Site icon Vistara News

Maruti Suzuki Jimny : ಈ ರೀತಿಯ ಜನರಿಗೆ ಮಹೀಂದ್ರಾ ಥಾರ್​ಗಿಂತ ಮಾರುತಿ ಜಿಮ್ನಿಯೇ ಬೆಸ್ಟ್​​

Maruti Jimny

ಭಾರತದ ಅತಿದೊಡ್ಡ ಕಾರು ಕಂಪನಿಯಾದ ಮಾರುತಿ ಸುಜುಕಿ (Maruti Suzuki Jimny) ಇಂಡಿಯಾ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಎಸ್ ಯುವಿ ಜಿಮ್ನಿಯೊಂದಿಗೆ ಆಫ್​ರೋಡಿಂಗ್ ವಿಭಾಗಕ್ಕೆ ಪ್ರವೇಶ ಪಡೆದಿದೆ. ಈ ಕಾರು ರಸ್ತೆಗೆ ಇಳಿಯುವ ಮೂಲಕ ಈ ಸೆಗ್ಮೆಂಟ್​ನಲ್ಲಿ ಮಹೀಂದ್ರಾ ಥಾರ್​ನದ್ದು ಪ್ರಾಬಲ್ಯವಿತ್ತು. ಈಗ ಈ ಎರಡೂ ವಾಹನಗಳು ಆಫ್-ರೋಡ್ ಪ್ರೇಮಿಗಳನ್ನು ಸೆಳೆಯುತ್ತಿವೆ. ಆದರೆ, ಎರಡೂ ವಾಹನಗಳನ್ನು ಏಕಕಾಲಕ್ಕೆ ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಅವರವರ ಆಯ್ಕೆಗೆ ತಕ್ಕಂತೆ ಎರಡಲ್ಲೊಂದು ಕಾರನ್ನು ಮನೆಗೆ ತಂದುಕೊಳ್ಳುತ್ತಾರೆ. ಹಾಗಾದರೆ ಥಾರ್ ಗಿಂತ ಜಿಮ್ನಿ ಯಾವ ರೀತಿ ಭಿನ್ನ ಹಾಗೂ ಎಂಥ ಮನಸ್ಥಿತಿಯರು ಜಿಮ್ನಿಯನ್ನೇ ಖರೀದಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇಲ್ಲಿದೆ ಸರಳ ಉತ್ತರ.

ಆಫ್​ರೋಡ್​ ಜತೆ ನಗರ ಸವಾರಿ ಬಯಸುವವರು

ನಗರದೊಳಗಿನ ಪ್ರಯಾಣದ ಅನುಕೂಲತೆ ಮತ್ತು ಆಫ್-ರೋಡ್ ಸಾಮರ್ಥ್ಯಗಳ ಮಿಶ್ರಣವನ್ನು ಬಯಸುವ ಜನರು ಮಹೀಂದ್ರಾ ಥಾರ್​ಗಿಂತ ಮಾರುತಿ ಜಿಮ್ನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರ ಕಾಂಪ್ಯಾಕ್ಟ್ ಸೈಜ್​ ಕಿರಿದಾದ ನಗರದ ಬೀದಿಗಳಲ್ಲಿ ಸಲೀಸಾಗಿ ಸಾಗಲು ನೆರವು ನೀಡುತ್ತದೆ. ಇದು ಪಾರ್ಕಿಂಗ್ ಮಾಡಲು ಸುಲಭವಾಗಿದೆ. ಥಾರ್ ಗಾತ್ರದಲ್ಲಿ ದೊಡ್ಡದಾಗಿದೆ. ಹೀಗಾಗಿ ನಗರದ ಮಿತಿಗಳಲ್ಲಿ ಸುಲಭವಾಗಿ ಓಡಿಸಲು ಸಾಧ್ಯವಿಲ್ಲ. ಗಿಜಿಗುಡುವ ನಗರ ಪ್ರದೇಶಗಳಲ್ಲಿ ಒತ್ತಡ- ಮುಕ್ತ ಪ್ರಯಾಣವನ್ನು ಖಚಿತಪಡಿಸಿಕೊಳ್ಳುವ ಖರೀದಿದಾರರಿಗೆ ಜಿಮ್ನಿ ಹೆಚ್ಚು ಸೂಕ್ತ.

