Site icon Vistara News

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Xiaomi EV

ಸ್ಮಾರ್ಟ್‌ಫೋನ್ (smart phone) ತಯಾರಿಕ ಟೆಕ್ ದೈತ್ಯ ಕಂಪನಿ ಚೀನಾದ (china) ಕ್ಸಿಯೋಮಿ (Xiaomi) ಇದೀಗ ಆಟೋ (auto) ಉದ್ಯಮವನ್ನು ಪ್ರವೇಶಿಸಲು ಸಜ್ಜಾಗಿದ್ದು, ಕ್ಸಿಯೋಮಿ ಈ ತಿಂಗಳಲ್ಲಿ ತನ್ನ ಹೊಸ ಎಸ್ ಯು 7 (Xiaomi EV) ಎಲೆಕ್ಟ್ರಿಕ್ ಸೆಡಾನ್‌ಗಾಗಿ 75,723 ಆರ್ಡರ್‌ಗಳನ್ನು ಪಡೆದುಕೊಂಡಿದೆ ಮತ್ತು ಜೂನ್ ವೇಳೆಗೆ 10,000 ಯೂನಿಟ್‌ಗಳನ್ನು ತಲುಪಿಸಲು ಯೋಜನೆ ರೂಪಿಸಿದೆ ಎಂದು ಕ್ಸಿಯೋಮಿ ಸಂಸ್ಥಾಪಕ ಲೀ ಜುನ್ ತಿಳಿಸಿದ್ದಾರೆ.

ಬೀಜಿಂಗ್ (Beijing) ಆಟೋ ಶೋನ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿತರಣೆ ಗುರಿಯು ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್‌ಅಪ್‌ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.

ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಾಗಿದ್ದು, ಮರುಪಾವತಿಸಲಾಗದ ಠೇವಣಿಗಳೊಂದಿಗೆ 75,೦೦೦ಕ್ಕೂ ಹೆಚ್ಚು SU7 ನ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಆರ್ಡರ್ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?


ವರ್ಷದಲ್ಲಿ 1 ಲಕ್ಷ ಮಾರಾಟ ಗುರಿ

ಕ್ಸಿಯೋಮಿ ಈ ವರ್ಷ ಎಸ್ ಯು7ಗಾಗಿ 1,00,000ಕ್ಕೂ ಹೆಚ್ಚು ವಿತರಣೆ ಗುರಿಯನ್ನು ಹೊಂದಿದೆ. ಮುಂದಿನ ಮೂರು ವರ್ಷಗಳವರೆಗೆ ಚೀನೀ ಮಾರುಕಟ್ಟೆಯ ಮೇಲೆ ಸ್ಥಿರವಾದ ಬೇಡಿಕೆಯನ್ನು ಉಳಿಸಿಕೊಳ್ಳಲು ಕಂಪನಿ ಉದ್ದೇಶಿಸಿದೆ ಎಂದು ಲೀ ತಿಳಿಸಿದರು.

ಮೇ ಅಂತ್ಯಕ್ಕೆ ಪ್ರೊ ಮಾದರಿ ಪರಿಚಯ

ಬೇಡಿಕೆಯನ್ನು ಪೂರೈಸಲು ಕ್ಸಿಯಾವೋಮಿ SU7ನ ಪ್ರಮಾಣಿತ ಮತ್ತು ಮ್ಯಾಕ್ಸ್ ಆವೃತ್ತಿಗಳ ವಿತರಣೆಯನ್ನು ನಿಗದಿತ ಸಮಯಕ್ಕಿಂತ ಹನ್ನೆರಡು ದಿನಗಳ ಮುಂಚಿತವಾಗಿ ಪೂರ್ಣಗೊಳಿಸಿದೆ. ಮೇ ಅಂತ್ಯದ ವೇಳೆಗೆ ಪ್ರೊ ಮಾದರಿಗಳನ್ನು ಪರಿಚಯಿಸಲು ಕಂಪೆನಿಯು ಯೋಜನೆ ಹಾಕಿಕೊಂಡಿದೆ.

