್ಲ ಎಂದ ತಕ್ಷಣ ಕಾರಿನ ಟೈರಿನ ಬಾಳಿಕೆ ಮುಗಿದಿಲ್ಲ ಎಂದರ್ಥವಲ್ಲ. ಯಾಕೆಂದರೆ ಅದಕ್ಕೂ ಒಂದು ಎಕ್ಸ್​ಪಯರೀ ಡೇಟ್​ ಇದೆ. ಮೊದಲಾಗಿ 3 ಎಂಎಂಗಿಂತ ಕಡಿಮೆ ಥ್ರೆಡ್​ ಇದ್ದರೆ ಸವೆದಿದೆ ಎಂದರ್ಥ. ಆದರೆ, ಟೈರ್​ನ ಮೇಲೆ ಬರೆದಿರುವ ಎಕ್ಸ್​ಪಯರೀ ಡೇಟ್​ ಪರಿಶೀಲನೆ ಮಾಡಲೇಬೇಕು. ಹೊರ ಅಂಚಿ ಉತ್ಪಾದನಾ ವಾರ ಮತ್ತು ಉತ್ಪಾದನೆಯ ವರ್ಷವನ್ನು ಬರೆದಿರಲಾಗುತ್ತದೆ. ಉದಾಹರಣೆಗೆ ಡಾಟ್ ಸಂಖ್ಯೆ 5011 ಇದ್ದರೆ ಟೈರ್ ಅನ್ನು 2011 ರ 50 ನೇ ವಾರದಲ್ಲಿ ತಯಾರಿಸಲಾಗಿದೆ ಎಂದರ್ಥ.

ಕ್ಯಾಬಿನ್ ಏರ್ ಫಿಲ್ಟರ್

ಕ್ಯಾಬಿನ್ ಏರ್ ಫಿಲ್ಟರ್ ಕ್ಯಾಬಿನ್ ಏರ್ ಫಿಲ್ಟರ್ ಬಾಳಿಕೆ ಕಾರು ಚಾಲನೆ ಮಾಡುವ ಪ್ರದೇಶದ ಗಾಳಿಯ ಗುಣಮಟ್ಟ ಅವಲಂಬಿಸಿರುತ್ತದೆ. ಆದರೆ, ಕಾರನ್ನು 25,000 ಕಿ.ಮೀ ನಿಂದ 30,000 ಕಿ.ಮೀ ಓಡಿಸಿದ ನಂತರ ಅದನ್ನು ಬದಲಾಯಿಸಲೇಬೇಕು. ನೀವು ಡಿಫ್ರಾಸ್ಟ್ ಆನ್ ಮಾಡಿದಾಗ ಆದರೆ ಕ್ಯಾಬಿನ್ ನಲ್ಲಿ ಗಾಳಿಯ ಹರಿವು ತುಂಬಾ ದುರ್ಬಲವಾಗಿದ್ದರೆ ಬ್ಲೋವರ್ ಸ್ವಿಚ್ ಮೂಲಕ ಶಬ್ದ ಹೆಚ್ಚಾಗಿದ್ದರೆ ಫಿಲ್ಟರ್ ಬಾಳಿಕೆ ಮುಗಿದಿದೆ ಎಂದರ್ಥ.

ಏರ್ ಬ್ಯಾಗ್ ಗಳು

ಏರ್ ಬ್ಯಾಗ್ ಗಳು ಮತ್ತು ಸೀಟ್ ಟೈಟರ್ ಗಳ ಬಾಳಿಕ 10 ವರ್ಷಕ್ಕೆ ಮುಗಿಯುತ್ತದೆ. ಅದಕ್ಕಿಂತ ಹೆಚ್ಚಾಗಿ ಬೆಲ್ಟ್ ಹರಿದಿದ್ದರೆ ತಕ್ಷಣ ಬದಲಾಯಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸಾ ಕಿಟ್

