Site icon Vistara News

Crash Testing : ಕಾರುಗಳ ಸುರಕ್ಷತಾ ಟೆಸ್ಟ್​ನ ಮೇಲಿನ ಸುಂಕ ಇಳಿಕೆ, ಭಾರತವನ್ನು ಕ್ರ್ಯಾಶ್​ ಟೆಸ್ಟಿಂಗ್​ ತಾಣವನ್ನಾಗಿಸುವ ಗುರಿ

Crash testing

#image_title

ನವ ದೆಹಲಿ: ಕಂಪನಿಯೊಂದು ಹೊಸ ಕಾರನ್ನು ತಯಾರಿಸಿದ ಬಳಿಕ ಪ್ರಯಾಣಿಕರ ಸುರಕ್ಷತೆಯ ಪ್ರಮಾಣವನ್ನು ಕ್ರ್ಯಾಶ್​ ಟೆಸ್ಟಿಂಗ್​ (Crash Testing) ಮೂಲಕ ಪರೀಕ್ಷಿಸಲಾಗುತ್ತದೆ. ಇದುವರೆಗೆ ಭಾರತದಲ್ಲಿ ಈ ಸೌಲಭ್ಯ ಇರಲಿಲ್ಲ. ವಿದೇಶಗಳೀಗೆ ಹೋಗಿ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಕಾರುಗಳನ್ನು ಪರೀಕ್ಷೆ ಮಾಡಿಕೊಂಡು ಬರಬೇಕಿತ್ತು. ಆದರೆ, ಕೇಂದ್ರ ಸರಕಾರದ 2023-24 ಬಜೆಟ್​ನಲ್ಲಿ ಭಾರತದಲ್ಲೂ ಕ್ರ್ಯಾಶ್​ ಟೆಸ್ಟಿಂಗ್ ನಡೆಸುವ ನಿಟ್ಟಿನಲ್ಲಿ ನೂತನ ಯೋಜನೆ ಪ್ರಕಟಿಸಲಾಗಿದೆ. ಅಂದರೆ ಇನ್ನು ಮುಂದೆ ಭಾರತಕ್ಕೆ ಯಾವುದಾದರೂ ಕಂಪನಿಗಳು ಕ್ರ್ಯಾಶ್​ ಟೆಸ್ಟಿಂಗ್​ಗೆ ಕಾರುಗಳನ್ನು ತರುವುದಾದರೆ ಯಾವುದೇ ಸುಂಕ ಪಾವತಿಸಬೇಕಾಗಿಲ್ಲ. ಈ ಹಿಂದೆ ಪ್ರಮಾಣ ಶೇಕಡಾ 252 ಇತ್ತು. ಅದನ್ನೀಗ ಶೂನ್ಯಕ್ಕೆ ಇಳಿಸುವ ಮೂಲಕ ಭಾರತದ ಕಡೆಗೆ ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿಕೊಂಡಿದೆ.

ಕೇಂದ್ರ ಸರಕಾರ ಬೃಹತ್​ ಕೈಗಾರಿಕಾ ಸಚಿವರಾದ ಮಹೇಂದ್ರ ನಾಥ್​ ಪಾಂಡೆ ಅವರು ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಯಾವುದಾದರೂ ಒಂದು ಕಂಪನಿ ಜಾಗತಿಕ ಮಾನದಂಡಕ್ಕೆ ಪೂರಕ ಪರೀಕ್ಷೆ ಮಾಡಲು ತನ್ನ ಕಾರುಗಳನ್ನು ಕಳುಹಿಸುವುದಾದರೆ ಸುಂಕವನ್ನೇ ಪಾವತಿಸಬೇಕಾಗಿರಲಿಲ್ಲ. ಇದರಿಂದ ಭಾರತದ ಉದ್ಯಮಗಳಿಗೆ ವಿದೇಶಗಳ ಜತೆ ಸ್ಪರ್ಧೆ ಮಾಡುವುದಕ್ಕೆ ಅನನುಕೂಲವಾಗುತ್ತಿತ್ತು. ಇದೀಗ ಅಡಚಣೆ ನಿವಾರಣೆಯಾಗಿದೆ ಅವರು ಹೇಳಿದ್ದಾರೆ.

ಜಾಗತಿಕವಾಗಿ ಈಗ ಐದು ದೇಶಗಳಲ್ಲಿ ಮಾತ್ರ ಕ್ರ್ಯಾಶ್​ ಟೆಸ್ಟಿಂಗ್ ನಡೆಸಲಾಗುತ್ತದೆ. ಬ್ರಿಟನ್​ನಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು, ಜರ್ಮನಿ, ಜಪಾನ್​, ಚೀನಾ ಹಾಗೂ ಥೈವಾನ್​ ಉಳಿದ ದೇಶಗಳಾಗಿವೆ. ಬಜೆಟ್​ ಪ್ರಕಾರ ಸುಂಕ ನಿವಾರಣೆಯಾದರೆ ಭಾರತ ಆರನೇ ಟೆಸ್ಟಿಂಗ್ ಕೇಂದ್ರವಾಗಿ ರೂಪುಗೊಳ್ಳಲಿದೆ.

ಇದನ್ನೂ ಓದಿ : Toyota Urban Cruiser Hyryder ಹೈಬ್ರಿಡ್​ ಕಾರಿನ ಬೆಲೆ 50 ಸಾವಿರ ರೂಪಾಯಿ ಏರಿಕೆ ಮಾಡಿದ ಟೊಯೋಟಾ

ಕೊರಿಯಾ, ಇರಾನ್​ ಹಾಗೂ ಮಲೇಷ್ಯಾದ ಕೆಲವು ಕಾರು ಕಂಪನಿಗಳು ಭಾರತದಲ್ಲಿ ಟೆಸ್ಟಿಂಗ್ ನಡೆಸಲು ಉದ್ದೇಶಿಸಿವೆ. ಹೊಸ ತೆರಿಗೆ ನೀತಿಯಿಂದ ಭಾರತಕ್ಕೆ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Exit mobile version