Site icon Vistara News

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

WhatsApp Features

ಸಂದೇಶಗಳನ್ನು (messaging) ಕಳುಹಿಸುವ ಆ್ಯಪ್ ಗಳ (Apps) ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಾಟ್ಸ್ ಆ್ಯಪ್ (WhatsApp Features) ಅನ್ನು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸುತ್ತಿದ್ದಾರೆ. ನಿರಂತರ ಹೊಸತನವನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಈ ಆಪ್ ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ.

ಕೇವಲ ಸಂದೇಶ ಕಳುಹಿಸಲು, ಕರೆ ಮಾಡಲು, ಸ್ಟೇಟಸ್ ಹಂಚಿಕೊಳ್ಳಲು ಸೀಮಿತ ಎಂದೆನಿಸುವ ವಾಟ್ಸ್ ಆಪ್ ನಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳಿವೆ. ಇದರ ಇಂಟರ್ಫೇಸ್ ಅಡಿಯಲ್ಲಿ ಹಲವು ‘ಗುಪ್ತ ರತ್ನ’ಗಳಿವೆ. ಇದು ನಿಮ್ಮ ಊಹೆಗೂ ಮೀರಿ ವಾಟ್ಸ್ ಆಪ್ ಬಳಕೆಯ ಅನುಭವವನ್ನು ಹೆಚ್ಚಿಸುತ್ತದೆ. ಅವುಗಳು ಯಾವುದು ಎಂಬ ವಿವರ ಇಲ್ಲಿದೆ.

ಟೋನ್ ಸೆಟ್ಟಿಂಗ್

ಮೆಸೇಜ್ ಸ್ವೀಕರಿಸುವಾಗ ಸಾಮಾನ್ಯ ಟೋನ್ ನಿಂದ ಬೇಸತ್ತಿದ್ದೀರೆ ವೈಯಕ್ತಿಕ ಸಂಪರ್ಕ ಅಥವಾ ಗುಂಪುಗಳಿಗಾಗಿ ಟೋನ್ ಗಳನ್ನು ಸೆಟ್ ಮಾಡಲು ವಾಟ್ಸ್ ಆಪ್ ಅನುಮತಿಸುತ್ತದೆ. ಚಾಟ್ ಅನ್ನು ಸರಳವಾಗಿ ತೆರೆದು, ಸಂಪರ್ಕದ ಹೆಸರು ಅಥವಾ ಗುಂಪಿನ ಶೀರ್ಷಿಕೆಯ ಮೇಲೆ ಟ್ಯಾಪ್ ಮಾಡಿ. “ಕಸ್ಟಮ್ ನೋಟಿಫಿಕೇಶನ್ ” ಆಯ್ಕೆ ಮಾಡಿ ಮತ್ತು ಆದ್ಯತೆಯ ಟೋನ್ ಅನ್ನು ಸೆಟ್ ಮಾಡಿ. ಈಗ ಪರದೆಯನ್ನು ನೋಡದೆಯೇ ಯಾರು ನಿಮಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದನ್ನು ತಕ್ಷಣ ತಿಳಿದುಕೊಳ್ಳಬಹುದು.

ಸುಲಭ ಪ್ರವೇಶಕ್ಕಾಗಿ ಸ್ಟಾರ್

ಚಾಟ್‌ ಗಳು ಸಾಕಷ್ಟು ಇದ್ದಾಗ ಪ್ರಮುಖ ಸಂದೇಶ ಮಧ್ಯೆ ಕಳೆದು ಹೋಗುತ್ತದೆ. ಅಗತ್ಯವಿದ್ದಾಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. WhatsApp ನ “Starred Messages” ವೈಶಿಷ್ಟ್ಯದಲ್ಲಿ ಸ್ಕ್ರೋಲಿಂಗ್‌ಗೆ ವಿದಾಯ ಹೇಳಿ. ಸಂದೇಶವನ್ನು ದೀರ್ಘವಾಗಿ ಒತ್ತಿ ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡಿ. ಅನಂತರ ಸುಲಭವಾಗಿ ಈ ಸಂದೇಶಗಳನ್ನು ಮರುಪಡೆಯಲು ನಕ್ಷತ್ರ ಹಾಕಿದ ಸಂದೇಶಗಳ ಫೋಲ್ಡರ್‌ ನಲ್ಲಿ ಅದನ್ನು ಉಳಿಸಲಾಗುತ್ತದೆ.


