ವಾತಾವರಣದಲ್ಲಿ ತಾಪಮಾನ (Temperature) ಅಧಿಕವಾದಾಗ ಇದರ ಪರಿಣಾಮ ಸ್ಮಾರ್ಟ್‌ಫೋನ್ (smartphone), ಲ್ಯಾಪ್‌ಟಾಪ್ (laptop) ಅಥವಾ ಯಾವುದೇ ಇತರ ಬ್ಯಾಟರಿ (battery) ಚಾಲಿತ ಸಾಧನಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ (electronic gadgets) ಮೇಲೂ ಬೀರುತ್ತದೆ. ಹೀಗಾಗಿ ಬ್ಯಾಟರಿ ಚಾಲಿತ ಗ್ಯಾಜೆಟ್ ಗಳು ಹೆಚ್ಚು ಬಿಸಿಯಾಗುವುದನ್ನು (Phone Cooling Tips) ತಪ್ಪಿಸಬೇಕಿದೆ. ಫೋನ್ ಹೆಚ್ಚು ಬಿಸಿಯಾದರೆ ಗ್ಯಾಜೆಟ್ ನಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ವಾತಾವರಣ ಬಿಸಿಯಿದ್ದಾಗ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ನಂತಹ ಗ್ಯಾಜೆಟ್‌ಗಳು ಹೆಚ್ಚು ಬಿಸಿಯಾಗುತ್ತದೆ. ಜೊತೆಗೆ ದೈನಂದಿನ ಬಳಕೆಯ ಪರಿಣಾಮವೂ ಇದರ ಮೇಲೆ ಉಂಟಾಗುತ್ತದೆ. ಕೆಲವೊಮ್ಮೆ ಬಳಕೆ ಕಡಿಮೆ ಇದ್ದರೂ ಗೇಮಿಂಗ್, ಹಾಟ್‌ಸ್ಪಾಟ್ ಆಧಾರಿತ ಇಂಟರ್ನೆಟ್ ಹಂಚಿಕೆ ಭಾರೀ ಚಟುವಟಿಕೆಗಳನ್ನು ನಡೆಸುವುದರಿಂದ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಸಾಧನವನ್ನು ಬಳಸುವುದರಿಂದ ಗ್ಯಾಜೆಟ್ ನ ಬಿಸಿ ಹೆಚ್ಚಾಗಬಹುದು. ಗ್ಯಾಜೆಟ್ ಗಳಲ್ಲಿ ಅಧಿಕ ತಾಪದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ಸರಿಪಡಿಸಲು ಐದು ಸಲಹೆಗಳು ಇಲ್ಲಿವೆ.
ಲೋಡ್ ಕಡಿಮೆ ಮಾಡಿ
ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುತ್ತಿದೆ ಎಂದು ಭಾವಿಸಿದರೆ ಬ್ಯಾಟರಿ ಮೇಲೆ ಪ್ರಭಾವ ಬೀರುವ GPS, Wi-Fi, ಡೇಟಾವನ್ನು ಆಫ್ ಮಾಡಿ. ಇದರೊಂದಿಗೆ ಅನಗತ್ಯ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ. ಪವರ್ ಬ್ಯಾಂಕ್ ಅಥವಾ ವಾಲ್ ಚಾರ್ಜರ್‌ನಂತಹ ಯಾವುದೇ ಪವರ್ ಮೂಲದಿಂದ ಲಿಂಕ್‌ಗಳನ್ನು ತೆಗೆದುಹಾಕಬಹುದು. ಸಾಧ್ಯವಾದರೆ, ಸ್ವಲ್ಪ ಸಮಯದವರೆಗೆ ಸಾಧನವನ್ನು ಸ್ವಿಚ್ ಆಫ್ ಮಾಡಿ.
ಅಪ್ಲಿಕೇಶನ್‌ಗಳನ್ನು ಮುಚ್ಚಿ
ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಮುಚ್ಚಿ ಹಾಗೂ ಪರದೆಯ ಹೊಳಪನ್ನು ಕಡಿಮೆ ಮಾಡಿ. ಇದರ ಬದಲು ಸ್ವಯಂ ಪ್ರಕಾಶಮಾನವನ್ನು ಬಳಸಬಹುದು. ಇದರಿಂದ ಫೋನ್ ಸುತ್ತುವರಿದ ಬೆಳಕನ್ನು ಅವಲಂಬಿಸಿ ಹೊಳಪನ್ನು ಸರಿಹೊಂದಿಸುತ್ತದೆ ಮತ್ತು ಬ್ಯಾಟರಿಯನ್ನು ಉಳಿಸುತ್ತದೆ. ಅಲ್ಲದೆ, ಬ್ಯಾಟರಿ ಜೀವಿತಾವಧಿಯನ್ನು ಉಳಿಸಲು ಮತ್ತು ತಾಪಮಾನ ಹೆಚ್ಚಳವನ್ನು ಮಿತಿಗೊಳಿಸಲು ಕಾರ್ಯಕ್ಷಮತೆಗಿಂತ ದಕ್ಷತೆಗೆ ಆದ್ಯತೆ ನೀಡಲು ವಿದ್ಯುತ್ ಉಳಿತಾಯ ವಿಧಾನಗಳನ್ನು ಬಳಸಿ.
