Site icon Vistara News

Gleeden App | ವಿವಾಹೇತರ ಡೇಟಿಂಗ್ ಆ್ಯಪ್‌ ಗ್ಲೀಡೆನ್‌ಗೆ 20 ಲಕ್ಷ ಭಾರತೀಯ ಬಳಕೆದಾರರು!

Gleeden App @ Indian Users

ನವದೆಹಲಿ: ಫ್ರಾನ್ಸ್ ಮೂಲದ ವಿವಾಹೇತರ ಡೇಟಿಂಗ್ ಆ್ಯಪ್ ಗ್ಲೀಡೆನ್(Gleeden App) ಒಂದು ಕೋಟಿ ಬಳಕೆದಾರರ ಗುರಿಯನ್ನು ತಲುಪಿರುವುದಾಗಿ ಸೋಮವಾರ ಘೋಷಿಸಿದೆ. ಈ ಪೈಕಿ ಭಾರತದಿಂದಲೇ 20 ಲಕ್ಷ ಬಳಕೆದಾರರಿದ್ದಾರೆ. ಸೆಪ್ಟೆಂಬರ್‌ನಿಂದ ಇತ್ತೀಚೆಗೆ ಆ್ಯಪ್ ಒಟ್ಟು ಶೇ.11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಗ್ಲೀಡೆನ್ ಆ್ಯಪ್‌ನ ಒಟ್ಟು ಬಳಕೆದಾರರ ಪೈಕಿ ಶೇ.66ರಷ್ಟು ಬಳಕೆದಾರರು ಟೈರ್ 1 ಸಿಟಿಗಳಿಂದ ಇದ್ದಾರೆ. ಉಳಿದ ಶೇ.44ರಷ್ಟುಬಳಕೆದಾರ ಟೈರ್ 2 ಮತ್ತು 3 ಸ್ತರದ ನಗರವಾಸಿಗಳಾಗಿದ್ದಾರೆ ಎಂದು ಆ್ಯಪ್ ತಿಳಿಸಿದೆ. ಭಾರತವು ವಿವಾಹಗಳು ಮತ್ತು ಏಕಪತ್ನಿತ್ವಕ್ಕೆ ಮಹತ್ವ ನೀಡುವ ದೇಶವಾಗಿದ್ದು, ಅಪ್ಲಿಕೇಶನ್‌ನಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2022ರಲ್ಲಿ ನಮಗೆ ಶೇ.18ಕ್ಕಿಂತ ಹೆಚ್ಚು ಹೊಸ ಬಳಕೆದಾರರು ದೊರೆತಿದ್ದಾರೆ. ಇದು ಡಿಸೆಂಬರ್ 2021 ರಲ್ಲಿ 1.7 ಮಿಲಿಯನ್‌ ಇದ್ದ ಬಳಕೆದಾರರ ಪ್ರಮಾಣ ಈಗ 20 ಲಕ್ಷಕ್ಕೂ ಅಧಿಕವಾಗಿದೆ ಎಂದು ಗ್ಲೀಡೆನ್‌ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಿಬಿಲ್ ಶಿಡ್ಡೆಲ್ ಹೇಳಿದ್ದಾರೆ.

ಈ ಆ್ಯಪ್ ಅನ್ನು ವಿಶೇಷವಾಗಿ ವಿವಾಹಿತರಾಗಿಯೇ ವಿನ್ಯಾಸ ಮಾಡಲಾಗಿದೆ. ಗ್ಲೀಡೆನ್‌ನಲ್ಲಿ ಭಾರತೀಯ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ, ಏಕಪತ್ನಿತ್ವ ಪರಿಕಲ್ಪನೆ ನಿಧಾನವಾಗಿ ಹೇಗೆ ಬದಿಗೆ ಸರಿಯುತ್ತಿದೆ ಎಂಬುದನ್ನು ಸಾಂಕೇತಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ | Kidnap Case | ಡೇಟಿಂಗ್ ಆ್ಯಪ್ ತಂದ ಅವಾಂತರ: ಪ್ರಿಯತಮನ ಕಿಡ್ನಾಪ್ ಮಾಡಿ ಹಲ್ಲೆ ಎಸಗಿದ ಪ್ರಿಯತಮೆ

Exit mobile version