Site icon Vistara News

WhatsApp New Feature | ಇನ್ನು ಬಳಕೆದಾರರು ತಮಗೆ ತಾವೇ ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಬಹುದು!

Edited Message

Woman showing a WhatsApp Messenger icon

ನವದೆಹಲಿ: ಜಗತ್ತಿನಾದ್ಯಂತ ವಾಟ್ಸ್ಆ್ಯಪ್ ಹೆಚ್ಚು ಬಳಕೆಯಾಗುವ ಮೇಸೆಜಿಂಗ್ ಆ್ಯಪ್. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಾಟ್ಸ್ಆ್ಯಪ್‌ಗೆ ಅನೇಕ ಅಪ್‌ಡೇಟ್ಸ್, ಫೀಚರ್‌ಗಳನ್ನು ಆ್ಯಡ್ ಮಾಡಲಾಗುತ್ತದೆ. ಅಷ್ಟಾಗಿಯೂ ಈ ಆ್ಯಪ್‌ ಬಗ್ಗೆ ಬಳಕೆದಾರರ ಬೇಡಿಕೆಗಳೇನೂ ಕಡಿಮೆಯಾಗುವುದಿಲ್ಲ. ಬಳಕೆದಾರ ಸ್ನೇಹಿ ಫೀಚರ್ಸ್ ಅಗತ್ಯವೂ ಹೆಚ್ಚುತ್ತಲೇ ಇರುತ್ತದೆ. ಈಗ ಅದೇ ರೀತಿ, ವಾಟ್ಸ್ಆ್ಯಪ್ ಬಳಕೆದಾರರು ತಮಗೆ ತಾವೇ ವಾಟ್ಸ್ಆ್ಯಪ್ ಮೆಸೇಜ್ (WhatsApp New Feature) ಮಾಡಿಕೊಳ್ಳಬಹುದು. ಈ ಫೀಚರ್ ಅನ್ನು ಶೀಘ್ರವೇ ವಾಟ್ಸ್ಆ್ಯಪ್ ಬಳಕೆದಾರರಿಗೆ ನೀಡಲಿದೆ.

ವಾಟ್ಸ್ಆ್ಯಪ್‌ನ ಹೊಸ ಫೀಚರ್ ಬಗ್ಗೆ WABetainfo ಮಾಹಿತಿಯನ್ನು ಹೊರ ಹಾಕಿದ್ದು, ಬೀಟಾ ಆಂಡ್ರಾಯ್ಡ್ ವರ್ಷನ್‌ನಲ್ಲಿ ಈಗಾಗಲೇ ಬಳಕೆದಾರರು ಈ ಫೀಚರ್ ಬಳಸುತ್ತಿದ್ದಾರೆ. ಈ ಫೀಚರ್‌ಗೆ ಮೆಸೇಜ್ ಯುವರ್‌ಸೆಲ್ಫ್ ಎಂಬ ಹೆಸರಿದೆ. ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಹೆಸರನ್ನು ಚಾಟ್‌ಲಿಸ್ಟ್‌ನಲ್ಲಿ ಆ್ಯಸ್ ಮೀ(As me) ಎಂದು ನೋಡಬಹುದು.

ವಾಟ್ಸ್ಆ್ಯಪ್ ಈ ರೀತಿಯ ಫೀಚರ್ ಅನ್ನು ಬಳಕೆದಾರರಿಗೆ ಯಾಕೆ ನೀಡುತ್ತಿಲ್ಲ ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದರು. ಈಗ ಫೀಚರ್ ಕೂಡ ಶೀಘ್ರದಲ್ಲಿ ಬಳಕೆದಾರರಿಗ ಲಭ್ಯವಾಗುವ ಸಾಧ್ಯತೆಗಳಿವೆ. ಈ ಫೀಚರ್, ವೆಬ್‌ಸೈಟ್ಸ್ ಬುಕ್‌‌ಮಾರ್ಕ್ ಮಾಡಲು, ಆ್ಯಪ್‌ನಿಂದಲೇ ನೋಟ್ಸ್ ತೆಗೆದುಕೊಳ್ಳಲು ನೆರವು ಒದಗಿಸುತ್ತದೆ.

ಸದ್ಯಕ್ಕೆ ಈ ಫೀಚರ್ ಬೀಟಾ ವರ್ಷನ್ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿದೆ. ಒಂದೊಮ್ಮೆ ಎದುರಾಗುವ ಎಲ್ಲ ದೋಷಗಳನ್ನು ಸರಿಪಡಿಸಿಕೊಂಡ ಬಳಿಕ ಈ ಫೀಚರ್ ಎಲ್ಲರಿಗೂ ಲಭ್ಯವಾಗಲಿದೆ. ಬಹುಶಃ ಮುಂದಿನ ವಾರಗಳಲ್ಲಿ ಈ ಫೀಚರ್ ಎಲ್ಲರಿಗೂ ಸಿಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.

ಇದನ್ನೂ ಓದಿ | WhatsApp | ವಾಟ್ಸ್ಆ್ಯಪ್‌ನಿಂದ ಸೆಪ್ಟೆಂಬರ್‌ನಲ್ಲಿ 26 ಲಕ್ಷ ಖಾತೆಗಳಿಗೆ ನಿಷೇಧ

Exit mobile version