Site icon Vistara News

Facebook Page: ಪೊಲೀಸ್ ಠಾಣೆ ಫೇಸ್‌ಬುಕ್ ಪುಟ ಹ್ಯಾಕ್, ಅಶ್ಲೀಲ ಫೋಟೋ ಅಪ್ಲೋಡ್!

Chamoli police facebook page hacked by cyber criminals

ಚಮೋಲಿ: ಸೈಬರ್ ದಾಳಿಯು (Cyber attack) ಸಾಕಷ್ಟು ಆವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಇತ್ತೀಚೆಗೆ ಪೊಲೀಸರ ಸೋಷಿಯಲ್ ಮೀಡಿಯಾ ಪುಟಗಳು ಸೈಬರ್ ದಾಳಿಗೆ ಬಲಿಯಾಗುತ್ತಿವೆ. ಈ ಸಾಲಿಗೆ, ಚಮೋಲಿ ಪೊಲೀಸ್ ಠಾಣೆಯ(Chamoli Police Station) ಫೇಸ್‌ಬುಕ್ ಪುಟ ಸೇರ್ಪಡೆಯಾಗಿದೆ(Facebook Page Hacked). ಕಿಡಿಗೇಡಿಗಳು ಈ ಪೊಲೀಸ್ ಪುಟವನ್ನು ಹ್ಯಾಕ್ ಮಾಡಿ, ಅಶ್ಲೀಲ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ!(P*rn Images Uploaded) ಪೊಲೀಸ್ ಸೋಷಿಯಲ್ ಮೀಡಿಯಾ ಪುಟಗಳಿಗೆ ಈ ರೀತಿಯಾದರೆ ಉಳಿದವರ ಖಾತೆಗಳ ಗತಿ ಏನು ಎಂಬ ಆತಂಕ ಎದುರಾಗಿದೆ.

ಕಳೆದ ಹತ್ತು ದಿನಗಳಿಂದ ಪೇಜ್ ಹ್ಯಾಕ್ ಆಗಿದ್ದು, ಪೊಲೀಸರಿಗೆ ಇನ್ನೂ ತಮ್ಮ ಪುಟದ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾಗಿಲ್ಲ ಎಂಬ ವರದಿಗಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ತನಿಖೆಗೆ ಆದೇಶಿಸಲಾಗಿದೆ. ಫೇಸ್ ಬುಕ್ ಪೇಜ್ ಹಿಂಪಡೆಯಲು ಪೊಲೀಸರು ಕೂಡ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫೇಸ್‌ಬುಕ್ ಪುಟದಲ್ಲಿ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ವಿಚಾರಣೆ ಆರಂಭಿಸುವಂತೆ ಸೂಚಿಸಿದ್ದಾರೆ. ಉತ್ತರಾಖಂಡ ಪೊಲೀಸರ ಸೈಬರ್ ತಂಡವು ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಹ್ಯಾಕರ್‌ಗಳಿಂದ ಪುಟವನ್ನು ವಾಪಸ್ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಇಂತಹ ಸೈಬರ್ ಅಪರಾಧಗಳ ಹಲವು ನಿದರ್ಶನಗಳು ಬೆಳಕಿಗೆ ಬಂದಿವೆ. ಅಕ್ಟೋಬರ್‌ನಲ್ಲಿ ಉತ್ತರಾಖಂಡದ ಫೇಸ್‌ಬುಕ್ ಪೇಜ್ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಹ್ಯಾಕ್ ಆಗಿತ್ತು ಮತ್ತು ಅಸಭ್ಯ ಚಿತ್ರಗಳನ್ನು ಅಪ್ ಲೋಡ್ ಮಾಡಲಾಗಿತ್ತು.

ಉತ್ತರಾಖಂಡ ಪೊಲೀಸರು ಸೈಬರ್ ಕ್ರೈಮ್ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಅನೇಕ ಅಭಿಯಾನಗಳನ್ನು ಕೈಗೊಳ್ಳುತ್ತಿದ್ದಾರೆ. ಆಶ್ಚರ್ಯ ಎಂದರೇ ಅದೇ ಪೊಲೀಸರು ಸೈಬರ್ ಕ್ರೈಮ್‌ಗೆ ಬಲಿಪಶುಗಳಾಗಿದ್ದಾರೆ. ಈ ಘಟನೆಯು ಸೈಬರ್ ಭದ್ರತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ಪೊಲೀಸರು ಸೈಬರ್ ಅಪರಾಧಿಗಳಿಂದ ಮಾತ್ರ ಸುರಕ್ಷಿತವಾಗಿಲ್ಲ, ಸೈಬರ್ ವಂಚನೆಗಳಿಂದ ನಾಗರಿಕರನ್ನು ಹೇಗೆ ರಕ್ಷಿಸಲು ಸಾಧ್ಯವಾಗುತ್ತದೆ? ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಸೈಬರ್ ಅಪರಾಧಿಗಳಿಗಿಂತ ಪೊಲೀಸರು ಹೆಚ್ಚು ಜಾಗೃತರಾಗಿರಬೇಕಾದ ಅಗತ್ಯವಿದೆ.

ಈ ಸುದ್ದಿಯನ್ನೂ ಓದಿ: Cyber Crime: 700 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿದ ಹೈದ್ರಾಬಾದ್ ಪೊಲೀಸ್, ಉಗ್ರರಿಗೆ ದುಡ್ಡು ರವಾನೆ!

Exit mobile version