Site icon Vistara News

Samsung Z Flip | ಭಾರತದಲ್ಲಿ ಗ್ಯಾಲಕ್ಸಿ ಝಡ್‌ ಫ್ಲಿಪ್‌, ಗ್ಯಾಲಕ್ಸಿ ಝಡ್ ಫೋಲ್ಡ್‌ 4 ಬೆಲೆ ಎಷ್ಟು?

samsung Z flip

ಮುಂಬಯಿ : ಭಾರತದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಯಾಗಿರುವ ಸ್ಯಾಮ್‌ಸಂಗ್‌ (Samsung Z Flip) ಹೊಚ್ಚ ಹೊಸ ಗ್ಯಾಲಕ್ಸಿ ಝಡ್‌ ಫ್ಲಿಪ್‌, ಗ್ಯಾಲಕ್ಸಿ ಝಡ್ ಫೋಲ್ಡ್‌ 4 ಬೆಲೆಗಳನ್ನು ಅನಾವರಣ ಮಾಡಿದೆ. ಮೊಬೈಲ್‌ನ ಆರಂಭಿಕ ಬೆಲೆ 89,999 ರೂಪಾಯಿ ನಿಗದಿ ಮಾಡಿದ್ದು, ಸ್ಯಾಮ್‌ಸಂಗ್‌ನ ವೆಬ್‌ಸೈಟ್‌ ಹಾಗೂ ಭಾರತದ ಮುಂಚೂಣಿ ಇ ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಆಗಸ್ಟ್‌ ೧೬ರಿಂದ ಬುಕಿಂಗ್ ಆರಂಭಗೊಂಡಿದೆ. ಪ್ಲಿಪ್‌ ಫೋನ್‌ ಪ್ರೇಮಿಗಳು ಬುಕಿಂಗ್‌ ಆರಂಭಿಸಬಹುದು ಎಂದು ಕಂಪನಿ ಹೇಳಿದೆ.

SAMSUNG GALAXY Z FLIP 4 ಬೆಲೆ ಎಷ್ಟು?

ಬೊರಾ ಪರ್ಪಲ್‌, ಗ್ರಾಫೈಟ್‌ ಹಾಗೂ ಪಿಂಕ್‌ ಗೋಲ್ಟ್‌ ಎಂಬ ಮೂರು ಬಣ್ಣದಲ್ಲಿ SAMSUNG GALAXY Z FLIP 4 ಸ್ಮಾರ್ಟ್‌ ಫೋನ್‌ ಲಭ್ಯವಿದೆ. ೮ ಜಿಬಿ ram ಹಾಗೂ ೧೨೮ ಜಿಬಿ ಸ್ಟೋರೇಜ್‌ ಸಾಮರ್ಥ್ಯದ ಮೊಬೈಲ್‌ ಬೆಲೆ ಬೆಲೆ 89,999 ರೂಪಾಯಿ ನಿಗದಿ ಮಾಡಲಾಗಿದೆ. ೮ ಜಿಬಿ ram ೨೫೬ ಜಿಬಿ ಸ್ಟೋರೇಜ್‌ ಸಾಮರ್ಥ್ಯದ ಮೊಬೈಲ್‌ಗೆ 94,999 ರೂಪಾಯಿಗಳೆಂದು ಕಂಪನಿ ಹೇಳಿದೆ ಬಿಸ್ಪೋಕ್‌ ಆವೃತ್ತಿ ಸ್ಯಾಮ್‌ಸಂಗ್‌ ವಿಶೇಷ ಸ್ಟೋರ್‌ಗಳಲ್ಲಿ ಲಭ್ಯವಿದ್ದು, ಗಾಜಿನ ಬಣ್ಣ ಹಾಗೂ ಫ್ರೇಮ್‌ ಆಯ್ಕೆಗಳನ್ನು ನೀಡಿದೆ. ಇದರ ಬೆಲೆ 97,999 ರೂಪಾಯಿ.

SAMSUNG GALAXY Z FOLD 4 ಬೆಲೆ ಎಷ್ಟು?

