ಕ್ಯಾಲಿಫೋರ್ನಿಯಾ: ಬಹು ನಿರೀಕ್ಷೆಯ Apple iPhone 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಅವರು ಆ್ಯಪಲ್ 14 ಸರಣಿಯ ಮೊಬೈಲ್‌ಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಭಾರತದಲ್ಲಿ ಬೆಲೆ ಎಷ್ಟು?
ಭಾರತದ ಗ್ರಾಹಕರಿಗೆ ಐಫೋನ್ 14 (ಪ್ರೊ) ಬೆಲೆ 79,900 ರೂ. ಆಗಲಿದೆ. ಹಾಗೆಯೇ, ಐಫೋನ್ 14 ಪ್ಲಸ್‌ಗೆ (ಪ್ರೊ ಮ್ಯಾಕ್ಸ್) 89,900 ರೂ. ಆಗಲಿದೆ. ಐಫೋನ್ 14 ಸೆಪ್ಟೆಂಬರ್ 16ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ, ಐಫೋನ್ 14 ಪ್ಲಸ್ ಅಕ್ಟೋಬರ್ 7ರಿಂದ ಲಭ್ಯವಾಗಲಿದೆ.
ವೈಶಿಷ್ಟ್ಯವೇನು?
ಕ್ಯಾಮೆರಾದಲ್ಲಿ ಆ್ಯಪಲ್ ಕಂಪನಿಯು ಈ ಬಾರಿ ಮಹತ್ವದ ಬದಲಾವಣೆ ಮಾಡಿದೆ. ಆ್ಯಪಲ್ 14 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಎರಡೂ 48 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿವೆ. ಹಾಗೆಯೇ, ಇವುಗಳ ಸೆನ್ಸಾರ್ ಆ್ಯಪಲ್ 13 ಪ್ರೊಗಿಂತ ಶೇ.65ರಷ್ಟು ದೊಡ್ಡದಾಗಿವೆ. ಸ್ಯಾಟಲೈಟ್ ಕನೆಕ್ಟಿವಿಟಿ (ಇಂಟರ್‌ನೆಟ್ ಇಲ್ಲದೆ ಮಾಹಿತಿ ರವಾನಿಸುವುದು ಹಾಗೂ ಸ್ವೀಕರಿಸುವುದು), ಐಫೋನ್ 14 ಪ್ರೊ 6.1 ಇಂಚು ಹಾಗೂ ಪ್ರೊ ಮ್ಯಾಕ್ಸ್ 6.7 ಇಂಚಿನ ಡಿಸ್‌ಪ್ಲೇ ಹೊಂದಿವೆ. ಇವುಗಳಲ್ಲೂ ಆ್ಯಪಲ್ 13 ಪ್ರೊನಂತೆ ಎ 15 ಪ್ರೊಸೆಸರ್ ಇದೆ.
ಆ್ಯಪಲ್ ವಾಚ್ 8ನಲ್ಲಿ ಏನಿದೆ?
ಆ್ಯಪಲ್ ವಾಚ್ 8ಅನ್ನೂ ಬಿಡುಗಡೆ ಮಾಡಲಾಗಿದ್ದು, ಹಲವು ಫೀಚರ್‌ಗಳು ಗ್ಯಾಜೆಟ್ ಪ್ರಿಯರನ್ನು ಅಚ್ಚರಿಗೊಳಿಸಿವೆ. ಟೆಂಪರೇಚರ್ ಸೆನ್ಸಾರ್, ಸ್ವಿಮ್ ಪ್ರೂಫ್ ಹಾಗೂ ಕ್ರ್ಯಾಕ್‌ಪ್ರೂಫ್ ಸೇರಿ ಹಲವು ತಂತ್ರಜ್ಞಾನಗಳನ್ನು ಆ್ಯಪಲ್ ಪರಿಚಯಿಸಿದೆ. ಅಂದರೆ, ಈ ವಾಚ್‌ಅನ್ನು ಕಟ್ಟಿಕೊಂಡು ಈಜಿದರೂ ವಾಚ್‌ಗೆ ಏನೂ ಆಗುವುದಿಲ್ಲ. ಹಾಗೆಯೇ, ಗೋಡೆ ಸೇರಿ ಇನ್ನಾವುದೇ ವಸ್ತುವಿಗೆ ವಾಚ್ ತಾಗಿದರೂ ವಾಚ್‌ನ ಸ್ಕ್ರೀನ್‌ಗೆ ತೊಂದರೆ ಆಗುವುದಿಲ್ಲ. ಕಾರ್ ಕ್ರ್ಯಾಶ್ ಆಗುವುದನ್ನೂ ಇದು ಮೊದಲೇ ಎಚ್ಚರಿಸುತ್ತದೆ. ಕೈಗೆ ಕಟ್ಟಿದ 5 ಸೆಕೆಂಡ್‌ನಲ್ಲಿ ಇದು ಬಾಡಿ ಟೆಂಪರೇಚರ್ ಮಾಹಿತಿ ಒದಗಿಸುತ್ತದೆ. ಭಾರತದಲ್ಲಿ ಆ್ಯಪಲ್ ವಾಚ್ 8 ಸಿರೀಸ್‌ಗೆ ಸುಮಾರು 45,900 ರೂ. ಆಗಲಿದೆ. ಕಾರ್ಯಕ್ರಮದಲ್ಲಿ ಆ್ಯಪಲ್ ವಾಚ್ ಎಸ್‌ಇ-2, ಆ್ಯಪಲ್ ವಾಚ್ ಅಲ್ಟ್ರಾ ಮಾದರಿಯ ವಾಚ್ ಹಾಗೂ ಆ್ಯಪಲ್ ಏರ್‌ಪಾಡ್ಸ್ ಪ್ರೊ ಇಯರ್ ಬಡ್ಸ್‌ಗಳನ್ನೂ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ | iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!