ನವ ದೆಹಲಿ: ಜರ್ಮನಿಯ ಐಷಾರಾಮಿ ಕಾರುಗಳ ತಯಾರಿಕಾ ಕಂಪನಿ ಬಿಎಂಡಬ್ಲ್ಯು ಸ್ವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ BMW 6 SERIESನ ೫೦ jahre M Edition ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
BMW M GmbH ಸೀರಿಸ್‌ನ ಸೀಮಿತ ಆವೃತ್ತಿಯ ಈ ಕಾರು ಭಾರತದಲ್ಲಿ ಲಭ್ಯವಿದ್ದು, ಆರಂಭಿಕ ಎಕ್ಸ್‌ಶೋ ರೂಮ್ ಬೆಲೆ ೭೨,೯೦,೦೦೦ ರೂಪಾಯಿ ಎಂದು ಕಂಪನಿ ಹೇಳಿದೆ.
೫೦ jahre M Edition ಕಾರುಗಳು ಚೆನ್ನೈನಲ್ಲಿರುವ ಬಿಎಂಡಬ್ಲ್ಯುಕಾರು ಉತ್ಪಾದನಾ ಘಟಕದಲ್ಲಿ ತಯಾರಾಗಲಿದೆ. ಪೆಟ್ರೋಲ್ ಆವೃತ್ತಿಯ BMW̳ 630i Msports ಕಾರುಗಳಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು ಎಂದು ಹೇಳಿದೆ.
ತಾಂಜಾನೈಟ್ ಬ್ಲ್ಯೂ ಮೆಟಾಲಿಕ್, ಎಮ್ ಕಾರ್ಬನ್ ಬ್ಲ್ಯಾಕ್, ಬೆರ್ನಿನಾ ಗ್ರೇ, ಅಂಬೆರ್ ಎಫೆಕ್ಟ್ ಹಾಗೂ ಮಿನರಲ್ ವೈಟ್ ಬಣ್ಣದಲ್ಲಿ ಕಾರು ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಎಂಜಿನ್ ಸಾಮರ್ಥ್ಯ
ಕಾರಿನಲ್ಲಿ ೨ ಲೀಟರ್‌ನ ಟ್ವಿನ್ ಟರ್ಬೊ ಟೆಕ್ನಾಲಜಿಯ ಪೆಟ್ರೋಲ್ ಎಂಜಿನ್ ಇದ್ದು, ೨೫೮ ಎಚ್‌ಪಿ ಪವರ್ ಹಾಗೂ ೪೦೦ ಎನ್‌ಎಮ್ ಟಾರ್ಕ್ಯೂ ಸೃಷ್ಟಿಸಬಲ್ಲದು. ಕಾರು ಸೊನ್ನೆಯಿಂದ ೧೦೦ ಕಿ.ಮೀ ವೇಗವನ್ನು ೬.೫ ಸೆಕೆಂಡ್‌ಗಳಲ್ಲಿ ಪಡೆಯುವ ಸಾಮರ್ಥ್ಯ ಹೊಂದಿದೆ. ೮ ಸ್ಪೀಡ್‌ನ ಸ್ಟೆಪ್ಟ್ರಾನಿಕ್ ಸ್ಪೋರ್ಟ್ಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರಿಗೆ ಅಳವಡಿಸಲಾಗಿದ್ದು, ಸ್ಟೇರಿಂಗ್ ವೀಲ್‌ನಲ್ಲಿ ಪ್ಯಾಡಲ್ ಶಿಫ್ಟರ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಹೊಂದಿರುವ ಕ್ರೂಸ್ ಕಂಟ್ರೋಲ್ ಇದೆ.
ರಸ್ತೆಯ ಗುಣಮಟ್ಟಕ್ಕೆ ಅನುಗುಣವಾಗಿ ಹೊಂದಿಕೆಯಾಗಬಲ್ಲ ಅಡಾಪ್ಟಿವ್ ೨ ಆಕ್ಸೆಲ್ ಏರ್ ಸಸ್ಪೆನ್ಷನ್ ಹಾಗೂ ಸೆಲ್ಫ್ ಲೆವೆಲಿಂಗ್ ವ್ಯವಸ್ಥೆಯಿದೆ. ಕಂಫರ್ಟ್, ಕಂಪರ್ಟ್ ಪ್ಲಸ್, ಸ್ಪೋರ್ಟ್ಸ್, ಸ್ಪೋರ್ಟ್ಸ್ ಪ್ಲಸ್, ಮತ್ತು ಅಡಾಪ್ಟಿವ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ.
ಇಂಟೀರಿಯರ್
ವಿಮಾನದಲ್ಲಿ ಬರುವ ಆಧುನಿಕ ಕಾಕ್‌ಪಿಟ್ ಮಾದರಿಯ ಇಂಟೀರಿಯರ್ ಅನ್ನು ಕಾರು ಹೊಂದಿದ್ದು, ಬಿಎಂಡಬ್ಲ್ಯು ಆಪರೇಟಿಂಗ್ ಸಿಸ್ಟಮ್ ೭.೦ದಲ್ಲಿ ೩ಡಿ ನ್ಯಾವಿಗೇಷನ್ ವ್ಯವಸ್ಥೆಯಿದೆ. ಅದೇ ರೀತಿ ೧೨.೩ ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೆ, ಹಾಗೂ ೧೨.೩ ಇಂಚಿನ ಕಂಟ್ರೋಲ್ ಡಿಸ್‌ಪ್ಲೇ ಇದೆ. ಬಿಎಂಡಬ್ಲ್ಯು ವರ್ಚುಯಲ್ ಅಸಿಸ್ಟಂಟ್ ಮೂಲಕ ವಾಯ್ಸ್ ಕಮಾಂಡ್ ಕೊಡುವುದಕ್ಕೆ ಸಾಧ್ಯವಿದೆ. ವೈರ್‌ಲೆಸ್ ಮೊಬೈಲ್ ಚಾರ್ಜರ್ ಹಾಗೂ ವೈರ್‌ಲೆಸ್ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೊ ಈ ಕಾರಿನ ಇತರ ಫೀಚರ್‌ಗಳಾಗಿವೆ.
ಇದನ್ನೂ ಓದಿ: Maruti Suzuki Brezza 2022 ಬಿಡುಗಡೆ: ಹೊಸದೇನಿದೆ?