Site icon Vistara News

Honda Unicorn : ಹೋಂಡಾ ಯೂನಿಕಾರ್ನ್​ ಅಪ್​ಡೇಟೆಡ್​ ಆವೃತ್ತಿ ಬಿಡುಗಡೆ; ಏನಿದೆ ವಿಶೇಷತೆ?

Honda Unicorn

#image_title

ಬೆಂಗಳೂರು: ಹೋಂಡಾ ಮೋಟಾರ್​ಸೈಕಲ್​ ತನ್ನ ಜನಪ್ರಿಯ ಬೈಕ್​ ಯೂನಿಕಾರ್ನ್ 150 ಸಿಸಿ ಅನ್ನು ಒಬಿಡಿ 2 ಮಾನದಂಡದೊಂದಿಗೆ ಅಪ್​ಡೇಟ್​ ಮಾಡಿ ಬಿಡುಗಡೆ ಮಾಡಿದೆ. ಅದೇ ರೀತಿ ಬೈಕಿಗೆ ಹೊಸ ವಾರಂಟಿ ಯೋಜನೆಯನ್ನೂ ಸಹ ಪರಿಚಯಿಸಿದೆ. ಎರಡು ನವೀಕರಣದೊಂದಿಗೆ ಬೈಕ್​ ಮಾರುಕಟ್ಟೆಗೆ ಇಳಿಯುವ ಜತೆಗೆ ಬೆಲೆಯನ್ನೂ ಏರಿಸಿಕೊಂಡಿದೆ. ಬೈಕ್​ನ ಬೆಲೆ ಈಗ 1,09,800 ರೂಪಾಯಿ(ಎಕ್ಸ್ ಶೋ ರೂಮ್​ ದೆಹಲಿ). ಇದು ಹಿಂದಿನ ಬೆಲೆಯಾದ 1,05,718 ರೂ.ಗಿಂತ 4,082 ರೂ.ಗಳ ಹೆಚ್ಚಳ.

ಯೂನಿಕಾರ್ನ್ 160 ಏರ್ ಕೂಲ್ಡ್, 162.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರು 7,500 ಆರ್​​ಪಿಎಮ್​ನಲ್ಲಿ 12.9 ಬಿಎಚ್​​ಪಿ ಪವರ್ ಮತ್ತು 5,500 ಆರ್​ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸೀಟ್ ಎತ್ತರ 715 ಎಂಎಂ ಆಗಿದ್ದು, 13 ಲೀಟರ್ ಪಟ್ರೋಲ್​ ಟ್ಯಾಂಕ್​ ಹೊಂದಿದೆ. ಇದು 140 ಕೆಜಿ ತೂಕವಿದೆ. ಯೂನಿಕಾರ್ನ್ ಸಿಂಗಲ್-ಚಾನೆಲ್ ಎಬಿಎಸ್ ಸೆಟಪ್​​ನೊಂದಿಗೆ ಬರುತ್ತದೆ, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದ್ದು, ಡಿಸ್ಕ್​ ಬ್ರೇಕ್​ ಆಯ್ಕೆಯನ್ನು ಕೊಟ್ಟಿಯಲ್ಲ. ಹೀಗಾಗಿ ಡ್ಯುಯಲ್​ ಚಾನೆಲ್​ ಎಬಿಎಸ್​ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.

ವಿಶೇಷ ವಾರಂಟಿ:

ಹೋಂಡಾ ಯೂನಿಕಾರ್ನ್​ಗಾಗಿ ವಿಶೇಷ ವಾರಂಟಿ ಪ್ರೋಗ್ರಾಂ ಪರಿಚಯಿಸಿದೆ ಹೋಂಡಾ ಮೋಟಾರ್​ಸೈಕಲ್​. ಇದು 3 ವರ್ಷಗಳ ಸ್ಟಾಂಡರ್ಡ್​ ವಾರಂಟಿಯನ್ನು ಹೊಂದಿದೆ. ಜತೆಗೆ ಏಳು ವರ್ಷಗಳ ವಿಸ್ತೃತ ವಾರಂಟಿಯೂ ನೀಡಿದೆ. ಗ್ರಾಹಕರು ಈ ವಿಸ್ತೃತ ವಾರಂಟಿ ಖರೀದಿಸಲು ಬಯಸಿದರೆ, ಹೊಸ ಯುನಿಕಾರ್ನ್ 10 ವರ್ಷಗಳ ವಾರಂಟಿ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ.

