Site icon Vistara News

Xiaomi Smart Phone: ವರ್ಷಾಂತ್ಯಕ್ಕೆ ಬರಲಿದೆ ಶಿಯೊಮಿಯ ಫೋಲ್ಡಿಂಗ್​ ಫೋನ್​ಗಳು; ಇಲ್ಲಿದೆ ಸಂಪೂರ್ಣ ವಿವರ

Xiaomi Smart Phone

ಚೀನಾದ ಟೆಕ್ ದೈತ್ಯ ಕಂಪೆನಿ ಕ್ಸಿಯೋಮಿ (Xiaomi Smart Phone) ಈ ವರ್ಷದ ಕೊನೆಯಲ್ಲಿ ಮಿಕ್ಸ್ ಫೋಲ್ಡ್ 4 (Mix Fold 4) ಮತ್ತು ಮಿಕ್ಸ್ ಫ್ಲಿಪ್ (Mix Flip) ಮಾದರಿಗಳನ್ನು ಪರಿಚಯಿಸಲಿದೆ. ಇದು ಮಡಚಬಹುದಾದ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈ ಕಂಪನಿಯ ಮೊದಲ ಫೋನ್ ಆಗಿರಲಿದೆ. ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ, ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡು ಹಲವಾರು ವೈಶಿಷ್ಯಗಳೊಂದಿಗೆ ಈ ಸ್ಮಾರ್ಟ್ ಫೋನ್ ಗಳು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಆದರೆ ಭಾರತಕ್ಕೆ ಇದರ ಪ್ರವೇಶ ಸ್ವಲ್ಪ ವಿಳಂಬವಾಗುವ ನಿರೀಕ್ಷೆಯಿದೆ.

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 Gen 3SoCನಲ್ಲಿ ಚಿಪ್​ಸೆಟ್​ ಹೊಂದಿರಲಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕೆಮರಾದ ಫೀಚರ್​ನೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯಲಿದೆ.

ಕೆಮರಾ ವೈಶಿಷ್ಟ್ಯಗಳು

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಎರಡೂ ಒಂದೇ ರೀತಿಯ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿರುತ್ತದೆ. ಎರಡೂ ಸಾಧನಗಳು 1/ 1.55-ಇಂಚಿನ ರೆಸ್ಪಾನ್ಸ್​ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿರುವ ನಿರೀಕ್ಷೆಯಿದೆ. 1/2.8-ಇಂಚಿನ ಸಂವೇದಕ ಗಾತ್ರದೊಂದಿಗೆ OMnivision OV60A 2x ಟೆಲಿಫೋಟೋ ಸಂವೇದಕವನ್ನು ಒಳಗೊಂಡಿರುತ್ತದೆ.

ಮಿಕ್ಸ್ ಫೋಲ್ಡ್ 4 ಹೆಚ್ಚುವರಿ ಕ್ಯಾಮೆರಾ ಫೀಚರ್ ಸಮೇತ ಬರಲಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 5ಎಕ್ಸ್ ಜೂಮ್ ಸಾಮರ್ಥ್ಯದೊಂದಿಗೆ 10 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕೆಮರಾ ಸೇರಿವೆ.

ಕಾರ್ಯಕ್ಷಮತೆ ಮತ್ತು ಪ್ರೊಸೆಸರ್‌ಗಳು

ಮಿಕ್ಸ್ ಫೋಲ್ಡ್ 4 ಮತ್ತು ಮಿಕ್ಸ್ ಫ್ಲಿಪ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜನ್ 3 SoC ನಿಂದ ಚಾಲಿತವಾಗುವ ಸಾಧ್ಯತೆಯಿದೆ. ವರ್ಧಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುವ ಭರವಸೆ ಕೊಡುತ್ತದೆ.

ಡಿಸ್ ಪ್ಲೇ ಮತ್ತು ಬ್ಯಾಟರಿ

ನಿರ್ದಿಷ್ಟ ವಿವರಗಳು ಸಿಗದೇ ಇದ್ದರೂ ಮಿಕ್ಸ್ ಫೋಲ್ಡ್ 4 ದೊಡ್ಡ ಮಡಚಬಹುದಾದ ಪರದೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ ಮಿಕ್ಸ್ ಫ್ಲಿಪ್ 1.5K ರೆಸಲ್ಯೂಶನ್ ಹೊಂದಿರುವ ಮುಖ್ಯ ಪ್ರದರ್ಶನವನ್ನು ಹೊಂದಿರುವ ಸಾಧ್ಯತೆಯಿದೆ. ಈ ರೆಸಲ್ಯೂಶನ್ ಬಳಕೆದಾರರಿಗೆ ಉತ್ತಮ ಗುಣಮಟ್ಟದ ದೃಶ್ಯಗಳನ್ನು ನೀಡುತ್ತದೆ. ಮಾಧ್ಯಮ ಬಳಕೆ ಮತ್ತು ಗೇಮಿಂಗ್‌ಗೆ ಈ ಸ್ಮಾರ್ಟ್‌ಫೋನ್ ಸೂಕ್ತವಾಗಿದೆ.

