Site icon Vistara News

WhatsApp New Feature: ‘ಕಾಲ್ ಲಿಂಕ್ಸ್’ ಎಂಬ ಹೊಸ ವಾಟ್ಸಾಪ್ ಫೀಚರ್, ಇದರಿಂದ ಏನು ಲಾಭ?

Call Links is a WhatsApp New Feature and Check Details

ಬೆಂಗಳೂರು: ವಾಟ್ಸಾಪ್ (WhatsApp New Feature) ಮತ್ತೊಂದು ಫೀಚರ್ ಲಾಂಚ್ ಮಾಡಿದೆ. ಸದ್ಯಕ್ಕೆ ಇದು ಬೀಟಾ ವರ್ಷನ್‌ನಲ್ಲಿದ್ದು, ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಮೆಟಾ ಒಡೆತನದ ವಾಟ್ಸಾಪ್, ವಿಂಡೋ ಆ್ಯಪ್‌ಗೆ ಕಾಲ್ ಲಿಂಕ್ಸ್ (Call Links) ಎಂಬ ಹೊಸ ಫೀಚರ್ ‌ಲಾಂಚ್ ಮಾಡಿದೆ. ಕಾಲ್ ಲಿಂಕ್ಸ್ ಹೊಸ ಫೀಚರ್‌ ಮೂಲಕ ವಾಟ್ಸಾಪ್‌ ಕರೆಗೆ ಸಂಬಂಧಿಸಿದಂತೆ ಸುಧಾರಣೆಯನ್ನು ತರಲು ಮುಂದಾಗಿದೆ. ಈ ಲಿಂಕ್ ತೆರೆಯುವ ಮೂಲಕ ಯಾರಾದರೂ ಕಾಲ್‌ಗೆ ಜಾಯಿನ್ ಆಗಬಹುದು. ಇದು ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ವಿಂಡೋಸ್ 2.2307.3.0 ಅಪ್‌ಡೇಟ್‌ಗಾಗಿ ಇತ್ತೀಚಿನ ವಾಟ್ಸಾಪ್‌ ಬೀಟಾದಲ್ಲಿ ಬರುತ್ತಿದೆ ಎಂದು WABetaInfo ವರದಿ ಮಾಡಿದೆ.

ಹೊಸ ಕಾಲ್ ಲಿಂಕ್ ಆಯ್ಕೆಯು ಕಾಲ್‌ ಟ್ಯಾಬ್‌ನಲ್ಲಿ ಲಭ್ಯವಿದೆ. ಆದ್ದರಿಂದ ನಿಮ್ಮ ವಾಟ್ಸಾಪ್‌ ಖಾತೆಗೆ ಈ ಹೊಸ ಫೀಚರ್ ಸಕ್ರಿಯಗೊಳಿಸಲಾಗಿದೆಯೇ ಎಂದು ಕಂಡುಹಿಡಿಯಲು ನೀವು ಅಪ್ಲಿಕೇಶನ್‌ನ ಈ ವಿಭಾಗವನ್ನು ಮೊದಲ ತೆರೆಯಬೇಕು. ಈ ಫೀಚರ್‌ನ್ನು ಬಳಸಲು ಬಯಸಿದರೆ, ನೀವು ವಾಯ್ಸ್ ಮತ್ತು ವೀಡಿಯೊ ನಡುವೆ ಕರೆ ಪ್ರಕಾರವನ್ನು ಆಯ್ಕೆ ಮಾಡಬಹುದು. ಇದಕ್ಕೆ ಹೆಚ್ಚುವರಿಯಾಗಿ ಬಳಕೆದಾರರು ಲಿಂಕ್ ಕಾಪಿ ಮಾಡಿಕೊಂಡು ಅದನ್ನು ನೀವು ವಾಟ್ಸಾಪ್ ಚಾಟ್‌ನಲ್ಲಿ ಷೇರ್ ಮಾಡಬಹುದು. ಆ ಮೂಲಕ ಕಾಲ್‌ಗೆ ಜಾಯಿನ್ ಆಗಲು ಇನ್ವೈಟ್ ಮಾಡಬಹುದು.

ಇದನ್ನೂ ಓದಿ: WhatsApp New Feature: ನೀವು ಈಗ ವಾಟ್ಸಾಪ್‌ ಚಾಟ್‌ನಲ್ಲಿ100 ಮೀಡಿಯಾ ಫೈಲ್ ಕಳುಹಿಸಬಹುದು!

ಪ್ರತಿ ಸಾರಿಯೂ ನೀವು ಕಾಲ್ ಲಿಂಕ್ ಕ್ರಿಯೇಟ್ ಮಾಡಿದಾಗಲೂ, ಯುಆರ್‌ಎಲ್ ವಿಶಿಷ್ಟವಾಗಿರುತ್ತದೆ. ಇದರಿಂದಾಗಿ, ಬೇರೆ ಯಾರೂ ನಿಮ್ಮ ಒಪ್ಪಿಗೆ ಇಲ್ಲದೇ ಕಾಲ್‌ನಲ್ಲಿ ಜಾಯಿನ್ ಆಗಲು ಸಾಧ್ಯವಾಗುವುದಿಲ್ಲ. ಈ ಫೀಚರ್‌ ಬಳಸಿಕೊಂಡು ವಾಟ್ಸಾಪ್‌ ಕಾಲ್‌ಗೆ ಜನರನ್ನು ಇನ್ವೈಟ್ ಮಾಡುವುದು ಇನ್ನೂ ಹೆಚ್ಚು ಸುಲಭವಾಗಲಿದೆ. ಆದರೆ, ನೀವು ಯಾರನ್ನು ಇನ್ವೈಟ್ ಮಾಡುತ್ತೀರೋ ಅವರ ನಂಬರ್ ನಿಮ್ಮ ಕಾಲ್‌ ಲಿಸ್ಟ್‌ನಲ್ಲಿರಬೇಕಾಗುತ್ತದೆ.

Exit mobile version