Deepfake Video: ಡೀಪ್‌ ಫೇಕ್‌ ವಿಡಿಯೊ ಹಾವಳಿ; ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಹೇಗೆ? - Vistara News

ತಂತ್ರಜ್ಞಾನ

Deepfake Video: ಡೀಪ್‌ ಫೇಕ್‌ ವಿಡಿಯೊ ಹಾವಳಿ; ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಡೀಪ್ ಫೇಕ್ ವಿಡಿಯೋಗಳ (Deepfake Video) ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ಗುರುತಿಸಲು ಅಸಾಧ್ಯವಾಗಿರುವ ಇದನ್ನು ನಮ್ಮ ಸೂಕ್ಷ್ಮ ದೃಷ್ಟಿಕೋನದಿಂದ ಸುಲಭವಾಗಿ ಪತ್ತೆ ಮಾಡಬಹುದು. ಇದಕ್ಕಾಗಿ ಏಳು ವಿಧಾನಗಳಿವೆ. ಅವು ಯಾವುದು, ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

Deepfake Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಮಾಜಿಕ ಮಾಧ್ಯಮಗಳಲ್ಲಿ (social media) ಇತ್ತೀಚೆಗೆ ಡೀಪ್ ಫೇಕ್ ವಿಡಿಯೋಗಳ (Deepfake Video) ಹಾವಳಿ ಹೆಚ್ಚಾಗಿದೆ. ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಚುನಾವಣೆ (election) ನಿಗದಿಯಾಗಿದೆ. ಜನರಲ್ಲಿ ರಾಜಕೀಯದ ಕುರಿತು ಉತ್ಸಾಹ ಒಂದೆಡೆ ಹೆಚ್ಚಳವಾಗಿದ್ದರೆ, ಇನ್ನೊಂದೆಡೆ ಡೀಪ್ ಫೇಕ್ ವಿಡಿಯೋಗಳ ಮೂಲಕ ಕೆಲವರು ಜನರ ಮೇಲೆ ಪ್ರಭಾವ ಬೀರಲು ಕುತಂತ್ರ ರೂಪಿಸಲಾಗುತ್ತಿದೆ.

ರಾಜಕೀಯ ನಾಯಕರು (Political leaders), ಸೆಲೆಬ್ರಿಟಿಗಳು (celebrities) ಡೀಪ್ ಫೇಕ್ ಗೆ ಗುರಿಯಾಗುತ್ತಲೇ ಇದ್ದಾರೆ. ಅದರಲ್ಲೂ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜಕೀಯ ನಾಯಕರ ಕುರಿತಾಗಿ ಸಾಕಷ್ಟು ತಪ್ಪು ಮಾಹಿತಿಯು ಚಾಲ್ತಿಗೆ ಬರುತ್ತದೆ. ಇದರ ಪರಿಣಾಮ ಎಷ್ಟಿರುತ್ತದೆ ಎಂದರೆ ಇದು ಕೆಲವರಿಗೆ ಆಘಾತವನ್ನು ಉಂಟು ಮಾಡಬಹುದು.

2024ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ನಾಯಕರ ಕುರಿತಾದ ಡೀಪ್‌ಫೇಕ್ ವಿಡಿಯೋಗಳು ಸ್ಫೋಟಗೊಂಡಿತ್ತು. ಅದು ಪ್ರಧಾನಿ ಮೋದಿ ಅವರು ಟ್ರೆಂಡಿ ಜಾಕೆಟ್‌ನೊಂದಿಗೆ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದರೆ, ಮಮತಾ ಬ್ಯಾನರ್ಜಿ ಅವರು ಸೀರೆಯ ವಿಡಿಯೋದಲ್ಲಿ ತಮ್ಮ ಭಾಷಣದ ಭಾಗಗಳನ್ನು ಹಿನ್ನೆಲೆಯಾಗಿ ಬಳಸುತ್ತಾರೆ ಮತ್ತು ಡೀಪ್‌ಫೇಕ್ ವಿಡಿಯೋದಲ್ಲಿ ನೃತ್ಯ ಮಾಡುತ್ತಾರೆ. ಗೃಹ ಸಚಿವ ಅಮಿತ್ ಶಾ ಅವರ ವಿಡಿಯೋ ಈಗಲೂ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹಾಯದಿಂದ ರಚಿಸಲಾಗುವ ಈ ವಿಡಿಯೋಗಳನ್ನು ನೋಡಿ ಎಲ್ಲರೂ ಸುಲಭವಾಗಿ ಮೋಸ ಹೋಗುತ್ತಾರೆ. ಇಂತಹ ನಕಲಿ ಸುದ್ದಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು, ಜನರಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ತಡೆಯುವುದು ಬಹುಮುಖ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಡೀಪ್ ಫೇಕ್ ವಿಡಿಯೋಗಳನ್ನು ಗುರುತಿಸಲು ಏಳು ವಿಧಾನಗಳಿವೆ. ಅವುಗಳ ಮಾಹಿತಿ ಇಲ್ಲಿದೆ.


ಬಾಯಿ ಅಥವಾ ಗಲ್ಲದ ಸುತ್ತಲಿನ ಪ್ರದೇಶವನ್ನು ಗಮನಿಸಿ

ಡೀಪ್‌ಫೇಕ್‌ಗಳನ್ನು ಗುರುತಿಸಲು ಮೊದಲು ಬಾಯಿ ಅಥವಾ ಗಲ್ಲದ ಸುತ್ತಲಿನ ಪ್ರದೇಶವನ್ನು ವಿಶ್ಲೇಷಿಸಿ. ಡೀಪ್‌ಫೇಕ್ ಮಾಡುವವರು ಮುಖದ ರೆಂಡರಿಂಗ್ ಅನ್ನು ನಿಖರವಾಗಿ ಕರಗತ ಮಾಡಿಕೊಂಡಿರುವುದಿಲ್ಲ. ಪರಿಣಾಮವಾಗಿ, ಮುಖಗಳು ಸಾಮಾನ್ಯವಾಗಿ ಕಡಿಮೆ ಸುಕ್ಕುಗಳು, ಕಡಿಮೆ ವಿವರಗಳನ್ನು ಹೊಂದಿರುತ್ತವೆ ಮತ್ತು ಕೆಲವೊಮ್ಮೆ ಇದು ಅಸ್ಪಷ್ಟ ಅಥವಾ ಮಸುಕಾದ ನೋಟವನ್ನು ನೀಡುತ್ತದೆ. ಗುರುತಿಸಲು ಇನ್ನೂ ಕಷ್ಟವಾಗಿದ್ದರೆ ವ್ಯಕ್ತಿಯ ಧ್ವನಿ ಮತ್ತು ಬಾಯಿಯ ಚಲನೆಗಳನ್ನು ಗಮನಿಸಿ. ಇದರಲ್ಲಿ ಡೀಪ್‌ಫೇಕ್ ವಿಡಿಯೋಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

ದೇಹದ ಚಲನೆ ಗಮನಿಸಿ

ಎಷ್ಟೇ ಕೌಶಲ ಪೂರ್ಣವಾಗಿ ಡೀಪ್ ಫೇಕ್ ವಿಡಿಯೋಗಳನ್ನು ಮಾಡಿದರೂ ಸಾಮಾನ್ಯವಾಗಿ ಅದು ಕಳಪೆಯಾಗಿರುತ್ತದೆ. ದೇಹದ ಚಲನೆಯಲ್ಲಿ ವ್ಯತ್ಯಾಸಗಳಿರುತ್ತವೆ. ಇದರಿಂದ ವಿಡಿಯೋ ಡೀಫೇಕ್ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಅನಗತ್ಯ ಅಂಶಗಳು

ಡೀಪ್‌ಫೇಕ್ ವಿಡಿಯೋದ ಗಮನಾರ್ಹ ಲಕ್ಷಣವೆಂದರೆ ವಿಡಿಯೋ ಕ್ಲಿಪ್ ನಲ್ಲಿ ಅನಗತ್ಯ ಅಂಶಗಳು ಕಂಡು ಬರುತ್ತದೆ. ಉದಾಹರಣೆಗೆ ಅಮೆರಿಕದ ಆಂತರಿಕ ಆಡಳಿತದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರ ನಕಲಿ ವಿಡಿಯೋವೊಂದರಲ್ಲಿ ಅವರು ರಷ್ಯಾದ ಬೆಲ್ಗೊರೊಡ್‌ನಲ್ಲಿ ಉಕ್ರೇನಿಯನ್ ಮಿಲಿಟರಿ ದಾಳಿಯನ್ನು ಸಮರ್ಥಿಸುತ್ತಿರುವುದು ಕಂಡು ಬಂದಿತ್ತು. ಇಲ್ಲಿದ್ದ ಅನಗತ್ಯ ಅಂಶಗಳು ಅದು ನಕಲಿ ಎಂದು ಗುರುತಿಸುವಂತೆ ಮಾಡಿತ್ತು.

