ಗೂಗಲ್ ಸರ್ಚ್‌ಗೆ (Google Search) 25 ವರ್ಷಗಳು ತುಂಬಿವೆ. ಲ್ಯಾರಿ ಪೇಜ್ ಮತ್ತು ಸೆರ್ಗೆಯಿ ಬ್ರಿನ್ ಎಂಬ ಇಬ್ಬರು ಟೆಕಿಗಳು ಆರಂಭಿಸಿದ ಈ ಸಂಸ್ಥೆ ಇಂದು ಎಲ್ಲ ಆನ್‌ಲೈನ್ ಸರ್ಚ್ ಎಂಜಿನ್‌ಗಳ ಹುಡುಕಾಟದ ಒಟ್ಟು ಮೊತ್ತವನ್ನು ಸೇರಿಸಿದರೂ ಎಷ್ಟೋ ಪಟ್ಟು ಮುಂದಿದೆ. 25 ವರ್ಷ ತುಂಬಿದ ಸಂಭ್ರಮದಲ್ಲಿ ಗೂಗಲ್, ಇದುವರೆಗೂ ಜಗತ್ತಿನ ಜನತೆ ಅತ್ಯಂತ ಹೆಚ್ಚು ಸರ್ಚ್ ಮಾಡಿದ್ದೇನು ಎಂಬ ವಿವರಗಳಿರುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ (You tube) ಹಂಚಿಕೊಂಡಿದೆ.
ಈ ವಿಡಿಯೋದಲ್ಲಿ ನಮ್ಮ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಇದ್ದಾನೆ; ನಮ್ಮ ಬಾಲಿವುಡ್ ಕೂಡ ಇದೆ. ಕೊಹ್ಲಿ ಅತಿ ಹೆಚ್ಚು ಜನ ಶೋಧಿಸಿದ ಕ್ರಿಕೆಟರ್. ಬಾಲಿವುಡ್ ಅತಿ ಹೆಚ್ಚು ಸರ್ಚ್ ಆದ ಎಂಟರ್‌ಟೇನ್‌ಮೆಂಟ್ ಉದ್ಯಮ. ಇನ್ನೂ ಏನೇನು ಅತ್ಯಧಿಕ ಬಾರಿ ಸರ್ಚ್ ಆಗಿದೆ ಅಂತ ನೋಡೋಣ.
ಫುಟ್ಬಾಲ್ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಕ್ರೀಡೆ. ಕ್ರಿಶ್ಚಿಯಾನೊ ರೆನಾಲ್ಡೊ ಅತಿ ಹೆಚ್ಚಿನ ದಾಖಲೆಯ ಅಥ್ಲೀಟ್. ಹಾಲಿವುಡ್‌ನಲ್ಲಿ ಅತಿ ಹೆಚ್ಚು ಜನ ಶೋಧಿಸಿದ ಸಿನಿಮಾ ಪಾತ್ರವೆಂದರೆ ಹ್ಯಾರಿ ಪಾಟರ್. ʼಫಸ್ಟ್ ಸ್ಟೆಪ್ʼ ಎಂಬ ಹುಡುಕಾಟದಲ್ಲಿ ಮುಂದಿರುವುದು ಯಾವುದೆಂದರೆ ಚಂದ್ರನ ಮೇಲೆ ನೀಲ್ ಆರ್ಮ್‌ಸ್ಟ್ರಾಂಗ್ ಇಟ್ಟ ಮೊದಲ ಹೆಜ್ಜೆ. ಅತಿ ಹೆಚ್ಚು ಜನ ಹುಡುಕಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್.
ದಶಕಗಳಲ್ಲಿ 1980ರ ದಶಕ. ಕಾಮಿಕ್‌ಗಳಲ್ಲಿ ಪೋಕೆಮಾನ್. ಅತಿ ಹೆಚ್ಚು ಶೋಧಿಸಿದ ಹುಡುಗರ ಪಾಪ್ ಬ್ಯಾಂಡ್ ಕೊರಿಯಾದ ಬಿಟಿಎಸ್. ಹುಡುಗಿಯರ ಬ್ಯಾಂಡ್ ಕೂಡ ಕೊರಿಯಾದ ಬ್ಲ್ಯಾಕ್‌ಪಿಂಕ್. ಅತಿ ಜನಪ್ರಿಯ ಪರ್‌ಫಾರ್ಮರ್ ಬೇಯೋನ್ಸ್.
ಅತಿ ಹೆಚ್ಚಿನ ಇಮೋಜಿ ಕೆಂಪು ಹೃದಯ ಅಥವಾ ಲವ್ ಇಮೋಜಿ. ಆಟಿಕೆ ಯಾವುದು ಗೊತ್ತೆ? ಬಾರ್ಬಿ ಅಲ್ಲದೆ ಇನ್ಯಾರು! ಸಾಂಗ್ ರೈಟರ್ ಟೇಯ್ಲರ್ ಸ್ವಿಫ್ಟ್. ಗಮನಾರ್ಹ ವೈಜ್ಞಾನಿಕ ಸಾಧನೆ ನ್ಯೂಕ್ಲಿಯರ್ ಫ್ಯೂಶನ್. ಅತಿ ಹೆಚ್ಚು ಸರ್ಚ್ ಆದ ಸೂಪರ್ ಹ್ಯೂಮನ್ ಸ್ಪೈಡರ್‌ಮ್ಯಾನ್. ಹೆಚ್ಚು ಹುಡುಕಾಡಿದ ಚಳವಳಿ ಎಂದರೆ ಬ್ಲ್ಯಾಕ್ ಲೈವ್ಸ್ ಮ್ಯಾಟರ್. ಹೆಚ್ಚು ಮೌನದ ಕ್ಷಣ ಯಾವುದು ಗೊತ್ತೆ? ಅವಳಿ ಕಟ್ಟಡಗಳು ಉರುಳಿದ ಸ್ಮರಣಾರ್ಥ ಆಚರಿಸಿದ ಮೌನವಂತೆ.
ಇದನ್ನೂ ಓದಿ: YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್