ಬೆಂಗಳೂರು: ಇಂದು ಹೆಚ್ಚಿನ ವ್ಯವಹಾರಗಳು ನಡೆಯುವುದೇ ಡಿಜಿಟಲ್ (Digital) ಪಾವತಿಗಳ ಮೂಲಕ, ಅದರಲ್ಲೂ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಡಿಜಿಟಲ್ ಪಾವತಿಗಳನ್ನು ತುಂಬಾ ಅನುಕೂಲಕರವಾಗಿ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಯುಪಿಐ ಡಿಜಿಟಲ್ (Digital) ಪಾವತಿಗಳ ಜಗತ್ತಿನಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಜನಪ್ರಿಯ ಆ್ಯಪ್ ವಾಟ್ಸಾಪ್ ಮೂಲಕವೂ ಈಗ ಯುಪಿಐ ಪಾವತಿ ಸಾಧ್ಯ ಎಂಬುದು ತಿಳಿದಿರುವ ವಿಷಯವೇ. 2020 ರಲ್ಲಿ, ವಾಟ್ಸಾಪ್ ಯುಪಿಐ (WhatsApp UPI) ಆಧಾರಿತ ಪಾವತಿ ಸೇವೆಯನ್ನು ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಿತು. ಅದರ ಯಶಸ್ಸಿನ ನಂತರ, ಅದು ತನ್ನ ಭಾರತೀಯ ಬಳಕೆದಾರರಿಗೆ ಯುಪಿಐ(UPI) ಪಾವತಿಗಳನ್ನು ಹೊರತಂದಿತು.
ವಾಟ್ಸಾಪ್ ಭಾರತದಲ್ಲಿ ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿದೆ. 2024ರ ವೇಳೆಗೆ 535.8 ಮಿಲಿಯನ್ ತಲುಪಲಿದೆ ಎಂದು ನಂಬಲಾಗಿದೆ. ಆದರೂ ವ್ಯಕ್ತಿಯಿಂದ ವ್ಯಕ್ತಿಗೆ ವಹಿವಾಟುಗಳಿಗೆ ಬಂದಾಗ ಗೂಗಲ್ ಪೇ ಮತ್ತು ಫೋನ್ ಪೇ ಗೆ ಹೋಲಿಸಿದರೆ ವಾಟ್ಸಾಪ್ ನ ಯುಪಿಐ ಬಳಕೆದಾರರ ಸಂಖ್ಯೆ ಹಿಂದಿದೆ.
ನೀವು ವಾಟ್ಸಾಪ್ ಮೂಲಕ ಯುಪಿಐ ಪಾವತಿ ಮಾಡಬೇಕೆಂದಿದ್ದರೆ ಇಲ್ಲಿ ತಿಳಿಸಲಾದ ಸರಳ ವಿಧಾನಗಳನ್ನು ಅನುಸರಿಸಿ:
- – ನೀವು ಪಾವತಿ ಮಾಡಲು ಬಯಸುವ ವ್ಯಕ್ತಿಯ ವಾಟ್ಸಾಪ್ ಚಾಟ್ ವಿಂಡೋವನ್ನು ತೆರೆಯಿರಿ. ಅಟ್ಯಾಚ್ ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
- – ಪೇಮೆಂಟ್’ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.
- – ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ, ನಿಮ್ಮ ಯುಪಿಐ ಪಿನ್ ಹಾಕಿ ಮತ್ತು ಪಾವತಿ ಪ್ರಕ್ರಿಯೆಗಾಗಿ ಕಾಯಿರಿ.
ಈ ರೀತಿಯಲ್ಲಿ ಪಾವತಿ ಮಾಡುವುದು ಸಂದೇಶ ಅಥವಾ ದಾಖಲೆಗಳನ್ನು ಕಳುಹಿಸುವಷ್ಟೇ ಸರಳವಾಗಿದೆ. ಪಾವತಿದಾರರು ಮತ್ತು ಫಲಾನುಭವಿಗಳು ತಮ್ಮ ವಾಟ್ಸಾಪ್ ಚಾಟ್ ವಿಂಡೋದಲ್ಲಿ ಪಾವತಿಯ ಕುರಿತು ಸೂಚನೆಯನ್ನು ಪಡೆಯುತ್ತಾರೆ. ಯಾರಾದರೂ ಪಾವತಿಯ ಸ್ಥಿತಿಯನ್ನು ಖಚಿತಪಡಿಸಲು ಬಯಸಿದರೆ, ಅವರು ಎಸ್ ಎಂಎಸ್ ನಲ್ಲಿ ಬ್ಯಾಂಕ್ ವರ್ಗಾವಣೆ ವಿವರಗಳನ್ನು ಪರಿಶೀಲಿಸಬಹುದು ಅಥವಾ ಬ್ಯಾಂಕ್ ಮೂಲಕ ವಹಿವಾಟಿನ ವಿವರಗಳನ್ನು ದೃಢೀಕರಿಸಬಹುದು.