ಪ್ರಥಮ ಚಿಕಿತ್ಸಾ ಕಿಟ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕಾರುಗಳಲ್ಲಿ ಇರುತ್ತವೆ. ಅದರು ಅಗತ್ಯ ಕೂಡ. ಆದರೆ, ಅದರಲ್ಲಿರುವ ಕೆಲವು ಮುಲಾಮುಗಳು ಮತ್ತು ಅನೇಕ ರೀತಿಯ ಡ್ರೆಸ್ಸಿಂಗ್ ವಸ್ತುಗಳು ಮುಕ್ತಾಯ ದಿನಾಂಕಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಕಿಟ್​ಗಳು ಉತ್ಪಾದನೆಯ ದಿನಾಂಕದಿಂದ 3 ರಿಂದ 5 ವರ್ಷಗಳ ಜೀವಿತಾವಧಿ ಹೊಂದಿರುತ್ತವೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಟೈಮಿಂಗ್ ಬೆಲ್ಟ್

ಇದು ಎಂಜಿನ್ ಒಳಗಿನ ಸಾಧನ. ಟೈಮಿಂಗ್ ಬೆಲ್ಟ್ ಬದಲಾಯಿಸುವ ಅವಧಿಯ ಅಂತರವು ಕಂಪನಿ ಮತ್ತು ಕಾರು ಮಾದರಿಯಿಂದ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು 60,000 ಮತ್ತು 80,000 ಕಿಲೋಮೀಟರ್ ನಡುವೆ ಬದಲಾಯಿಸಬೇಕು. ಕಂಪನಿ ಜತೆ ಈ ಬಗ್ಗೆ ಚರ್ಚೆ ನಡೆಸಬೇಕು. ದೋಷಯುಕ್ತ ಬೆಲ್ಟ್ ಅನ್ನು ಬಳಸಿದರೆ ಅದು ಕಾಲಾನಂತರದಲ್ಲಿ ಎಂಜಿನ್ ಹಾಳಾಗಲು ಕಾರಣವಾಗಬಹುದು.

Continue Reading

ಆಟೋಮೊಬೈಲ್

Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

Mahindra XUV 3XO: ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ

VISTARANEWS.COM


on

XVU300
Koo

ನವದೆಹಲಿ: ಭಾರತದ ಮುಂಚೂಣಿ ಎಸ್​ಯುವಿ (Sport Utility Vehicle) ತಯಾರಕ ಕಂಪನಿಯಾದ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಲಿಮಿಟೆಡ್ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಪ್ಯಾಕ್ಟ್ ಎಸ್​​ಯುವಿ ಕಾರಾಗಿರುವ ಎಕ್ಸ್​ಯುವಿ 3ಎಕ್ಸ್ (Mahindra XUV 3XO) ಕಾರು ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮೇ 15ರಂದು ಬುಕಿಂಗ್ ಆರಂಭಗೊಂಡ ಕೇವಲ ಒಂದು ಗಂಟೆಯಲ್ಲಿ (60 ನಿಮಿಷ) 50 ಸಾವಿರ ಬುಕಿಂಗ್​ ಪಡೆದುಕೊಂಡಿದೆ. ಈ ಮೂಲಕ ಬಿಡುಗಡೆಗೊಂಡು ಬುಕಿಂಗ್ ಆರಂಭಗೊಂಡ ಒಂದೇ ಗಂಟೆಯಲ್ಲಿ 50 ಸಾವಿರ ಬುಕಿಂಗ್​ ಪಡೆದ ವಿನೂತನ ಸಾಧನೆ ಮಾಡಿದೆ.

ಎಕ್ಸ್​ಯುವಿ 3 ಎಕ್ಸ್ ಒ ದೇಶಾದ್ಯಂತ ಗ್ರಾಹಕರ ಮನ ಗೆದ್ದಿದೆ. ಮೊದಲ 10 ನಿಮಿಷಗಳಲ್ಲಿ 27000 ಕ್ಕೂ ಹೆಚ್ಚು ಬುಕಿಂಗ್ ಗಳನ್ನು ದಾಖಲಿಸಿದೆ. ಇದು ಮಹೀಂದ್ರಾ ಕಂಪನಿಯು ಹೊಸ ಎಸ್ ಯುವಿ ಕಡೆಗೆ ಹೊಸ ಆಕರ್ಷಣೆಯನ್ನು ಪ್ರದರ್ಶಿಸಿದೆ. ಈ ಮೈಲಿಗಲ್ಲು ಎಕ್ಸ್ ಯುವಿ 3 ಎಕ್ಸ್ ಒನ ಅತ್ಯುತ್ತಮ ವಿನ್ಯಾಸ, ಪ್ರೀಮಿಯಂ ಒಳಾಂಗಣ, ಆರಾಮದಾಯಕ ಸವಾರಿ, ಅತ್ಯಾಧುನಿಕ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಸುರಕ್ಷತೆಯ ಕಡೆಗೆ ಗ್ರಾಹಕರ ಗಮನವಾಗಿದೆ.

