ನ್ಯೂಯಾರ್ಕ್: ಟ್ವಿಟರ್ (Twitter) ಜಾಲತಾಣ ಶೀಘ್ರದಲ್ಲೇ ಕಾಯಂ ಡಾರ್ಕ್ ಮೋಡ್‌ಗೆ (Dark mode) ಪರಿವರ್ತನೆಯಾಗಲಿದೆ ಎಂದು ಸಂಸ್ಥೆಯ ಮಾಲಿಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.
ಟ್ವಿಟರ್‌ನ ಲೈಟ್ ಮೋಡ್ ವರ್ಸಸ್ ಡಾರ್ಕ್ ಮೋಡ್ ಚರ್ಚೆಗೆ ತಾವೂ ಜಾಯಿನ್ ಆಗಿರುವ ಎಲಾನ್ ಮಸ್ಕ್, ಗ್ರಾಹಕರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ʼʼಈ ವೇದಿಕೆಯಲ್ಲಿ ಇನ್ನು ಮುಂದೆ ಡಾರ್ಕ್ ಮೋಡ್ ಮಾತ್ರ ಉಳಿಯಲಿದೆ. ಇದು ಎಲ್ಲ ರೀತಿಯಿಂದಲೂ ಉತ್ತಮʼʼ ಎಂದು ಹೇಳಿದ್ದಾರೆ.
ಟ್ವಿಟರ್ ಅನ್ನು ʼಎಕ್ಸ್ʼ ಎಂದು ರಿ ಬ್ರಾಂಡಿಂಗ್ ಮಾಡಿರುವ ಮಸ್ಕ್, ಅದರಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಲಿರುವುದು ಈ ಮೂಲಕ ನಿಶ್ಚಿತವಾಗಿದೆ. ಹಲವಾರು ಮಂದಿ, ಟ್ವಿಟರ್‌ಗೆ ಲೈಟ್ ಮೋಡ್ ಕೂಡ ಒಂದು ಆಯ್ಕೆಯಾಗಿ ಇರಲಿ ಎಂದು ಆಗ್ರಹಿಸಿದ್ದಾರೆ.
ಲೈಟ್ ಮೋಡ್ ಕಣ್ಣುಗಳಿಗೆ ಅನುಕೂಲ. ಡಾರ್ಕ್ ಮೋಡ್‌ನಲ್ಲಿ ಕಪ್ಪು ಹಿನ್ನೆಲೆಯ ಮೇಲೆ ಇರುವ ಅಕ್ಷರಗಳು ಕಣ್ಣಿಗೆ ತ್ರಾಸ ಕೊಡುತ್ತವೆ ಎಂದು ಅನೇಕರು ಹೇಳಿದ್ದಾರೆ. ಸದ್ಯ ಟ್ವಿಟರ್‌ನಲ್ಲಿ ಡಾರ್ಕ್ ಬ್ಲೂ, ಗ್ರೇ, ಲೈಟ್ ಮೋಡ್, ಸಂಪೂರ್ಣ ಬ್ಲ್ಯಾಕ್ ಮೋಡ್ ಆಯ್ಕೆಗಳಿವೆ.
ಇತ್ತೀಚೆಗೆ ತಮ್ಮ ಮಾಲಿಕತ್ವದ ಸಾಮಾಜಿಕ ಜಾಲತಾಣದ (social media) ಲೋಗೊವನ್ನು ʼನೀಲಿ ಹಕ್ಕಿ’ಯ ಬದಲಾಗಿ ‘X’ಗೆ ಮಸ್ಕ್ ಬದಲಾಯಿಸಿದ್ದರು. ಏಪ್ರಿಲ್‌ನಲ್ಲಿ ಟ್ವಿಟರ್‌ನ ನೀಲಿ ಹಕ್ಕಿ ಲೋಗೊವನ್ನು ತಾತ್ಕಾಲಿಕವಾಗಿ ಬದಲಿಸಿ ಡಾಗ್ ಕಾಯಿನ್‌ನ ಶಿಬಾ ಲೋಗೊವನ್ನು ಅನಾವರಣ ಮಾಡಲಾಗಿತ್ತು. ಇದರ ಪರಿಣಾಮ ಈ ಕ್ರಿಪ್ಟೊ ಕರೆನ್ಸಿಯ ಮಾರುಕಟ್ಟೆ ಮೌಲ್ಯ ಗಗನಕ್ಕೇರಿತ್ತು.
ಇದನ್ನೂ ಓದಿ: Twitter New Logo: ‘ಹಕ್ಕಿ’ ಹಾರಿ ಹೋತೊ ಗೆಳೆಯ; ಟ್ವಿಟರ್ ಹೊಸ ಲೋಗೊ ಅನಾವರಣ, ಮಸ್ಕ್ ಮತ್ತೊಂದು ಸಾಹಸ