Site icon Vistara News

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

Battery Life Tips

ಸ್ಮಾರ್ಟ್ ಫೋನ್ ಗಳಲ್ಲಿ (smart phone) ಹೆಚ್ಚಾಗಿ ಕಂಡು ಬರುವ ಸಮಸ್ಯೆ ಬ್ಯಾಟರಿ ಬ್ಯಾಕಪ್ (Battery Life Tips). ಹೆಚ್ಚಿನ ಬ್ಯಾಟರಿ ಲೈಫ್ ಡೇಟಾದಲ್ಲೇ (data) ಖಾಲಿಯಾಗುತ್ತದೆ. ಆದರೆ ಡೇಟಾ ಬಳಕೆ ಕಡಿಮೆ ಆಗಿದ್ದರೂ ಕೆಲವೊಮ್ಮೆ ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ ಎನ್ನುವ ದೂರು ಹೆಚ್ಚಿನವರದ್ದಾಗಿರುತ್ತದೆ. ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಕೆಲವೇ ಗಂಟೆಗಳ ಬ್ಯಾಕಪ್ ನೀಡುತ್ತಿದ್ದರೆ ಚಿಂತೆ ಪಡೆಬೇಕಿಲ್ಲ. ಯಾಕೆಂದರೆ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವ ಕೆಲವು ಸಲಹೆಗಳು ಇಲ್ಲಿವೆ.

ಸ್ಮಾರ್ಟ್ ಫೋನ್ ನ ಬ್ಯಾಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರೆ ಇದರ ಬ್ಯಾಟರಿ ಬ್ಯಾಕಪ್ ಅವಧಿಯನ್ನು ಹೆಚ್ಚಿಸುವ ಈ ಐದು ಸಲಹೆಗಳನ್ನು ಪಾಲಿಸಿದರೆ ಸಾಕು.

1. ಪರದೆಯ ಹೊಳಪನ್ನು ಕಡಿಮೆ ಮಾಡಿ

ಸ್ಮಾರ್ಟ್ ಫೋನ್ ಪರದೆಯ ಹೊಳಪು ಹೆಚ್ಚಿನ ಬ್ಯಾಟರಿಯನ್ನು ಸೇವಿಸುತ್ತದೆ. ಹೀಗಾಗಿ ಕಣ್ಣಿಗೆ ಆರಾಮದಾಯಕ ಎನಿಸುವ ಕನಿಷ್ಠ ಮಟ್ಟಕ್ಕೆ ಅದನ್ನು ಹೊಂದಿಸಿ. ಸೆಟ್ಟಿಂಗ್ ನಲ್ಲಿ ಸಾಧ್ಯವಾದರೆ ಸ್ವಯಂ-ಪ್ರಕಾಶಮಾನವನ್ನು ಬಳಸಿ. ಆಗ ತನ್ನಿಂತಾನೇ ಬ್ಯಾಟರಿ ಬಾಳಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ.

2. ಹಿನ್ನೆಲೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಮುಚ್ಚಿ

ಕೆಲವೊಂದು ಅಪ್ಲಿಕೇಶನ್ ಗಳನ್ನು ಬಳಸದೇ ಇದ್ದರೂ ಅದು ನಿಮ್ಮ ಸ್ಮಾರ್ಟ್ ಫೋನ್ ನ ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ. ಇಂತವುಗಳನು ಮುಚ್ಚಿದರೆ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು. ಇದಕ್ಕಾಗಿ ಸೆಟ್ಟಿಂಗ್‌ ನಲ್ಲಿ ಬ್ಯಾಟರಿಗೆ ಹೋಗಿ ಮತ್ತು ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಅನ್ನು ಆಫ್ ಮಾಡುವ ಮೂಲಕ ಈ ಅಪ್ಲಿಕೇಶನ್‌ಗಳನ್ನು ಮುಚ್ಚಿ.


3. ಸ್ಥಳ ತೋರಿಸುವ ವ್ಯವಸ್ಥೆ ಆಫ್ ಮಾಡಿ

ಜಿಪಿಎಸ್ ಆನ್ ಆಗಿರುವಾಗ ಅದು ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ. ಅಗತ್ಯವಿಲ್ಲದಿದ್ದಾಗ ಸ್ಥಳ ಸೇವೆಗಳನ್ನು ಆಫ್ ಮಾಡಿ.

4. ವೈ-ಫೈ ಮತ್ತು ಬ್ಲೂಟೂತ್ ಆಫ್ ಮಾಡಿ

ವೈ-ಫೈ ಮತ್ತು ಬ್ಲೂಟೂತ್ ಅನ್ನು ಬಳಸದೇ ಇರುವಾಗ ಅವುಗಳನ್ನು ಆಫ್ ಮಾಡಿ. ಅವುಗಳು ನಿರಂತರವಾಗಿ ಸಿಗ್ನಲ್ ಗಳಿಗಾಗಿ ಸ್ಕ್ಯಾನ್ ಮಾಡುತ್ತದೆ. ಇದು ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

5. ವಿದ್ಯುತ್ ಉಳಿತಾಯ ಮೋಡ್ ಬಳಸಿ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ವಿದ್ಯುತ್ ಉಳಿಸುವ ಮೋಡ್ ಅನ್ನು ಹೊಂದಿದ್ದು, ಬ್ಯಾಟರಿಯನ್ನು ಉಳಿಸಲು ಕೆಲವು ವೈಶಿಷ್ಟ್ಯಗಳನ್ನು ಮಿತಿಗೊಳಿಸುತ್ತದೆ. ಬ್ಯಾಟರಿ ಕಡಿಮೆಯಾದಾಗ ಅದನ್ನು ಆನ್ ಮಾಡಿ.

ಇದನ್ನೂ ಓದಿ: Credit Card Safety Tips: ಕ್ರೆಡಿಟ್‌ ಕಾರ್ಡ್ ವಂಚನೆಯಿಂದ ಪಾರಾಗಲು ಇಲ್ಲಿದೆ 9 ಸಲಹೆ

ಇವಿಷ್ಟೇ ಅಲ್ಲ. ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲು ಹಳೆಯ ಮತ್ತು ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಡೇಟಾ ಉಳಿತಾಯ ಮೋಡ್ ಬಳಸಿ, ಲೈವ್ ವಾಲ್‌ಪೇಪರ್‌ಗಳು ಮತ್ತು ಅನಿಮೇಷನ್‌ಗಳನ್ನು ಆಫ್ ಮಾಡಿ, ಅಧಿಕ ಬಿಸಿಯಾಗುವುದನ್ನು ತಪ್ಪಿಸಿ, ಉತ್ತಮ ಗುಣಮಟ್ಟದ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಬಳಸಿ ಮತ್ತು ಬ್ಯಾಟರಿ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿ.

ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆ ಅವಧಿಯನ್ನು ಹೆಚ್ಚಿಸಬಹುದು. ಹೆಚ್ಚು ಚಾರ್ಜ್ ಮಾಡದೆಯೇ ಅದನ್ನು ಪೂರ್ಣ ದಿನದವರೆಗೆ ಬಳಸಬಹುದು.

Exit mobile version