ಬಾಳಿಕೆಗೆ ಸಂಬಂಧಿಸಿದಂತೆ ಕ್ಸಿಯೋಮಿ ಮಿಕ್ಸ್ ಫೋಲ್ಡ್ 4ಐಪಿ ರೇಟಿಂಗ್ ಅನ್ನು ಒಳಗೊಂಡಿರುತ್ತದೆ. ಅದರ ವೈಶಿಷ್ಟ್ಯಗಳ ಪಟ್ಟಿಗೆ ಸಂಭಾವ್ಯವಾಗಿ ನೀರು ಮತ್ತು ಧೂಳಿನ ಪ್ರತಿರೋಧವನ್ನು ಹೊಂದಿರುತ್ತದೆ.


ಬ್ಯಾಟರಿ ಬಾಳಿಕೆ ಮತ್ತು ಚಾರ್ಜಿಂಗ್ ಪವರ್

ಬ್ಯಾಟರಿ ಕಾರ್ಯಕ್ಷಮತೆಗೆ ಸಂಬಂಧಿಸಿ ಮಿಕ್ಸ್ ಫೋಲ್ಡ್ 4 ದೊಡ್ಡ 5,000mAh ಬ್ಯಾಟರಿಯೊಂದಿಗೆ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎನ್ನಲಾಗುತ್ತದೆ. ಆದರೆ ಮಿಕ್ಸ್ ಫ್ಲಿಪ್‌ನ ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಸಾಮರ್ಥ್ಯಗಳ ವಿವರಗಳು ಇನ್ನೂ ಲಭ್ಯವಾಗಿಲ್ಲ.

ಭಾರತದಲ್ಲಿ ಯಾವಾಗ ಲಭ್ಯ ?

ಕ್ಸಿಯೋಮಿ ಮಿಕ್ಸ್ ಫೋಲ್ಡ್ 4 ಚೀನೀ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮಿಕ್ಸ್ ಫ್ಲಿಪ್ ಅನ್ನು ಪ್ರಾರಂಭದಲ್ಲಿ ಚೀನಾದ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ನಿರೀಕ್ಷಿಸಲಾಗಿದೆ. ಆದರೆ ಭಾರತದ ಮಾರುಕಟ್ಟೆ ಪ್ರವೇಶ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ.

2023ರ ಆಗಸ್ಟ್ ನಲ್ಲಿ ಕ್ಸಿಯೋಮಿಯ ಹಿಂದಿನ ಮಡಿಸಬಹುದಾದ ಮಾದರಿ ಬಿಡುಗಡೆ ಮಾಡಲಾಗಿತ್ತು. ಇದು ಮಿಕ್ಸ್ ಫೋಲ್ಡ್ 3, 1916 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ 8.03-ಇಂಚಿನ ಮಡಿಸಬಹುದಾದ LTPO OLED+ ಡಿಸ್‌ಪ್ಲೇಯನ್ನು ಒಳಗೊಂಡಿತ್ತು. ಇದರ ಎರಡನೇ ಡಿಸ್ ಪ್ಲೇ 2520×1080 ಪಿಕ್ಸೆಲ್ ಗಳ ರೆಸಲ್ಯೂಶನ್ ಹೊಂದಿರುವ 6.56 ಇಂಚಿನ ಟಚ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: High-tech Gadget: ಸೆಕೆಗೆ ಎಸಿ, ಫ್ಯಾನ್‌, ಕೂಲರ್‌ ಸಾಕಾಗ್ತಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಹೈಟೆಕ್‌ ಗ್ಯಾಜೆಟ್‌

ಮಿಕ್ಸ್ ಫೋಲ್ಡ್ 3 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12 ಜಿಬಿ RAM ಅನ್ನು ಹೊಂದಿದೆ. ಇದರ ಕೆಮರಾ ಸೆಟಪ್ 50 ಮೆಗಾಪಿಕ್ಸೆಲ್ ಮುಖ್ಯ ಕೆಮರಾ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕೆಮರಾ ಮತ್ತು 20 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆಲ್ಫಿ ಕೆಮರಾವನ್ನು ಒಳಗೊಂಡಿದೆ. 67W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,800mAh Li-Po ಬ್ಯಾಟರಿಯಿಂದ ಸ್ಮಾರ್ಟ್‌ಫೋನ್ ಬೆಂಬಲಿತವಾಗಿದೆ.

Exit mobile version