ಮಾತಿನ ವಿಲಕ್ಷಣ ಅಂಶ

ಉದಾಹರಣೆಗೆ ಬಾಲಿವುಡ್‌ನ ಖ್ಯಾತ ಗಾಯಕರು ಹಾಡುವ ಆಧುನಿಕ ಹಾಡುಗಳು ಸಾಮಾನ್ಯವಾಗಿ ಮಾತಿನ ವಿಲಕ್ಷಣ ಅಂಶಗಳನ್ನು ಪ್ರತಿಬಿಂಬಿಸುತ್ತವೆ.

ಮುಖ ಮತ್ತು ದೇಹದ ನಡುವಿನ ಸಂಪರ್ಕ

ಅಸಮಂಜಸವಾದ ಮುಖ ಮತ್ತು ದೇಹದ ನಡುವಿನ ಸಂಪರ್ಕ, ಹೊಂದಿಕೆಯಾಗದ ಚರ್ಮದ ಬಣ್ಣಗಳು ಡೀಪ್ ಫೇಕ್ ವಿಡಿಯೋವನ್ನು ಸ್ಪಷ್ಟಪಡಿಸತ್ತದೆ. ಉದಾಹರಣೆಗೆ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್‌ಕಿ ಅವರ ವಿಡಿಯೋದಲ್ಲಿ ಅವರು ರಷ್ಯಾದ ಸೈನ್ಯಕ್ಕೆ ಶರಣಾಗುವಂತೆ ನಾಗರಿಕರನ್ನು ಕೇಳುತ್ತಿದ್ದರು. ಅದು ನಕಲಿ ಎಂದು ಬಳಿಕ ಕಂಡುಬಂದಿತ್ತು. ಇದರಲ್ಲಿ ಸೂಕ್ಷ ವಿಷಯ ಏನೆಂದರೆ ದೇಹಕ್ಕೆ ಹೋಲಿಸಿದರೆ ತಲೆಯು ಅಸಮಾನವಾಗಿ ದೊಡ್ಡದಾಗಿತ್ತು!

ಇದನ್ನೂ ಓದಿ: Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

ಹೆಚ್ಚುವರಿ ಅಂಗಗಳು

ಡೀಪ್ ಫೇಕ್ ವಿಡಿಯೋದಲ್ಲಿ ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಎಐ ರಚಿತವಾದ ವಿಡಿಯೋಗಳು ಮಾನವ ದೇಹವನ್ನು ನಿಖರವಾಗಿ ನಿರೂಪಿಸುವುದಿಲ್ಲ. ಇದು ಸಾಮಾನ್ಯವಾಗಿ ಹೆಚ್ಚುವರಿ ಬೆರಳು ಅಥವಾ ವಿಕೃತ ಅಂಗಗಳ ಉಪಸ್ಥಿತಿಗೆ ಕಾರಣವಾಗುತ್ತದೆ.

ವಿಕೃತ ಅಕ್ಷರಗಳು

ಎಐ ರಚಿಸಿದ ವಿಡಿಯೋಗಳು ಸಂಖ್ಯೆ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಉದಾಹರಣೆಗೆ ಡೊನಾಲ್ಡ್ ಟ್ರಂಪ್ ಅವರ ನಕಲಿ ವಿಡಿಯೋದಲ್ಲಿ ಸ್ಪಷ್ಟ ಎತ್ತರದ ಚಾರ್ಟ್‌ಗಿಂತ ಅಸಂಬದ್ಧ ಸಂಖ್ಯೆ ಮತ್ತು ಅಕ್ಷರಗಳನ್ನು ಪ್ರದರ್ಶಿಸಿತ್ತವೆ. ಹೀಗಾಗಿ, ಈ ವಿಡಿಯೋವನ್ನು ಡೀಪ್‌ಫೇಕ್ ಎಂದು ಗುರುತಿಸಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಆಟೋಮೊಬೈಲ್

BSA motorcycles : ‌ಬೆಂಗಳೂರಿಗೆ ಲಗ್ಗೆ ಇಟ್ಟ ಬಿಎಸ್ಎ ಗೋಲ್ಡ್‌ ಸ್ಟಾರ್

ಸಫೀನ್ ಮೋಟರ್ಸ್ (Safina Motors) ಕರ್ನಾಟಕದಲ್ಲಿ ಮೊಟ್ಡಮೊದಲನೆ ಬಾರಿಗೆ ಜಾವ ಯೆಜಡಿ ಬೈಕ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದರು‌. ನೂತನ ಬಿ.ಎಸ್.ಎ ಮೋಟರ್ ಸೈಕಲ್ ಅನ್ನು ಕೂಡ ಗ್ರಾಹಕರು ಸಫೀನ್ ಮೋಟರ್ಸ್ ನಿಂದ ಪಡೆಯಬಹುದಾಗಿದೆ.

VISTARANEWS.COM


on

By

BSA motorcycles
Koo

ಬೆಂಗಳೂರು: ಕ್ಲಾಸಿಕ್ ಲೆಜೆಂಡ್‌ ಸಂಸ್ಥೆಯು ಜಾವ 42 FJ ಬೈಕ್‌ ಅನ್ನು ಭಾರತಾದ್ಯಂತ ಬಿಡುಗಡೆ ಮಾಡಿದೆ. ಬೆಂಗಳೂರಿನ ಇನ್ಪಾಂಟರಿ ರಸ್ತೆಯಲ್ಲಿರುವ Safina Motors ಸಂಸ್ಥೆಗೆ ಕ್ಲಾಸಿಕ್ ಲೆಜೆಂಡ್ಸ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅನುಪಮ್ ತೆರೆಜ ಅಕ್ಟೋಬರ್ 10 ರಂದು ಬಿಡುಗಡೆ ಮಾಡಿದ್ದಾರೆ. ನೂತನ ಬಿ.ಎಸ್.ಎ ಮೋಟರ್ ಸೈಕಲ್ ಅನ್ನು ಕೂಡ ಗ್ರಾಹಕರು ಸಫೀನ್ ಮೋಟರ್ಸ್ ನಿಂದ (BSA motorcycles) ಪಡೆಯಬಹುದಾಗಿದೆ.

Classic legends ಮಾರುಕಟ್ಟೆಗೆ 2018ರಲ್ಲಿ ಲಗ್ಗೆ ಇಟ್ಟಿತ್ತು. ಆನಂದ ಮಹೀಂದ್ರಾ , ಅನುಪಮ್ ತರೇಜ ಹಾಗು ಬೊಮನ್ ಇರಾನಿ‌ ಇದರ ಸಾರಥಿಗಳಾದರು. ಕರ್ನಾಟಕದ‌ ಮೈಸೂರಿನ ಹೆಮ್ಮೆಯ ಐಡಿಯಲ್ ಜಾವ ಸಂಸ್ಥೆಯು 1996 ರಲ್ಲಿ‌ ಸ್ಥಗಿತಗೊಂಡಿತು. ಮತ್ತೆ 2018 ರಿಂದ ಜಾವ ಬಳಗದ ಬೈಕ್‌ಗಳನ್ನು ನೂತನ ಇಂಜಿನ್, ಪ್ಲಾಟ್ಪಾರ್ಮ್ ಮೂಲಕ ಜಾವ ಕ್ಲಾಸಿಕ್‌, ಜಾವ 42, ಜಾವ ಪೆರಾಕ್ (jawa perak) ಬೈಕ್‌ಗಳನ್ನು ಬಿಡುಗಡೆ ಮಾಡಿತು.