ಗ್ರೇ ಗ್ರೀನ್‌, ಪ್ಯಾಂಥಮ್‌ ಬ್ಲ್ಯಾಕ್‌, ಬೀಗ್‌ ಸೇರಿ ಮೂರು ಬಣ್ಣಗಳಲ್ಲಿ SAMSUNG GALAXY Z FOLD 4 ಮೊಬೈಲ್‌ ಲಭ್ಯವಿದೆ. ೧೨ ಜಿಬಿ ram ಹಾಗೂ 256 ಜಿಬಿ ಸ್ಟೋರೇಜ್‌ ಸಾಮರ್ಥ್ಯದ ಮೊಬೈಲ್‌ಗೆ 1,54,999 ರೂಪಾಯಿ ಬೆಲೆಯಿದೆ. 12GB+512GB ಸಾಮರ್ಥ್ಯದ ಮೊಬೈಲ್‌ಗೆ 1,64,999 ರೂಪಾಯಿಗೆ ಬೆಲೆಯಿದೆ. ಸ್ಯಾಮ್‌ಸ್ಂಗ್ ಲೈವ್‌ಸ್ಟೋರ್‌ಗಳಲ್ಲಿ 12GB+1TB ಸಾಮರ್ಥ್ಯದ ಮೊಬೈಲ್‌ ಕೂಡ ಲಭ್ಯವಿದ್ದು, ಅದರ ಬೆಲೆ 1,84,999 ರೂಪಾಯಿ.

ಫೀಚರ್‌ಗಳು

GALAXY Z FLIP 4 ಸ್ಮಾರ್ಟ್‌ ಫೋನ್‌ ೬.೭ ಇಂಚಿನ ಡೈನಾಮಿಕ್‌ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. 2640 x 1080p ರೆಸೊಲ್ಯೂಶನ್‌ ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದರ ಎರಡನೇ ಡಿಸ್‌ಪ್ಲೇ 1.9 ಗಾತ್ರವನ್ನು ಹೊಂದಿದ್ದು, 260 x 512 ರೆಸೊಲ್ಯೂಶನ್‌ ಹೊಂದಿದೆ. ಇದರಲ್ಲಿ Qualcomm Snapdragon 8+ Gen 1 ಚಿಪ್‌ಸೆಟ್‌ ಹೊಂದಿದ್ದು, ೮ ಜಿಬಿ  RAM ಹಾಗೂ 512GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

GALAXY Z FLIP 4 ಸ್ಮಾರ್ಟ್‌ ಫೋನ್‌ ೬.೭ ಇಂಚಿನ ಡೈನಾಮಿಕ್‌ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. 2640 x 1080p ರೆಸೊಲ್ಯೂಶನ್‌ ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದರ ಎರಡನೇ ಡಿಸ್‌ಪ್ಲೇ 1.9 ಗಾತ್ರವನ್ನು ಹೊಂದಿದ್ದು, 260 x 512 ರೆಸೊಲ್ಯೂಶನ್‌ ಹೊಂದಿದೆ. ಇದರಲ್ಲಿ Qualcomm Snapdragon 8+ Gen 1 ಚಿಪ್‌ಸೆಟ್‌ ಹೊಂದಿದ್ದು, ೮ ಜಿಬಿ  RAM ಹಾಗೂ 512GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

GALAXY Z FLIP 4 ಸ್ಮಾರ್ಟ್‌ ಫೋನ್‌ ೬.೭ ಇಂಚಿನ ಡೈನಾಮಿಕ್‌ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ. 2640 x 1080p ರೆಸೊಲ್ಯೂಶನ್‌ ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದರ ಎರಡನೇ ಡಿಸ್‌ಪ್ಲೇ 1.9 ಗಾತ್ರವನ್ನು ಹೊಂದಿದ್ದು, 260 x 512 ರೆಸೊಲ್ಯೂಶನ್‌ ಹೊಂದಿದೆ. ಇದು Qualcomm Snapdragon 8+ Gen 1 ಚಿಪ್‌ಸೆಟ್‌ ಹೊಂದಿದ್ದು, ೮ ಜಿಬಿ  RAM ಹಾಗೂ 512GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 3,700mAh ಬ್ಯಾಟರಿ ಮೊಬೈಲ್‌ನಲ್ಲಿದ್ದು, 25W ಚಾರ್ಜಿಂಗ್‌ ವ್ಯವಸ್ಥೆಯಿದೆ. ಇದರಲ್ಲಿ ವೈರ್‌ಲೆಸ್‌ ಹಾಗೂ ರಿವರ್ಸ್‌ ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯಿದೆ.

