ಬೆಂಗಳೂರು : ಹಬ್ಬದ ಋತುವಿನಲ್ಲಿ ಭಾರತದಲ್ಲಿ ಪ್ರತಿ ವರ್ಷ ಹಲವಾರು ಕಾರು ಹಾಗೂ ಬೈಕ್‌ಗಳು ಬಿಡುಗಡೆಯಾಗುತ್ತವೆ. ಅಂತೆಯೇ ಈ ವರ್ಷದ ಹಬ್ಬದ ಋತು ಆರಂಭಗೊಂಡಿದ್ದು ಕೆಲವು ಕಾರುಗಳು ಮಾರುಕಟ್ಟೆಗೆ ಪ್ರವೇಶಿಸಲುಸಜ್ಜಾಗಿವೆ. ಅಂಥ ಕಾರುಗಳ ಪಟ್ಟಿ ಇಲ್ಲಿದೆ.
ಮರ್ಸಿಡೀಸ್ ಬೆಂಜ್ EQS 580
ಪರ್ಫಾಮೆನ್ಸ್ ಅಧಾರಿತ AMG EQS 53 4MATIC, ಕಾರು ಬಿಡುಗಡೆಯ ಯಶಸ್ಸಿನಲ್ಲಿರುವ ಮರ್ಸಿಡೀಸ್ ಬೆಂಜ್, EQS 5೮೦ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ
ಮಾರುತಿ ಸುಜುಕಿ ಕಂಪನಿಯು ಮಿಡ್ ಸೈಜ್ ಎಸ್‌ಯುವಿ ಕಾರು ಗ್ರ್ಯಾಂಡ್ ವಿಟಾರವನ್ನು ಈಗಾಗಲೇ ಪರಿಚಯಿಸಿದೆ. ಈ ಎಸ್‌ಯುವಿ ಇತ್ತೀಚೆಗೆ ಮಾರುಕಟ್ಟೆಗೆ ಇಳಿದಿರುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ನ ಫ್ಲಾಟ್‌ಫಾರ್ಮ್ ಅನ್ನು ಶೇರ್ ಮಾಡಿಕೊಂಡಿದೆ.
ಎಂಜಿ ಹೆಕ್ಟರ್ ಫೇಸ್‌ಲಿಫ್ಟ್
ಎಂಜಿ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ತನ್ನ ಎಂಜಿ ಹೆಕ್ಟರ್ ಎಸ್‌ಯುವಿ ಕಾರಿನ ಫೇಸ್‌ಲಿಫ್ಟ್ ಅನಾವರಣ ಮಾಡುವುದಾಗಿ ತಿಳಿಸಿದೆ. ಹಬ್ಬದ ಋತುವಿನಲ್ಲಿ ಅದು ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಈ ಕಾರು ೧೪ ಇಂಚಿನ ಬೃಹತ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಹೊಸತನಗಳೊಂದಿಗೆ ರಸ್ತೆ ಇಳಿಯಬಹುದು.
ಮಹೀಂದ್ರಾ ಎಕ್ಸ್‌ಯುವಿ ೩೦೦
ಮಹೀಂದ್ರಾ ಎಕ್ಸ್‌ಯುವಿ ೩೦೦ ಕಾರಿನ ಫೇಸ್‌ಲಿಫ್ಟ್ ಕಾರಿನ ಫೇಸ್‌ಲಿಫ್ಟ್ ಕೂಡ ಈ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ೧.೨ ಲೀಟರ್‌ನ ಪೆಟ್ರೋಲ್ ಟರ್ಬೊ ಎಂಜಿನ್ ಈ ಕಾರಿನ ವಿಶೇಷತೆ ಎನಿಸಿಕೊಳ್ಳಲಿದೆ. ಇದರಲ್ಲಿ ಮಹೀಂದ್ರಾ ಟ್ವಿನ್ ಪೀಕ್ ಲೋಗೋ ಬಳಕೆಯಾಗಬಹುದು.
ಬಿವೈಡಿ ಅಟ್ಟೊ ೩
ಚೀನಾ ಮೂಲದ ಬಿವೈಡಿ (ಬಿಲ್ಡ್ ಯುವರ್ ಡ್ರೀಮ್ಸ್) ಕಂಪನಿಯು ತನ್ನ ಎರಡನೇ ಕಾರಿನ ರೂಪದಲ್ಲಿ ಬಿವೈಡಿ ಅಟ್ಟೊ೩ ಮಾರುಕಟ್ಟೆಗೆ ಇಳಿಸಲು ಮುಂದಾಗಿದೆ. ಹಬ್ಬದ ಋತುವಿಗಾಗಿ ಕಾಯುತ್ತಿದೆ ಎನ್ನಲಾಗಿದೆ. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಇತ್ತೀಚೆಗೆ ಭಾರತದ ರಸ್ತೆಗಳಲ್ಲಿ ಇದರ ಪರೀಕ್ಷೆ ನಡೆದಿತ್ತು.
ಟಾಟಾ ಟಿಯಾಗೊ ಇವಿ
ಬ್ಯಾಟರಿ ಚಾಲಿತ ವಾಹನಗಳ ತಯಾರಿ ವಿಚಾರದಲ್ಲಿ ಭಾರತದಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡಿರುವ ಟಾಟಾ ಕಂಪನಿಯು ಟಿಯಾಗೊದ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಅಗ್ಗದ ದರದ ಕಾರು ಎನಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದರಲ್ಲಿ ಟಿಗೋರ್ ಕಾರಿನ ತಾಂತ್ರಿಕ ಅಂಶಗಳು ಒಳಗೊಂಡಿರಬಹುದು.
ಇದನ್ನೂ ಓದಿ |Mahindra XUV 400 | ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಕುರಿತು ತಿಳಿದುಕೊಳ್ಳಬೇಕಾದ ಐದು ಸಂಗತಿಗಳು