Site icon Vistara News

Phone Charging Tips: ಫೋನ್‌ಗಳನ್ನು ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Phone Charging Tips

ಬೆಳಗ್ಗೆ ಶೇ. 100ರಷ್ಟು ಚಾರ್ಜ್ ಮಾಡಿದ್ದ ಫೋನ್ ಬ್ಯಾಟರಿ (Phone Charging Tips) ಮಧ್ಯಾಹ್ನಕ್ಕೆ ಖಾಲಿಯಾಗುತ್ತದೆ. ಮಧ್ಯಾಹ್ನ ಮಾಡಿದ್ದು ಸಂಜೆ ವೇಳೆಗೆ ಬ್ಯಾಟರಿ ಲೋ (Battery Low) ತೋರಿಸುತ್ತದೆ. ಹೊಸ ಫೋನ್ ಬ್ಯಾಟರಿಯಲ್ಲಿ (New Phone battery) ಏನೂ ಸಮಸ್ಯೆ ಇರಲಿಕ್ಕಿಲ್ಲ. ಆದರೂ ಯಾಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಫೋನ್ ಚಾರ್ಜ್ ಮಾಡುವುದು ಎಲ್ಲರ ಬದುಕಿನ ದೈನಂದಿನ ದಿನಚರಿಯ ಒಂದು ಭಾಗವಾಗಿ ಬಿಟ್ಟಿದೆ. ಅಲ್ಲದೇ ಫೋನ್ ಗಳ ಬ್ಯಾಟರಿ ಅವಧಿಯನ್ನು ಆಗಾಗ್ಗೆ ಮೇಲ್ವಿಚಾರಣೆ ನಡೆಸುತ್ತಿರುತ್ತೇವೆ. ಫೋನ್ ಬ್ಯಾಟರಿ ಬೇಗನೆ ಖಾಲಿಯಾಗದಂತೆ ನೋಡಿಕೊಳ್ಳಲು ಚಾರ್ಜಿಂಗ್ ವೇಳೆ ಕೆಲವೊಂದು ಅಭ್ಯಾಸಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ.


ಪೂರ್ಣ ಖಾಲಿ ಆಗುವ ಮೊದಲೇ ಚಾರ್ಜ್‌ಗೆ ಇಡಬೇಡಿ

ಆಧುನಿಕ ಫೋನ್‌ಗಳು ಬಹುತೇಕವಾಗಿ ಪುನರ್ ಭರ್ತಿ ಮಾಡಬಹುದಾದ ಲಿಥಿಯಂ- ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳಿಗೆ ಹೆಚ್ಚು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಇವು ಕೆಲವು ಮಿತಿಗಳನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಪೂರ್ಣವಾಗಿ ಬರಿದಾಗಲು ಅಥವಾ ಈಗಾಗಲೇ ತುಂಬಿರುವಾಗ ಚಾರ್ಜ್ ಆಗಲು ಈ ಬ್ಯಾಟರಿಗಳು ಸೂಕ್ತವಲ್ಲ.

ಅನ್ ಪ್ಲಗ್ ಮಾಡಲು ಮರೆಯದಿರಿ

ಫೋನ್ ಅನ್ನು ನಿರ್ದಿಷ್ಟ ಗಂಟೆಗಳ ಕಾಲ ಮಾತ್ರ ಚಾರ್ಜ್ ಮಾಡಿ. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಚಾರ್ಜ್ ಮಾಡಲು ಇಡದಿರಿ. ಬ್ಯಾಟರಿ ಶೇ. 100 ಆದಾಗ ಕೂಡಲೇ ಅನ್‌ಪ್ಲಗ್ ಮಾಡಿ. ಬಹಳಷ್ಟು ಫೋನ್‌ಗಳು ತುಂಬಿದ ಅನಂತರ ಚಾರ್ಜ್ ಆಗುವುದನ್ನು ನಿಲ್ಲಿಸುವ ಸಿಸ್ಟಮ್‌ಗಳನ್ನು ಒಳಗೊಂಡಿವೆ. ಆದರೆ ಇವುಗಳ ಕಾರ್ಯವಿಧಾನದ ಮೇಲೆ ನೀವು ಅನ್‌ಪ್ಲಗ್ ಮಾಡದೇ ಇದ್ದರೆ ಪರಿಣಾಮ ಬೀರಬಹುದು. ಸ್ಫೋಟ ಆಗಲೂಬಹುದು.


ಬೆಚ್ಚಗಿನ ಸ್ಥಳದಲ್ಲಿ ಚಾರ್ಜ್ ಮಾಡಬೇಡಿ

ಬೆಚ್ಚಗಿನ ಸ್ಥಳದಲ್ಲಿ ಇಟ್ಟು ಫೋನ್‌ ಚಾರ್ಜ್ ಮಾಡಬೇಡಿ. ಯಾಕೆಂದರೆ ಬ್ಯಾಟರಿಯ ಆರೋಗ್ಯಕ್ಕಿಂತ ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿ. ಫೋನ್‌ಗಳನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ತುಂಬಿ ಗಮನಾರ್ಹವಾದ ಉಷ್ಣತೆಗೆ ಕಾರಣವಾಗುತ್ತದೆ. ಇದು ಮೊಬೈಲ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡಿ.

ಉತ್ತಮ ಗುಣಮಟ್ಟದ ಕೇಬಲ್‌, ಪ್ಲಗ್‌ ಬಳಸಿ

ಫೋನ್ ಪಡೆದ ಕೆಲವು ವರ್ಷಗಳ ಅನಂತರವೂ ಮೂಲ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಹೊಂದಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಅಗ್ಗದ ಬದಲಿಗೆ ಹೆಚ್ಚು ಗುಣಮಟ್ಟಕ್ಕೆ ಆದ್ಯತೆ ನೀಡಿ.

ಇದನ್ನೂ ಓದಿ: Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!


ಬ್ಯಾಟರಿ ಉಳಿಸಿ

ಮೊಬೈಲ್‌ನಲ್ಲಿ ಕೆಲವು ಆಪ್‌ಗಳು ಮೊಬೈಲ್ ಬ್ಯಾಟರಿ ಲೈಫ್ ಅನ್ನು ಉಳಿಸುತ್ತದೆ. ಇಂತಹ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‌ನಲ್ಲಿ ಬ್ಯಾಟರಿ ಸೇವ್ ಮೋಡ್ ಬಳಸಿ. ಅನಗತ್ಯವಾದ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ಚಾರ್ಜ್‌ಗೆ ಇಟ್ಟು ಸ್ಟ್ರೀಮಿಂಗ್ ನೋಡಬೇಡಿ

ಚಾರ್ಜ್ ಗೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಗೇಮ್ ಆಡುವುದು, ಕರೆ ರಿಸೀವ್ ಮಾಡುವುದು ಹೆಚ್ಚು ಅಪಾಯಕಾರಿ. ಇದರಿಂದ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಯಾವಾಗ ಬೇಕಾದರೂ ಸ್ಫೋಟಗೊಂಡು ಭಾರಿ ಅಪಾಯ ಸಂಭವಿಸಬಹುದು.

Exit mobile version