Site icon Vistara News

Galaxy Upcycling | ಹಳೆಯ ಗ್ಯಾಲಕ್ಸಿ ಫೋನ್‌ಗಳಿಂದ ಕಣ್ಣಿನ ರೋಗಗಳನ್ನು ಪತ್ತೆ ಹಚ್ಚಬಹುದಾ?

Galaxy Upcyling

ನವ ದೆಹಲಿ: ಬಳಸಿ ಬಿಸಾಡಿದ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌(Galaxy Upcycling)ನಿಂದ ಕಣ್ಣಿನ ರೋಗ ಪತ್ತೆ ಹಚ್ಚಬಹುದಾ? ಹೀಗೆ ಪ್ರಶ್ನೆ ಕೇಳಿದರೆ ಒಂದು ಕ್ಷಣ ನಕ್ಕು ಬಿಡಬಹುದು. ಆದರೆ, ಇದು ಸತ್ಯ. ಹಳೆಯ ಗ್ಯಾಲಕ್ಸಿ ಫೋನ್‌ ಕ್ಯಾಮೆರಾವನ್ನು ಕಣ್ಣಿನ ತೊಂದರೆಗಳನ್ನು ಪತ್ತೆ ಹಚ್ಚಲು ಉಪಯೋಗಿಸಬಹುದಾಗಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಹಳೆಯ ಫೋನುಗಳು ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಬಹುದು ಎಂದು ಭಾವಿಸುತ್ತಿದೆ.

ಗ್ಯಾಲಕ್ಸಿ ಫೋನ್‌ ಅನ್ನು ಈಗ ಕಣ್ಣಿನ ತೊಂದರೆಗಳನ್ನು ಪತ್ತೆ ಹಚ್ಚಲು ಬಳಸಿಕೊಳ್ಳಬಹುದಾಗಿದೆ. ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ತಾನು ಸ್ವೀಕರಿಸುವ ಚಿತ್ರಗಳನ್ನು ಪ್ರಕ್ರಿಯೆಗೊಳಿಸಲು ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯನ್ನು ಬಳಸುತ್ತದೆ. ಬಳಿಕ ರೋಗಿಯ ಡೇಟಾವನ್ನು ಸೆರೆಹಿಡಿಯುವ ಮತ್ತು ಮುಂದಿನ ಕ್ರಮವನ್ನು ಸೂಚಿಸುವ ಅಪ್ಲಿಕೇಶನ್‌ಗೆ ಕಳುಹಿಸುತ್ತದೆ. ಆ ಮೂಲಕ ಕಣ್ಣಿನ ರೋಗ ಪತ್ತೆಗೆ ನೆರವು ಒದಗಿಸುತ್ತದೆ.

ಗ್ಯಾಲಕ್ಸಿ ಫೋನುಗಳ ಮರುಬಳಕೆಯ ಕಾರ್ಯಕ್ರಮವು ಹಳೆಯ ಗ್ಯಾಲಕ್ಸಿ ಫೋನುಗಳಿಗೆ ಹೊಸ ಲೈಫು ನೀಡುವುದು ಮಾತ್ರವಲ್ಲದೇ, ಅವುಗಳನ್ನು ಮರು ಉದ್ದೇಶಕ್ಕೆ ಬಳಸುವುದರಿಂದ, ಅವುಗಳನ್ನು ರೋಗಿಯ ಡಯಾಬಿಟಿಕ್ ರೆಟಿನೋಪಥಿ, ಗ್ಲುಕೋಮಾ, ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಪತ್ತೆ ಹಚ್ಚಲು ನೆರವು ಪಡೆಯಲು ಬಳಸಬಹುದಾಗಿದೆ ಎಂದು ಬೆಂಗಳೂರಿನಲ್ಲಿರುವ ಸ್ಯಾಮ್ಸಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಸ್ಯಾಮ್ಸಂಗ್ ರಿಸರ್ಚ್ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ಸಿಟಿಒ ಮೋಹನ್ ರಾವ್ ಗೋಲಿ ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು 2017ರಲ್ಲಿ ಮೊದಲ ಬಾರಿಗೆ ಸ್ಯಾಮ್ಸಂಗ್ ದಕ್ಷಿಣ ಕೊರಿಯಾದಲ್ಲಿ ಪರಿಚಯಿಸಿತು. ಅಲ್ಲಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ ಅಪ್‌ಸೈಕ್ಲಿಂಗ್ ಕಾರ್ಯಕ್ರಮವನ್ನು ಭಾರತವು ಸೇರಿದಂತೆ 6 ರಾಷ್ಟ್ರಗಳಿಗೆ ವಿಸ್ತರಿಸಿದೆ. ಇದಕ್ಕಾಗಿ ಕಂಪನಿಯು ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ಪ್ರಿವಿನ್ಷನ್ ಆಫ್ ಬ್ಲೈಂಡ್‌ನೆಸ್(ಐಎಪಿಬಿ), ಕೋರಿಯಾದ ಯೋನ್ಸೈ ಯುನಿವರ್ಸಿಟಿ ಹೆಲ್ತ್ ಸಿಸ್ಟಮ್(ವೈಯುಎಚ್‌ಎಸ್) ಮತ್ತು ಲ್ಯಾಬ್ಎಸ್‌ಡಿ ಜತೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ | Samsung Z Flip | ಭಾರತದಲ್ಲಿ ಗ್ಯಾಲಕ್ಸಿ ಝಡ್‌ ಫ್ಲಿಪ್‌, ಗ್ಯಾಲಕ್ಸಿ ಝಡ್ ಫೋಲ್ಡ್‌ 4 ಬೆಲೆ ಎಷ್ಟು?

Exit mobile version