ಹಿಡನ್ ಚಾಟ್ ಆರ್ಕೈವ್

ಕೆಲವು ಚಾಟ್‌ಗಳನ್ನು ಮರೆ ಮಾಚಬೇಕಾದರೆ WhatsApp ನ “ಆರ್ಕೈವ್ ಚಾಟ್” ವೈಶಿಷ್ಟ್ಯವು ಸಂಭಾಷಣೆಗಳನ್ನು ಅಳಿಸದೆಯೇ ಗೌಪ್ಯವಾಗಿ ಇಡುತ್ತದೆ. ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ, “ಆರ್ಕೈವ್” ಟ್ಯಾಪ್ ಮಾಡಿ ಮತ್ತು ಅದು ನಿಮ್ಮ ಮುಖ್ಯ ಚಾಟ್ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ನಿಮ್ಮ ಖಾಸಗಿ ಸಂಭಾಷಣೆಗಳನ್ನು ಖಾಸಗಿಯಾಗಿ ಇರಿಸುತ್ತದೆ. ಆರ್ಕೈವ್ ಮಾಡಿದ ಚಾಟ್‌ಗಳನ್ನು ಪ್ರವೇಶಿಸಲು, ನಿಮ್ಮ ಚಾಟ್ ಪಟ್ಟಿಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ ಅಥವಾ ಅವುಗಳನ್ನು ಹುಡುಕಿ.

ಗ್ರೂಪ್ ಚಾಟ್‌ ಗಳ ಮ್ಯೂಟ್

ಗ್ರೂಪ್ ಚಾಟ್‌ಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಯಾಕೆಂದರೆ ಇದರಲ್ಲಿ ಸಾಕಷ್ಟು ಸಂದೇಶಗಳು ನಿರಂತರವಾಗಿ ಬರುತ್ತಿರುತ್ತದೆ. ಇಂತಹ ಗುಂಪುಗಳನ್ನು ಮ್ಯೂಟ್ ಮಾಡಲು WhatsApp ಅನುಮತಿಸುತ್ತದೆ. ಗುಂಪು ಚಾಟ್ ತೆರೆಯಿರಿ ಗುಂಪಿನ ಹೆಸರಿನ ಮೇಲೆ ಟ್ಯಾಪ್ ಮಾಡಿ, “ಅಧಿಸೂಚನೆಗಳನ್ನು ಮ್ಯೂಟ್ ಮಾಡಿ” ಆಯ್ಕೆ ಮಾಡಿ ಮತ್ತು ಬಯಸಿದ ಅವಧಿಯನ್ನು ಸೆಟ್ ಮಾಡಿಕೊಳ್ಳಿ. ಇದರಲ್ಲಿ 8 ಗಂಟೆಗಳು, 1 ವಾರ ಅಥವಾ 1 ವರ್ಷ ಮ್ಯೂಟ್ ಮಾಡುವ ಅವಕಾಶವಿರುತ್ತದೆ.