ಒಂದು ಕಾರು, ಹಲವು ಗುರಿ ಇದ್ದವರಿಗೆ

ತಾವು ಖರೀದಿ ಮಾಡುವ ಕಾರು ವಾಸ್ತವದಲ್ಲಿ ಎಷ್ಟು ಅನುಕೂಲಕರ ಎಂಬುದು ಅನೇಕ ಭಾರತೀಯ ಖರೀದಿದಾರ ರ ಮುಖ್ಯ ಕಾಳಜಿಯಾಗಿರುತ್ತದೆ. ನೀವು ಆ ಮಾದರಿಯ ಖರೀದಿದಾರರಲ್ಲಿ ಒಬ್ಬರಾಗಿದ್ದರೆ ಜಿಮ್ನಿ ನಿಮಗೆ ಬೆಸ್ಟ್​​. ಯಾಕೆಂದರೆ ಮಾರುತಿ ಜಿಮ್ನಿ ತನ್ನ ವಿಭಾಗದಲ್ಲಿ ಐದು ಬಾಗಿಲುಗಳನ್ನು ನೀಡುವ ಏಕೈಕ ಎಸ್ ಯುವಿ. ಹೀಗಾಗಿ ಬಳಕೆಯ ಸುಲಭವಾಗಿದೆ. ಎಲ್ಲ ಮಾದರಿಯ ನಿರೀಕ್ಷೆಗಳನ್ನು ಪೂರೈಸುತ್ತದೆ. ಮಹೀಂದ್ರಾ ಥಾರ್ ಹಿಂಭಾಗದ ಸೀಟ್ ಬಳಕೆಯ ಬಗ್ಗೆ ಗೊಂದಲಗಳಿವೆ. ಜಿಮ್ನಿ ಈ ವಿಷಯ ಹೆಚ್ಚು ಅನುಕೂಲಕರ. ಆರಾಮದಾಯಕ ಆಸನ ವ್ಯವಸ್ಥೆ ಮತ್ತು ಸಾಕಷ್ಟು ಹೆಡ್ ರೂಮ್ ಜಿಮ್ನಿಯಲ್ಲಿರುವ ಕಾರಣ ಫ್ಯಾಮಿಲಿ ಪ್ರಯಾಣಕ್ಕೂ ಸೂಕ್ತವಾಗಿದೆ.

ಸರಳ ಪ್ರಯಾಣದ ನಿರೀಕ್ಷೆ ಇದ್ದವರಿಗೆ

ಸರಳ ಪ್ರಯಾಣದ ನಿರೀಕ್ಷೆಯನ್ನೂ ಹೊಂದಿರುವವರು ಮಾರುತಿ ಜಿಮ್ನಿಗೆ ಅಂಟಿಕೊಳ್ಳಬಹುದು. ಜಿಮ್ನಿಯ ಸಸ್ಪೆಂಷನ್ ಸಿಸ್ಟಂ ಉತ್ತಮವಾಗಿದೆ. ಇದು ಆರಾಮ ಪ್ರಯಾಣ ಮತ್ತು ಆಫ್-ರೋಡ್ ಸಾಮರ್ಥ್ಯದ ನಡುವೆ ಪರಿಪೂರ್ಣ ಸಮತೋಲನ ಹೊಂದಿದೆ. ಥಾರ್ ನ ಉಬ್ಬು ಎತ್ತರದ ಸವಾರಿಗೆ ಭಿನ್ನವಾಗಿ, ಜಿಮ್ನಿ ದೈನಂದಿನ ಪ್ರಯಾಣ ಮತ್ತು ವಾರಾಂತ್ಯದ ರಜಾದಿನಗಳಿಗೆ ಸುಗಮ ಅನುಭವವನ್ನು ನೀಡುತ್ತದೆ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಡ್ ಲೈಟ್ ವಾಷರ್ ಗಳು, 9-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಇಷ್ಟಪಡುವ ಸಂಗತಿಗಳಾಗಿವೆ.