2022 ಯೆಜ್ಡಿ ಬ್ರಾಂಡ್ (Yezdi Brand) ಅನ್ನು ಮತ್ತೆ ಮರು ಬಿಡುಗಡೆ ಮಾಡಿತು. ಈಗ ಜಾವ 42 FJ ಬಿಡುಗಡೆ ಮಾಡಿತು. Fj ಅಂದರೆ Frantisek Janecek(ಜಾವ ಸಂಸ್ಥೆಯ ಜೆಕ್ ರಾಷ್ಟ್ರದಲ್ಲಿ) 1929 ರಲ್ಲಿ ಸಂಸ್ಥಾಪಿಸಿದ್ದರು. ಅವರ ಗೌರವಾರ್ಥವಾಗಿ ಕ್ಲಾಸಿಕ್ ಲೆಜೆಂಡ್‌ ಸಂಸ್ಥೆಯು ಜಾವ 42 FJ ಬೈಕನ್ನು ಭಾರತಾದ್ಯಂತ ಬಿಡುಗಡೆ ಮಾಡಿದೆ. ಬೆಂಗಳೂರಿನ ಇನ್ಪಾಂಟರಿ ರಸ್ತೆಯಲ್ಲಿರುವ Safina Motors ಸಂಸ್ಥೆಗೆ ಕ್ಲಾಸಿಕ್ ಲೆಜೆಂಡ್ಸ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅನುಪಮ್ ತೆರೆಜ ಅಕ್ಟೋಬರ್ 10 ರಂದು ಬಿಡುಗಡೆ ಮಾಡಿದರು.

Safina Motors ಹಾಗೂ ಜಾವ-ಯಜೆಡಿ ಬೈಕ್‌ಗಳ ಸಂಬಂಧ

ಸಫೀನ್ ಮೋಟರ್ಸ್ (Safina Motors) ಕರ್ನಾಟಕದಲ್ಲಿ ಮೊಟ್ಡ ಮೊದಲ ಬಾರಿಗೆ ಜಾವ ಯೆಜಡಿ ಬೈಕ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದರು‌ . ಹಾಜಿ ಸೇಠ್ ಆಗ ಬೆಂಗಳೂರಿನಲ್ಲಿ ಸಫೀನ್ ಮೋಟರ್ಸ್ (Safina Motors) ಅನ್ನು ಸ್ಥಾಪಿಸಿದರು. ಈಗ ನೂತನ ಮಾದರಿಯ ಜಾವ/ಯೆಜಡಿ/ಬಿ.ಎಸ್.ಎ ಬೈಕ್‌ಗಳನ್ನು ಹಾಜಿ ಸೇಠ್‌ರ ಮಗ ಫಿರೋಜ್ ಸೇಠ್ ಅದೇ Safina Motors ಅನ್ನು 2018ರಲ್ಲಿ ಮತ್ತೆ ಪ್ರಾರಂಭಿಸಿದರು. ನೂತನ ಬಿ.ಎಸ್.ಎ ಮೋಟರ್ ಸೈಕಲ್ ಅನ್ನು ಕೂಡ ಗ್ರಾಹಕರು ಸಫೀನ್ ಮೋಟರ್ಸ್ ನಿಂದ ಪಡೆಯಬಹುದಾಗಿದೆ.

ಅನುಪಮ್ ತೆರೇಜ ಹಾಗೂ ಫಿರೋಜ್ ಸೇಠ್ ತಮಗೂ ಹಾಗು ಸಫೀನ ಮೋಟಾರ್ ಬಗೆಗಿನ ನೆನಪುಗಳನ್ನು ಮೆಲುಕು ಹಾಕಿದ್ದರು. ಅದ್ಭುತ ತಂತ್ರಜ್ಞಾನ, ಇಂಜಿನ್,‌ ಡಿಸೈನ್, ರೆಟ್ರೊಲುಕ್ ಗಳ ಪವರ್ಪ್ಪುಲ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ಸ ಸಮರ್ಪಿಸುತ್ತಿದೆ. ನಮ್ಮ ಭಾರತದ ಹೆಮ್ಮೆಯ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗುತ್ತಿದೆ. ಜಾವ/ಯೆಜಡಿ/ಬಿ.ಎಸ.ಎ ಮೋಟಾರು ಸೈಕಲ್‌ಗಳು‌ ಇತಿಹಾಸದ ಪುಟಗಳಿಗೆ ಸೇರಿದ್ದವು. ಅದರ ಪುನರ್ ನಿರ್ಮಾಣ ಮಾಡಿ ಅದನ್ನು‌ ಮತ್ತೆ‌ ಹಿಂದಿನ ಗತವೈಭವಕ್ಕೆ ತಂದ ಕೀರ್ತಿ ಆನಂದ ಮಹೀಂದ್ರಾ, ಅನುಪಮ್ ತೆರೇಜ ಹಾಗು ಬೊಮನ್ ಇರಾನಿ ಇವರುಗಳಿಗೆ‌ ಸಲ್ಲುತ್ತದೆ. ಬೈಕ್ ಪ್ರಿಯರು ತಮ್ಮ ಕನಸಿನ ಬ್ರಾಂಡ್‌ಗಳನ್ನು ಇಂದು ಸಾಕ್ಷಾತ್ಕರಿಸುತಿದ್ದಾರೆ.

Continue Reading

ಆಟೋಮೊಬೈಲ್

Nissan Magnite : ನಿಸ್ಸಾನ್‌ ಮ್ಯಾಗ್ನೈಟ್‌ ಇಜಡ್‌- ಶಿಫ್ಟ್‌ ಕಾರು ಹೇಗಿದೆ?; ಪವರ್‌, ಫೀಚರ್‌ಗಳು ಹೇಗಿವೆ? ಇಲ್ಲಿದೆ ವಿವರ

Nissan Magnite EZ : ಮ್ಯಾಗ್ನೈಟ್ ನೋಡಲು ತುಂಬಾ ಸುಂದರವಾದ ಕಾರು ಎಂಬುದ ಸಾಬೀತಾಗಿದೆ. 6 ಲಕ್ಷ ರೂ.ಗಳ ಆರಂಭಿಕ ಬೆಲೆ ಹೊಂದಿರುವ ಹೊರತಾಗಿಯೂ ಕಾರು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ದೊಡ್ಡ ಎಲ್- ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿರುವ ಇದ ಮುಂಭಾಗ ಎಲ್ಲ ರಸ್ತೆಯಲ್ಲಿ ಉತ್ತಮ ನೋಟ ನೀಡುತ್ತದೆ. ಮ್ಯಾಗ್ನೈಟ್ ನ ಸೈಡ್ ಪ್ರೊಫೈಲ್ ಸಹ ನಿಮಗೆ ಅತ್ಯುತ್ತಮವಾಗಿದ್ದ ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದೆ.

