Site icon Vistara News

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

Phone Storage Issue

ಎಲ್ಲರ ಫೋನ್ ನಲ್ಲಿ (phone) ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸ್ಟೋರೇಜ್ (Phone Storage Issue). ಎಷ್ಟೇ ಒಳ್ಳೆಯ ಫೋನ್ ಆಗಿದ್ದರೂ ವರ್ಷ ಕಳೆಯುವಷ್ಟರಲ್ಲಿ ಸ್ಟೋರೇಜ್ ಫುಲ್ (storage full) ಎಂಬುದಾಗಿ ತೋರಿಸಲು ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ನಾವು ಜೋಪಾನ ಮಾಡಿ ಇಡಬೇಕು ಎಂದುಕೊಂಡಿರುವ ಫೈಲ್, ಫೋಟೋ, ವಿಡಿಯೋಗಳನ್ನು ಇಷ್ಟವಿಲ್ಲದೇ ಇದ್ದರೂ ಡಿಲೀಟ್ ಮಾಡಲೇಬೇಕಾದ ಸಂದರ್ಭ ಎದುರಾಗುತ್ತದೆ.

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಾಗುವುದು ಸಾಮಾನ್ಯ. ವಿಶೇಷವಾಗಿ ಅನೇಕ ಅಪ್ಲಿಕೇಶನ್‌, ಫೋಟೋ, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹೆಚ್ಚಾಗುತ್ತಾ ಹೋದಂತೆ ಫೋನ್ ನಲ್ಲಿ ಜಾಗದ ಸಮಸ್ಯೆ ಎದುರಾಗುತ್ತದೆ.
ಹೊಸ ಫೋನ್ ಖರೀದಿಸದೆಯೇ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.

Phone Storage Issue


ಅನಗತ್ಯ ಅಪ್ಲಿಕೇಶನ್‌ಗಳನ್ನು ಅಳಿಸಿ

ಸಾಮಾನ್ಯವಾಗಿ ನಮಗೆ ಬೇಡವಾದ ಸಾಕಷ್ಟು ಆಪ್ ಗಳು ಮೊಬೈಲ್ ನಲ್ಲಿ ತುಂಬಿಕೊಂಡಿರುತ್ತವೆ. ಎಷ್ಟೋ ಸಂದರ್ಭದಲ್ಲಿ ಕೆಲವೊಂದು ಆಪ್ ಗಳನ್ನು ನಾವು ಬಳಸುವುದೇ ಇಲ್ಲ. ಇಂತಹ ಆಪ್ ಗಳನ್ನೂ ಅಳಿಸಿ. ಇದರಿಂದ ನೋಟಿಫಿಕೇಶನ್ ಗಳನ್ನು ತಪ್ಪಿಸಬಹುದು. ಜೊತೆಗೆ ಮೊಬೈಲ್ ನಲ್ಲಿ ಹೆಚ್ಚು ಸ್ಪೇಸ್ ಸೃಷ್ಟಿಸಬಹುದು.

ಕ್ಲೌಡ್‌ ಸೇವೆಗಳನ್ನು ಬಳಸಿ

ಫೋಟೋ, ವಿಡಿಯೋಗಳನ್ನು ಸಂಗ್ರಹಿಸಲು ಗೂಗಲ್ ಫೋಟೋಗಳು, ಒನ್ ಡ್ರೈವ್ ಅಥವಾ ಯಾವುದೇ ಇತರ ಕ್ಲೌಡ್ ಸಂಗ್ರಹಣೆಯಂತಹ ಕ್ಲೌಡ್ ಸಂಗ್ರಹಣೆ ಸೇವೆಗಳನ್ನು ಬಳಸಿ. ಇದು ಫೋನ್‌ನಲ್ಲಿ ಸಾಕಷ್ಟು ಜಾಗವನ್ನು ಮುಕ್ತಗೊಳಿಸುತ್ತದೆ. ಇದು ಅನೇಕ ಸಂಗ್ರಹಣೆ ಸಮಸ್ಯೆಗಳನ್ನು ನಿವಾರಿಸುತ್ತದೆ.

Phone Storage Issue


ಚಾಟಿಂಗ್ ಆಪ್ ಡೇಟಾಗಳನ್ನು ಅಳಿಸಿ

ವಾಟ್ಸಾಪ್, ಟೆಲಿಗ್ರಾಮ್ ನಂತಹ ಅಪ್ಲಿಕೇಶನ್‌ಗಳಿಂದ ಹಳೆಯ ಸಂದೇಶ, ವಿಡಿಯೋ ಮತ್ತು ಫೋಟೋಗಳನ್ನು ಅಳಿಸುವುದು ಉತ್ತಮ ಆಯ್ಕೆಯಾಗಿದೆ. ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅನಗತ್ಯ ಡೇಟಾವನ್ನು ತೆಗೆದುಹಾಕಲು ಸಂಗ್ರಹ ನಿರ್ವಹಣೆ ಆಯ್ಕೆಯನ್ನು ಆರಿಸಿ. ಹೆಚ್ಚುವರಿಯಾಗಿ ದೀರ್ಘ ಅಥವಾ ಅನಗತ್ಯ ಆಡಿಯೋ ಮತ್ತು ವಿಡಿಯೋ ಫೈಲ್ ಗಳನ್ನು ಅಳಿಸಿ. ಈ ಫೈಲ್‌ಗಳನ್ನು ಕಂಪ್ಯೂಟರ್ ಅಥವಾ ಬಾಹ್ಯ ಹಾರ್ಡ್ ಡ್ರೈವ್‌ಗೆ ವರ್ಗಾಯಿಸಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

ವಾಲ್‌ಪೇಪರ್‌, ರಿಂಗ್‌ಟೋನ್‌ಗಳನ್ನು ಆಪ್ಟಿಮೈಜ್ ಮಾಡಿ

ಹೆಚ್ಚಿನ ರೆಸಲ್ಯೂಶನ್ ಇರುವ ವಾಲ್‌ಪೇಪರ್‌ ಮತ್ತು ರಿಂಗ್‌ಟೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಅವುಗಳು ಸಾಕಷ್ಟು ಜಾಗವನ್ನು ತೆಗೆದುಕೊಳ್ಳುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸ್ಟೋರೇಜ್ ಆಗುವುದನ್ನು ತಪ್ಪಿಸಲು ಎಸ್ ಡಿ ಕಾರ್ಡ್ ಬಳಸಿ. ಕೆಲವನ್ನು ಆಪ್ಟಿಮೈಜ್ ಮಾಡುವುದರಿಂದ ಫೋನ್ ಅನ್ನು ಅಪ್‌ಡೇಟ್ ಮಾಡಿ. ಇದು ಫೋನ್ ನಲ್ಲಿರುವ ಸಂಗ್ರಹಣೆ ಸಮಸ್ಯೆಗಳನ್ನು ಪರಿಹರಿಸುತ್ತದೆ.

Exit mobile version