Site icon Vistara News

Apple Store: ಮುಂದಿನ ವಾರ ಮುಂಬೈನಲ್ಲಿ ಭಾರತದ ಪ್ರಥಮ ಐಫೋನ್ ಮಳಿಗೆ ಶುರು! ಚೀನಾಗೆ ನಿರಾಸೆ

Apple employees ChatGPT ban for Apple employees, what is the reason?

ನವದೆಹಲಿ: ಮುಂದಿನ ವಾರ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಮೊದಲ ಐಫೋನ್ ಮಳಿಗೆಯನ್ನು ಆರಂಭಿಸಲಿದೆ. ಇದಕ್ಕಾಗಿ ಆ್ಯಪಲ್ ಸಿಇಒ ಟಿಮ್ ಕುಕ್ (Tim Cook) ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಆ್ಯಪಲ್ ಕಂಪನಿಯು ಭಾರತವನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಹಾಗೂ ಉತ್ಪಾದನಾ ಕೇಂದ್ರವಾಗಿ ಪರಿಗಣಿಸಿದ್ದು, ಆ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಆರಂಭಿಸಿದೆ(Apple Store).

ಆ್ಯಪಲ್ ಕಂಪನಿಯು ಭಾರತದಲ್ಲಿ ಒಟ್ಟು ಎರಡು ಮಳಿಗೆಗೆಳನ್ನು ಆರಂಭಿಸಲಿದೆ. ಈ ಪೈಕಿ, ದೇಶದ ಹಣಕಾಸು ರಾಜಧಾನಿಯಾಗಿರುವ ಮುಂಬೈ ಹಾಗೂ ಮತ್ತೊಂದು ಮಳಿಗೆಯನ್ನು ದೇಶದ ರಾಜಕೀಯ ರಾಜಧಾನಿಯಾಗಿರುವ ನವದೆಹಲಿಯಲ್ಲಿ ತೆರೆಯಲಿದೆ. ಏಪ್ರಿಲ್ 18ರಂದು ಮುಂಬೈನಲ್ಲಿ ಸ್ಟೋರ್ ಆರಂಭವಾದರೆ, ಏಪ್ರಿಲ್ 20ರಂದಲ್ಲಿ ದಿಲ್ಲಿ ಐಫೋನ್ ಮಳಿಗೆ ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಆ್ಯಪಲ್ ಸಿಇಒ ಟಿಮ್ ಕುಕ್ ಅವರು ಭಾರತಕ್ಕೆ ಏಳು ವರ್ಷಗಳ ನಂತರ ಬರುತ್ತಿದ್ದಾರೆ. ಇದಕ್ಕೂ ಮೊದಲು ಅವರು 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಜಗತ್ತಿನ ಬಹುದೊಡ್ಡ ಮೌಲ್ಯ ಕಂಪನಿಯಾಗಿರುವ ಆ್ಯಪಲ್ ಮಳಿಗೆಯನ್ನು ಆರಂಭಿಸುವ ಮೂಲಕ ಜಗತ್ತಿನ ಪ್ರಮುಖ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೊರಟಿದೆ. ಭಾರತದ ಐಫೋನ್‌ಗಳ ಮಾರಾಟವು ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ದೇಶದಿಂದ ವಾರ್ಷಿಕ ಐಫೋನ್ ರಫ್ತು ಶತಕೋಟಿ ಡಾಲರ್‌ಗಳನ್ನು ತಲುಪಲಿದೆ. ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟಿರುವ ಮಧ್ಯೆ ಚೀನಾವನ್ನು ಪಕ್ಕಕ್ಕೆ ಇಟ್ಟು ತನ್ನ ವ್ಯಾಪಾರ ಕಾರ್ಯಾಚರಣೆಯನ್ನು ಆ್ಯಪಲ್ ಭಾರತದಲ್ಲಿ ಮಾಡಲು ಹೊರಟಿದೆ.

ಕುಕ್ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ದುಬಾರಿ ಮಾಲ್‌ನಲ್ಲಿ ಆಪಲ್‌ನ ಮೊದಲ ಭಾರತೀಯ ಅಂಗಡಿಗೆ ಚಾಲನೆ ನೀಡಲಿದ್ದಾರೆ. ಈ ಪ್ರದೇಶವನ್ನು ಬಿಕೆಸಿ ಎಂದೂ ಕರೆಯುತ್ತಾರೆ. ಅದೇ ರೀತಿ, ಕೆಲವು ದಿನಗಳ ನಂತರ, ಅವರು ಸಾಕೇತ್ ನೆರೆಹೊರೆಯಲ್ಲಿರುವ ಉನ್ನತ-ಮಟ್ಟದ ಮಾಲ್‌ನಲ್ಲಿ ದಿಲ್ಲಿಯ ಮಳಿಗೆಗೂ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಪ್ರೆಸ್ಟೀಜ್‌ ಮಿನ್ಸ್ಕ್‌ ಸ್ಕ್ವೇರ್ ಕಟ್ಟಡವನ್ನು ಆ್ಯಪಲ್‌ ಲೀಸ್‌ಗೆ ಪಡೆದಿದ್ದೇಕೆ?