VISTARANEWS.COM


on

Nissan Magnite EZ
Koo

ಬೆಂಗಳೂರು : ಭಾರತದ ಕಾರು ಮಾರುಕಟ್ಟೆಯಲ್ಲಿ ಸಬ್ -4 ಮೀಟರ್ ಎಸ್‌‌ಯುವಿಗೆ ಇದೀಗ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್‌. ಎಲ್ಲ ಕಂಪನಿಗಳು ಕನಿಷ್ಠ ಒಂದು ಸಬ್‌ ಕಾಂಪಾಕ್ಟ್‌ ಕಾರುಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಹೋರಾಟ ನಡೆಸುತ್ತಿದೆ. ಅಂತೆಯೇ ನಿಸ್ಸಾನ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಮ್ಯಾಗ್ನೈಟ್‌ (Nissan Magnite) ಮೂಲಕ ಪ್ರತಿಸ್ಪರ್ಧಿಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಕಾರು ಭಾರತೀಯ ಕಾರು ಗ್ರಾಹಕರ ಗಮನವನ್ನೂ ಸೆಳೆದಿದೆ. ಇದರ ಹಲವು ವೇರಿಯೆಂಟ್‌ಗಳಲ್ಲಿ ನ್ಯಾಚುರಲ್ ಆಸ್ಪಿರೇಟೆಡ್‌‌ ಎಂಜಿನ್‌ನೊಂದಿಗಿನ ಎಎಮ್‌ಟಿ ಗೇರ್‌ ಬಾಕ್ಸ್ ಹೊಂದಿರುವ ಕಾರು ವಿಶೇಷ ಎನಿಸಿದೆ. ಅದುವೇ ನಿಸ್ಸಾನ್‌ ಮ್ಯಾಗ್ನೈಟ್‌ ಇಜಡ್‌ ಶಿಫ್ಟ್‌. (Nissan Magnite EZ- Shift). ಇದರಲ್ಲಿ ಟರ್ಬೊ ಇಲ್ಲದ ಎಂಜಿನ್‌ಗೆ ಸ್ವಯಂಚಾಲಿತ ಟ್ರಾನ್ಸ್ ಮಿಷನ್‌ ಜೋಡಿಸಲಾಗಿದೆ. ಈ ಕಾರು ಹೇಗಿದೆ, ನಾನಾ ಪರಿಸ್ಥಿತಿಯಲ್ಲಿ ಈ ಕಾರಿನ ಸ್ಪಂದನೆ ಹೇಗಿದೆ ಎಂಬುದನ್ನು ನೋಡೋಣ.

ಮ್ಯಾಗ್ನೈಟ್ ನೋಡಲು ತುಂಬಾ ಸುಂದರವಾದ ಕಾರು ಎಂಬುದರಲ್ಲಿ ಅನುಮಾನ ಇಲ್ಲ. 6 ಲಕ್ಷ ರೂ.ಗಳ ಆರಂಭಿಕ ಬೆಲೆ ಹೊಂದಿರುವ ಹೊರತಾಗಿಯೂ ಕಾರು ಹೆಚ್ಚು ಪ್ರೀಮಿಯಂ ಆಗಿದೆ. ದೊಡ್ಡ ಎಲ್- ಆಕಾರದ ಡಿಆರ್‌ಎಲ್‌ಗಳನ್ನು ಹೊಂದಿರುವ ಇದರ ಮುಂಭಾಗ ರಸ್ತೆಯಲ್ಲಿನ ಓಡಾಟದ ವೇಳೆ ಉತ್ತಮ ನೋಟ ನೀಡುತ್ತದೆ. ಮ್ಯಾಗ್ನೈಟ್ ನ ಸೈಡ್ ಪ್ರೊಫೈಲ್ ಕೂಡ ಆಕರ್ಷಕವಾಗಿದೆ. ವಿಶೇಷವಾಗಿ 16 ಇಂಚಿನ ಇಂಚಿನ ಮಿಶ್ರಲೋಹದ ವೀಲ್‌‌‌ಗಳು ನೋಟವನ್ನು ಹೆಚ್ಚಿಸಿದೆ. ಆರ್ಚ್‌ಗಳು ಇದು ಆಫ್-ರೋಡರ್ ವಾಹನದ ಲುಕ್‌ ಕೊಟ್ಟಿದೆ.

ಮ್ಯಾಗ್ನೈಟ್‌ನ ಬಾಡಿಲೈನ್‌ಗಳು ಹೆಚ್ಚು ತಿಕ್ಷ್ಣವಾಗಿದ್ದು ಕಾಂಪ್ಯಾಕ್ಟ್ ಎಸ್‌ಯುವಿಗೆ ಉತ್ತಮ ನೋಟ ನೀಡುತ್ತದೆ. ಅಥ್ಲೆಟಿಕ್ ನೋಟಕ್ಕಾಗಿ ರೂಫ್‌‌ ಅನ್ನು ಸ್ಲ್ಯಾಪಿಂಗ್ ಆಗಿ ಇಡಲಾಗಿದೆ. ಅದೇ ರೀತಿ ದೊಡ್ಡ ಗಾತ್ರದ ಸ್ಪಾಯ್ಲರ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದೆ.

ವಿಶೇಷ ನೀಲಿ ಬಣ್ಣ

ಕಾರಿನ ಆಕರ್ಷಕ ನೀಲಿ ಬಣ್ಣವು ಎಲ್ಲಾ ವೇರಿಯೆಂಟ್‌‌ಗಳಲ್ಲಿ ಲಭ್ಯವಿದೆ. ಆದರೆ, ಬಹುತೇಕ ಎಲ್ಲವೂ ಬಿಳಿ ರೂಫ್‌ ಕಲರ್ ಹೊಂದಿದೆ. ಹೀಗಾಗಿ ಬ್ಲ್ಯಾಕ್‌ ರೂಫ್‌ ಬೇಕಾದರೆ ಇಲ್ಲಿ ವಿಶ್ಲೇಷಣೆ ಮಾಡುತ್ತಿರುವ ಇಝಡ್-ಶಿಫ್ಟ್ ಕಾನ್ಫಿಗರೇಶನ್ ಕಾರನ್ನು ಖರೀದಿ ಮಾಡಬೇಕಾಗುತ್ತದೆ.

ಬೂಟ್ ಡೋರ್‌ನ ಕೆಳಗಿನ ಬಲಭಾಗದಲ್ಲಿರುವ ‘ಇಝಡ್-ಶಿಫ್ಟ್’ ಬ್ಯಾಡ್ಜ್ ನೀಡಲಾಗಿದೆ. ಎಎಂಟಿ ವೇರಿಯೆಂಟ್‌ನಲ್ಲಿ ಇದೊಂದು ಬದಲಾವಣೆ ಹೊರತುಪಡಿಸಿ ವಿನ್ಯಾಸದಲ್ಲಿ ಬೇರೆ ಬದಲಾವಣೆ ಇಲ್ಲ. ಎಲ್ಲ ಕಾರು ಕಂಪನಿಗಳು ಟೈಲ್‌ ಲ್ಯಾಂಪ್‌ ಅನ್ನು ಎಲ್‌ಇಡಿಗೆ ಪರಿವರ್ತಿಸಿದ್ದರೂ ನಿಸ್ಸಾನ್ ಇನ್ನೂ ಮಾಡಿಲ್ಲ. ಆದಾಗ್ಯೂ ಹಿಂಭಾಗದ ವಿನ್ಯಾಸದಲ್ಲಿ ಯಾವುದೇ ಕೊರತೆ ಇಲ್ಲ. ಕಾರಿನ ಹಿಂಭಾಗದ ಬಂಪರ್ ಲೇಯರ್ಡ್ ವಿನ್ಯಾಸ ಹೊಂದಿದೆ. ಟೈಲ್‌ಗೇಟ್‌ ಹೆಚ್ಚು ದೊಡ್ಡದಾಗಿದ್ದು ಮಧ್ಯದಲ್ಲಿ ಮ್ಯಾಗ್ನೈಟ್‌ ಎಂದು ಬರೆಯಲಾಗಿದೆ. ಹೀಗಾಗಿ ಇದು ಮುಂಭಾಗದಂತೆಯೇ ಹೆಚ್ಚು ಅತ್ಯಾಕರ್ಷಕವಾಗಿ ಕಾಣುತ್ತದೆ.

