Site icon Vistara News

Warning For Android Users: ಆಂಡ್ರಾಯ್ಡ್ ಬಳಕೆದಾರರಿಗೆ ಕಾದಿದೆ ಅಪಾಯ; ಸರ್ಕಾರದಿಂದ ಗಂಭೀರ ಎಚ್ಚರಿಕೆ

Warning For Android Users

ನವದೆಹಲಿ: ಆಂಡ್ರಾಯ್ಡ್ ಆವೃತ್ತಿಗಳಾದ 12, 12L, 13 ಮತ್ತು 14ರಲ್ಲಿ ದೋಷ ಕಾಣಿಸಿಕೊಂಡಿದ್ದು, ಇವುಗಳ ಮೇಲೆ ಸೈಬರ್ ಆಕ್ರಮಣವಾಗುವ (Cyber attack) ಸಾಧ್ಯತೆ ಇದೆ (Warning For Android Users) ಎಂದು ಭಾರತ (india) ಸೈಬರ್ ಸುರಕ್ಷತೆ ಬೆದರಿಕೆಗಳ ಪ್ರಾಧಿಕಾರ ತಂಡ (CERT-In) ಎಚ್ಚರಿಕೆ ನೀಡಿದೆ. ಇದರಿಂದ ಸುಲಭವಾಗಿ ಸೈಬರ್ ಆಕ್ರಮಣಕಾರರು ಮಾಹಿತಿಯನ್ನು ಕದಿಯಬಹುದು ಎಂದು ಅದು ಹೇಳಿದೆ.

ಫ್ರೇಮ್‌ವರ್ಕ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್, ಕರ್ನಲ್ ಎಲ್‌ಟಿಎಸ್ ಮತ್ತು ಆರ್ಮ್, ಮೀಡಿಯಾ ಟೆಕ್ ಮತ್ತು ಕ್ವಾಲ್‌ಕಾಮ್ ಘಟಕಗಳಲ್ಲಿನ ದೋಷಗಳಿಂದಾಗಿ ಆಂಡ್ರಾಯ್ಡ್‌ನಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಸಿಇಆರ್‌ಟಿ-ಇನ್ ತಿಳಿಸಿದೆ. ಭಾರತೀಯ ಆಂಡ್ರಾಯ್ಡ್ ಬಳಕೆದಾರರು ಇದರಿಂದ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಮಾರ್ಗದರ್ಶಿ ಬಿಡುಗಡೆ

ಭಾರತದಲ್ಲಿನ ಸೈಬರ್ ಸುರಕ್ಷತೆ ಬೆದರಿಕೆಗಳ ಪ್ರಾಧಿಕಾರವಾದ ತಂಡ (CERT-In) ಇದಕ್ಕಾಗಿ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಆವೃತ್ತಿಗಳಾದ 14, 13, 12, ಮತ್ತು 12Lರಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಇವು ಆಕ್ರಮಣಕಾರರಿಂದ ದುರ್ಬಳಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ, ಉನ್ನತ ಸವಲತ್ತುಗಳ ಕುರಿತು ತಿಳಿದುಕೊಳ್ಳಿ. ನಿಖರ ಮತ್ತು ಹೆಚ್ಚು ಕಷ್ಟಕರವಾದ ಕೋಡ್ ಹಾಕಿ. ಇದರಿಂದ ಅನಗತ್ಯ ಸೇವೆಗಳನ್ನು ನಿರಾಕರಿಸಿ ಎಂದು ಸಲಹೆ ನೀಡಲಾಗಿದೆ.

ಆಂಡ್ರಾಯ್ಡ್‌ನಲ್ಲಿ ಕಾಣಿಸಿರುವ ದುರ್ಬಲತೆಗಳು ಆಂಡ್ರಾಯ್ಡ್ ವ್ಯವಸ್ಥೆಯ ವಿವಿಧ ಪ್ರಮುಖ ಅಂಶಗಳ ಮೇಲೆ ಪರಿಣಾಮ ಬೀರಲಿದೆ. ಫ್ರೇಮ್‌ವರ್ಕ್, ಸಿಸ್ಟಮ್, ಎಎಂಲಾಜಿಕ್ಸ್ , ಆರ್ಮ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಘಟಕಗಳು, ಕ್ವಾಲ್ಕಾಮ್ ಘಟಕಗಳು ಮತ್ತು ಕ್ವಾಲ್ಕಾಮ್ ಮುಚ್ಚಿದ ಮೂಲ ಘಟಕಗಳ ಮೇಲೆ ಇದು ಪರಿಣಾಮ ಬೀರಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಬಳಕೆದಾರರು ಅಪಾಯಕ್ಕೆ ಸಿಲುಕಿಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ.

ಯಾರು ಚಿಂತಿಸಬೇಕು?