ಐಫೋನ್‌ ಮತ್ತು ಐಪಾಡ್ ಉತ್ಪಾದಕ ಆ್ಯಪಲ್‌ ಕಂಪನಿಯು ಬೆಂಗಳೂರಿನ ಪ್ರೆಸ್ಟೀಜ್‌ ಮಿನ್ಸ್ಕ್‌ ಸ್ಕ್ವೇರ್‌ನ ಮೆಗಾ ಕಚೇರಿ ಕಟ್ಟಡದಲ್ಲಿ ಹಲವಾರು ಅಂತಸ್ತುಗಳನ್ನು ಲೀಸ್‌ಗೆ ಪಡೆದಿದೆ. ಮುಂದಿನ 10 ವರ್ಷಗಳಿಗೆ ಮಾಸಿಕ 2.44 ಕೋಟಿ ರೂ. ಬಾಡಿಗೆಯನ್ನು ಆ್ಯಪಲ್‌‌ (Apple) ನೀಡಲಿದೆ. ಒಟ್ಟು 1,16,888 ಚದರ ಅಡಿ ಪ್ರದೇಶವನ್ನು ಆ್ಯಪಲ್‌ ಲೀಸ್‌ಗೆ ಪಡೆದಿದೆ ಎಂದು ವರದಿಯಾಗಿದೆ.

ಪ್ರತಿ ಮೂರು ವರ್ಷಕ್ಕೊಮ್ಮೆ ಬಾಡಿಗೆಯಲ್ಲಿ 15% ಏರಿಕೆಯಾಗಲಿದೆ. ಉಭಯ ಬಣಗಳಿಗೆ 5 ವರ್ಷಗಳ ಲಾಕ್‌ ಇನ್‌ ಅವಧಿ ಇರಲಿದೆ. ಆ್ಯಪಲ್‌ ಕಂಪನಿಯು ಈ ಕಟ್ಟಡದಲ್ಲಿ ತನ್ನ ಗ್ಲೋಬಲ್‌ ಕೆಪಬಿಲಿಟಿ ಸೆಂಟರ್‌ ಅನ್ನು ವ್ಯವಸ್ಥೆಗೊಳಿಸಲಿದೆ. ಹಾಗೂ ಅದೇ ಕಟ್ಟಡದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳು ಬರದಂತೆ ನಿರ್ಬಂಧಿಸಿದೆ. ಭಾರತದಲ್ಲಿ ತನ್ನ ವಹಿವಾಟನ್ನು ಹಾಗೂ ಐಫೋನ್‌ ಉತ್ಪಾದನೆಯನ್ನು ವ್ಯಾಪಕವಾಗಿ ವೃದ್ಧಿಸಲು ಆ್ಯಪಲ್‌ ಮುಂದಾಗಿದ್ದು, ಅದರ ಭಾಗವಾಗಿ ಈ ಕಟ್ಟಡದ ಲೀಸ್‌ ನಡೆದಿದೆ ಎಂದು ವರದಿಯಾಗಿದೆ.

ವಿಸ್ಟ್ರಾನ್‌ ಐಫೋನ್‌ ಘಟಕವನ್ನು ಖರೀದಿಸಲು ಟಾಟಾ ಗ್ರೂಪ್‌ ಸಜ್ಜು

ಟಾಟಾ ಗ್ರೂಪ್‌ ಬೆಂಗಳೂರಿಗೆ ಸಮೀಪದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್‌ ಐಫೋನ್‌ ಘಟಕವನ್ನು ಖರೀದಿಸಲು (Wistron iPhone plant) ಸಜ್ಜಾಗಿದೆ. ಏಪ್ರಿಲ್‌ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ. ಇದು ಕಾರ್ಯಗತವಾದರೆ ಆ್ಯಪಲ್‌ ಐಫೋನ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್‌ ಹೊರಹೊಮ್ಮಲಿದೆ. ಟಾಟಾ ಗ್ರೂಪ್‌ (Tata Group) ಈಗಾಗಲೇ ಇದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.

ಇದನ್ನೂ ಓದಿ: Apple iPhone : ಭಾರತದಿಂದ ಮೊಟ್ಟ ಮೊದಲ ಬಾರಿಗೆ 40,000 ಕೋಟಿ ರೂ.ಗೂ ಹೆಚ್ಚು ಆ್ಯಪಲ್ ಐಫೋನ್‌ ರಫ್ತು

ಒಂದು ವೇಳೆ ಟಾಟಾ ಗ್ರೂಪ್‌, ವಿಸ್ಟ್ರಾನ್‌ ಘಟಕವನ್ನು ಖರೀದಿಸಿದರೆ 2,000 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಸ್ತರದಲ್ಲಿರುವ 400 ಸಿಬ್ಬಂದಿ ವಲಸೆ ಹೋಗುವ ಸಾಧ್ಯತೆಯೂ ಇದೆ. 4-5 ಹಿರಿಯ ಉದ್ಯೋಗಿಗಳಿಗೆ ಕಂಪನಿ ಬಿಡುವಂತೆ ತಿಳಿಸಲಾಗಿದೆ.

Exit mobile version