ಬ್ಲೂ ಟಿಕ್ ಇಲ್ಲದೆ ಸಂದೇಶಗಳನ್ನು ಓದಿ

ಬ್ಲೂ ಟಿಕ್‌ಗಳು ಸಂದೇಶ ಓದಿದ್ದಾರೆ ಎನ್ನುವ ಕುರುಹು ಕೊಡುತ್ತದೆ. ಇದು ಕೆಲವರಿಗೆ ಆತಂಕವನ್ನು ಉಂಟುಮಾಡಬಹುದು. ಸಂದೇಶಗಳನ್ನು ಓದಿ ರಿಪ್ಲೈ ಮಾಡಿಲ್ಲ ಎನ್ನುವ ಬೇಸರವನ್ನು ಮಾಡಬಹುದು. ಆದರೆ ಬ್ಲೂ ಟಿಕ್ ಇಲ್ಲದೆಯೂ ನೀವು ಅಜ್ಞಾತವಾಗಿ ಸಂದೇಶಗಳನ್ನು ಓದಬಹುದು. ಇದಕ್ಕಾಗಿ ಸೆಟ್ಟಿಂಗ್‌ಗಳು- ಖಾತೆ- ಗೌಪ್ಯತೆಗೆ ಹೋಗುವ ಮೂಲಕ ರೀಡ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಿ.

ಇದನ್ನೂ ಓದಿ: WhatsApp Update : ವಾಯ್ಸ್ ನೋಟ್ ಅವಧಿ ಹೆಚ್ಚಿಸಲಿದೆ ವಾಟ್ಸ್ಆ್ಯಪ್; ವಿಸ್ತರಣೆ ಅವಧಿ ಎಷ್ಟು ಗೊತ್ತೇ?

ಚಾಟ್‌ಗಳಿಗಾಗಿ ವೈಯಕ್ತಿಕ ವಾಲ್‌ಪೇಪರ್‌

ವೈಯಕ್ತಿಕ ಸಂಭಾಷಣೆಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ಹೊಂದಿಸುವ ಮೂಲಕ ನಿಮ್ಮ ಚಾಟ್‌ಗಳಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಬಹುದು. ಚಾಟ್ ತೆರೆಯಿರಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ, “ವಾಲ್‌ಪೇಪರ್” ಆಯ್ಕೆ ಮಾಡಿ ಮತ್ತು WhatsApp ನ ಅಂತರ್ನಿರ್ಮಿತ ಆಯ್ಕೆಗಳಿಂದ ಆಯ್ಕೆ ಮಾಡಿ ಅಥವಾ ಸ್ವಂತ ಹಿನ್ನೆಲೆ ಚಿತ್ರವನ್ನು ಹೊಂದಿಸಿ. ಇದು ನಿಮ್ಮ ಚಾಟ್‌ ಗಳಿಗೆ ವಿಶೇಷತೆಯನ್ನು ಒದಗಿಸುತ್ತದೆ.

ಬ್ರಾಡ್‌ಕಾಸ್ಟ್ ಪಟ್ಟಿಗಳು

ಒಂದೇ ಸಂದೇಶವನ್ನು ಅನೇಕ ಸಂಪರ್ಕಗಳಿಗೆ ಕಳುಹಿಸುವುದು ಬೇಸರದ ಸಂಗತಿಯಾಗಿದೆ. ಆದರೆ WhatsApp ನ ಪ್ರಸಾರ ಪಟ್ಟಿ ಈ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡುವ ಮೂಲಕ ಪ್ರಸಾರ ಪಟ್ಟಿಯನ್ನು ರಚಿಸಿ, “ಹೊಸ ಪ್ರಸಾರ” ಆಯ್ಕೆ ಮಾಡಿ ಮತ್ತು ನಿಮ್ಮ ಸಂಪರ್ಕ ಪಟ್ಟಿಯಿಂದ ಸ್ವೀಕರಿಸುವವರನ್ನು ಆಯ್ಕೆ ಮಾಡಿ. ಈಗ, ಗುಂಪು ಚಾಟ್‌ನೊಂದಿಗೆ ಪ್ರತಿಯೊಬ್ಬರ ಇನ್‌ಬಾಕ್ಸ್‌ಗಳನ್ನು ಅಸ್ತವ್ಯಸ್ತಗೊಳಿಸದೆ ಸಾಮೂಹಿಕ ಸಂದೇಶಗಳನ್ನು ಕಳುಹಿಸಬಹುದು.

Exit mobile version