ಆಂಡ್ರಾಯ್ಡ್ ಸಾಧನ ಅಥವಾ ಸ್ಮಾರ್ಟ್‌ಫೋನ್ ನಲ್ಲಿ ಆಂಡ್ರಾಯ್ಡ್ ಆವೃತ್ತಿ 12, 12L, 13, ಅಥವಾ 14 ರನ್ ಆಗುತ್ತಿದ್ದರೆ ಬೆದರಿಕೆಗೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೇ ಸ್ಯಾಮ್ ಸಂಗ್, ಗೂಗಲ್ ಪಿಕ್ಸೆಲ್, ಒನ್ ಪ್ಲಸ್, ಕ್ಸಿಯೋಮಿ, ಒಪ್ಪೋ ಅಥವಾ ಯಾವುದೇ ಇತರ ಆಂಡ್ರಾಯ್ಡ್ ಬ್ರ್ಯಾಂಡ್ ಬಳಸುತ್ತಿದ್ದಾರೆ ಬೆದರಿಕೆ ಬರುವ ಸಾಧ್ಯತೆ ಇದೆ. ಹೆಚ್ಚಿನ ಅಪಾಯದ ಕಾರಣ CERT-In ಎಲ್ಲಾ ಬಳಕೆದಾರರಿಗೂ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಗೆ ಅಪ್‌ಗ್ರೇಡ್ ಮಾಡಲು ಸೂಚನೆ ನೀಡಲಾಗಿದೆ.

ಏನು ಮಾಡಬೇಕು?

ತಕ್ಷಣವೇ ಆಂಡ್ರಾಯ್ಡ್ ಅನ್ನು ನವೀಕರಿಸುವ ಮೂಲಕ ಮುಂಬರುವ ಅಪಾಯಗಳಿಂದ ರಕ್ಷಿಸಿಕೊಳ್ಳಬಹುದು. ದೋಷಗಳನ್ನು ಸರಿಪಡಿಸಲು ಸಾಧನ ತಯಾರಕರು ಭದ್ರತಾ ಪ್ಯಾಚ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಈ ನವೀಕರಣಗಳ ಸಮಯವು ಆಂಡ್ರಾಯ್ಡ್ ಸಾಧನದ ತಯಾರಕ ಮತ್ತು ಮಾದರಿಯನ್ನು ಅವಲಂಬಿಸಿ ಬದಲಾಗುತ್ತದೆ. ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಸಾಧನವನ್ನು ನವೀಕರಿಸಲಾಗಿದೆಯೇ ಎಂಬುದನ್ನು ನೋಡಬೇಕು.

ಹೇಗೆ ನಿರ್ಧರಿಸುವುದು?

ಸಾಧನದ ಭದ್ರತಾ ಪ್ಯಾಚ್ ಮಟ್ಟವನ್ನು ತಿಳಿಯಲು ಸೆಟ್ಟಿಂಗ್‌ನಲ್ಲಿ ಪರಿಶೀಲಿಸಬಹುದು ಎಂದು ಭದ್ರತಾ ಬುಲೆಟಿನ್‌ನಲ್ಲಿ ಆಂಡ್ರಾಯ್ಡ್ ಸೂಚಿಸಿದೆ. ನವೀಕರಣಗಳು ನಿಮಗೆ ಲಭ್ಯವಾದಾಗ ಅಧಿಸೂಚನೆಗಳನ್ನು ಪಡೆಯುತ್ತೀರಿ. ಸ್ಯಾಮ್‌ಸಂಗ್ ಎಲ್ಲಾ ಬಳಕೆದಾರರಿಗೆ ಪ್ರತ್ಯೇಕ ಪ್ಯಾಚ್ ನೋಟ್ ನವೀಕರಣವನ್ನು ಬಿಡುಗಡೆ ಮಾಡಿದೆ. ಪ್ಯಾಚ್ ಗಮನಿಸಿದಂತೆ ಸ್ಯಾಮ್‌ಸಂಗ್ ಮೊಬೈಲ್ ಮಾಸಿಕ ಭದ್ರತಾ ನಿರ್ವಹಣೆ ಬಿಡುಗಡೆ (SMR) ಪ್ರಕ್ರಿಯೆಯ ಭಾಗವಾಗಿ ಪ್ರಮುಖ ಮಾದರಿಗಳಿಗೆ ನಿರ್ವಹಣೆ ಬಿಡುಗಡೆಯನ್ನು ಬಿಡುಗಡೆ ಮಾಡುತ್ತಿದೆ. ಈ SMR ಪ್ಯಾಕೇಜ್ Google ಮತ್ತು Samsungನಿಂದ ಪ್ಯಾಚ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Artificial Intelligence: 98 ವಿವಿಧ ಭಾಷೆಗಳಲ್ಲಿ ಹನುಮಾನ್‌ AI ತಂತ್ರಜ್ಞಾನ; ಏನಿದರ ವಿಶೇಷ?

ಸಾಮಾನ್ಯ ಮುನ್ನೆಚ್ಚರಿಕೆ ಅಗತ್ಯ

ಅಪರಿಚಿತ ವೆಬ್‌ಸೈಟ್‌ಗಳು ಅಥವಾ ಆಪ್ ಸ್ಟೋರ್‌ಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಗೂಗಲ್ ಪ್ಲೇ ಸ್ಟೋರ್ ನಿಂದ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಬಲವಾದ ಮತ್ತು ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಬಳಸಿ, ಮತ್ತು ಸಾಧ್ಯವಾದಾಗಲೆಲ್ಲಾ ಭದ್ರತೆಯ ಹೆಚ್ಚುವರಿ ಲೇಯರ್‌ಗಾಗಿ ಎರಡು-ಅಂಶ ದೃಢೀಕರಣವನ್ನು ಸಕ್ರಿಯಗೊಳಿಸಿ.

Exit mobile version