ಇಂಟೀರಿಯರ್ ವಿವರ ಇಲ್ಲಿದೆ

ಹೊರ ನೋಟದಂತೆಯೇ ಒಳ ನೋಟದಲ್ಲೂ ಹೆಚ್ಚು ಕೆಲಸ ಮಾಡಲಾಗಿದೆ. ಪ್ರಯಾಣಿಕರಿಗೆ ಹೆಚ್ಚು ಉತ್ಸಾಹ ತುಂಬಬಲ್ಲ ವಿನ್ಯಾಸ ನೀಡಲಾಗಿದೆ. 8-ಇಂಚಿನ ಟಚ್ ಸ್ಕ್ರೀನ್ ದೊಡ್ಡ ಆಕರ್ಷಣೆಯಾಗಿದೆ. ಗ್ರಾಫಿಕ್ಸ್ ನಿಖರ ಮಾಹಿತಿಯೊಂದಿಗೆ 7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ನೀಡಿದ್ದಾರೆ. ಎಸಿ ಸೇರಿದಂತೆ ಕ್ಲೈಮೇಟ್‌ ಕಂಟ್ರೋಲ್‌ಗಳನ್ನು ರೌಂಡ್‌ ನಾಬ್‌‌ಗಳಲ್ಲಿ ನಿಯತ್ರಿಸಬಹುದು. ಒಟ್ಟಾರೆಯಾಗಿ ಕ್ಯಾಬಿನ್ ಒಳಗೆ ಪ್ರೀಮಿಯಂ ಫೀಲ್ ಇದೆ.

ಇದನ್ನೂ ಓದಿ: Tata Nexon EV: ಕೇವಲ 200 ರೂ. ಖರ್ಚಿನಲ್ಲಿ ಈ ಕಾರು 323 ಕಿ.ಮೀ ದೂರ ಸಾಗುತ್ತದೆ!

ಇನ್ನು ಇಂಟೀರಿಯರ್‌ಗೆ ಬಳಸಿದ ಪ್ಲಾಸ್ಟಿಕ್‌‌ನ ಗುಣಮಟ್ಟ ತಕ್ಕ ಮಟ್ಟಿಗಿದೆ. ಫಿಟ್ ಮತ್ತು ಫಿನಿಶ್ ಸಮಾಧಾನಕರ. ಡಿಜಿಟಲ್ ಕ್ಲಸ್ಟರ್‌ನಲ್ಲಿ ಮಾಹಿತಿ ಪುನರಾವರ್ತನೆಯಾಗುತ್ತದೆ. ಒಂದೇ ನೋಟಕ್ಕೆ ಗುರುತಿಸಲು ಸಾಧ್ಯವೂ ಇಲ್ಲ ಎಂಬುದು ಸಣ್ಣ ಹಿನ್ನಡೆ. ರಿಯರ್ ಸೀಟ್‌‌ಗೆ ಪ್ರತ್ಯೇಕ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಸೀಟ್‌ಗಳು ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ನೆರವಾಗುತ್ತದೆ. ದೀರ್ಘ ಪ್ರಯಾಣದ ವೇಳೆ ತೊಡೆಯ ಭಾಗಕ್ಕೆ ಹೆಚ್ಚು ಆರಾಮ ನೀಡುವಂಥ ಸೀಟ್‌ಗಳನ್ನು ಕೊಡಲಾಗಿದೆ.

ಫೀಚರ್‌ಗಳಲ್ಲಿ ಅತ್ಯುತ್ತಮ

ಮ್ಯಾಗ್ನೈಟ್‌ ಇಝಡ್-ಶಿಫ್ಟ್ ಎಎಂಟಿ ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್‌‌ಗಳು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳು, 360 ಡಿಗ್ರಿ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಪಿಎಂ 2.5 ಏರ್ ಕಂಡಿಷನರ್ ಹೊಂದಿದೆ. ಮುಂಭಾಗದಲ್ಲಿ ಯುಎಸ್‌ಬಿ ಮತ್ತು 12 ವೋಲ್ಟ್‌‌ ಸಾಕೆಟ್ ಮತ್ತು ಹಿಂಭಾಗದಲ್ಲಿ ಒಂದು ಸಾಕೆಟ್‌ ನೀಡಲಾಗಿದೆ. ಸ್ಟೋರೇಜ್ ಸ್ಪೇಸ್‌ಗಳನ್ನು ಯಥೇಚ್ಛವಾಗಿ ನೀಡಲಾಗಿದೆ. ಆದರೆ ಆರ್ಮ್‌ರೆಸ್ಟ್ ಒಳಗೆ ಜಾಗ ಕೊಟ್ಟಿಲ್ಲ. ಕೇವಲ ಕುಷನ್ ಮಾತ್ರ ಇಡಲಾಗಿದೆ. ವೈರ್ ಲೆಸ್ ಚಾರ್ಜರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಮ್ಯೂಸಿಕ್‌ ಸಿಸ್ಟಮ್‌ ಇಲ್ಲದಿರುವುದನ್ನು ಕೊರತೆ ಎನ್ನಬಹುದು. ಆದರೆ ಬೆಲೆಯ ವಿಚಾರಕ್ಕೆ ಬಂದಾಗ ಇದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಸೆಫ್ಟಿ ಫೀಚರ್‌ ಕೂಡ ಅತ್ಯುತ್ತಮವಾಗಿದೆ. ಗ್ಲೋಬಲ್ ಅನ್‌ ಕ್ಯಾಪ್ ಪ್ರಕಾರ 4 ಸ್ಟಾರ್ ರೇಟಿಂಗ್ ಇದೆ. ಇನ್ನು ಎರಡು ಏರ್‌ಬ್ಯಾಗ್‌ಗಳು ಸಾಕಷ್ಟು ಸುರಕ್ಷತೆ ಕೊಡುತ್ತದೆ. ಸೀಟ್‌ ಬೆಲ್ಟ್ ವಾರ್ನಿಂಗ್‌ ಡೋರ್ ಓಪನ್‌ ವಾರ್ನಿಂಗ್ ಕಾರಿನಲ್ಲಿದೆ. ಹೀಗಾಗಿ ಭಾರತದ ಮಟ್ಟಿಗೆ ಸಮಾಧಾನಕರ ಸುರಕ್ಷತೆ ಖಾತರಿಯಿದೆ.

ಎಎಂಟಿ ಡ್ರೈವಿಂಗ್ ಅನುಭವ ಹೇಗಿದೆ?

ಮ್ಯಾಗ್ನೈಟ್‌ ಇಝಡ್-ಶಿಫ್ಟ್ ಎಎಂಟಿ ಟ್ರಾನ್ಸ್‌ಮಿಷನ್‌ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ ನಗರದಲ್ಲಿ ಮತ್ತು ಹೈವೆ ರಸ್ತೆಯಲ್ಲಿ ಅತ್ಯುತ್ತಮ ಪ್ರಯಾಣದ ಅನುಭವ ನೀಡುತ್ತದೆ. ನಿಧಾನಗತಿಯ ವೇಗದಲ್ಲಿ ಇದು ಸ್ವಲ್ಪ ಗೊಂದಲಕ್ಕೆ ಈಡು ಮಾಡುತ್ತದೆ. ಗೇರ್ ಬದಲಾವಣೆ ಸಾಕಷ್ಟು ಸಮಯ ತೆಗೆದುಕೊಳ್ಳುವುದು ಗೊಂದಲಕ್ಕೆ ಈಡು ಮಾಡುತ್ತದೆ. ಆಕ್ಸಿಲೇಟರ್ ಮೇಲೆ ಹೆಚ್ಚು ಬಲ ನೀಡಬೇಕಾಗುತ್ತದೆ. ನೀವು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಗೇರ್ ಬದಲಾವಣೆ ಆಗುವಾಗಲು ಹೆಚ್ಚು ಅಲುಗಾಟದ ಅನುಭವ ಕೊಡುತ್ತದೆ. ಇನ್ನು ಹಂಪ್‌ನಂಥ ಅಡೆ ತಡೆಗಳನ್ನು ದಾಟುವಾಗ ಗೊಂದಲ ಗ್ಯಾರಂಟಿ. ಆಕ್ಸಿಲೇಟರ್ ಕೊಟ್ಟರೆ ಟೈರ್ ಸ್ಪಿನ್ ಆಗುತ್ತದೆ. ಕೊಡದೇ ಹೋದರೆ ಕಾರು ಮುಂದಕ್ಕೆ ಹೋಗುವುದಿಲ್ಲ ಎಂಬ ಗೊಂದಲ ಗ್ಯಾರಂಟಿ. ಆದರೆ, ಹೈವೆ ರಸ್ತೆಯಲ್ಲಿ ನಯವಾದ ಚಾಲನೆಯ ಖಾತರಿ.

