Site icon Vistara News

National Quantum Mission: 6003 ಕೋಟಿ ರೂ. ನ್ಯಾಷನಲ್ ಕ್ವಾಂಟಮ್ ಮಿಷನ್‌ಗೆ ಕೇಂದ್ರ ಸರ್ಕಾರ ಅನುಮೋದನೆ

Cabinet approves Rs 6003 crore National Quantum Mission

ನವದೆಹಲಿ: ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನೆ ನಡೆಸುತ್ತಿರುವ ಜಗತ್ತಿನ 6 ರಾಷ್ಟ್ರಗಳ ಸಾಲಿಗೆ ಈಗ ಭಾರತವು ಸೇರ್ಪಡೆಯಾಗಿದೆ. ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟವು 6003 ಕೋಟಿ ರೂ. ನ್ಯಾಷನಲ್ ಕ್ವಾಂಟಮ್ ಮಿಷನ್‌ (National Quantum Mission- NQM)ಗೆ ಅನುಮೋದನೆ ನೀಡಿದೆ.

ಭಾರತವು ನ್ಯಾಷನಲ್ ಕ್ವಾಂಟಮ್ ಮಿಷನ್ ಮೂಲಕ, ಈ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಲಿದೆ. 6003 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವು ಈ ಯೋಜನೆಗೆ ಒದಗಿಸಲಿದೆ. ಎನ್‌ಕ್ಯೂಎಂ ಯೋಜನೆಯಡಿ ಕ್ವಾಂಟಮ್-ಆಧಾರಿತ (ಭೌತಿಕ ಕ್ವಿಟ್) ಕಂಪ್ಯೂಟರ್‌ಗಳನ್ನು ಸ್ಥಳೀಯವಾಗಿ ನಿರ್ಮಿಸಲಾಗುತ್ತದೆ. ಈ ಕಂಪ್ಯೂಟರ್‌ಗಳು ಅತ್ಯಂತ ಸಂಕೀರ್ಣವಾದ ಸಮಸ್ಯೆಗಳನ್ನು ಹೆಚ್ಚು ಸುರಕ್ಷಿತ ರೀತಿಯಲ್ಲಿ ನಿರ್ವಹಿಸಲು ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.

ನ್ಯಾಷನಲ್ ಕ್ವಾಂಟಮ್ ಮಿಷನ್ ಬಗ್ಗೆ ಮಾಹಿತಿ ನೀಡಿದ ಸಚಿವ ಡಾ. ಜಿತೇಂದ್ರ ಸಿಂಗ್, ನ್ಯಾಷನಲ್ ಕ್ವಾಂಟಮ್ ಮಿಷನ್ ಮೂಲಕ ಭಾರತವು ಈ ಸಂಶೋಧನಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಲಿದೆ. ಇದು ಆರೋಗ್ಯ ಮತ್ತು ರೋಗನಿರ್ಣಯ, ರಕ್ಷಣೆ, ಶಕ್ತಿ ಮತ್ತು ಡೇಟಾ ಸುರಕ್ಷತೆಯಿಂದ ಹಿಡಿದು ವ್ಯಾಪಕ-ಪ್ರಮಾಣದ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗಲಿದೆ ಎದು ಹೇಳಿದರು.

ಮುಂದಿನ ಎಂಟು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವ 50ರಿಂದ 1000 ಕ್ವಿಟ್‌ಗಳ ನಡುವಿನ ಭೌತಿಕ ಕ್ವಿಟ್ ಸಾಮರ್ಥ್ಯಗಳೊಂದಿಗೆ ಕ್ವಾಂಟಮ್ ಕಂಪ್ಯೂಟರ್‌ಗಳನ್ನು (ಕ್ವಿಟ್) ಅಭಿವೃದ್ಧಿಪಡಿಸುವಲ್ಲಿ ಮಿಷನ್ ಗಮನ ಕೇಂದ್ರೀಕರಿಸಲಿದೆ. 50 ಭೌತಿಕ ಕ್ವಿಟ್‌ಗಳವರೆಗಿನ ಕಂಪ್ಯೂಟರ್‌ಗಳನ್ನು ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಐದು ವರ್ಷಗಳಲ್ಲಿ 50 ರಿಂದ 100 ಭೌತಿಕ ಕ್ವಿಟ್‌ಗಳು ಮತ್ತು ಎಂಟು ವರ್ಷಗಳಲ್ಲಿ 1000 ಭೌತಿಕ ಕ್ವಿಟ್‌ಗಳವರೆಗಿನ ಕಂಪ್ಯೂಟರ್‌ಗಳು ಅಭಿವೃದ್ದಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 6G Technology | 6ಜಿ ಟೆಕ್ನಾಲಜಿ ಕನಸು ಬಿತ್ತಿದ ಮೋದಿ ಸರ್ಕಾರ, ದಶಕದ ಅಂತ್ಯಕ್ಕೆ ಆಗಲಿದೆ ಸಾಕಾರ

ನ್ಯಾಷನಲ್ ಕ್ವಾಂಟಮ್ ಮಿಷನ್ ಅಡಿ ನಾಲ್ಕು ಥೀಮ್ಸ್‌ಗಲಿವೆ. ಕ್ವಾಟಂಮ್ ಕಂಪ್ಯೂಟಿಂಗ್, ಕ್ವಾಂಟಮ್ ಕಮ್ಯುನಿಕೇಷನ್, ಕ್ವಾಂಟಮ್ ಸೇನ್ಸಿಂಗ್ ಆ್ಯಂಡ್ ಮೆಟ್ರಾಲಾಜಿ, ಕ್ವಾಂಟಮ್ ಮಟಿರಿಯಲ್ ಆ್ಯಂಡ್ ಡಿವೈಸಸ್‌ಗಳನ್ನು ಎನ್‌ಕ್ಯೂಎಂ ಹೊಂದಿದೆ.

Exit mobile version