Site icon Vistara News

BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್‌; ಜಿಯೊ, ಏರ್‌ಟೆಲ್‌ಗೆ ಸೆಡ್ಡು

BSNL New Plan

ಖಾಸಗಿ ಟೆಲಿಕಾಂ ಕಂಪನಿಗಳು (private telecom company) ಜುಲೈ 2024ರ ಆರಂಭದಲ್ಲಿ ತಮ್ಮ ಶುಲ್ಕಗಳನ್ನು ನವೀಕರಿಸಿದಾಗಿನಿಂದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಯು ಸಾಮಾಜಿಕ ಮಾಧ್ಯಮದಲ್ಲಿ (social media) ಗಮನ ಸೆಳೆಯುತ್ತಿದೆ. ಭಾರತದ (india) ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ (bsnl) ಹೊಸ ಮತ್ತು ಆಕರ್ಷಕ ಯೋಜನೆಗಳನ್ನು (BSNL New Plan) ಪರಿಚಯಿಸುವ ಮೂಲಕ ಭಾರತದಾದ್ಯಂತ ತನ್ನ 4ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ.

ಬಿಎ ಸ್ ಎನ್ ಎಲ್ ಹೊಸ ಯೋಜನೆ

ಬಿ ಎಸ್ ಎನ್ ಎಲ್ ಅತ್ಯುತ್ತಮ ಯೋಜನೆಗಳಲ್ಲಿ ಒಂದು 395 ದಿನಗಳ ಮಾನ್ಯತೆಯನ್ನು ನೀಡುತ್ತದೆ. 13 ತಿಂಗಳ ಯೋಜನೆ ಇದಾಗಿದ್ದು, 2,399 ರೂ.ಗಳಾಗಿದ್ದು, ಇದು ತಿಂಗಳಿಗೆ ಸುಮಾರು 200 ರೂ. ಯ ಶುಲ್ಕವನ್ನು ವಿಧಿಸಿದಂತಾಗುತ್ತದೆ.

4ಜಿ ಯೋಜನೆಯ ಪ್ರಯೋಜನಗಳು

ಬಿಎಸ್ ಎನ್ ಎಲ್ 4ಜಿ ಯೋಜನೆಯ ವೈಶಿಷ್ಟ್ಯಗಳೆಂದರೆ ಇದರ ಮಾನ್ಯತೆ 395 ದಿನಗಳು. ಡೇಟಾ ಪ್ರತಿದಿನ 2GB ಹೈಸ್ಪೀಡ್ ಅನ್ನು ಒಳಗೊಂಡಿದ್ದು, ಎಸ್ ಎಮ್ ಎಸ್ ದಿನಕ್ಕೆ 100 ಉಚಿತ, ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು, ರಾಷ್ಟ್ರವ್ಯಾಪಿ ರೋಮಿಂಗ್ ಉಚಿತವಾಗಿರುತ್ತದೆ. ಜಿಂಗ್ ಸಂಗೀತ, ಬಿಎಸ್ ಎನ್ ಎಲ್ ಟ್ಯೂನ್ಸ್, ಹಾರ್ಡಿ ಆಟಗಳು, ಚಾಲೆಂಜರ್ ಅರೆನಾ ಆಟಗಳು ಮತ್ತು ಗೇಮನ್ ಆಸ್ಟ್ರೋಟೆಲ್ ಸೌಲಭ್ಯಗಳು ದೊರೆಯಲಿದೆ.

ಅನಿಯಮಿತ ಸೌಲಭ್ಯ

ಬಿಎಸ್ ಎನ್ ಎಲ್ ನಿಂದ ಮತ್ತೊಂದು ದೀರ್ಘಾವಧಿಯ ಆಯ್ಕೆಯು 365 ದಿನಗಳ ಯೋಜನೆಯಾಗಿದೆ. ಈ ಯೋಜನೆಯ ಮಾನ್ಯತೆಯು 365 ದಿನಗಳು. ದೈನಂದಿನ ಬಳಕೆಯ ಮಿತಿಯಿಲ್ಲದ 600 ಜಿಬಿ ಡೇಟಾ, ದಿನಕ್ಕೆ 100 ಉಚಿತ ಎಸ್ ಎಂಎಸ್, ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯಗಳು ಲಭ್ಯವಾಗಲಿದೆ.

ಇದನ್ನೂ ಓದಿ: EMI Loan: ಇಎಂಐನಲ್ಲಿ ಫೋನ್ ಖರೀದಿ ಮಾಡುವುದು ಲಾಭವೇ ಅಥವಾ ನಷ್ಟವೇ? ಇಲ್ಲಿದೆ ಲೆಕ್ಕಾಚಾರ

ಪಿ ಎಲ್ ಐ ಯೋಜನೆಯಡಿಯಲ್ಲಿ ಮಾರಾಟ

ಟೆಲಿಕಾಂ ಉಪಕರಣಗಳ ತಯಾರಿಕಾ ವಲಯವು ಉತ್ಪಾದನೆ- ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಡಿಯಲ್ಲಿ 50,000 ಕೋಟಿ ರೂಪಾಯಿಗಳನ್ನು ಮೀರಿ ಮಾರಾಟ ಮಾಡಿದೆ. 17,800 ಕ್ಕೂ ಹೆಚ್ಚು ನೇರ ಉದ್ಯೋಗಗಳು ಮತ್ತು ಇನ್ನೂ ಹೆಚ್ಚಿನ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.

ಪಿಎಲ್ ಐ ಯೋಜನೆಯಲ್ಲಿ ಹೂಡಿಕೆಗಳು

ಟೆಲಿಕಾಂ ಪಿಎಲ್‌ಐ ಯೋಜನೆಯ ಮೂರು ವರ್ಷಗಳಲ್ಲಿ 3,400 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಸರ್ಕಾರ ತಿಳಿಸಿದೆ.

Exit mobile version