ಎಂಜಿನ್ ಸಣ್ಣದಾಗಿರುವ ಕಾರಣ ಗೇರ್ ಬಾಕ್ಸ್‌‌ನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. 100 ಸಿಸಿಯ ಎಂಜಿನ್‌ 72 ಪಿಎಸ್ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಎತ್ತರದ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಕಾರು ಬೇಗ ಸುಸ್ತಾಗುತ್ತದೆ! ನೇರ ರಸ್ತೆಯಲ್ಲಿ ಸಾಗುವಾಗಲೂ ಎಎಂಟಿ ಗೇರ್ ಬಾಕ್ಸ್ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವೈಫಲ್ಯ ಕಾಣುತ್ತದೆ. ಒಂದು ವೇಳೆ ಹೆಚ್ಚು ಶಕ್ತಿ ಬೇಕಾದರೆ ಹೆಚ್ಚು ಇಂಧನ ಖಾಲಿಯಾಗುವುದು ಖಾತರಿ.

ಸಸ್ಪೆನ್ಷನ್‌ ಮ್ಯಾಗ್ನೈಟ್ ಪಾಲಿಗೆ ಉತ್ತಮ ಅಂಶ. ಇದು ಪ್ರಯಾಣದ ಗುಣಮಟ್ಟ ಹೆಚ್ಚಿಸುತ್ತದೆ. ಸಣ್ಣ ಹಂಪ್‌ಗಳಲ್ಲಿ ಸರಾಗವಾಗಿ ಸಾಗುತ್ತದೆ. ಆದರೆ ಟೆಸ್ಟ್‌ ರೈಡ್‌ಗೆ ಕೊಟ್ಟ ಕಾರಿನ ಮುಂದಿನ ಎರಡೂ ಸಸ್ಪೆನ್ಷನ್‌ನಲ್ಲಿ ಸಣ್ಣ ಹಳ್ಳಕ್ಕೆ ಬಿದ್ದಾಗಲೂ ಅನಗತ್ಯ ಸದ್ದೊಂದು ಹೊರಡುತ್ತಿತ್ತು. ಆದರೆ, ಹಳ್ಳಿಯ ಕಚ್ಚಾ ರಸ್ತೆಯಲ್ಲೂ ಉತ್ತಮ ಸವಾರಿ ಅನುಭವ ನೀಡುತ್ತಿತ್ತು. ನಗರದ ಸವಾರಿಯ ವೇಳೆ ಕ್ಯಾಬಿನ್ ಒಳಗೆ ವೈಬ್ರೇಷನ್ ಬರುತ್ತದೆ. ಹೈವೆನಲ್ಲಿ ಗೊತ್ತಾಗುವುದಿಲ್ಲ. ಆದರೆ, ಅಷ್ಟೊಂದು ಪ್ರಮಾಣದಲ್ಲಿ ರೋಡ್‌ ಗ್ರಿಪ್ ನೀಡುವುದಿಲ್ಲ ಎಂದು ಹೇಳಬಹುದು. 100 ಕಿ.ಮೀ ವೇಗದ ದಾಟಿದ ಬಳಿಕ ಇದು ಅನುಭವಕ್ಕೆ ಬರುತ್ತದೆ. ಇನ್ನು ಬ್ರೇಕಿಂಗ್ ಉತ್ತಮವಾಗಿದೆ. ತಕ್ಷಣವೇ ಪ್ರತಿಕ್ರಿಯೆ ಕೊಡುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಇಝಡ್-ಶಿಫ್ಟ್ ಬಗ್ಗೆ ಇನ್ನೇನು ಹೇಳಬಹುದು?

ನಿಸ್ಸಾನ್ ಮ್ಯಾಗ್ನೈಟ್ 6 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ (ಎಕ್ಸ್‌‌ ಶೋರೂಮ್‌ ಬೆಲೆ) ಮತ್ತು 10.86 ಲಕ್ಷ ರೂ.ಗಳವರೆಗೆ ಇದೆ. ಬೆಲೆ ವಿಚಾರಕ್ಕೆ ಬಂದಾಗ ಉತ್ತಮವಾಗಿದೆ. ಹೀಗಾಗಿ ನಿಸ್ಸಾನ್‌ ಎಎಂಟಿ ಉತ್ತಮ ಪ್ಯಾಕೇಜ್ ಎಂದೇ ಹೇಳಬಹುದು. ಈ ದರಕ್ಕೆ ಒಳ್ಳೆಯ ಫಿಚರ್‌ಗಳನ್ನು ಕಾರಿನಲ್ಲಿ ನೀಡಲಾಗಿದೆ.

ಹ್ಯಾಚ್‌ ಬ್ಯಾಕ್‌ ಬೆಲೆಗೆ ಕಾರು ಕೊಡುತ್ತಿರುವ ಕಾರಣ ಕಾಂಪ್ಯಾಕ್ಟ್‌‌ ಎಸ್‌ಯುವಿ ವರ್ಗದಲ್ಲಿ ಅತ್ಯುತ್ತಮ ಎಂದೇ ಹೇಳಬಹುದು. ನ್ಯಾಚುರಲ್‌ ಆಸ್ಪಿರೇಟೆಡ್ ಎಂಜಿನ್ ಅತ್ಯಂತ ಕಡಿಮೆ ಶಕ್ತಿ ನೀಡುತ್ತದೆ. ಎಎಂಟಿ ನಗರ ಚಾಲನೆಗೆ ಸಾಕಷ್ಟು ಉತ್ತಮವಾಗಿದ್ದರೂ ನೀವು ಟರ್ಬೊ ಸಿವಿಟಿ ಇನ್ನಷ್ಟು ಪವರ್‌ ಹೊಂದಿದೆ ಎಂಬುದನ್ನು ಗಮನ ಹರಿಸಬೇಕಾಗುತ್ತದೆ.

Continue Reading

ತಂತ್ರಜ್ಞಾನ

Mission RHUMI: ದೇಶದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್‌ ರಾಕೆಟ್‌ನ ಯಶಸ್ವಿ ಉಡಾವಣೆ

Mission RHUMI: ರೂಮಿ 1 ಹೆಸರಿನ ದೇಶದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್‌ ಗ್ರೂಪ್‌ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ (TTDC) ಮೈದಾನದಿಂದ ಉಡಾವಣೆ ಮಾಡಲಾಯಿತು.

VISTARANEWS.COM


on

Mission RHUMI
Koo

ಚೆನ್ನೈ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ರೂಮಿ 1 (RHUMI 1) ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ (Reusable hybrid rocket) ಅನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್‌ ಗ್ರೂಪ್‌ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ (TTDC) ಮೈದಾನದಿಂದ ಉಡಾವಣೆ ಮಾಡಲಾಯಿತು (Mission RHUMI).

ಈ ರಾಕೆಟ್ 3 ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ (PICO) ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಸಬ್ ಆರ್ಬಿಟಲ್ ಪಥಕ್ಕೆ ಉಡಾಯಿಸಲಾಯಿತು. ಈ ಉಪಗ್ರಹಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಲಿವೆ.

