ಹೊಸದಿಲ್ಲಿ: ಆಟೋಮೊಬೈಲ್ (automobile) ಮತ್ತು ಮೋಟಾರು ವಾಹನಗಳ (motorcycle) ಕಂಪನಿಗಳು ಮೇ ತಿಂಗಳಲ್ಲಿ ಹಲವು ಹೊಸ ಮಾದರಿಗಳನ್ನು ಭಾರತ (India) ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ (international markets) ಪರಿಚಯಿಸಿವೆ. ಕೆಲವು ನಿರೀಕ್ಷಿತ ವಾಹನಗಳ ಬಿಡುಗಡೆಯನ್ನು ಮುಂದೂಡಲಾಗಿದ್ದು ಕೆಲವನ್ನು ಮೊದಲೇ ಘೋಷಿಸಲಾಗಿತ್ತು.
ಮೇ ತಿಂಗಳು ಹೆಚ್ಚಿನ ಕಾರು ಮತ್ತು ಬೈಕ್ ಬಿಡುಗಡೆಯಾಗಿದ್ದು, ಜೂನ್‌ನಲ್ಲಿ ಕೆಲವು ಹೊಸ ಮಾದರಿಗಳು ಭಾರತಕ್ಕೆ ಆಗಮಿಸುತ್ತಿದೆ. ದೇಶೀಯ ಮಾರುಕಟ್ಟೆಗೆ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳು, ಅನನ್ಯ ವಿನ್ಯಾಸಗಳು, ಸುಧಾರಿತ ತಂತ್ರಜ್ಞಾನ ಮತ್ತು ಅನನ್ಯ ವಿಶೇಷಣಗಳನ್ನುಇದು ಒಳಗೊಂಡಿದೆ ಎಂಬುದು ಎಲ್ಲರ ನಿರೀಕ್ಷೆ.
ಬಜಾಜ್ ಆಟೋ ತನ್ನ ಹೊಸ ಬಜಾಜ್ ಸಿ ಎನ್ ಜಿ ಮೋಟಾರ್‌ಸೈಕಲ್ ಅನ್ನು 2024ರ ಜೂನ್ 18ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಅದೇ ರೀತಿ ಎಂಜಿ ಗ್ಲೊಸ್ಟರ್ ಸ್ಟ್ರೋಮ್ ಆವೃತ್ತಿಯನ್ನು 2024ರ ಜೂನ್ 4ರಂದು ಭಾರತದಲ್ಲಿ ಪರಿಚಯಿಸುವುದನ್ನು ಮೋರಿಸ್ ಗ್ಯಾರೇಜಸ್ ಇಂಡಿಯಾ ಖಚಿತಪಡಿಸಿದೆ.
ಒಟ್ಟಿನಲ್ಲಿ ಈ ತಿಂಗಳು ಸಾಲುಸಾಲು ಅತ್ಯಾಕರ್ಷಕ ವಾಹನಗಳು ಬಿಡುಗಡೆಗೆ ಸಜ್ಜಾಗಿದೆ. ಹಲವಾರು ಇತರ ಆಟೋಮೊಬೈಲ್ ಕಂಪೆನಿಗಳು ತಮ್ಮ ಇತ್ತೀಚಿನ ಕೊಡುಗೆಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.
ಜೂನ್ ನಲ್ಲಿ ಬಿಡುಗಡೆಯಾಗಲಿರುವ ಕಾರುಗಳು
ಆಟೋಮೊಬೈಲ್ ಕಂಪನಿಗಳು ಮೇ ತಿಂಗಳಲ್ಲಿ ಹೊಸ ಮಾದರಿಗಳಾದ ಬಿಎಂಡಬ್ಲ್ಯೂ 220ಐ ಎಂ ಸ್ಪೋರ್ಟ್ ಶ್ಯಾಡೋ ಆವೃತ್ತಿ, ನಿಸ್ಸಾನ್ ಮ್ಯಾಗ್ನೈಟ್ ಗೆಜಾ ಸಿವಿಟಿ ವಿಶೇಷ ಆವೃತ್ತಿ, ಆಡಿ ಕ್ಯೂ7 ಬೋಲ್ಡ್ ಆವೃತ್ತಿ, ಮಹೀಂದ್ರಾ ಎಕ್ಸ್ ಯುವಿ700 Aಎಕ್ಸ್5 ಮತ್ತು ಇತರವುಗಳನ್ನು ಪರಿಚಯಿಸಿದವು. ಇದು ಕಿಯಾ ಇವಿ3 ನಂತಹ ಕೆಲವು ಮಾದರಿಗಳಿಗೆ ಸಡ್ಡು ಹೊಡೆಯಲಿದೆ. ಈ ತಿಂಗಳು ಇನ್ನು ಕೆಲವು ಹೊಸ ಕಾರುಗಳು ಬಿಡುಗಡೆಯಾಗಲಿದೆ. ಎಂಜಿ ಗ್ಲೋಸ್ಟರ್ ಸ್ಟಾರ್ಮ್ ಆವೃತ್ತಿಯು 2024ರ ಜೂನ್ 4ರಂದು ಬಿಡುಗಡೆಯಾಗಿದೆ.
