Site icon Vistara News

Gaganyaan Mission: ಜೈ ಹೋ ಇಸ್ರೋ! ಮೊದಲ ಪರೀಕ್ಷಾ ಹಾರಾಟ ಯಶಸ್ವಿ, ಸುರಕ್ಷಿತವಾಗಿ ಸಮುದ್ರದಲ್ಲಿಳಿದ ಮಾದರಿ

gaganyaan first test1

ಶ್ರೀಹರಿಕೋಟ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ (Gaganyaan mission) ಮಾನವಸಹಿತ ಬಾಹ್ಯಾಕಾಶ ಮಿಷನ್‌ನ ಮೊದಲ ಪರೀಕ್ಷಾರ್ಥ ಉಡಾವಣೆ (gaganyaan first test) ಶನಿವಾರ ಯಶಸ್ವಿಯಾಗಿ ನೆರವೇರಿತು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 10 ಗಂಟೆಗೆ ಸರಿಯಾಗಿ ಉಡಾವಣೆ ಮಾಡಲಾಯಿತು. ಸಿಬ್ಬಂದಿ ಸುರಕ್ಷತೆ- ಸಂಬಂಧಿತ ಪೇಲೋಡ್‌ಗಳನ್ನು ಹೊಂದಿರುವ ಪರೀಕ್ಷಾ ವಾಹನ ಯಶಸ್ವಿ ಪರೀಕ್ಷೆ ಪೂರ್ಣಗೊಳಿಸಿತು. ಇದಕ್ಕೆ ಮುನ್ನ ಮುಂಜಾನೆ 8 ಗಂಟೆಗೆ ಶೆಡ್ಯೂಲ್‌ ಆಗಿದ್ದ ಉಡಾವಣೆಯನ್ನು ಲಿಫ್ಟ್-ಆಫ್‌ಗೆ ಕೆಲವೇ ಸೆಕೆಂಡ್‌ ಮೊದಲು ರಾಕೆಟ್‌ನ ತಾಂತ್ರಿಕ ತೊಂದರೆಗಳ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು.

ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ (TV-D1) 17 ಕಿಮೀ ಎತ್ತರದಲ್ಲಿ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಮತ್ತು ಸಿಬ್ಬಂದಿ ಮಾಡ್ಯೂಲ್ ಅನ್ನು ಪರೀಕ್ಷಿಸಿತು. ಸಂಪೂರ್ಣ ಪರೀಕ್ಷಾ ಹಾರಾಟದ ಅವಧಿ ಸಂಕ್ಷಿಪ್ತವಾಗಿದೆ. 17 ಕಿಮೀ ಎತ್ತರದಿಂದ ಸಿಬ್ಬಂದಿ ಮಾಡ್ಯೂಲ್‌ ಕಳಚಿಕೊಂಡು ಪ್ಯಾರಾಚೂಟ್‌ಗಳ ಮೂಲಕ ಬಂಗಾಳಕೊಲ್ಲಿ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಇದಕ್ಕೂ ಮೊದಲು ʼʼನೌಕೆ ಸುರಕ್ಷಿತವಾಗಿದೆ. ಸಾಕಷ್ಟು ಇಗ್ನಿಷನ್‌ ಆಗದ ಕಾರಣದಿಂದ ಉಡಾವಣೆ ಮುಂದೂಡಲಾಗಿದೆ. ತೊಂದರೆಯೇನು ಎಂದು ಶೋಧಿಸಿದ ಬಳಿಕ ಅದನ್ನು ಸರಿಪಡಿಸಿ ಮುಂದಿನ ಪ್ರಯತ್ನ ಮಾಡಲಾಗುತ್ತದೆʼʼ ಎಂದು ಮೊದಲ ಪ್ರಯತ್ನದ ವೈಫಲ್ಯದ ಬಳಿಕ ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್‌ ಹೇಳಿದ್ದರು. ನಂತರ 10 ಗಂಟೆಗೆ ಸರಿಯಾಗಿ ಉಡಾವಣೆ ಮಾಡಲಾಯಿತು.

ಕ್ರೂ ಎಸ್ಕೇಪ್‌ ಸಿಸ್ಟಮ್‌ ಗಗನಯಾನ ಯೋಜನೆಯ ಬಹುದೊಡ್ಡ ಭಾಗವಾಗಿದೆ. ಡೈನಾಮಿಕ್‌ ಪ್ರೆಶರ್‌ ಹಾಗೂ ಟ್ರಾನ್ಸಾನಿಕ್‌ ಕಂಡಿಶನ್‌ಗಳಲ್ಲಿಯೂ ಇದು ಕಾರ್ಯನಿರ್ವಹಿಸಬೇಕು. ಇದೇ ಕಾರಣಕ್ಕೆ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಬೇಕಿದೆ.

ಪರೀಕ್ಷೆಯ ಉದ್ದೇಶಗಳೇನು?

  1. ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಅನ್ನೋದು ಖಾತ್ರಿಯಾಗಲಿದೆ.ಇದು ಗಗನಯಾತ್ರಿಗಳ ಸುರಕ್ಷತೆಯನ್ನ ಖಚಿತಪಡಿಸುತ್ತೆ.
  2. ತಂತ್ರಜ್ಞಾನದ ಖಚಿತತೆ : ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ.
  3. ಅಪಾಯಗಳನ್ನ ತಗ್ಗಿಸುವುದು : ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯ.
  4. ಸಿಬ್ಬಂದಿ ತರಬೇತಿ : ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗಳಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.
  5. ಯೋಜನಾ ಯಶಸ್ಸು: ಎಲ್ಲ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದುಖಾತ್ರಿಪಡಿಸಿಕೊಳ್ಳುವುದರಿಂದ, ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವು.

ಇದನ್ನೂ ಓದಿ: Gaganyaan Mission: ಗಗನಯಾನ ಮೊದಲ ಪರೀಕ್ಷಾರ್ಥ ಉಡಾವಣೆ ಕೊನೇ ಕ್ಷಣದಲ್ಲಿ ಮುಂದೂಡಿಕೆ

Exit mobile version