Site icon Vistara News

Deepfake Video: ಡೀಪ್‌ ಫೇಕ್‌ ವಿಡಿಯೊ ಹಾವಳಿ; ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಹೇಗೆ?

Deepfake Video

ಸಾಮಾಜಿಕ ಮಾಧ್ಯಮಗಳಲ್ಲಿ (social media) ಇತ್ತೀಚೆಗೆ ಡೀಪ್ ಫೇಕ್ ವಿಡಿಯೋಗಳ (Deepfake Video) ಹಾವಳಿ ಹೆಚ್ಚಾಗಿದೆ. ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಚುನಾವಣೆ (election) ನಿಗದಿಯಾಗಿದೆ. ಜನರಲ್ಲಿ ರಾಜಕೀಯದ ಕುರಿತು ಉತ್ಸಾಹ ಒಂದೆಡೆ ಹೆಚ್ಚಳವಾಗಿದ್ದರೆ, ಇನ್ನೊಂದೆಡೆ ಡೀಪ್ ಫೇಕ್ ವಿಡಿಯೋಗಳ ಮೂಲಕ ಕೆಲವರು ಜನರ ಮೇಲೆ ಪ್ರಭಾವ ಬೀರಲು ಕುತಂತ್ರ ರೂಪಿಸಲಾಗುತ್ತಿದೆ.

ರಾಜಕೀಯ ನಾಯಕರು (Political leaders), ಸೆಲೆಬ್ರಿಟಿಗಳು (celebrities) ಡೀಪ್ ಫೇಕ್ ಗೆ ಗುರಿಯಾಗುತ್ತಲೇ ಇದ್ದಾರೆ. ಅದರಲ್ಲೂ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜಕೀಯ ನಾಯಕರ ಕುರಿತಾಗಿ ಸಾಕಷ್ಟು ತಪ್ಪು ಮಾಹಿತಿಯು ಚಾಲ್ತಿಗೆ ಬರುತ್ತದೆ. ಇದರ ಪರಿಣಾಮ ಎಷ್ಟಿರುತ್ತದೆ ಎಂದರೆ ಇದು ಕೆಲವರಿಗೆ ಆಘಾತವನ್ನು ಉಂಟು ಮಾಡಬಹುದು.

2024ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ನಾಯಕರ ಕುರಿತಾದ ಡೀಪ್‌ಫೇಕ್ ವಿಡಿಯೋಗಳು ಸ್ಫೋಟಗೊಂಡಿತ್ತು. ಅದು ಪ್ರಧಾನಿ ಮೋದಿ ಅವರು ಟ್ರೆಂಡಿ ಜಾಕೆಟ್‌ನೊಂದಿಗೆ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದರೆ, ಮಮತಾ ಬ್ಯಾನರ್ಜಿ ಅವರು ಸೀರೆಯ ವಿಡಿಯೋದಲ್ಲಿ ತಮ್ಮ ಭಾಷಣದ ಭಾಗಗಳನ್ನು ಹಿನ್ನೆಲೆಯಾಗಿ ಬಳಸುತ್ತಾರೆ ಮತ್ತು ಡೀಪ್‌ಫೇಕ್ ವಿಡಿಯೋದಲ್ಲಿ ನೃತ್ಯ ಮಾಡುತ್ತಾರೆ. ಗೃಹ ಸಚಿವ ಅಮಿತ್ ಶಾ ಅವರ ವಿಡಿಯೋ ಈಗಲೂ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯದಿಂದ ರಚಿಸಲಾಗುವ ಈ ವಿಡಿಯೋಗಳನ್ನು ನೋಡಿ ಎಲ್ಲರೂ ಸುಲಭವಾಗಿ ಮೋಸ ಹೋಗುತ್ತಾರೆ. ಇಂತಹ ನಕಲಿ ಸುದ್ದಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು, ಜನರಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ತಡೆಯುವುದು ಬಹುಮುಖ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಡೀಪ್ ಫೇಕ್ ವಿಡಿಯೋಗಳನ್ನು ಗುರುತಿಸಲು ಏಳು ವಿಧಾನಗಳಿವೆ. ಅವುಗಳ ಮಾಹಿತಿ ಇಲ್ಲಿದೆ.