ಇಸ್ರೋ ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ.ಮೈಲ್‌ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್ ಝೋನ್ ಇಂಡಿಯಾ ಸಂಸ್ಥಾಪಕ ಆನಂದ್ ಮೆಗಾಲಿಂಗಂ ಅವರು ಆರ್‌ಎಚ್‌ಯುಎಂಐ ಮಿಷನ್ ಅನ್ನು ಮುನ್ನಡೆಸುತ್ತಿದ್ದಾರೆ. ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಆರ್‌ಎಚ್‌ಯುಎಂಐ -1 (ರೂಮಿ 1) ರಾಕೆಟ್ ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ವ್ಯವಸ್ಥೆಗಳ ಅನುಕೂಲಗಳನ್ನು ಸಂಯೋಜಿಸುತ್ತದೆ.

3.5 ಮೀಟರ್‌ ಉದ್ದ 80 ಕೆಜಿ ತೂಕದ ಈ ರಾಕೆಟ್‌ನ ಶೇ. 70ರಷ್ಟನ್ನು ಮರುಬಳಕೆ ಮಾಡಬಹುದು. ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಹೊಂದಿರುವ ಭಾಗ ಯಶಸ್ವಿ ಉಡ್ಡಯನದ ಬಳಿಕ ಮರಳಿ ಭೂಮಿ ವಾತಾವರಣ ಪ್ರವೇಶಿಸಿ ಸಮುದ್ರದಲ್ಲಿ ಬೀಳಲಿದೆ. ಅಲ್ಲಿಂದ ಈ ಭಾಗಗಳನ್ನು ಸಂಗ್ರಹಿಸಿ, ಇನ್ನೊಂದು ಉಡ್ಡಯನಕ್ಕೆ ಬಳಸಬಹುದು. ಇದು ಭವಿಷ್ಯದ ಉಡ್ಡಯನ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ರೂಮಿ 1 ರಾಕೆಟ್‌ 35 ಕಿ.ಮೀ ಎತ್ತರದ ಕಕ್ಷೆವರೆಗೆ ಹಾರಬಲ್ಲದು.

ಇದನ್ನೂ ಓದಿ: Aditya L1 Launch: ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯ ಎಲ್‌ 1 ಮಿಷನ್;‌ ಇಸ್ರೋಗೆ ಶಹಬ್ಬಾಶ್‌ ಎಂದ ಮೋದಿ

ಚೆನ್ನೈ ಮೂಲದ ಸ್ಪೇಸ್‌ ಝೋನ್‌ ಇಂಡಿಯಾ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ ವೆಚ್ಚದ, ದೀರ್ಘಾವಧಿಯ ಪರಿಹಾರವನ್ನು ಒದಗಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

Continue Reading

ಗ್ಯಾಜೆಟ್ಸ್

Old Phone Sale: ನಿಮ್ಮ ಹಳೆಯ ಫೋನ್ ಮಾರಾಟ ಮಾಡುವ ಮೊದಲು ಈ ವಿಷಯ ತಿಳಿದಿರಲಿ!

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಹಳೆಯ ಫೋನ್ ಮಾರಾಟ (Old Phone Sale) ಮಾಡುವ ಮೊದಲು ನಿರ್ವಹಿಸಬೇಕಾದ ಕೆಲವು ಕ್ರಮಗಳನ್ನು ತಿಳಿದುಕೊಳ್ಳಿ.

VISTARANEWS.COM


on

By

Old Phone Sale
Koo

ಹಳೆಯ ಫೋನ್ (Old Phone) ಮಾರಾಟ (Old Phone Sale) ಮಾಡುವ ಅಥವಾ ಎಕ್ಸ್ ಚೇಂಚ್ (Old Phone exchange) ಮಾಡುವ ಆಲೋಚನೆಯಲ್ಲಿ ಇದ್ದೀರಾ ? ಹಾಗಿದ್ದರೆ ಅದಕ್ಕೂ ಮೊದಲು ಗಮನಿಸಬೇಕಾದ ಹಲವು ಸಂಗತಿಗಳಿವೆ. ಇಲ್ಲವಾದರೆ ನಿಮ್ಮ ಅಮೂಲ್ಯ ದಾಖಲೆಗಳು ಇನ್ನೊಬ್ಬರ ಕೈಸೇರುವ, ದುರ್ಬಳಕೆಯಾಗುವ ಸಾಧ್ಯತೆ ಇದೆ.

ಹಳೆಯ ಮೊಬೈಲ್ ಮಾರಾಟ ಮಾಡುವ ಮೊದಲು ಡೇಟಾವನ್ನು ಬ್ಯಾಕಪ್ ಮಾಡಬೇಕು, ಅನಂತರ ಫ್ಯಾಕ್ಟರಿ ರೀಸೆಟ್ ಮಾಡಿ ಮೊಬೈಲ್ ನಲ್ಲಿರುವ ಎಲ್ಲ ಡೇಟಾಗಳನ್ನು ಅಳಿಸಿ ಹಾಕಬೇಕು. ಎಲ್ಲಾ ಖಾತೆಗಳಿಂದ ಫೋನ್ ಅನ್ನು ಲಾಗೌಟ್ ಮಾಡಿ ಫೋನ್ ಅನ್ನು ಸಂಪೂರ್ಣವಾಗಿ ರಿಸೆಟ್ ಮಾಡಿಯೇ ಕೊಡಬೇಕು. ಜೊತೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಪೊಲೀಸರು.

ಬಹಳಷ್ಟು ಬಾರಿ ಜನರು ತಮ್ಮ ಫೋನ್ ಅನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೊದಲು ಅಗತ್ಯ ಅಥವಾ ಮೂಲಭೂತ ಹಂತಗಳನ್ನು ನಿರ್ವಹಿಸುವುದಿಲ್ಲ. ಇದರಿಂದ ಮುಂದೆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಏನು ಮಾಡಬೇಕು?

ಹಳೆಯ ಫೋನ್ ಮಾರಾಟ ಮಾಡುವ ಮುನ್ನ ಈ ಕೆಳಗಿನ ಅಂಶಗಳು ಗಮನದಲ್ಲಿ ಇರಿಸಿ.

Old Phone Sale
Old Phone Sale


ಡೇಟಾ ಬ್ಯಾಕಪ್

ಮೊಬೈಲ್ ನಲ್ಲಿರುವ ಡೇಟಾವನ್ನು ಮುಖ್ಯವಾಗಿ ಫೋಟೋ, ವಿಡಿಯೋ, ಡಾಕ್ಯುಮೆಂಟ್‌ಗಳನ್ನು ಗೂಗಲ್ ಖಾತೆಗೆ ಅಥವಾ ಐ ಕ್ಲೌಡ್ ಗೆ ಬ್ಯಾಕಪ್ ಮಾಡಿ. ಫೋನ್‌ನಿಂದ ಎಲ್ಲಾ ಫೈಲ್‌ಗಳನ್ನು ತೆಗೆದುಹಾಕಿ. ಇದನ್ನು ಕ್ಲೌಡ್‌ನಲ್ಲಿ ಸಂಗ್ರಹಿಸುವ ಬದಲು ಕಂಪ್ಯೂಟರ್‌ ನಲ್ಲೂ ಸಂಗ್ರಹಿಸಿ ಇಡಬಹುದು. ಸೆಟ್ಟಿಂಗ್‌ ಗೆ ಹೋಗುವ ಮೂಲಕ ನಿಮ್ಮ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸೈನ್ ಔಟ್

ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ಅಥವಾ ಮರೆತುಬಿಡುವ ಅತ್ಯಂತ ನಿರ್ಣಾಯಕ ಹಂತ ಇದಾಗಿದೆ. ಭವಿಷ್ಯದಲ್ಲಿ ಯಾವುದೇ ವಂಚನೆಯನ್ನು ತಪ್ಪಿಸುವ ಸಲುವಾಗಿ ಪೇಟಿಎಂ, ಗೂಗಲ್ ಪೇ, ಭೀಮ್, ಬ್ಯಾಂಕ್ ಅಪ್ಲಿಕೇಶನ್‌ಗಳು ಇತ್ಯಾದಿ ಎಲ್ಲಾ ಪಾವತಿ ಅಪ್ಲಿಕೇಶನ್‌ಗಳಿಂದ ಸೈನ್ ಔಟ್ ಮಾಡಿ. ನಿಮ್ಮ ವಿವರಗಳನ್ನು ಈ ಖಾತೆಗಳಿಗೆ ಲಾಗ್ ಇನ್ ಆಗಿರಿಸುವುದು ಕಳ್ಳತನ ಮತ್ತು ಇತರ ಗಂಭೀರ ಭದ್ರತಾ ಉಲ್ಲಂಘನೆಗಳಿಗೆ ಕಾರಣವಾಗಬಹುದು. ಅನಗತ್ಯ ಭದ್ರತಾ ಹಗರಣವನ್ನು ತಪ್ಪಿಸಲು ಗೂಗಲ್, ಫೇಸ್ ಬುಕ್, ಇನ್ ಸ್ಟಾ ಗ್ರಾಮ್ ಇತ್ಯಾದಿ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸೈನ್ ಔಟ್ ಮಾಡಲು ಮರೆಯದಿರಿ.

