ಬೆಂಗಳೂರು: ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ (X) ಸ್ವಲ್ಪ ಸಮಯದಿಂದ ದೀರ್ಘ-ರೂಪದ ವೀಡಿಯೊಗಳ ಪ್ರಸಾರ ಸಾಧ್ಯತೆಗಳನ್ನು ಪರೀಕ್ಷಿಸುತ್ತಿದೆ. ಇದೀಗ ಕಂಪನಿಯು ಈಗ ಸ್ಮಾರ್ಟ್ ಟಿವಿಗಳಿಗಾಗಿ ಮೀಸಲಾದ ಅಪ್ಲಿಕೇಶನ್ (TV app) ಅನ್ನು ಪ್ರಾರಂಭಿಸುವ ಸೂಚನೆ ನೀಡಿದೆ ಎಂಬುದಾಗಿ ವರದಿಯಾಗಿದೆ. ಆರಂಭದಲ್ಲಿ, ಫೈರ್ ಒಎಸ್ (ಅಮೆಜಾನ್) ಮತ್ತು ಟಿಜೆನ್ ಓಎಸ್ (ಸ್ಯಾಮ್ಸಂಗ್) ನಲ್ಲಿ ಇನ್ಸ್ಟಾಲ್ ಮಾಡಬಹುದಾದ ಅಪ್ಲಿಕೇಷನ್ಗಳನ್ನು ಬಿಡುಗಡೆ ಮಾಡಲಿದೆ. ಬಳಿಕ ಅದು ಗೂಗಲ್ ಟಿವಿ ಓಎಸ್ ಮತ್ತು ಆಪಲ್ ಟಿವಿಒಎಸ್ನಂಥ ಇತರ ಜನಪ್ರಿಯ ಫ್ಲ್ಯಾಟ್ಫಾರ್ಮ್ಗಳಿಗೆ ವಿಸ್ತರಿಸುವ ಸಾಧ್ಯತೆಗಳಿವೆ.
ನ ವರದಿಯ ಪ್ರಕಾರ, ಸ್ಮಾರ್ಟ್ ಟಿವಿಗಳಿಗಾಗಿ ಮುಂಬರುವ ಎಕ್ಸ್ ಅಪ್ಲಿಕೇಶನ್ ಒಂದು ವಾರದಲ್ಲಿ ಬಿಡುಗಡೆಯಾಗಲಿದೆ ಮತ್ತು ಯೂಟ್ಯೂಬ್ ನಂತಹ ಫೀಚರ್ಗಳು ಮತ್ತು ಯೂಸರ್ ಇಂಟರ್ಫೇಸ್ ನೀಡಲಿದೆ. ಎಕ್ಸ್ ನಲ್ಲಿ ಬಳಕೆದಾರರ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸ ವೇಳೆ ಎಲಾನ್ ಮಸ್ಕ್ ಇದನ್ನು ಖಚಿತಪಡಿಸಿದ್ದಾರೆ.
ಯೂಟ್ಯೂಬ್ಗೆ ಪೈಪೋಟಿ
ಯೂಟ್ಯೂಬ್ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಉಚಿತ-ಬಳಕೆಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್. ಮತ್ತು ಎಲಾ ನ್ ಮಸ್ಕ್ ಎಕ್ಸ್ ಅನ್ನು ಪರ್ಯಾಯ ಆ್ಯಪ್ ಅಗಿ ಮಾರುಕಟ್ಟೆಗೆ ಇಳಿಸಲಿದೆ. ದೊಡ್ಡ ಪರದೆಯಲ್ಲಿ ಪ್ಲಾಟ್ಫಾರ್ಮ್ನಿಂದ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಬಳಕೆದಾರರು ಆಪಲ್ ಏರ್ಪ್ಲೇ ಫೀಚರ್ಗಳನ್ನು ಬಳಸಬಹುದು ಎಂದು ಮಸ್ಕ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಬರುವ ದೀರ್ಘ ಅವಧಿಯ ವೀಡಿಯೊಗಳನ್ನು ಸ್ಮಾರ್ಟ್ ಟಿವಿಗಳಲ್ಲಿ ನೇರವಾಗಿ ವೀಕ್ಷಿಸಬಹುದು ಎಂದು ಬಳಕೆದಾರರು ಮಾಡಿರುವ ಪೋಸ್ಟ್ಗೆ ಪ್ರತಿಕ್ರಿಯಿಸಿದ ಮಸ್ಕ್, “ಶೀಘ್ರದಲ್ಲೇ ಬರಲಿದೆ” ಎಂದು ಹೇಳಿದರು.
Coming soon https://t.co/JlnlSL7eS9
— Elon Musk (@elonmusk) March 9, 2024
ಎಲ್ಲ ಇರುವ ಅಪ್ಲಿಕೇಷನ್
ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಮಸ್ಕ್ ಅದನ್ನು “ಎಲ್ಲವೂ ಇರುವ ” ಅಪ್ಲಿಕೇಶನ್ ಎಂದು ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗೆ ಸ್ಥಳೀಯ ಆಡಿಯೋ ಮತ್ತು ವೀಡಿಯೊ ಕರೆ ಸಾಮರ್ಥ್ಯಗಳನ್ನೂ ಪರಿಚಯಿಸಿದ್ದಾರೆ. ಕಂಪನಿಯು ಪೇಮೇಂಟ್ ( ಹಣ ಪಾವತಿ ಮಾಡುವ) ಫೀಚರ್ಗಳನ್ನು ಸೇರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ಬಳಕೆದಾರರಿಗೆ ಅಪ್ಲಿಕೇಶನ್ ಮೂಲಕವೇ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲೂ ಸಾಧ್ಯವಿದೆ.
ಇದನ್ನೂ ಓದಿ : ನೋಡ್ತಾ ಇರಿ.. ಅಮೆರಿಕದವರು ಭಾರತದ ವೀಸಾಗೆ ಕಾಯೋ ಕಾಲ ಬರುತ್ತೆ ಎಂದ ಬೊಮ್ಮಾಯಿ
ಎಕ್ಸ್ ದೀರ್ಘ- ಬರಹ ಹಾಗೂ ವಿಡಿಯೊ ಪೋಸ್ಟ್ ಮಾಡುವ ಸಾಮರ್ಥ್ಯ, ಪೋಸ್ಟ್ಗಳನ್ನು ಎಡಿಟ್ ಮಾಡುವ ಸಾಮರ್ಥ್ಯ, ಬ್ಲೂ ಟಿಕ್ ಮಾರ್ಕ್ಗಳು ಮತ್ತು ಪ್ರೀಮಿಯಂ ಬಳಕೆದಾರರಿಗೆ ಗ್ರೋಕ್ ಜನರೇಟಿವ್ ಎಐ ವೈಶಿಷ್ಟ್ಯಗಳನ್ನು ಸಹ ಪರಿಚಯಿಸಿದೆ. ಪ್ರೀಮಿಯಂ ಚಂದಾದಾರಿಕೆ ಮೂಲಕ ಜಾಹೀರಾತು-ಮುಕ್ತ ಬಳಕೆದಾರ ಅನುಭವ ಕೂಡ ನೀಡುತ್ತದೆ. ಡೆಸ್ಕ್ ಟಾಪ್ ಚಂದಾದಾರರಿಗೆ ತಿಂಗಳಿಗೆ 1,300 ರೂ. ನಿಗದಿ ಮಾಡಲಾಗಿದೆ.