ಬಾಯಿ ಅಥವಾ ಗಲ್ಲದ ಸುತ್ತಲಿನ ಪ್ರದೇಶವನ್ನು ಗಮನಿಸಿ

ಡೀಪ್‌ಫೇಕ್‌ಗಳನ್ನು ಗುರುತಿಸಲು ಮೊದಲು ಬಾಯಿ ಅಥವಾ ಗಲ್ಲದ ಸುತ್ತಲಿನ ಪ್ರದೇಶವನ್ನು ವಿಶ್ಲೇಷಿಸಿ. ಡೀಪ್‌ಫೇಕ್ ಮಾಡುವವರು ಮುಖದ ರೆಂಡರಿಂಗ್ ಅನ್ನು ನಿಖರವಾಗಿ ಕರಗತ ಮಾಡಿಕೊಂಡಿರುವುದಿಲ್ಲ. ಪರಿಣಾಮವಾಗಿ, ಮುಖಗಳು ಸಾಮಾನ್ಯವಾಗಿ ಕಡಿಮೆ ಸುಕ್ಕುಗಳು, ಕಡಿಮೆ ವಿವರಗಳನ್ನು ಹೊಂದಿರುತ್ತವೆ ಮತ್ತು ಕೆಲವೊಮ್ಮೆ ಇದು ಅಸ್ಪಷ್ಟ ಅಥವಾ ಮಸುಕಾದ ನೋಟವನ್ನು ನೀಡುತ್ತದೆ. ಗುರುತಿಸಲು ಇನ್ನೂ ಕಷ್ಟವಾಗಿದ್ದರೆ ವ್ಯಕ್ತಿಯ ಧ್ವನಿ ಮತ್ತು ಬಾಯಿಯ ಚಲನೆಗಳನ್ನು ಗಮನಿಸಿ. ಇದರಲ್ಲಿ ಡೀಪ್‌ಫೇಕ್ ವಿಡಿಯೋಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

ದೇಹದ ಚಲನೆ ಗಮನಿಸಿ

ಎಷ್ಟೇ ಕೌಶಲ ಪೂರ್ಣವಾಗಿ ಡೀಪ್ ಫೇಕ್ ವಿಡಿಯೋಗಳನ್ನು ಮಾಡಿದರೂ ಸಾಮಾನ್ಯವಾಗಿ ಅದು ಕಳಪೆಯಾಗಿರುತ್ತದೆ. ದೇಹದ ಚಲನೆಯಲ್ಲಿ ವ್ಯತ್ಯಾಸಗಳಿರುತ್ತವೆ. ಇದರಿಂದ ವಿಡಿಯೋ ಡೀಫೇಕ್ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಅನಗತ್ಯ ಅಂಶಗಳು

ಡೀಪ್‌ಫೇಕ್ ವಿಡಿಯೋದ ಗಮನಾರ್ಹ ಲಕ್ಷಣವೆಂದರೆ ವಿಡಿಯೋ ಕ್ಲಿಪ್ ನಲ್ಲಿ ಅನಗತ್ಯ ಅಂಶಗಳು ಕಂಡು ಬರುತ್ತದೆ. ಉದಾಹರಣೆಗೆ ಅಮೆರಿಕದ ಆಂತರಿಕ ಆಡಳಿತದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರ ನಕಲಿ ವಿಡಿಯೋವೊಂದರಲ್ಲಿ ಅವರು ರಷ್ಯಾದ ಬೆಲ್ಗೊರೊಡ್‌ನಲ್ಲಿ ಉಕ್ರೇನಿಯನ್ ಮಿಲಿಟರಿ ದಾಳಿಯನ್ನು ಸಮರ್ಥಿಸುತ್ತಿರುವುದು ಕಂಡು ಬಂದಿತ್ತು. ಇಲ್ಲಿದ್ದ ಅನಗತ್ಯ ಅಂಶಗಳು ಅದು ನಕಲಿ ಎಂದು ಗುರುತಿಸುವಂತೆ ಮಾಡಿತ್ತು.