ಬೆಲೆ ಕಡಿತ, ಸಬ್ಸಿಡಿ ಘೋಷಣೆ

ಟೆಸ್ಲಾದ ಮಾಡೆಲ್ 3 ಗೆ ಪೈಪೋಟಿ ನೀಡುವ SU7ನ ಚೀನಾದ ಬೃಹತ್ ವಾಹನ ಮಾರುಕಟ್ಟೆಯಲ್ಲಿ EV ಬೆಲೆಗೆ ಪೈಪೋಟಿ ನೀಡಲಿದೆ. Xiaomi ಮಾರುಕಟ್ಟೆ ಪ್ರವೇಶಕ್ಕೆ ಮುಂಚಿತವಾಗಿಯೇ ವಾಹನ ತಯಾರಕರು ಬೆಲೆ ಕಡಿತ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದಾರೆ.


Xiaomiಯ ತಯಾರಿಕೆಯಲ್ಲಿ 6,000 ಆಟೋ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ಇದು ಸಾಕಾಗುವುದಿಲ್ಲ. ಕಂಪೆನಿಯ ಶೀಘ್ರದಲ್ಲೇ ಹೊಸ ಪ್ರತಿಭೆಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿದೆ. ಆಟೋಮೋಟಿವ್ ಕ್ಷೇತ್ರದಲ್ಲಿ ಆಸಕ್ತರಿರುವವರು ಕಂಪೆನಿ ಸೇರಲು ಈ ಸಂದರ್ಭದಲ್ಲಿ ಜಾಗತಿಕ ಪ್ರತಿಭೆಗಳಿಗೆ ಕರೆ ನೀಡಿದರು.

ಟೆಸ್ಲಾಗಿಂತ ಅಗ್ಗ

ಎಸ್ ಯು7 ಅನ್ನು ಸ್ಪೀಡ್ ಅಲ್ಟ್ರಾ 7 ಎಂದೂ ಕರೆಯುತ್ತಾರೆ. ಇದು ಸ್ಪರ್ಧಾತ್ಮಕ ಚೈನೀಸ್ ಇವಿ ಮಾರುಕಟ್ಟೆಯನ್ನು 30,000 ಡಾಲರ್ ಗಿಂತ ಕಡಿಮೆ ಬೆಲೆಯ ಮೂಲ ಮಾದರಿಯೊಂದಿಗೆ ಪ್ರವೇಶಿಸಲಿದೆ. ಇದು ಚೀನಾದಲ್ಲಿ ಟೆಸ್ಲಾ ಮಾದರಿ 3ಕ್ಕಿಂತ ಅಗ್ಗವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.


5,000 ಉತ್ಪಾದನೆ

Xiaomi ಈಗಾಗಲೇ 5,000 SU7 ವಾಹನಗಳನ್ನು ಉತ್ಪಾದಿಸಿದೆ. ಇದನ್ನು “ಸ್ಥಾಪಕರ ಆವೃತ್ತಿ” ಎಂದು ಕರೆಯಲಾಗುತ್ತದೆ. ವಿಶೇಷ ಆವೃತ್ತಿ, EV ಯ ಸೀಮಿತ ಉತ್ಪಾದನಾ ಆವೃತ್ತಿಯು ಆರಂಭಿಕ ಖರೀದಿದಾರರಿಗೆ ಹೆಚ್ಚುವರಿ ಬಿಡಿಭಾಗಗಳೊಂದಿಗೆ ಬರಲಿದೆ.

SU7 ವಾಹನಗಳ ಆರಂಭಿಕ ಬ್ಯಾಚ್‌ನ ವಿತರಣೆಗಳು ಶೀಘ್ರದಲ್ಲೇ 28 ಚೀನೀ ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ಲೀ ಜುನ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

Xiaomi SU7 ಆಟೋ ವ್ಯವಹಾರದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ಪ್ರಾರಂಭದಲ್ಲಿ ಕಂಪೆನಿ ಸಲ್ಪ ನಷ್ಟ ಅನುಭವಿಸಬೇಕಾಗುತ್ತದೆ. ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. Xiaomi ಗಮನಾರ್ಹ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಾರೆ. ಯೋಜಿತ ಮಾರಾಟದ ಪರಿಮಾಣದ ಆಧಾರದ ಮೇಲೆ 4.1 ಶತಕೋಟಿ ಯುವಾನ್ ಅಥವಾ ಸುಮಾರು 566.82 ಮಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Exit mobile version