ಇದನ್ನೂ ಓದಿ:SmartPhone: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಯೋಚನೆ ಇತ್ತಾ? ನಿಮಗೊಂದು ಶಾಕಿಂಗ್ ನ್ಯೂಸ್!
ವಾಟ್ಸಾಪ್ ಯುಪಿಐ ಸೆಟ್ ಮಾಡುವುದು ಹೇಗೆ?
- ವಾಟ್ಸಾಪ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್ ಗೆ ಹೋಗಿ.
- – ಪಾವತಿಗಳ ಆಯ್ಕೆಯನ್ನು ಆರಿಸಿ
- – ‘ಹೊಸ ಖಾತೆಯನ್ನು ಸೇರಿಸಿ’ ಆಯ್ಕೆಯನ್ನು ಆರಿಸಿ.
- – ಉಲ್ಲೇಖಿಸಲಾದ ಆಯ್ಕೆಗಳಿಂದ ನಿಮ್ಮ ಬ್ಯಾಂಕ್ ಅನ್ನು ಆರಿಸಿ. ನಿಮ್ಮ ಆಯ್ಕೆಮಾಡಿದ ಬ್ಯಾಂಕ್ ಖಾತೆಯು ನಿಮ್ಮ ಯುಪಿಐ ಖಾತೆಗೆ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- – ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿದ ನಂತರ, ಯುಪಿಐ ಪಿನ್ ಸೆಟ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
- – ಯುಪಿಐ ಪಿನ್ ಸೆಟ್ ಮಾಡಿದ ನಂತರ ವಾಟ್ಸಾಪ್ ಯುಪಿಐ ವಹಿವಾಟುಗಳನ್ನು ಮಾಡಬಹುದು.
- – ವಾಟ್ಸಾಪ್ QR ಸ್ಕ್ಯಾನ್ ಮೂಲಕವೂ ಹಣವನ್ನು ವರ್ಗಾಯಿಸಬಹುದು.
ವಾಟ್ಸಾಪ್ QR ಸ್ಕ್ಯಾನ್ ಮೂಲಕ ಯುಪಿಐ ಪಾವತಿಗಳನ್ನು ಮಾಡುವುದು ಹೇಗೆ?
- – ವಾಟ್ಸಾಪ್ ಲಾಗಿನ್ ಆಗಿ ಮತ್ತು ಸೆಟ್ಟಿಂಗ್ಗೆ ಹೋಗಿ.
- – ನ್ಯೂ ಪೇಮೆಂಟ್ಸ್ ಆಯ್ಕೆಯನ್ನು ಆರಿಸಿ.
- – ‘ಸ್ಕ್ಯಾನ್ QR ಕೋಡ್’ ಆಯ್ಕೆಯನ್ನು ಆರಿಸಿ.
- – ನಿಮ್ಮ ಕ್ಯಾಮೆರಾವನ್ನು QR ಕೋಡ್ಗೆ ಪಾಯಿಂಟ್ ಮಾಡಿ.
- – ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ಹಾಕಿ ಮತ್ತು ನಿಮ್ಮ ಯುಪಿಐ ಪಿನ್ ಅನ್ನು ಹಾಕಿದ ನಂತರ ಪಾವತಿಯನ್ನು ಪೂರ್ಣಗೊಳಿಸಿ.
ವಾಟ್ಸಾಪ್ ಪ್ಲಾಟ್‌ಫಾರ್ಮ್ ಅಂತರರಾಷ್ಟ್ರೀಯ UPI ಪಾವತಿಗಳ ಸೇವೆ ನೀಡಲಿರುವುದರಿಂದ ಶೀಘ್ರದಲ್ಲೇ ಲಕ್ಷಾಂತರ ಜನರಿಗೆ ವಾಟ್ಸಾಪ್ ಪ್ರಬಲ ಪಾವತಿ ಆಯ್ಕೆಯಾಗಬಹುದು.