ಮಾತಿನ ವಿಲಕ್ಷಣ ಅಂಶ

ಉದಾಹರಣೆಗೆ ಬಾಲಿವುಡ್‌ನ ಖ್ಯಾತ ಗಾಯಕರು ಹಾಡುವ ಆಧುನಿಕ ಹಾಡುಗಳು ಸಾಮಾನ್ಯವಾಗಿ ಮಾತಿನ ವಿಲಕ್ಷಣ ಅಂಶಗಳನ್ನು ಪ್ರತಿಬಿಂಬಿಸುತ್ತವೆ.

ಮುಖ ಮತ್ತು ದೇಹದ ನಡುವಿನ ಸಂಪರ್ಕ

ಅಸಮಂಜಸವಾದ ಮುಖ ಮತ್ತು ದೇಹದ ನಡುವಿನ ಸಂಪರ್ಕ, ಹೊಂದಿಕೆಯಾಗದ ಚರ್ಮದ ಬಣ್ಣಗಳು ಡೀಪ್ ಫೇಕ್ ವಿಡಿಯೋವನ್ನು ಸ್ಪಷ್ಟಪಡಿಸತ್ತದೆ. ಉದಾಹರಣೆಗೆ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್‌ಕಿ ಅವರ ವಿಡಿಯೋದಲ್ಲಿ ಅವರು ರಷ್ಯಾದ ಸೈನ್ಯಕ್ಕೆ ಶರಣಾಗುವಂತೆ ನಾಗರಿಕರನ್ನು ಕೇಳುತ್ತಿದ್ದರು. ಅದು ನಕಲಿ ಎಂದು ಬಳಿಕ ಕಂಡುಬಂದಿತ್ತು. ಇದರಲ್ಲಿ ಸೂಕ್ಷ ವಿಷಯ ಏನೆಂದರೆ ದೇಹಕ್ಕೆ ಹೋಲಿಸಿದರೆ ತಲೆಯು ಅಸಮಾನವಾಗಿ ದೊಡ್ಡದಾಗಿತ್ತು!

ಇದನ್ನೂ ಓದಿ: Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

ಹೆಚ್ಚುವರಿ ಅಂಗಗಳು

ಡೀಪ್ ಫೇಕ್ ವಿಡಿಯೋದಲ್ಲಿ ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಎಐ ರಚಿತವಾದ ವಿಡಿಯೋಗಳು ಮಾನವ ದೇಹವನ್ನು ನಿಖರವಾಗಿ ನಿರೂಪಿಸುವುದಿಲ್ಲ. ಇದು ಸಾಮಾನ್ಯವಾಗಿ ಹೆಚ್ಚುವರಿ ಬೆರಳು ಅಥವಾ ವಿಕೃತ ಅಂಗಗಳ ಉಪಸ್ಥಿತಿಗೆ ಕಾರಣವಾಗುತ್ತದೆ.

ವಿಕೃತ ಅಕ್ಷರಗಳು

ಎಐ ರಚಿಸಿದ ವಿಡಿಯೋಗಳು ಸಂಖ್ಯೆ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಉದಾಹರಣೆಗೆ ಡೊನಾಲ್ಡ್ ಟ್ರಂಪ್ ಅವರ ನಕಲಿ ವಿಡಿಯೋದಲ್ಲಿ ಸ್ಪಷ್ಟ ಎತ್ತರದ ಚಾರ್ಟ್‌ಗಿಂತ ಅಸಂಬದ್ಧ ಸಂಖ್ಯೆ ಮತ್ತು ಅಕ್ಷರಗಳನ್ನು ಪ್ರದರ್ಶಿಸಿತ್ತವೆ. ಹೀಗಾಗಿ, ಈ ವಿಡಿಯೋವನ್ನು ಡೀಪ್‌ಫೇಕ್ ಎಂದು ಗುರುತಿಸಲಾಯಿತು.

Exit mobile version