Site icon Vistara News

ಬಿಎಸ್ಸೆನ್ನೆಲ್ ಯೂಸರ್ಸ್‌ಗೆ ಖುಷಿ ಸುದ್ದಿ! 146, 439 ರೂ. ಪ್ಲ್ಯಾನ್‌ನಿಂದ 90 ದಿನಗಳವರೆಗೆ ಕಾಲಿಂಗ್ ಸೇವೆ!

bsnl

ನವದೆಹಲಿ: ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ್ ನಿಗಮ್ ಲಿ.(BSNL) ಗ್ರಾಹಕರನ್ನು ಸೆಳೆಯಲು ನಾನಾ ಪ್ರಯತ್ನ ಮಾಡುತ್ತಿದೆ. ಹೊಸ ಹೊಸ ಪ್ಲ್ಯಾನ್‌ಗಳನ್ನು (New Plan) ಪರಿಚಯಿಸುತ್ತಲೇ ಇರುತ್ತದೆ. ಸಲುಭ ಇಂಟರ್ನೆಟ್ ಅಕ್ಸೆಸ್ ಮತ್ತು ಕರೆ ಸೌಲಭ್ಯಗಳನ್ನು ಒದಗಿಸುತ್ತದೆ. ಈಗ ಬಿಎಸ್ಸೆನ್ನೆಲ್, ಪ್ರೀಪೇಯ್ಡ್ ಗ್ರಾಹಕರಿಗೆ ಅನ್‌ಲಿಮಿಟಿಡ್ ಟಾಕ್ ಟೈಮ್ (Talk Time) ಒದಗಿಸಲು ಮುಂದಾಗಿದೆ. ಬಿಎಸ್ಸೆನ್ನೆಲ್ ಇತ್ತೀಚೆಗೆಷ್ಟೇ 146 ಪ್ಲ್ಯಾನ್ ಪರಿಚಯಿಸಿದೆ. ಈ ಪ್ಲ್ಯಾನ್, ಯಾರು ಇಂಟರ್ನೆಟ್ (Internet) ಜಾಸ್ತಿ ಬಳಸದೇ ಕೇವಲ ಕಾಲ್ ಸೇವೆಯನ್ನು (Calling Service) ಬಳಸುತ್ತಾರೋ ಅವರಿಗೆ ಹೆಚ್ಚು ಉಪಯೋಗಕಾರಿಯಾಗಿದೆ.

ಅದೇ ರೀತಿ, 90 ದಿನಗಳವರೆಗೆ ವ್ಯಾಲಿಡಿಟಿ ಇರುವ 439 ರೂ. ಪ್ಲ್ಯಾನ್ ಕೂಡ ಪರಿಚಯಿಸಿದ್ದು, ಇದು ಬಿಎಸ್ಸೆನ್ನೆಲ್ ಬಳಕೆದಾರರಿಗೆ ದೀರ್ಘಾವಧಿ ಟಾಕ್ ಟೈಮ್ ನೀಡುತ್ತದೆ. ಈ ಪ್ಲ್ಯಾನ್ ಕೇವಲ ಧ್ವನಿ ಪ್ರಯೋಜನಗಳ ಅಗತ್ಯವಿರುವ ಯಾರಿಗಾದರೂ ಆಗಿರದೇ, ಬಿಎಸ್ಸೆನ್ನೆಲ್‌ನ 439 ಪ್ರಿಪೇಯ್ಡ್ ಪ್ಲ್ಯಾನ್, ಮುಂಬೈ ಮತ್ತು ದೆಹಲಿಯಲ್ಲಿ ಎಂಟಿಎನ್ಎಲ್ ನೆಟ್‌ವರ್ಕ್ ಸೇರಿದಂತೆ ಸ್ಥಳೀಯ ಎಸ್‌ಟಿಡಿ, ಮನೆಯೊಳಗೆ ಮತ್ತು ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಅನಿಯಮಿತ ಧ್ವನಿ ಪ್ರಯೋಜನಗಳನ್ನು ನೀಡುತ್ತದೆ. ಜೊತೆಗೆ 300 ಎಸ್ಸೆಮ್ಮೆಸ್ ಕೂಡ ದೊರೆಯಲಿವೆ.

ಈ ಸುದ್ದಿಯನ್ನೂ ಓದಿ: Reliance Jio | ಜಿಯೋ, ಏರ್ಟೆಲ್‌ಗೆ ಹೆಚ್ಚಿದ ಗ್ರಾಹಕರು, ವೋಡಾಫೋನ್ ತೊರೆದರು ಬಹುತೇಕರು!

439 ರೂ. ಪ್ಲ್ಯಾನ್ ಅನ್ನು ಬಿಎಸ್ಸೆನ್ನೆಲ್ ಕಳೆದ ದೀಪಾವಳಿಯಲ್ಲಿ ಶುರು ಮಾಡಿತ್ತು. ಈ ಪ್ಲ್ಯಾನ್ ಲಾಭಗಳು 146 ಪ್ಲ್ಯಾನ್ ಬಳಕೆದಾರರಿಗೂ ಒಂದು ತಿಂಗಳವರೆಗೂ ಸಿಗಲಿದೆ. 30 ದಿನಗಳವರೆಗೆ ಬಳಕೆದಾರರು ಅನ್‌ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆಯಲಿದ್ದಾರೆ. ಗ್ರಾಹಕರು ಅದನ್ನು ಎರಡನೇ ಬಾರಿಗೆ ರೀಚಾರ್ಜ್ ಮಾಡಿದರೆ ಬಳಕೆಯಾಗದ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು.

Exit mobile version