Site icon Vistara News

Mahindra SUV | ಟರ್ಬೊಚಾರ್ಚರ್‌ ಸಮಸ್ಯೆ; ಥಾರ್‌, ಎಕ್ಸ್‌ಯುವಿ700 ಕಾರುಗಳನ್ನು ವಾಪಸ್‌ ಪಡೆದ ಕಂಪನಿ

Mahindra XUV

ನವ ದೆಹಲಿ : ಟರ್ಬೊಚಾರ್ಜರ್‌ ಸಮಸ್ಯೆ ಕಂಡು ಬಂದಿರುವ ಕೆಲವು ಸೀರಿಸ್‌ನ ಮಹೀಂದ್ರಾ ಥಾರ್‌ ಹಾಗೂ ಎಕ್ಸ್‌ಯುವಿ ೭೦೦ ಕಾರುಗಳನ್ನು ಮಹೀಂದ್ರಾ ಕಂಪನಿಯು ಗ್ರಾಹಕರಿಂದ ವಾಪಸ್‌ ಪಡೆದುಕೊಂಡಿದೆ. ಈ ಕಾರುಗಳ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ವಾಪಸ್‌ ಕೊಡಲಿದೆ.

ಎಕ್ಸ್‌ಯುವಿ ೭೦೦ ಡೀಸೆಲ್‌ ಕಾರುಗಳಲ್ಲಿ ಟರ್ಬೊಚಾರ್ಜರ್‌ ಆಕ್ಚ್ಯುಯೇಟರ್‌ ಲಿಂಕ್, ಆಟೋ ಟೆನ್ಷನರ್‌ ಸಮಸ್ಯೆ ಬಂದಿದೆ. ಅಂತೆಯೇ ಪೆಟ್ರೋಲ್‌ ಮತ್ತು ಡೀಸೆಲ್‌ ಆಟೊಮ್ಯಾಟಿಕ್‌ ಕಾರುಗಳಲ್ಲಿ ಬೆಲ್ಟ್‌ ಸಮಸ್ಯೆ ತಲೆದೋರಿದೆ. ಅದೇ ರೀತಿ ಥಾರ್‌ ಎಸ್‌ಯುವಿಯ ಟರ್ಬೊಚಾರ್ಜರ್ ಆಕ್ಚ್ಯುಯೇಟರ್‌ ಲಿಂಕ್‌ ಬದಲಾಯಿಸಬೇಕಾಗಿದೆ. ಜತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಕಾರುಗಳ ಟೈಮಿಂಗ್‌ ಬೆಲ್ಟ್‌ ಹಾಗೂ ಆಟೋ ಟೆನ್ಷನರ್‌ನಲ್ಲೂ ಸಮಸ್ಯೆಯಿದೆ.

ಕಾರಿನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಯಾವುದೇ ವೆಚ್ಚನ್ನು ನೀಡಬೇಕಾಗಿಲ್ಲ. ಅಂತೆಯೇ ಎರಡೂ ಕಾರುಗಳ ಮಾಲೀಕರು ಕಂಪನಿಯ ವೆಬ್‌ಸೈಟ್‌ಗೆ ಪ್ರವೇಶ ಮಾಡಿ ವಿಐಎನ್‌ ನಂಬರ್‌ಗಳನ್ನು ದಾಖಲಿಸುವ ಮೂಲಕ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದು ಕಂಪನಿ ಹೇಳಿದೆ. ಥಾರ್‌ ಹಾಗೂ ಎಕ್ಸ್‌ಯುವಿ ೭೦೦ ಬಿಡುಗಡೆಯಾದ ಕಳೆದ ಎರಡು ವರ್ಷದಲ್ಲಿ ಹಲವು ಕಾರುಗಳನ್ನು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ವಾಪಸ್‌ ಕರೆಸಿಕೊಂಡಿತ್ತು.

ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ ೭೦೦ ಕಾರುಗಳಿಗೆ ಒಂದು ಲಕ್ಷಕ್ಕಿಂತಲೂ ಅಧಿಕ ಬೇಡಿಕೆ ಬಂದಿದ್ದು, ೫ ಹಾಗೂ ೭ ಸೀಟ್‌ ಕಾರುಗಳಿಗೆ ಸಮಾನ ಬೇಡಿಕೆ ಇದೆ ಎನ್ನಲಾಗಿದೆ. ಹೀಗಾಗಿ ಕಾರಿನ ವೇಟಿಂಗ್‌ ಅವಧಿ ಒಂದು ವರ್ಷಕ್ಕೂ ಹೆಚ್ಚಾಗಿದೆ. ಅಂತೆಯೇ ಥಾರ್‌ ಕಾರಿನ ವೇಟಿಂಗ್ ಪಿರಿಯೆಡ್‌ ಕೂಡ ಹೆಚ್ಚಾಗಿದೆ. ಅದೇ ರೀತಿ ಐದು ಡೋರ್‌ಗಳ ಥಾರ್‌ ಮಾರುಕಟ್ಟೆಗೆ ಇಳಿಸುವ ಯೋಜನೆಯೂ ಕಂಪನಿ ಮುಂದಿದೆ.

ಇದನ್ನೂ ಓದಿ | Mahindra XUV | ಮಹೀಂದ್ರಾ ಕಾರುಗಳ ಬೆಲೆ ವರ್ಷದಲ್ಲಿ ಮೂರನೇ ಬಾರಿ ಏರಿಕೆ, ಎಷ್ಟಾಗಿದೆ ಈಗ?

Exit mobile version