ಜೋಡಣೆಯನ್ನು ತೆಗೆದು ಹಾಕಿ

ಸ್ಮಾರ್ಟ್ ವಾಚ್‌, ಬ್ಲೂಟೂತ್, ಇಯರ್‌ಫೋನ್‌, ಫಿಟ್‌ನೆಸ್ ಬ್ಯಾಂಡ್‌ ಅಥವಾ ಏರ್‌ಪಾಡ್‌ಗಳಂತಹ ಸಾಧನಗಳನ್ನು ಅನ್‌ಪೇರ್ ಮಾಡಿ. ಅಲ್ಲದೇ ಫೋನ್‌ನಲ್ಲಿ ಏನೂ ಉಳಿಯದಂತೆ ಎಲ್ಲಾ ಜೋಡಿಸಲಾದ ಸಾಧನಗಳಿಂದ ಡೇಟಾವನ್ನು ತೆಗೆದುಹಾಕಿ.

ಫ್ಯಾಕ್ಟರಿ ರೀಸೆಟ್

ಸಾಧನವನ್ನು ಅದರ ಫ್ಯಾಕ್ಟರಿ ಸ್ಥಿತಿಗೆ ಹೊಂದಿಸಲು ಪೂರ್ಣ ಫ್ಯಾಕ್ಟರಿ ಮರುಹೊಂದಿಕೆಯನ್ನು ನಿರ್ವಹಿಸಿ. ಇದು ಸಾಧನದಿಂದ ಎಲ್ಲವನ್ನೂ ಅಳಿಸುತ್ತದೆ ಮತ್ತು ನಿಮ್ಮ ಫೋನ್ ಅನ್ನು ಹೊಚ್ಚ ಹೊಸ ಸ್ಥಿತಿಯಲ್ಲಿ ಇರಿಸುತ್ತದೆ. ಫೋನ್‌ನಿಂದ ಎಲ್ಲಾ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಅಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಫ್ಯಾಕ್ಟರಿ ಮರುಹೊಂದಿಕೆಯನ್ನು ಎರಡು ಬಾರಿ ಮಾಡಬಹುದು.


ಸಿಮ್ ಕಾರ್ಡ್ ತೆಗೆದುಹಾಕಿ

ಫೋನ್‌ನಿಂದ ಸಿಮ್ ಮತ್ತು ಎಸ್ ಡಿ ಕಾರ್ಡ್ ಅನ್ನು ತೆಗೆಯಲು ಮರೆಯಬೇಡಿ. ಕೆಲವು ಸಾಧನ, ಸಂಪರ್ಕ ಮತ್ತು ಕರೆ ಲಾಗ್‌ಗಳನ್ನು ಸಿಮ್ ಕಾರ್ಡ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಇವುಗಳು ಪ್ರಮುಖ ಹಾರ್ಡ್‌ವೇರ್ ತುಣುಕುಗಳಾಗಿವೆ. ಖರೀದಿದಾರರಿಗೆ ಮೊಬೈಲ್ ಹಸ್ತಾಂತರಿಸುವ ಮೊದಲು ಇದರಲ್ಲಿರುವ ಪಠ್ಯ ಸಂದೇಶ, ಕರೆ ಲಾಗ್‌ ಅನ್ನು ಬ್ಯಾಕಪ್ ನಲ್ಲಿ ಇಡಿ. ಇದಕ್ಕಾಗಿ ಗೂಗಲ್ ಡ್ರೈವ್ ಅಥವಾ ಡ್ರಾಪ್‌ಬಾಕ್ಸ್‌ ಬಳಸಿ. ಹೊಸ ಫೋನ್ ಬಂದಾಗ ಇದನ್ನು ಶೇರ್ ಇಟ್ ಅಪ್ಲಿಕೇಶನ್ ಮೂಲಕ ವರ್ಗಾಯಿಸಿಕೊಳ್ಳಬಹುದು.

ಇದನ್ನೂ ಓದಿ: TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

ಬಿಲ್ ಪಡೆಯಿರಿ

ಫೋನ್ ಅನ್ನು ಮಾರಾಟ ಮಾಡಲು ನಿರ್ಧರಿಸಿದರೆ ಬಿಲ್ ಅನ್ನು ಪಡೆಯಲು ಮರೆಯದಿರಿ. ಇದು ಯಾವುದೇ ವಂಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಯಾವುದೇ ದುಷ್ಕೃತ್ಯವನ್ನು ನಿರ್ವಹಿಸಲು ಫೋನ್ ಅನ್ನು ಬಳಸಿದರೆ ನಿಮ್ಮನ್ನು ರಕ್ಷಿಸುತ್ತದೆ.

Continue Reading
Advertisement
Kodava Family Hockey Tournament Website Launched
ಕೊಡಗು2 ವಾರಗಳು ago

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Bengaluru News
ಬೆಂಗಳೂರು2 ವಾರಗಳು ago

Bengaluru News : ಮಾಡಲಿಂಗ್‌ನಲ್ಲಿ ಗಿನ್ನಿಸ್‌ ರೆಕಾರ್ಡ್‌ ಮಾಡಲು ಹೊರಟ ಹಳ್ಳಿಹೈದ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಯಾವುದಾದರೂ ಪ್ರಸಂಗಗಳಿಂದ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆ ಎಚ್ಚರಿಕೆ ಇರಲಿ

Gadag News Father commits suicide by throwing three children into river
ಗದಗ2 ವಾರಗಳು ago

Gadag News : ಮೂವರು ಮಕ್ಕಳನ್ನು ನದಿಗೆ ಎಸೆದು, ಆತ್ಮಹತ್ಯೆ ಮಾಡಿಕೊಂಡ ತಂದೆ!

Dina Bhavishya
ಭವಿಷ್ಯ2 ವಾರಗಳು ago

Dina Bhavishya: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ, ಯಶಸ್ಸು ಖಂಡಿತ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ

Bengaluru airport
ಬೆಂಗಳೂರು2 ವಾರಗಳು ago

Bengaluru Airport : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೈಗರ್‌ ವಿಂಗ್ಸ್‌; 2ನಲ್ಲಿ ಅತಿದೊಡ್ಡ ವರ್ಟಿಕಲ್‌ ಗಾರ್ಡನ್‌ ಅನಾವರಣ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Dina Bhavishya
ಭವಿಷ್ಯ2 ವಾರಗಳು ago

Dina Bhavishya : ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುತ್ತಾ ಕಾಲಹರಣ ಮಾಡ್ಬೇಡಿ

dina bhavishya read your daily horoscope predictions for november 4 2024
ಭವಿಷ್ಯ2 ವಾರಗಳು ago

Dina Bhavishya : ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಶುಭ ಸುದ್ದಿ

galipata neetu
ಕಿರುತೆರೆ12 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ1 ವರ್ಷ ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ತಿಂಗಳುಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್3 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ3 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