ಹೋಂಡಾ ಕಂಪನಿಯು ತನ್ನ ಎಸ್​​ಪಿ 125, ಆಕ್ಟಿವಾ 125 ಮತ್ತು ಡಿಯೋಗಳನ್ನು ಕೆಲವು ದಿನಗಳ ಹಿಂದೆ ಅಪ್​​ಡೇಟ್ ಮಾಡಿದೆ. ಹೊಸ ಎಮಿಷನ್ ಮಾನದಂಡಗಳನ್ನು ಪೂರೈಸಲು ತನ್ನ ಸಂಪೂರ್ಣ ದ್ವಿಚಕ್ರ ವಾಹನ ಪೋರ್ಟ್ ಫೋಲಿಯೊವನ್ನು ನವೀಕರಿಸುತ್ತಿದೆ ಹೋಂಡಾ.

ಹೊಸ ಒಬಿಡಿ 2 ಕಾಂಪ್ಲೈಂಟ್ 2023 ಯುನಿಕಾರ್ನ್ ಬಿಡುಗಡೆಯ ಬಗ್ಗೆ ಮಾತನಾಡಿದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ತ್ಸುಟ್ಸುಮು ಒಟಾನಿ, 2 ದಶಕಗಳಿಂದ ಯೂನಿಕಾರ್ನ್ ಭಾರತೀಯ ಮೋಟಾರ್​ ಸೈಕಲ್​ ಪ್ರೇಮಿಗಳ ಆದ್ಯತೆಯ ಆಯ್ಕೆಯಾಗಿದೆ. ಹೊಸ ಬೈಕ್​ ಮಾಲಿನ್ಯ ಮಾನದಂಡಗಳನ್ನು ಪೂರೈಸುತ್ತದೆ. ಈ ಮೂಲಕ ನಮ್ಮ ಬದ್ಧತೆಯನ್ನು ಪ್ರಸ್ತುತಪಡಿಸಿದ್ದೇವೆ. ನಮ್ಮ ನಿಷ್ಠಾವಂತ ಗ್ರಾಹಕರ ಬೆಂಬಲಕ್ಕಾಗಿ ಅವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Honda Dio: ಸ್ಮಾರ್ಟ್​ ಆಗಿ ಬಿಡುಗಡೆಗೊಂಡ 2023ರ ಹೋಂಡಾ ಡಿಯೋ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ ಹೋಂಡಾ ಯೂನಿಕಾರ್ನ್ ತನ್ನ ಸಾಟಿಯಿಲ್ಲದ ಶೈಲಿ, ವಿನ್ಯಾಸ, ಶಕ್ತಿ ಮತ್ತು ಸುಧಾರಿತ ಎರ್ಗೊನಾಮಿಕ್ಸ್ ಮೂಲಕ ಟ್ರೆಂಡ್ ಸೆಟ್ಟರ್​ ಎನಿಸಿಕೊಂಡಿದೆ. ಹೊಸ ಒಬಿಡಿ 2 ಕಾಂಪ್ಲೈಂಟ್ ಪಿಜಿಎಂ-ಎಫ್ಐ ಎಂಜಿನ್ ಮೂಲಕ ಇನ್ನೊಂದು ಹೆಜ್ಜೆ ಮುಂದೆ ಇಡಲಾಗಿದೆ. ಹೊಸ ಯೂನಿಕಾರ್ನ್ ಈಗ ಆಕರ್ಷಕ ಪರ್ಲ್ ಸೈರನ್ ನೀಲಿ ಬಣ್ಣದಲ್ಲೂ ಲಭ್ಯವಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಈ ಮೋಟಾರ್ ಸೈಕಲ್ ನೀಡಲು ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

Exit mobile version