ಜೂನ್ 7ರಂದು ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆಯಾಗಲಿದೆ. ಬಿಎಂಡಬ್ಲ್ಯೂ ನ ಹೊಸ ಕಾರು ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಮಾದರಿ, ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಮರ್ಸಿಡಿಸ್ ಬೆನ್ಜ್ ಜಿಎಲ್ ಬಿ 2024 ಜೂನ್ 14 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಜೂನ್ 15 ರಂದು ಸ್ಕೋಡಾ ಸೂಪರ್ಬ್, ಜೂನ್ 14ರಂದು ಸ್ಕೋಡಾ ಕೊಡಿಯಾಕ್, ಜೂನ್ 19 ರಂದು ಮಿನಿ ಕೂಪರ್ ಎಸ್ಇ, ಪೋರ್ಷೆ ಟೇಕಾನ್ ಜೂನ್ ಅಥವಾ ಜುಲೈನಲ್ಲಿ, ಜೂನ್ 15 ರಂದು ಆಡಿ ಕ್ಯೂ8, ಜೂನ್ 14 ರಂದು ಟೊಯೋಟಾ ಲ್ಯಾಂಡ್ ಕ್ರೂಸರ್ 250, ಜೂನ್‌ನಲ್ಲಿ ವೋಲ್ವೋ ಇಎಕ್ಸ್ 90 ಬಿಡುಗಡೆಯಾಗುವ ನಿರೀಕ್ಷೆ ಇದೆ.
ಜೂನ್ 2024ರಲ್ಲಿ ಬಿಡುಗಡೆಯಾಗುವ ಬೈಕ್ ಗಳು
ಮೇ ತಿಂಗಳಲ್ಲಿ ಮೋಟಾರ್‌ಸೈಕಲ್ ಕಂಪೆನಿಗಳು ಕವಾಸಕಿ ನಿಂಜಾ ZX-4RR, Jawa 42 Bobber ಮತ್ತು BMW S 1000 XR ನಂತಹ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. BMW R 1300 GS ಮತ್ತು ಹೋಂಡಾ ಸ್ಟೈಲೋ 160 ಗೆ ಇದು ಸಡ್ಡು ಹೊಡೆಯಲಿದೆ. ಜೂನ್‌ನಲ್ಲಿ, ಬಜಾಜ್ ಆಟೋ, BMW, ಕವಾಸಕಿ ಮತ್ತು ಇತರ ಕಂಪನಿಗಳು ತಮ್ಮ ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಹೊಸ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಇತ್ತೀಚಿನ ವಿನ್ಯಾಸಗಳನ್ನು ಇದು ಒಳಗೊಂಡಿದೆ.
ಬಜಾಜ್ ಸಿ ಎನ್ ಜಿ ಬೈಕ್, ಬಜಾಜ್ ಬ್ರೂಜರ್ ಸಿ ಎನ್ ಜಿ ಎಂದು ಕರೆಯಲ್ಪಡುವ ಇದು ಜೂನ್ 18ರಂದು ಬಿಡುಗಡೆಯಾಗಲಿದೆ.
ಜೂನ್‌ನಲ್ಲಿ ಬಿಎಂಡಬ್ಲ್ಯೂ ಆರ್ 1300 S ಬಿಡುಗಡೆ ದಿನಾಂಕವನ್ನು ದೃಢೀಕರಿಸಲಾಗಿಲ್ಲ. ಕವಾಸಕಿ ವರ್ಸಿಸ್-ಎಕ್ಸ್ 300, ಹೋಂಡಾ PCX160 ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ದಿನಾಂಕ ದೃಢೀಕರಿಸಲಾಗಿಲ್ಲ.
ವೆಸ್ಪಾ ಎಲೆಕ್ಟ್ರಿಕಾ ಇವಿ ಸ್ಕೂಟರ್, ಹೋಂಡಾ ರೆಬೆಲ್ 500 ಹೋಂಡಾ ರೆಬೆಲ್ 1100 ಮೋಟಾರ್ ಸೈಕಲ್‌ಗಳು ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Electric Scooters : ದೊಡ್ಡ ಬೂಟ್ ಸ್ಪೇಸ್ ಇರುವಂಥ 5 ಎಲೆಕ್ಟ್ರಿಕ್ ಸ್ಕೂಟರ್ಗಳು ಇವು
ಹಲವು ನಿರೀಕ್ಷಿತ ಮಾದರಿಗಳು ಮುಂದಿನ ತಿಂಗಳುಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೂ ಆಟೋಮೊಬೈಲ್ ಮತ್ತು ಮೋಟಾರ್‌ಸೈಕಲ್ ಕಂಪೆನಿಗಳು ತಮ್ಮ ಹೊಸ ಮಾದರಿಗಳ ಬಿಡುಗಡೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಕೆಲವು ಕಂಪೆನಿಗಳು ವಾರ ಅಥವಾ ದಿನಗಳ ಮೊದಲು ಅನಿರೀಕ್ಷಿತವಾಗಿ ಬಿಡುಗಡೆ ಮಾಡುವ ದಿನಾಂಕವನ್ನು ಘೋಷಿಸಬಹುದು.