ಹೊಸದಿಲ್ಲಿ: ಟೆಲಿಗ್ರಾಂ (Telegram), ಪೇಟಿಎಂ (PayTM) ಹಾಗೂ ಫೋನ್‌ಪೆ (PhonePe) ಕಂಪನಿಗಳಿಗೆ ಕಂಟಕ ಎದುರಾಗಿದೆ. ಈ ಮೆಸೇಜಿಂಗ್ ಹಾಗೂ ಡಿಜಿಟಲ್ ಪೇಮೆಂಟ್ ಕಂಪನಿಗಳ ವಿರುದ್ಧ ʼಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಿಂಬಿಸುವ (Child Abuse – CSAM) ಪ್ರಸರಿಸಲು ಸಹಾಯ ಮಾಡುತ್ತಿರುವದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಮಕ್ಕಳ ಹಕ್ಕುಗಳ (child rights) ಹೋರಾಟಗಾರ್ತಿ ಸುನೀತಾ ಕೃಷ್ಣನ್ ಅವರು ದೂರು ದಾಖಲಿಸಿದ್ದಾರೆ. ಈ ಆಪ್‌ಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು (Child Sexual Abuse Material) ಪ್ರಚೋದಿಸುವಂತಿರುವ ಕಂಟೆಂಟ್‌ಗಳನ್ನು ಯಾವುದೇ ಸ್ಕ್ರೀನಿಂಗ್ ಇಲ್ಲದೆ ಪ್ರಸರಿಸಲು ಅನುವು ಮಾಡಿಕೊಡುತ್ತಿವೆ ಎಂದು ದೂರಿದ್ದಾರೆ. ಇಂಥ ಕಂಟೆಂಟ್‌ಗಳನ್ನು ತಡೆಯುವಂತೆ ಈ ಆಪ್ ಕಂಪನಿಗಳಿಗೆ ಆಗ್ರಹಿಸಿದ್ದಾರೆ.
ವಯಸ್ಕರು ಮಾತ್ರ ನೋಡಬಹುದಾದಂತಹ ಫೋಟೋ, ವಿಡಿಯೋಗಳನ್ನು ಹರಿದಾಡಲು ಬಿಡುವುದು ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಿಳಿಸುವಂತೆ ಈ ಕಂಪನಿಗಳಿಗೆ ಸುನೀತಾ ಆಗ್ರಹಿಸಿದ್ದಾರೆ.
ಈ ಸಂಸ್ಥೆಗಳು ಈ ವಿಚಾರ ತಿಳಿದಿದ್ದೂ ಹಾಗೂ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿವೆ ಎಂದು ಆಪಾದಿಸಿರುವ ಸುನೀತಾ, CSAMನ ಮೂಲಗಳನ್ನು ಗುರುತಿಸುವುದು ಹಾಗೂ ಅವರ ಆದಾಯ ಮೂಲಗಳನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ. ತಾನು 31,000ಸದಸ್ಯರಿರುವ ಟೆಲಿಗ್ರಾಂ ಗ್ರೂಪ್‌ನ ಸದಸ್ಯೆಯಾಗಿದ್ದೇನೆ. ಅಲ್ಲಿ CSAM ಕಂಟೆಂಟ್ ಹರಿದಾಡುತ್ತದೆ. ಅಲ್ಲಿ CSAM ಕಂಟೆಂಟ್ ಅನ್ನು ಮಾರಾಟ ಮಾಡುವ ಮೂವರು ಏಜೆಂಟರು ಕಂಡುಬಂದಿದ್ದು, ಅವರೊಂದಿಗೆ ವ್ಯವಹಾರ ಕುದುರಿಸಿದ್ದಾಗಿ, ಇದಕ್ಕೆ ಫೋನ್‌ಪೆ ಅಥವಾ ಪೇಟಿಎಂ ಮೂಲಕ ಹಣ ಪಾವತಿ ಮಾಡಲು ತಿಳಿಸಿದ್ದಾಗಿ ಹೇಳಿದ್ದಾರೆ.
ಟೆಲಿಗ್ರಾಂ ಇಂತಹ ಕಂಟೆಂಟ್‌ಗಳು ಇರುವ ಬಗ್ಗೆ ಯಾವುದೇ ಎಚ್ಚರಿಕೆ ಸೂಚನೆ ನೀಡುತ್ತಿಲ್ಲ. ಇಂಥದ್ದನ್ನು ಹರಡುವುದು ಪೋಕ್ಸೋ ಕಾಯಿದೆಯಡಿ ಅಪರಾಧ ಎಂದಿರುವ ಸುನೀತಾ ದೂರಿಗೆ ಮೂರೂ ಕಂಪನಿಗಳೂ ಇದುವರೆಗೂ ಪ್ರತಿಕ್ರಿಯಿಸಿಲ್ಲ. ವರದಿಯ ಪ್ರಕಾರ ತೆಲಂಗಾಣದ ಡಿಜಿಪಿಗೆ ಸುನೀತಾ ದೂರು ನೀಡಿದ್ದು, ಕೇಂದ್ರ ಗೃಹ ಇಲಾಖೆಯನ್ನು ಸಂಪರ್ಕಿಸಲಿದ್ದಾರೆ.
ಇದನ್ನೂ ಓದಿ: Physical Abuse : 15 ವರ್ಷದ ಬಾಲಕಿಯನ್ನು ರೇಪ್ ಮಾಡಿ, ವಿಡಿಯೋ ಹರಿಬಿಟ್ಟ ಮೂವರು ಬಾಲಕರು