ಈ ಕುರಿತು ಮಹೀಂದ್ರಾ ಆ್ಯಂಡ್​ ಮಹಿಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, ಎಕ್ಸ್ ಯುವಿ 3 ಎಕ್ಸ್ ಒ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ 50,000 ಬುಕಿಂಗ್ ಗಳನ್ನು ಸ್ವೀಕರಿಸಿದೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಇದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ. ಇಂತಹ ಅಗಾಧ ಮಾರುಕಟ್ಟೆ ಪ್ರತಿಕ್ರಿಯೆಯು ನಾವೀನ್ಯತೆ ಮತ್ತು ನಿರೀಕ್ಷೆಗಳನ್ನು ಮೀರಿ ಮೌಲ್ಯವನ್ನು ತಲುಪಿಸುವ ನಮ್ಮ ಬದ್ಧತೆಗೆ ಪೂರಕ. ಎಕ್ಸ್ ಯುವಿ 3 ಎಕ್ಸ್ ಸಾರಿಗೆ ವ್ಯವಸ್ಥೆಯ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆ. ಇದನ್ನು ಗ್ರಾಹಕರಿಗೆ ಬೇಕಾದ ಹಾಗೆ ಮತ್ತು ಇನ್ನಷ್ಟು ಸೌಲಭ್ಯಗಳನ್ನ ಕೊಡುವುದಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ನಂಬಲಾಗದ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಎಕ್ಸ್ ಯುವಿ 3 ಎಕ್ಸ್ ಒ ಅನ್ನು ತಲುಪಿಸಲು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BMW X3 : ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 20ಡಿ ಎಂ ಸ್ಪೋರ್ಟ್ ಶಾಡೋ ಎಡಿಷನ್ ಬಿಡುಗಡೆ

ಎಕ್ಸ್ ಯುವಿ 3 ಎಕ್ಸ್ ಒ ವಿತರಣೆಯು ಮೇ 26, 2024 ರಂದು ಪ್ರಾರಂಭವಾಗಲಿದೆ. ಉತ್ಸಾಹವನ್ನು ನಿರೀಕ್ಷಿಸಿ ನಾವು ಈಗಾಗಲೇ 10000 ಕ್ಕೂ ಹೆಚ್ಚು ಯುನಿಟ್ ಗಳನ್ನು ಉತ್ಪಾದಿಸಿದ್ದೇವೆ. ಗ್ರಾಹಕರ ಅನುಭವದ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ. ಸಮಯೋಚಿತ ವಿತರಣೆಗ ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮಹೀಂದ್ರಾ ತೆಗೆದುಕೊಳ್ಳುತ್ತದೆ. ಎಕ್ಸ್ ಯುವಿ 3 ಎಕ್ಸ್ ಒ ಗಾಗಿ ಬುಕಿಂಗ್ ಆನ್ ಲೈನ್ ನಲ್ಲಿ ಮತ್ತು ಎಲ್ಲಾ ಅಧಿಕೃತ ಮಹೀಂದ್ರಾ ಡೀಲರ್ ಶಿಪ್ ಗಳಲ್ಲಿ ತೆರೆದಿರುತ್ತದೆ.

Continue Reading
Advertisement
Survival Story
ವಿದೇಶ3 mins ago

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Lok Sabha Election 2024
ದೇಶ3 mins ago

Lok Sabha Election 2024: ರ್ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ26 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ29 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ42 mins ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ44 mins ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್55 mins ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Salman Khan Ultimate Sex Symbol Says Malaika Arora
ಬಾಲಿವುಡ್59 mins ago

Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Ebrahim Raisi
ವಿದೇಶ1 hour ago

Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

One year for the government Cm Siddaramaiah reveals many dreams and media interaction live
ರಾಜಕೀಯ1 hour ago

CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ22 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ22 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ24 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