Site icon Vistara News

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್‌ ಮಾಡಿ!

ನವ ದೆಹಲಿ: ಸ್ಮಾರ್ಟ್‌ಫೋನ್‌ಗಳ ಬಳಕೆ ಜಾಸ್ತಿಯಾದಂಥೆ ಮೊಬೈಲ್‌ ಆ್ಯಪ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಇವುಗಳಲ್ಲಿ ಸಾಕಷ್ಟು ಆ್ಯಪ್‌ಗಳು ದೈನಂದಿನ ಬದುಕಿಗೆ ಸಹಕಾರಿಯಾಗಿವೆ. ಇವುಗಳ ನಡುವೆ ಕೆಲವೊಂದು ಡೇಂಜರಸ್‌ ಮೊಬೈಲ್‌ ಆ್ಯಪ್‌ಗಳನ್ನು ನೀವು ಗೊತ್ತಿಲ್ಲದೇ ಇನ್‌ಸ್ಟಾಲ್‌ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಅಂಥ ಆ್ಯಪ್‌ಗಳು ಇದ್ದರೆ ತಕ್ಷಣವೇ ಡಿಲೀಟ್‌ ಮಾಡಿ.

ಈ ರೀತಿಯಾಗಿ ನಿಮ್ಮ ಮೊಬೈಲ್‌ಗೆ ಹಾನಿಯುಂಟು ಮಾಡಬಲ್ಲ ಈ 17 ಆ್ಯಪ್‌ಗಳನ್ನು ಪಟ್ಟಿ ಮಾಡಲಾಗಿದೆ. ಇಂಥ ಆ್ಯಪ್‌ಗಳ ಕುರಿತು ತಿಳಿದುಕೊಳ್ಳುವುದು ಉತ್ತಮ ಹಾಗೂ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ ವಹಿಸಲೇಬೇಕು. ಯಾಕೆಂದರೆ ಇವುಗಳಲ್ಲಿ ಕೆಲವು ಆ್ಯಪ್‌ಗಳು ನಿಮ್ಮ ಫೋನಿನಲ್ಲಿರುವ ಇಂಟರ್ನಲ್‌ ಸ್ಪೇನ್‌ ಅನ್ನು ಅನಗತ್ಯ ಬಳಸಿಕೊಳ್ಳುತ್ತವೆ. ಇನ್ನು ಕೆಲವು ಆ್ಯಪ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತವೆ. ಆದರೆ ಇನ್ನೂ ಹಲವು ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕ್‌ ಖಾತೆಯ ಮಾಹಿತಿ ಕದ್ದು ಹಣ ದೋಚುತ್ತವೆ.

ಅಪಾಯಕಾರಿ ಹಾಗೂ ಅನಧಿಕೃತ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿದೆ. ಆದಾಗ್ಯೂ ಕೆಲವು ಆ್ಯಪ್‌ಗಳು ಉಳಿದುಕೊಂಡಿರುತ್ತವೆ ಅಥವಾ ಅನಧಿಕೃತ ಮೂಲದಿಂದ ಡೌನ್‌ಲೋಗಿ ಆಗಿರುವ ಸಾಧ್ಯತೆಗಳಿವೆ. ಅಂತಯ ಕೆಲವು ಆ್ಯಪ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದ್ದು, ನಿಮ್ಮ ಮೊಬೈಲ್‌ ಸೇರಿಕೊಂಡಿದ್ದರೆ ತಕ್ಷಣವೇ ಅವುಗಳನ್ನು ಡಿಲೀಟ್‌ ಮಾಡಿ.

17 ಆ್ಯಪ್‌ಗಳು ಯಾವುವು?

  1. ಡಾಕ್ಯುಮೆಂಟ್‌ ಮ್ಯಾನೇಜರ್
  2. ಕಾಯಿನ್‌ ಟ್ರಾಕ್‌ ಲೋನ್-‌ ಆನ್‌ಲೈನ್‌ ಲೋನ್‌
  3. ಕೂಲ್‌ ಕಾಲರ್‌ ಸ್ಕ್ರೀನ್‌
  4. ಪಿಎಸ್‌ಡಿ ಅಥ್‌ ಪ್ರೊಟೆಕ್ಟರ್‌
  5. ಆರ್‌ಜಿಬಿ ಎಮೊಜಿ ಕೀಬೋರ್ಡ್‌
  6. ಕ್ಯಾಮೆರಾ ಟ್ರಾನ್ಸ್‌ಲೇಟರ್ ಪ್ರೊ
  7. ಫಾಸ್ಟ್‌ ಪಿಡಿಎಸ್‌ ಸ್ಕಾನರ್‌
  8. ಏರ್‌ ಬಲೂನ್‌ ವಾಲ್‌ಪೇಪರ್‌
  9. ಕಲರ್‌ಫುಲ್‌ ಮೆಸೆಂಜರ್‌
  10. ಠಗ್‌ ಫೋಟೋ ಎಡಿಟರ್‌
  11. ಅನಿಮೆ ವಾಲ್‌ಪೇಪರ್‌
  12. ಪೀಸ್‌ ಎಸ್‌.ಎಂ.ಎಸ್‌
  13. ಹ್ಯಾಪಿ ಫೋಟೋ ಕೊಲ್ಯಾಜ್‌
  14. ಪೆಲ್ಲೆಟ್‌ ಮೆಸ್ಸೇಜಸ್‌
  15. ಸ್ಮಾರ್ಟ್‌ ಕೀಬೋರ್ಡ್‌
  16. 4ಕೆ ವಾಲ್‌ಪೇಪರ್‌
  17. ಒರಿಜಿನಲ್‌ ಮೆಸೆಂಜರ್

ಇದನ್ನೂ ಓದಿ: ಜೋಕರ್‌ ಮಾಲ್ವೇರ್‌ ನಿಮ್ಮ ಹಣ ಗುಳುಂ ಮಾಡಬಹುದು…ಹುಷಾರ್‌!

Exit mobile version