ಬೆಂಗಳೂರು: ಗೂಗಲ್ ಪ್ಲೇ ಸ್ಟೋರ್ ವಿಶ್ವದ ಅತಿದೊಡ್ಡ ಅಪ್ಲಿಕೇಶನ್ ವಿತರಣಾ ಫ್ಲ್ಯಾಟ್ಫಾರ್ಮ್ಗಳಲ್ಲಿ ಒಂದಾಗಿದ್ದು 30 ಲಕ್ಷ ಅಪ್ಲಿಕೇಶನ್ಗಳನ್ನು ಹಾಗೂ ಗೇಮ್ಗಳನ್ನು ಹೊಂದಿದೆ. ಜನಪ್ರಿಯತೆಯ ನಡುವೆ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ ತನ್ನ ನೀತಿಗಳನ್ನು ಉಲ್ಲಂಘಿಸುವ ದುರುದ್ದೇಶಪೂರಿತ ಅಪ್ಲಿಕೇಶನ್ಗಳು ಅಥವಾ ಅಪ್ಲಿಕೇಶನ್ಗಳು ಒಳನುಸುಳುವಿಕೆಯ ವಿರುದ್ಧ ನಿರಂತರ ಕಣ್ಗಾವಲು ಇಡಬೇಕಾಗುತ್ತದೆ. ಯಾಕೆಂದರೆ ಅಂಥ ಅಪ್ಲಿಕೇಷನ್ಗಳು ಆಂಡ್ರಾಯ್ಡ್ ಫೋನ್ಗಳಿಗೆ ಹಾನಿ ಮಾಡುತ್ತದೆ. ಅಂತೆಯೇ ಇತ್ತೀಚಿನ ಪ್ರಸಂಗವೊಂದರಲ್ಲಿ , ಫೋನ್ ಬ್ಯಾಟರಿ ರಹಸ್ಯವಾಗಿ ತಿನ್ನುತ್ತಿದ್ದ 43 ಕೆಟ್ಟ ಅಪ್ಲಿಕೇಶನ್ಗಲನ್ನು ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಿದೆ.
ಬಳಕೆದಾರರ ಮೊಬೈಲ್ ಆಫ್ ಮಾಡಿದ ಬಳಿಕವೂ ಈ ಆ್ಯಪ್ಗಳು ಜಾಹೀರಾತುಗಳನ್ನು ಲೋಡ್ ಮಾಡುತ್ತಿತ್ತು. ಇದರಿಂದ ಅನಗತ್ಯವಾಗಿ ಬ್ಯಾಟರಿ ಖರ್ಚಾಗುತ್ತಿತ್ತು. ಇದರನ್ನು ಪತ್ತೆಹಚ್ಚಿದ ಸರ್ಚ್ ಎಂಜಿನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಂಥ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ಇಂಥ ಅಪ್ಲಿಕೇಷನ್ಗಳು 2.5 ಲಕ್ಷ ಡೌನ್ಲೋಡ್ ಅಗಿದ್ದವು ಹಾಗೂ ಮೊಬೈಲ್ ಬ್ಯಾಟರಿಗೆ ಹಾನಿ ಮಾಡುತ್ತಿದ್ದವು ಎಂದು ಗೂಗಲ್ ಹೇಳಿದೆ.
ಪತ್ತೆ ಹಚ್ಚಿ ಮೆಕಾಫಿ
ಈ ಅಪ್ಲಿಕೇಶಶನ್ಗಳನ್ನು ಮೊದಲು ಮೆಕಾಫಿಯ ಮೊಬೈಲ್ ಸಂಶೋಧನಾ ತಂಡವು ಗುರುತಿಸಿತ್ತು. ಅದು ಪ್ಲೇ ಸ್ಟೋರ್ನ ನೀತಿಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಗೂಗಲ್ಗೆ ವರದಿ ಮಾಡಿತ್ತು.. ಬಳಿಕ ಅಂಥ ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ. ಅದರಲ್ಲೂ ಕೆಲವು ಅಪ್ಲಿಕೇಷನ್ಗಳನ್ನು ಡೆವಲಪರ್ಗಳು ನವೀಕರಿಸಿದ್ದಾರೆ. ಈ ಅಪ್ಲಿಕೇಶನ್ಗಳನ್ನು ಯಾರಾದರೂ ಡೌನ್ಲೋಡ್ ಮಾಡಿಕೊಂಡಿದ್ದರೆ ತಕ್ಷಣ ಅವುಗಳನ್ನು ಅನ್ ಇನ್ಸ್ಟಾಲ್ ಮಾಡುವಂತೆಯೂ ಮೆಕಾಫಿ ಹೇಳಿದೆ.
