Site icon Vistara News

Viral News : ತಮ್ಮ ಜೀಪ್​​ಗೆ ಫೈನ್ ಹಾಕಿದ ಪೊಲೀಸ್ ಠಾಣೆಯ ಕರೆಂಟ್​ ಕಟ್​ ಮಾಡಿದ ವಿದ್ಯುತ್​ ಮಂಡಳಿ​!

AI Camera

ತಿರುವನಂತಪುರ: ಕೇರಳ ರಾಜ್ಯದ ನ್ಯಾಷನಲ್​ ಹೈವೆ (Nationa Highway) ಮತ್ತು ಸ್ಟೇಟ್​ ಹೈವೆಗಳಲ್ಲಿ (State Highway) ಕೃತಕ ಬುದ್ಧಿಮತ್ತೆಯ ಕ್ಯಾಮೆರಾಗಳನ್ನು ಅಳವಡಿಸಿ ಅತಿ ವೇಗ ಸೇರಿದಂಗೆ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ. ಇದು ಕೆಲವು ವರ್ಷಗಳಿಂದ ಚರ್ಚೆಯ ವಿಷಯ (Viral News). ಈ ಕ್ಯಾಮೆರಾ (AI Camera) ಕೆಲವೊಂದು ಬಾರಿ ಎಡವಟ್ಟು ಮಾಡಿದ್ದೂ ಇದೆ. ಹೀಗಾಗಿ ಚಾಲಕರು ಹಾಗೂ ವಾಹನಗಳ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ ಹಲವಾರು ಘಟನೆಗಳು ನಡೆದಿವೆ. ಕೆಲವೊಂದು ಪ್ರಕರಣಗಳಲ್ಲಿ ಮೋಟಾರು ವಾಹನ ಇಲಾಖೆ ನಮ್ಮಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಒಪ್ಪಿಕೊಂಡಿದೆ. ಅಂತೆಯೇ ಕಳೆದ ವಾರ ಕೇರಳದ (Kerala) ವಯನಾಡ್ ಜಿಲ್ಲೆಯಲ್ಲಿ ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ (ಕೆಎಸ್ಇಬಿ) ಸೇರಿದ್ದ ಜೀಪ್​ಗೆ (JEEP) ದೊಡ್ಡ ಮಟ್ಟದ ಫೈನ್ ಹಾಕಿತ್ತು ಈ ಕೃತಕಬದ್ಧಿ ಮತ್ತೆಯ ಕ್ಯಾಮೆರಾ. ಬೆಚ್ಚಿ ಬಿದ್ದ ಕೆಎಸ್​ಇಬಿ ಕ್ಯಾಮೆರಾ ನಿಯಂತ್ರಣ ಕೊಠಡಿಯ ವಿದ್ಯುತ್​ ಸರಬರಾಜು ಕಟ್​ ಮಾಡುವ ಮೂಲಕ ಬುದ್ಧಿ ಕಲಿಸಿದೆ.

ಕೆಎಸ್​ಇಬಿ ಜೀಪ್​​ ವಿದ್ಯುತ್ ತಂತಿಯ ಮೇಲೆ ಬಿದ್ದ ಎಲೆಗಳು ಮತ್ತು ಕೊಂಬೆಗಳನ್ನು ಕತ್ತರಿಸಲು ಪಿಕರ್ ಕಂಬವನ್ನು ಸಾಗಿಸುತ್ತಿತ್ತು. ಈ ವೇಳೆ ಕೆಲವೊಂದು ಕಡೆ ಸಂಚಾರ ನಿಯಮವನ್ನು ಉಲ್ಲಂಘಿಸಿದೆ. ಅದಕ್ಕಾಗಿ 20,500 ರೂಪಾಯಿ ಚಲನ್​ ಕಳುಹಿಸಲಾಗಿತ್ತು. ದಂಡದ ಆದೇಶ ಬಂದ ವಾರದ ನಂತರ, ಕೆಎಸ್ಇಬಿ ವಯನಾಡ್​​ನ ಕಲ್ಪೆಟ್ಟಾದ ಎಂವಿಡಿ ಕಚೇರಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತು. ಮೂಲಗಳ ಪ್ರಕಾರ ಮೋಟಾರು ವಾಹನ ಇಲಾಖೆಯ ವಿದ್ಯುತ್​ ಬಿಲ್​ ಬಾಕಿ ಇಟ್ಟಿತ್ತು. ಸಂದರ್ಭದಕ್ಕೆ ಕಾದು ಕರೆಂಟ್​ ಕಟ್​ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋವನ್ನು ಮನೋರಮಾ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದೆ. ತಮಗೆ ನೀಡಲಾದ ಚಲನ್ ಗೆ ಪ್ರತೀಕಾರವಾಗಿ ಕೆಎಸ್​​ಇಬಿ ಇಲಾಖೆ ಮೋಟಾರು ವಾಹನ ಇಲಾಖೆ ಕಚೇರಿಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಿರಬಹುದು ಎಂದು ವರದಿಗಳು ಹೇಳುತ್ತಿವೆ. ಆದರೆ, ಈ ಆರೋಪಗಳಿಗೆ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿದ್ಯುತ್ ಕೇಬಲ್​​ಗಳ ಮೇಲೆ ಒರಗಿದ ಎಲೆಗಳು ಮತ್ತು ಕೊಂಬೆಗಳನ್ನು ಕತ್ತರಿಸಲು ಬಳಸುವ ಕಂಬವನ್ನು ಸಾಗಿಸುತ್ತಿದ್ದ ವೇಳೆ ಕೆಎಸ್ಇಬಿ ಜೀಪ್​​ಗೆ ಎಐ ಕ್ಯಾಮೆರಾ ದಂಡ ವಿಧಿಸಿತ್ತು.