SAMSUNG GALAXY Z FOLD 4 ಫೀಚರ್‌ಗಳು

SAMSUNG GALAXY Z FOLD 4 ಸ್ಮಾರ್ಟ್‌ಫೋನ್‌ 6.2 ಇಂಚಿನ ಡಿಸ್‌ಪ್ಲೇ ಹೊಂದಿದ್ದು, HD+ 2316 x 904 ರೆಸೊಲ್ಯೂಶನ್‌ ಹೊಂದಿದೆ. ಇದರ ರಿಫ್ರಶ್‌ ರೇಟ್‌ 120Hz . ಮಡಚಬಹುದಾದ ಡಿಸ್‌ಪ್ಲೇ 7.6 ಇಂಚಿನ QXGA+ ಅಮೋಲ್ಡ್‌ 2X ಡಿಸ್‌ಪ್ಲೇ ಹೊಂದಿದೆ. ಇದು 176 x 1812 ರೆಸೊಲ್ಯೂಶನ್ ಹೊಂದಿದೆ. ಇದು Qualcomm Snapdragon 8+ Gen 1 ಚಿಪ್‌ಸೆಟ್‌ ಹೊಂದಿದ್ದು, ೮ಜಿಬಿ ರ್ಯಾಮ್‌ ಹಾಗೂ ೫೧೨ ಜಿಬಿ ಸ್ಟೋರೇಜ್‌ ಇದೆ. 25W ಚಾರ್ಜಿಂಗ್‌ ವ್ಯವಸ್ಥೆಯಿದೆ. ಇದರಲ್ಲಿ ವೈರ್‌ಲೆಸ್‌ ಹಾಗೂ ರಿವರ್ಸ್‌ ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯಿದೆ.

ಎರಡೂ ಫೋನ್‌ಗಳು ೫ಜಿ ನೆಟ್ವರ್ಕ್‌ ಹೊಂದಿದ್ದು, ವೈಫೈ ೬ಇ, ಬ್ಲೂಟೂತ್‌ ೫.೨, ಎರಡು ಸಿಮ್‌ಗಳು ಹಾಗೂ ಯುಎಸ್‌ಬಿ ಸಿ ಪೋರ್ಟ್‌ ಹೊಂದಿದೆ.

ಸ್ಮಾರ್ಟ್‌ಫೋನ್‌ನಲ್ಲಿ ೫೦ ಮೆಗಾಪಿಕ್ಸೆಲ್‌ ಕ್ಯಾಮೆರಾವಿದ್ದು, 12 ಮೆಗಾಪಿಕ್ಸೆಲ್‌ ವೈಡ್ ಆಂಗಲ್‌ ಹಾಗೂ 10 ಟೆಲಿಫೋಟೋ ಲೆನ್ಸ್ ಹೊಂದಿದೆ. ಮುಂಬದಿಯಲ್ಲಿ ೧೦ ಮೆಗಾಪಿಕ್ಸೆಲ್‌ನ ಶೂಟರ್‌ ಹಾಗೂ ೪ ಮೆಗಾಪಿಕ್ಸೆಲ್‌ ಅಂಡರ್‌ ಡಿಸ್‌ಪ್ಲೆ ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿ | ವಿಸ್ತಾರ 5G Info | 5G ನೆಟ್‌ವರ್ಕ್‌ ಹೇಗೆ ಕಾರ್ಯನಿರ್ವಹಿಸಲಿದೆ? ಸವಾಲುಗಳೇನು?

Exit mobile version