ಇದನ್ನೂ ಓದಿ : Tata Punch CNG : ಟಾಟಾ ಪಂಚ್​ ಸಿಎನ್​ಜಿ ಕಾರಿನಲ್ಲಿ ಇರಲಿದೆ ಸನ್​ರೂಫ್​, ಇನ್ನೇನಿವೆ ವೈಶಿಷ್ಟ್ಯಗಳು?

ಬಜೆಟ್​ ಬಗ್ಗೆ ಯೋಚಿಸುವವರು

ತಮ್ಮ ಪರ್ಸ್​ಗಳ ಬಗ್ಗೆ ಕಾಳಜಿ ಹೊಂದಿರುವವರಿಗೆ ಮಾರುತಿ ಜಿಮ್ನಿ ಉತ್ತಮ ಆಯ್ಕೆಯಾಗಿದೆ. ಜಿಮ್ನಿಯ ಬೇಸ್ ವೇರಿಯೆಂಟ್​ ಬೆಲೆಯು ರೂ.12.55 ಲಕ್ಷ ರೂಪಾಯಿ. ಏತನ್ಮಧ್ಯೆ, ಥಾರ್ ನ ಬೆಲೆಯು ರೂ.12.82 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಜಿಮ್ನಿ ಬಜೆಟ್ ಪ್ರಜ್ಞೆಯುಳ್ಳ ಖರೀದಿದಾರರಿಗೆ ಪರಿಪೂರ್ಣ ಆಯ್ಕೆಯಾಗಿದೆ. ಕಳೆದ ತಿಂಗಳು ಡಿಸೆಂಬರ್​ನಲ್ಲಿ ಕಂಪನಿಯು ಜಿಮ್ನಿಯ ಝೀಟಾ ಮತ್ತು ಆಲ್ಫಾ ರೂಪಾಂತರಗಳ ಮೇಲೆ 2 ಲಕ್ಷ ಮತ್ತು 1 ಲಕ್ಷ ರೂ.ಗಳ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.

ರಿಲ್ಯಾಕ್ಸ್​ ಪ್ರಯಾಣಕ್ಕೆ

ಕೆಲವು ಚಾಲಕರು ರಿಲ್ಯಾಕ್ಸ್​​ ಅಗಿರುವ ಚಾಲನಾ ಅನುಭವವನ್ನು ಬಯಸುತ್ತಾರೆ. ಅವರಿಗೆ ಮಾರುತಿ ಜಿಮ್ನಿ ಸರಿಯಅಗಿ ಹೊಂದಿಕೊಳ್ಳುತ್ತದೆ. ಜಿಮ್ನಿ ಆರಾಮದಾಯಕ ಕ್ಯಾಬಿನ್ ಜೊತೆಗೆ ಹೆಚ್ಚು ಸ್ಪಂದಿಸುವ ಮತ್ತು ನಯವಾದ ನಿರ್ವಹಣಾ ಅನುಭವ ನೀಡುತ್ತದೆ. ಇದು ಈ ಎಸ್ ಯುವಿಯನ್ನು ಸೆಡೆಟ್ ಡ್ರೈವ್ ಅನ್ನು ಆನಂದಿಸುವವರಿಗೆ ಸೂಕ್ತ ಆಯ್ಕೆಯಾಗಿದೆ. ಉತ್ತಮ ರಸ್ತೆಗಳಲ್ಲಿ ಪ್ರಯಾಣಿಸುತ್ತಿರಲಿ ಅಥವಾ ನಗರದ ಸಂಚಾರಕ್ಕೆ ಹೋಗುವವರು ಇಂಧನ ದಕ್ಷತೆಯನ್ನು ಬೇಡುವವರಿಗೆ ಈ ಕಾರು ಬೆಸ್ಟ್​.

Exit mobile version