ವಿದ್ಯುತ್ ಸರಬರಾಜು ವೇಳೆ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಕೆಎಸ್ ಇಬಿ ಕಾಲಕಾಲಕ್ಕೆ ಗಿಡಗಳನ್ನು ಕತ್ತರಿಸುತ್ತದೆ. ಆದರೆ, ಎಐ ಕ್ಯಾಮೆರಾಗೆ ಜೀಪ್​ ಮೇಲೆ ಏಣಿ ಇಟ್ಟುಕೊಂಡು ಹೋಗುವುದು ಹೊಸ ವಿಷಯ. ಇದನ್ನು ಅಪರಾಧ ಅಲ್ಲವೆಂದು ಗುರುತಿಸುವ ವ್ಯವಸ್ಥೆಯನ್ನು ಪ್ರೋಗ್ರಾಮ್ ಮಾಡಿರಲಿಲ್ಲ. ಕೃತಕ ಬುದ್ಧಿಮತ್ತೆ ಕ್ಯಾಮೆರಾ ಎರಡು ಉಲ್ಲಂಘನೆಗಳನ್ನು ಗುರುತಿಸಿತ್ತು. ಕಂಬವನ್ನು ಸಾಗಿಸಿದ್ದಕ್ಕಾಗಿ 20,000 ರೂ.ಗಳ ದಂಡ ಮತ್ತು ಸೀಟ್ ಬೆಲ್ಟ್ ಧರಿಸದ ಚಾಲಕನಿಗೆ 500 ರೂ. ದಂಡ ಹಾಕಿತ್ತು.

ಮಾತುಕತೆ ಬಳಿಕ ಪರಿಹಾರ

ಸಾಮಾನ್ಯವಾಗಿ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುವ ಕಟ್ಟಡಗಳು ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಸಲು ವಿಫಲವಾದರೆ ವಿಸ್ತರಣೆ ನೀಡಲಾಗುತ್ತದೆ. ಎಂವಿಡಿ ಕಾರ್ಯನಿರ್ವಹಿಸುತ್ತಿರುವ ಅದೇ ಕಟ್ಟಡವು ಎಐ ಕ್ಯಾಮೆರಾಗಳಿಗೆ ಡೇಟಾಬೇಸ್ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಸಂಪರ್ಕವನ್ನು ಕಡಿತಗೊಳಿಸಿದ ನಂತರ, ಎಂವಿಡಿ ತ್ವರಿತವಾಗಿ ಬಿಲ್​ ಕಟ್ಟಿತ್ತು. ತುರ್ತು ನಿಧಿಯಿಂದ ಹಣ ಪಾವತಿ ಮಾಡಿತ್ತು ಎನ್ನಲಾಗಿದೆ. ಬಳಿಕ ಇಲಾಖೆಗಳ ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿದ ಕಂಬ ತೆಗೆದುಕೊಂಡು ಹೋಗಿದ್ದ ಬಿಲ್​ ಅನ್ನು ರದ್ದು ಮಾಡಲಾಯಿತು. ಆದರೆ, ಚಾಲಕ ಸೀಟ್​ ಬೆಲ್ಟ್​ ಹಾಕದಿರುವ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Viral News : ನಾರಿ ಮುನಿದರೆ ಮಾರಿ! ಮಹಿಳೆಯ ಕೋಪಕ್ಕೆ ಡ್ಯೂಕ್‌ ಬೈಕ್‌ ಚಿಂದಿ!

ಇಂಥ ಪ್ರಕರಣಗಳು ಇದ ಮೊದಲೇನಲ್ಲ. ಕಳೆದ ವರ್ಷ ಉತ್ತರ ಪ್ರದೇಶದ ಬರೇಲಿಯಲ್ಲಿ ವಿದ್ಯುತ್ ಬೋರ್ಡ್ ಲೈನ್ ಮ್ಯಾನ್ ಒಬ್ಬರು ಪೊಲೀಸ್ ಠಾಣೆಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವ ಮೂಲಕ ತಮ್ಮ ವಾಹನಕ್ಕೆ ದಂಡ ಹಾಕಿದ್ದಕ್ಕೆ ಸೇಡು ತೀರಿಸಿಕೊಂಡಿದ್ದರು.

ರಸ್ತೆ ಅಪಘಾತಗಳು ಮತ್ತು ಉಲ್ಲಂಘನೆಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸುರಕ್ಷಿತ ಕೇರಳ ಯೋಜನೆಯ ಭಾಗವಾಗಿ ರಸ್ತೆಗಳಲ್ಲಿ ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಕ್ಯಾಮೆರಾ ಇತ್ತೀಚೆಗೆ ಮೋಟಾರ್​ ಸೈಕಲ್​ ಒಂದು ಗಂಟೆಗೆ 1240 ಕಿ.ಮೀ ವೇಗದಲ್ಲಿ ಚಲಿಸಿದೆ ಎಂದು ತಪ್ಪಾಗಿ ದಂಡ ವಿಧಿಸಿತ್ತು ವರದಿಯಾಗಿತ್ತು. ಕ್ಯಾಮೆರಾ ತಪ್ಪುಗಳನ್ನು ಪತ್ತೆ ಹಚ್ಚಿದ ಹೊರತಾಗಿಯೂ ಅಧಿಕಾರಿಗಳು ಅದನ್ನು ಖುದ್ದಿ ಪರಿಶೀಲಿಸುವ ಹೊಸ ವ್ಯವಸ್ಥೆಯೂ ಜಾರಿಯಲ್ಲಿದೆ.

Exit mobile version