“ಇತ್ತೀಚೆಗೆ, ಮೆಕಾಫಿಯ ಮೊಬೈಲ್ ಸಂಶೋಧನಾ ತಂಡವು ಗೂಗಲ್ ಪ್ಲೇ ಮೂಲಕ ವಿತರಿಸಲಾದ ಕೆಲವು ಅಪ್ಲಿಕೇಶನ್ಗಳು ನಿಯಮ ಉಲ್ಲಂಘಿಸಿದ್ದನ್ನು ಪತ್ತೆ ಹಚ್ಚಿದೆ. ಮೊಬೈಲ್ ಸ್ಕ್ರೀನ್ ಆಫ್ ಆಗಿರುವಾಗ ಈ ಅಪ್ಲಿಕೇಶನ್ ಗಳು ಜಾಹೀರಾತುಗಳನ್ನು ಲೋಡ್ ಮಾಡುತ್ತಿದ್ದವು. ಆರಂಭದಲ್ಲಿ ಇದು ಬಳಕೆದಾರರಿಗೆ ಅನುಕೂಲಕರವೆಂದು ಕಂಡರೂ ಗೂಗಲ್ ಪ್ಲೇ ಡೆವಲಪರ್ ನೀತಿಯ ಸ್ಪಷ್ಟ ಉಲ್ಲಂಘನೆಯಾಗಿತ್ತು. ಇದು ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿತ್ತು. ಏಕೆಂದರೆ ಇದು ಬ್ಯಾಟರಿಯನ್ನು ಖಾಲಿ ಮಾಡುತ್ತಿದ್ದವು. ಹಾಗೂ ಡೇಟಾ ಬಳಸುತ್ತಿದ್ದವು. ಮಾಹಿತಿ ಸೋರಿಕೆಯಿಂದ ಬಳಕೆದಾರರ ಪ್ರೊಫೈಲ್ಗೆ ಸಮಸ್ಯೆ ಆಗುತ್ತಿತ್ತು. ಎಂದು ಮೆಕಾಫಿ ಹೇಳಿದೆ.
ತೆಗೆದುಹಾಕಲಾದ ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ಟಿವಿ / ಡಿಎಂಬಿ ಪ್ಲೇಯರ್ಗಳು, ಮ್ಯೂಸಿಕ್ ಡೌನ್ಲೋಡ್ಗಳು ಮತ್ತು ಸುದ್ದಿ ಮತ್ತು ಕ್ಯಾಲೆಂಡರ್ ಅಪ್ಲಿಕೇಷನ್ಗಳು ಸೇರಿಕೊಂಡಿವೆ. ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ಡಿಲೀಟ್ ಮಾಡಲಾಗಿರು 43 ಅಪ್ಲಿಕೇಶನ್ಗಳು ಇದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಬೇಕು. ಪ್ಲೇಸ್ಟೋರ್ನಿಂದ ನೀವು ಯಾವ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ. ವಿಶ್ವಾಸಾರ್ಹ ಅಪ್ಲಿಕೇಷನ್ಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಆಂಡ್ರಾಯ್ಡ್ ಸಾಧನವನ್ನು ಯಾವಾಗಲೂ ನವೀಕರಿಸಿ ಮತ್ತು ಮಾಲ್ವೇರ್ಗಾಗಿ ನಿಮ್ಮ ಸಾಧನವನ್ನು ಸ್ಕ್ಯಾನ್ ಮಾಡಲು ಭದ್ರತಾ ಅಪ್ಲಿಕೇಶನ್ ಬಳಸಿ ಎಂದು ಗೂಗಲ್ ಹೇಳಿದೆ.
ಪರೀಕ್ಷೆ ಮಾಡುವುದು ಹೇಗೆ?
ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳ ಸೆಟ್ಟಿಂಗ್ ಗಳಿಗೆ ಹೋಗಿ, ಬ್ಯಾಟರಿಯನ್ನು ಪರಿಶೀಲಿಸುವ ಮೂಲಕ ತಿಳಿದುಕೊಳ್ಳಬಹುದು. ಬ್ಯಾಟರಿ ಬಳಕೆ ಮತ್ತು ಅಪ್ಲಿಕೇಶನ್ ಗಳ ಹಿನ್ನೆಲೆ ತಿಳಿದುಕೊಂಡು ಮೋಸದ ಅಪ್ಲಿಕೇಶನ್ ಗಳನ್ನು ಪರಿಶೀಲಿಸಬಹುದು. ಅದೇ ರೀತಿ ಅಪ್ಲಿಕೇಶನ್ಗಳ ಬ್ಯಾಕ್ಗ್ರೌಂಡ್ ಯೂಸೇಜ್ ಅನ್ನು ನಿಷ್ಕ್ರಿಯ ಮಾಡಬಹುದು.
ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ಸಾಧನಗಳಲ್ಲಿ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡುವಾಗ ಅಪ್ಲಿಕೇಶನ್ ವಿಮರ್ಶೆಗಳನ್ನು ಓದಲೇಬೇಕು. ಕೇಳುವ ಅನುಮತಿಗಳನ್ನು ಎಚ್ಚರಿಕೆಯಿಂದ ಓದಿ ಒಪ್ಪಿಗೆ ಸೂಚಿಸಬೇಕು.