ಬಿಸಿ ತಾಗುವುದನ್ನು ತಪ್ಪಿಸಿ
ಗ್ಯಾಜೆಟ್ ಹೆಚ್ಚು ಬಿಸಿಯಾಗುತ್ತಿದ್ದರೆ ವೇಗವಾಗಿ ಶಾಖವನ್ನು ಹೊರಹಾಕಲು ಹಿಂಬದಿಯ ಕವರ್ ಅನ್ನು ತೆಗೆದುಹಾಕಿ ಮತ್ತು ಸ್ಮಾರ್ಟ್‌ಫೋನ್ ಅನ್ನು ಫ್ಯಾನ್ ಅಡಿಯಲ್ಲಿ ಅಥವಾ ಹವಾನಿಯಂತ್ರಿತ ಕೋಣೆಯಲ್ಲಿ ಇರಿಸಿ. ಅಲ್ಲದೇ ತಾಪಮಾನವು ಗಮನಾರ್ಹ ಮಟ್ಟಕ್ಕೆ ಏರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಿರುವಲ್ಲೆಲ್ಲಾ ನೇರ ಸೂರ್ಯನ ಬೆಳಕನ್ನು ತಪ್ಪಿಸಿ.
ಪ್ರಮಾಣೀಕೃತ ಚಾರ್ಜರ್/ ಕೇಬಲ್ ಬಳಸಿ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಮೂಲ ಅಡಾಪ್ಟರ್ ಅಥವಾ ಯು ಎಸ್ ಬಿ ಕೇಬಲ್ ಅಥವಾ ಪ್ರಮಾಣೀಕೃತ ಬಿಡಿಭಾಗಗಳನ್ನು ಬಳಸಿ. ಪ್ರಮಾಣೀಕರಿಸದ ಪರಿಕರವು ನಿಧಾನವಾಗಿ ಚಾರ್ಜಿಂಗ್ ಅಥವಾ ಅತಿಯಾಗಿ ಬಿಸಿಯಾಗುವುದರ ಮೂಲಕ ಬ್ಯಾಟರಿಗೆ ಒತ್ತಡವನ್ನು ಉಂಟುಮಾಡಬಹುದು. ಚಾರ್ಜ್ ಮಾಡುವಾಗ ಹೆಚ್ಚುವರಿ ಶಾಖವನ್ನು ತಪ್ಪಿಸಲು ನಿಮ್ಮ ಫೋನ್‌ನಲ್ಲಿ ವೇಗದ ಚಾರ್ಜಿಂಗ್ ಮೋಡ್ ಅನ್ನು ಸ್ವಿಚ್ ಆಫ್ ಮಾಡಿ. ಯಾವುದೇ ಗ್ಯಾಜೆಟ್ ಗೆ ಬೆಂಕಿ ಹಿಡಿದರೆ ನೀರನ್ನು ಬಳಸಬಾರದು ಎಂಬುದು ನೆನಪಿರಲಿ. ಅಪಾಯವನ್ನು ಕಡಿಮೆ ಮಾಡಲು ಅಗ್ನಿಶಾಮಕದವರನ್ನು ಕರೆಸಿ.
ಇದನ್ನೂ ಓದಿ: Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!
ಹೆಚ್ವಿನ ಟಾಸ್ಕ್ ಮಿತಿಗೊಳಿಸಿ
ವಿಪರೀತ ಶಾಖದಲ್ಲಿ ಹೊರಾಂಗಣದಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟಗಳನ್ನು ಆಡುವುದನ್ನು ಅಥವಾ ಸಿಪಿಯು, ಜಿಪಿಯು ತೀವ್ರ ಟಾಸ್ಕ್ ನಿರ್ವಹಿಸುವುದನ್ನು ತಪ್ಪಿಸಿ. ಜೊತೆಗೆ, ಹೆಚ್ಚಿನ ಹೊಳಪಿನಲ್ಲಿ (ಬ್ರೈಟ್ ನೆಸ್) ಹೆಚ್ ಡಿ ಆರ್ ವೀಡಿಯೊ ಪ್ಲೇಬ್ಯಾಕ್ ಅನ್ನು ಸೀಮಿತಗೊಳಿಸುವುದು ಸಹ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.