ಬೆಂಗಳೂರು: ಮಹತ್ವಾಕಾಂಕ್ಷಿ ಚಂದ್ರಯಾನ -3 ಯೋಜನೆಯ ಬಾಹ್ಯಾಕಾಶ ನೌಕೆಯು ಚಂದ್ರನ ಸಮೀಪ ಹೋಗುತ್ತಿದ್ದು, ಭಾನುವಾರ ತಾನು ತೆಗೆದ ಮೊದಲ ಚಿತ್ರಗಳನ್ನು ಹಂಚಿಕೊಂಡಿದೆ. ಆ ಚಿತ್ರಗಳು ಅದ್ಭುತವಾಗಿ ಕಾಣುತ್ತಿದ್ದು ಭಾರತೀಯರ ಕೌತುಕ ಹೆಚ್ಚಾಗಿದೆ. ಮಹತ್ವಾಕಾಂಕ್ಷೆಯ ಚಂದ್ರಯಾನ -3 ಮಿಷನ್ನ ಬಾಹ್ಯಾಕಾಶ ನೌಕೆ ಶನಿವಾರ ಚಂದ್ರನ ಕಕ್ಷೆಯನ್ನು ಪ್ರವೇಶಿತ್ತು. ನೌಕೆ ಕಳುಹಿಸಿ ವೀಡಿಯೊ ಕ್ಲಿಪ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದೆ. ಚಂದ್ರನ ಮೇಲ್ಮೈಯಲ್ಲಿ ಸೇಫ್ ಲ್ಯಾಂಡ್ ಮಾಡಲು 20 ದಿನಗಳಿಗಿಂತ ಕಡಿಮೆ ಉಳಿದಿದೆ. ಏತನ್ಮಧ್ಯೆ ಕ್ರಾಫ್ಟ್ ಚಂದ್ರನ ಕುಳಿಗಳ ಸಂಕೀರ್ಣ ವಿವರಗಳ ಒಂದು ನೋಟವನ್ನು ಕಳುಹಿಸಿದೆ.
ಆಗಸ್ಟ್ 5, 2023ರಂದು ಚಂದ್ರನ ಕಕ್ಷೆ ಸೇರ್ಪಡೆ (ಎಲ್ಒಐ) ಸಮಯದಲ್ಲಿ #Chandrayaan3 ಬಾಹ್ಯಾಕಾಶ ನೌಕೆ ಚಂದ್ರನನ್ನು ವೀಕ್ಷಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿಕೊಂಡಿದೆ.
ಚಂದ್ರಯಾನ -3 ಭಾರತದ ಮೂರನೇ ಮಾನವರಹಿತ ಚಂದ್ರಯಾನ ಮಿಷನ್ ಆಗಿದೆ. ಇಲ್ಲಿಯವರೆಗೆ ಒಟ್ಟು ದೂರದ ಮೂರನೇ ಎರಡು ಭಾಗವನ್ನು ಕ್ರಮಿಸಿದ್ದು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ‘ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಿದ್ದೇನೆ’ ಎಂಬುದಾಗಿ ಚಂದ್ರಯಾನ -3 ಅನ್ನು ಚಂದ್ರನ ಹತ್ತಿರಕ್ಕೆ ತಂದ ಸಂದರ್ಭವನ್ನು ಇಸ್ರೊ ಬಣ್ಣಿಸಿತ್ತು. ಜುಲೈ 14 ರಂದು ಉಡಾವಣೆಯಾದ ಮೂರು ವಾರಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ಅದನ್ನು ಎತ್ತುವ ಪ್ರಯತ್ನದಲ್ಲಿ ನೌಕೆ ಐದುಕ್ಕೂ ಹೆಚ್ಚು ಚಲನೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ : Chandrayaan- 3 : ಇಲ್ಲಿದೆ ಸಂತಸದ ಸುದ್ದಿ; ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನದ ನೌಕೆ
ರಾತ್ರಿ 11 ಗಂಟೆಗೆ ಮತ್ತೊಂದು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ರೋವರ್ ಪ್ರಜ್ಞಾನ್ ಅನ್ನು ಹೊತ್ತ ಲ್ಯಾಂಡಿಂಗ್ ಮಾಡ್ಯೂಲ್ ವಿಕ್ರಮ್ ತನ್ನ ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡಲಿದೆ. ಅದಕ್ಕೂ ಮೂದಲು ಮೂರು ಕಾರ್ಯಾಚರಣೆಗಳು ನಡೆಯಲಿದೆ. ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೊದಲು ಇದನ್ನು ಕಕ್ಷೆಯಿಂದ ತೆಗೆದುಹಾಕಲಾಗುತ್ತದೆ.
ಚಂದ್ರನ ಕಕ್ಷೆಗೆ ನೌಕೆಯ ಸೇರ್ಪಡೆಯು ಇಸ್ರೊದ ಮಹತ್ವಾಕಾಂಕ್ಷೆಯ 600 ಕೋಟಿ ರೂ.ಗಳ ಕಾರ್ಯಾಚರಣೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.